Sunday, 15th December 2024

ಅಮೆರಿಕ ಅಧ್ಯಕ್ಷರ ರಕ್ಷಣೆಯೂ, ಸೀಕ್ರೆಟ್ ಸರ್ವಿಸೂ

ಶಿಶಿರ ಕಾಲ

ಶಿಶಿರ‍್ ಹೆಗಡೆ, ಚಿಕಾಗೋ

ಯಾವುದೇ ದೇಶವಿರಲಿ, ಅಲ್ಲಿನ ಅಧ್ಯಕ್ಷ ಅಥವಾ ಪ್ರಧಾನಿಯ ಜೀವ ರಕ್ಷಣೆಗೆ ಎಲ್ಲಿಲ್ಲದ ಮಹತ್ವ. ಇದಕ್ಕೆ ಮೊದಲ ಕಾರಣ ಆ ವ್ಯಕ್ತಿಯ ಪ್ರಾಮುಖ್ಯವಾದರೆ,
ಎರಡನೆಯದು ಆ ವ್ಯಕ್ತಿಯ ಜೀವಕ್ಕೆ ಅಪಾಯ ಹೆಚ್ಚು.

ಇದೆಲ್ಲದಕ್ಕಿಂತ ಹೆಚ್ಚಾಗಿ ದೇಶದ ಮರ್ಯಾದೆ, ಪ್ರತಿಷ್ಠೆಯ, ಆಂತರಿಕ ಭದ್ರತೆಯ ಹೀಗೆ ಹಲವುಗಳ ಪ್ರಶ್ನೆ ಕೂಡ. ನಮ್ಮ ಸ್ವತಂತ್ರ ಭಾರತದ ಇಬ್ಬರು ಪ್ರಧಾನಿ ಗಳನ್ನು ಗುಂಡಿಕ್ಕಿ ಕೊಂದದ್ದು ಗೊತ್ತೇ ಇದೆ. ಆರು ಬಾರಿ ನೆಹರು ಹತ್ಯೆ ಯತ್ನ ನಡೆದಿದೆ. ರಾಜೀವ್ ಗಾಂಧಿಯ ಮೇಲೂ ರಾಜ್‌ಘಾಟ್ ನಲ್ಲಿ ಮೊದಲೊಮ್ಮೆ ದಾಳಿಯಾಗಿತ್ತು. ನರೇಂದ್ರ ಮೋದಿ ಆಗಿನ್ನೂ ಪ್ರಧಾನಿಯಾಗಿರಲಿಲ್ಲ – 2013ರ ಪಟನಾ ಚುನಾವಣಾ ರಾಲಿ ಪ್ರದೇಶದಲ್ಲಿ ಬಾಂಬ್ ಸಿಡಿದು ಸುದ್ದಿಯಾಗಿತ್ತು. ಹೀಗೆ ಪ್ರಧಾನಿ ಅಥವಾ ಪ್ರಧಾನಿ ಸ್ಪರ್ಧಿಗಳ ಮೇಲೆ ದಾಳಿ ಯಾಗುವ ಸಾಧ್ಯತೆ ಪ್ರತೀ ಕ್ಷಣ ಇದ್ದೇ ಇರುತ್ತದೆ.

ಇದಕ್ಕೆ ಯಾವ ದೇಶವೂ ಹೊರತಲ್ಲ. ಅದರಲ್ಲಿಯೂ ಕೆಲವು ದೇಶಗಳ ಮುಖ್ಯಸ್ಥರಿಗೆ ಹೆಚ್ಚು. ಈ ಸಾಲಿನಲ್ಲಿ ಭಾರತ ಮತ್ತು ಅಮೆರಿಕ ನಾಯಕರು ಮೊದಲ ಸಾಲಿನಲ್ಲಿ. ಒಬ್ಬ ನಾಯಕ ಸಮರ್ಥ ಅಥವಾ ದೇಶ ಸಮರ್ಥ, ಬಲಿಷ್ಠ ಎಂದರೆ ಬೆದರಿಕೆ ಪ್ರಮಾಣ ಜಾಸ್ತಿ. ಶತ್ರುರಾಷ್ಟ್ರಗಳು, ತಾಕತ್ತು, ದೂರ, ಧಾರ್ಮಿಕ ಕಾರಣಗಳು ಹೀಗೆ ಹಲವು. ಇಂದು ಅತ್ಯಂತ ಹೆಚ್ಚಿನ ಜೀವ ಬೆದರಿಕೆಯುಳ್ಳ ಮೊದಲ ವ್ಯಕ್ತಿ ಅಮೆರಿಕದ ಅಧ್ಯಕ್ಷ. ಇದಕ್ಕೆ ಸಾವಿರ ದೆಂಟು ಕಾರಣಗಳಿವೆ. ಬಹುಶಃ ಇಲ್ಲಿಯವರೆಗೆ ಅತಿ ಹೆಚ್ಚು ದಾಳಿಗಳಾಗಿದ್ದು ಕೂಡ ಅಮೆರಿಕದ ಅಧ್ಯಕ್ಷರ ಮೇಲೆಯೇ. ನಾಲ್ವರು ಅಮೆರಿಕ ಅಧ್ಯಕ್ಷರು ಕೊಲೆಗೀಡಾಗಿದ್ದಾರೆ.

ದಾಳಿಯಿಂದಾಗಿ ಗಾಯಗೊಂಡು ಬದುಕುಳಿದವರು ಇಬ್ಬರು. ಅದು ಬಿಟ್ಟು 15 ಅಧ್ಯಕ್ಷರ ಮೇಲೆ ದಾಳಿ ಪ್ರಯತ್ನ ನಡೆದಿದೆ. ಬಹುತೇಕ ಇಸ್ಲಾಮಿಕ್ ಉಗ್ರ ಸಂಘಟನೆಯ ಹಿಟ್‌ಲಿಸ್ಟ್‌ನಲ್ಲಿರುವುದು ಅಮೆರಿಕದ ಅಧ್ಯಕ್ಷರು (ಎರಡನೆಯವರು ಭಾರತದ ಪ್ರಧಾನಿ). ಇರಾನ್, ಉತ್ತರ ಕೊರಿಯಾ ಮೊದಲಾದ ಶತ್ರು ರಾಷ್ಟ್ರಗಳು. ಹೀಗೆ – ಒಂದೆರಡಲ್ಲ. ಅದಲ್ಲದೇ ಅಮೆರಿಕದಲ್ಲಿ ಶಸ್ತ್ರಾಸ್ತ್ರ – ಬಂದೂಕು ಇಟ್ಟುಕೊಳ್ಳುವುದು ಇಲ್ಲಿನ ಜನರ ಹಕ್ಕು. ಹೀಗೆ ಅಧ್ಯಕ್ಷರು ಅಮೆರಿಕದ ಇರಲಿ, ಹೊರದೇಶಕ್ಕೆ ಹೋಗಿರಲಿ. ಅಲ್ಲ ಜೀವ ಬೆದರಿಕೆ ಇದ್ದೇ ಇರುತ್ತದೆ. ಸೀಕ್ರೆಟ್ ಸರ್ವಿಸ್- ಇದು ಅಮೆರಿಕದ ಅಧ್ಯಕ್ಷರ ರಕ್ಷಣೆ ಹೊಣೆಯ ಸಂಸ್ಥೆ. ಅವರೇ ಹೇಳುವಂತೆ ಅಧ್ಯಕ್ಷರು ವೈಟ್‌ಹೌಸ್‌ನಲ್ಲಿದ್ದರೆ ಸುರಕ್ಷಿತ. ಅಲ್ಲಿ ದಾಳಿಯಾದರೆ ಅಂಡರ್‌ಗ್ರೌಂಡ್‌ಗೆ ಒಯ್ಯುವ ವ್ಯವಸ್ಥೆಯಿದೆ.

ವೈಟ್‌ಹೌಸ್ ಮೇಲೆ ಹೆಚ್ಚಿನ ದಾಳಿ ಸಾಧ್ಯತೆಯಿದ್ದರೆ ಅಧ್ಯಕ್ಷರ ಅತ್ಯಂತ ಸುರಕ್ಷಾ ತಾಣ ಆಕಾಶ. ಹಾಗೊಂದು ಸ್ಥಿತಿ ನಿರ್ಮಾಣವಾದರೆ ಅವರನ್ನು ಅeತ ಜಾಗ ದಲ್ಲಿ ವಿಮಾನದಲ್ಲಿ ಆಕಾಶದ ಹಲವು ಗಂಟೆ ರಕ್ಷಿಸಿ ಇಡುವ ವ್ಯವಸ್ಥೆ ಕೂಡ ಇದೆ. ಯಾವುದೇ ದೇಶದ ಮುಖ್ಯಸ್ಥರಿರಲಿ, ಅವರು ಮನೆಯಿಂದ, ವಾಸಸ್ಥಾನ ದಿಂದ ಹೊರಬೀಳುತ್ತಾರೆ ಎಂದರೆ ಆಗ ರಕ್ಷಣೆ ಅವಶ್ಯಕತೆಯಿರುತ್ತದೆ – ಸಹಜ. ಅಮೆರಿಕ ಅಧ್ಯಕ್ಷರು ತಿರುಗಾಟದಲ್ಲಿರುವಾಗ ಎಲ್ಲಿಲ್ಲದ ಆತಂಕ ಅವರ ರಕ್ಷಣೆಯ
ಹೊಣೆ ಹೊತ್ತ ಈ ಸೀಕ್ರೆಟ್ ಸರ್ವಿಸ್ ತಂಡಕ್ಕೆ. ಅದರಲ್ಲೂ ಅನ್ಯ ದೇಶಕ್ಕೆ, ಶತ್ರು ದೇಶಗಳಿಗೆ ಹೋದಾಗಲಂತೂ ಅಧ್ಯಕ್ಷರ ರಕ್ಷಣೆಯೆಂದರೆ ಅದೊಂದು ಹರ ಸಾಹಸ.

ಕೊಲೆಗೀಡಾದ ನಾಲ್ಕು ಅಧ್ಯಕ್ಷರಲ್ಲಿ ಇಬ್ಬರು ಸತ್ತದ್ದು ಹೊರಗಡೆಯೇ. ಹೀಗಾಗಿ ಅಧ್ಯಕ್ಷರು ವೈಟ್ ಹೌಸ್ ಬಿಟ್ಟು ಹೊರ ಹೋಗುತ್ತಾರೆಂದರೆ ಅಲ್ಲಿ ನಡೆಯುವ ತಯಾರಿ ಮತ್ತು ರಕ್ಷಣಾ ತಂತ್ರ ಯಾವುದೇ ಥ್ರಿಲ್ಲರ್ ಚಲನಚಿತ್ರಕ್ಕಿಂತ ರೋಚಕವಾದದ್ದು. ಅಮೆರಿಕ ಅಧ್ಯಕ್ಷರ ಓಡಾಟ ಬಹುತೇಕ ವಾಯು ಮಾರ್ಗ. ಕೆಲವೊಮ್ಮೆ ಭೂ ಮಾರ್ಗ. ರಸ್ತೆಯಲ್ಲಿ ಅಮೆರಿಕದ ಅಧ್ಯಕ್ಷರು ಹೋಗುತ್ತಿದ್ದಾರೆ ಎಂದರೆ ಅದನ್ನು ನೋಡುವುದೇ ಒಂದು ಅನನ್ಯ ಅನುಭವ. 2013ರಲ್ಲಿ ನಾನು ಚಲಿಸುವ
ವಿರುದ್ಧ ದಿಕ್ಕಿನಲ್ಲಿ ನ್ಯೂಜರ್ಸಿಯ ಗಾರ್ಡನ್ ಸ್ಟೇಟ್ ಪಾರ್ಕ್ ವೇಯಲ್ಲಿ ಒಬಾಮ ಅವರ ಮೋಟಾರ್ ಕೇಡ್ ಹಾದು ಹೋಗಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅಧ್ಯಕ್ಷರು (ಇನ್ನು ಮುಂದೆ ಹೀಗೆಂದಾಗೆಲ್ಲ ಅಮೆರಿಕ ಅಧ್ಯಕ್ಷರು ಎಂದು ಓದಿಕೊಳ್ಳಿ) ಬರುವ ದಾರಿಯ ಬಗ್ಗೆ ಎಲ್ಲಿಯೂ ಜನಸಾಮಾನ್ಯರಿಗೆ ಮೊದಲೇ ಮಾಹಿತಿ ಯಿರುವುದಿಲ್ಲ. ಆ ದಿನವೂ ಹಾಗೆಯೇ ಆಯಿತು. ಸದಾ ಗಿಜಿಗುಡುತ್ತಿರುವ ಹೈವೇ.

ನಾವು ಕಾರ್ ಪೂಲ್ ಮಾಡಿಕೊಂಡು ನ್ಯೂಯಾರ್ಕ್ ನತ್ತ ಹೋಗುತ್ತಿದ್ದೆವು. ಒಮ್ಮಿಂದೊಮ್ಮೆಲೇ ನಮ್ಮ ಕಡೆ ಕಾರುಗಳೆಲ್ಲ ನಿಂತುಕೊಂಡವು. ವಿರುದ್ಧ ರಸ್ತೆಯಲ್ಲಿ ಒಂದೇ ಒಂದು ಕಾರೂ ಇಲ್ಲ. ಅಧ್ಯಕ್ಷರ ವಾಹನ ಬರುವುದಕ್ಕಿಂತ ಮೊದಲು ಒಂದು ಪೈಲೆಟ್ ಕಾರು ಬಂತು. ನಂತರ ಮೂರ್ನಾಲ್ಕು ನಿಮಿಷ ಇಂಥದ್ದೇ ಹತ್ತಾರು ಪೊಲೀಸ್ ಕಾರುಗಳು. ನಂತರ ಸುಮಾರು 10-15 ಪೊಲೀಸ್ ಬೈಕ್ ಗಳು. ನಂತರ ಒಂದು ಆಂಬುಲೆನ್ಸ್, ಸುಮಾರು 15 ಒಂದೇ ತೆರನಾದ ಕಪ್ಪು ಕಾರು ಗಳು, ಎರಡು ಲಿಮೋಸಿನ್ ಕಾರುಗಳು – ಅದು ಕೂಡ ಕಪ್ಪು, ಇನ್ನೆರಡು ಆಂಬುಲೆನ್ಸ್, ಅದರ ಹಿಂದೆ ಇನ್ನೊಂದಿಷ್ಟು ಕಪ್ಪು ಕಾರುಗಳು.

ಹೀಗೆ ನೋಡುವಾ ಗಲೇ ಇವೆಲ್ಲವೂ ಸರಿದು ಹೋದವು. 40-50 ವಾಹನಗಳು, 20-30 ಬೈಕ್‌ಗಳು ಶರವೇಗದಲ್ಲಿ ಬ್ಲಿಂಕರ್ ಹಾಕಿಕೊಂಡು ಹೋಗುವ ದ್ರಶ್ಯ ಅದು. ಆ ಕ್ಷಣಕ್ಕೆ ಅಲ್ಲಿ ಹೋದದ್ದು ಒಬಾಮ ಎಂದು ತಿಳಿದಿರಲಿಲ್ಲ. ಅಧ್ಯಕ್ಷರ ಈ ಮೋಟರ್ ಕೇಡ್‌ನಲ್ಲಿ ಕನಿಷ್ಠ 100-159 ಮಂದಿ ಇರುತ್ತಾರೆ. ಅಧ್ಯಕ್ಷರು ಸಂಚ ರಿಸುವುದು ಕಪ್ಪು ಲಿಮೋಸಿನ್‌ನಲ್ಲಿ. ಅಧ್ಯಕ್ಷರ ಮೋಟರ್ ಕೇಡ್‌ನಲ್ಲಿ ಎರಡು ಒಂದೇ ತೆರನಾದ, ಒಂದೇ ನಂಬರ್ ಪ್ಲೇಟ್‌ನ ಲಿಮೋಸಿನ್ ಇರುತ್ತವೆ. ಅವುಗಳಲ್ಲಿ ಯಾವುದೋ ಒಂದರಲ್ಲಿ ಅಧ್ಯಕ್ಷರಿರುತ್ತಾರೆ. ಇದರ ಮುಂದೆ ಒಂದು ಅತ್ಯಾಧುನಿಕ ರಿಮೋಟ್‌ನಿಂದ ಜಾಗೃತವಾಗುವ ಬಾಂಬ್‌ಗಳ ಸಿಗ್ನಲ್‌ಗಳನ್ನು ಜ್ಯಾಮ್ ಮಾಡಲು ಮತ್ತು ರಾಡಾರ್ ಇರುವ, ರಾಕೆಟ್ ಮಿಸೈಲ್ ಅನ್ನು ಮೊದಲೇ ಗ್ರಹಿಸುವ ವಿಶೇಷ ವಾಹನ.

ಇವೆಲ್ಲವೂ ರಕ್ಷಣೆಗೋಸ್ಕರ. ಅಧ್ಯಕ್ಷರ ಲಿಮೋಸಿನ್ ಸಾಮಾನ್ಯದ್ದಲ್ಲ. ಅವು ಸುಮಾರು 90 ಕ್ವಿಂಟಲ್ ತೂಕದವು. ಡ್ರೈವರ್ ಕಿಟಕಿ ಬಿಟ್ಟು ಇನ್ಯಾವುದೇ ಕಿಟಕಿ ಗಾಜು ಕೆಳಗಿಳಿಯುವುದಲ್ಲ. ಇಡೀ ವಾಹನ ಬುಲೆಟ್ ಪ್ರೂ-, ಬಾಂಬ್ ಪ್ರೂಫ್ ಇತ್ಯಾದಿ. ಅದಕ್ಕಿಂತ ಹೆಚ್ಚಾಗಿ ಈ ಲಿಮೋಸಿನ್‌ಗಳು ಮೆಡಿಕಲ್ ಸೀಲ್ ಹೊಂದಿ ರುತ್ತವೆ. ಎಂದರೆ ಯಾರಾದರೂ ಕೆಮಿಕಲ್ ದಾಳಿ ನಡೆಸಿದರೂ, ಈ ಕೆಮಿಕಲ್‌ಗಳು ಕಾರಿನೊಳಕ್ಕೆ ಗಾಳಿಯಾಗಿ ಹೊಕ್ಕುವುದಿಲ್ಲ ಈ ಲಿಮೋಸಿನ್ ನಲ್ಲಿ ರೊಕೆಟ್ ಗ್ರೆನೇಡ್, ಇನ್ರಾ ರೆಡ್ ಆಪ್ಟಿಕ್ಸ್ , ಶಾಟ್‌ಗನ್, ಆಮ್ಲಜನಕದ ಟ್ಯಾಂಕ್, ಅಧ್ಯಕ್ಷರ ರಕ್ತಕ್ಕೆ ಹೊಂದುವ ಎರಡು ರಕ್ತದ ಬ್ಯಾಗ್‌ಗಳು ಇತ್ಯಾದಿ.

ಸಾಮಾನ್ಯವಾಗಿ ಅಧ್ಯಕ್ಷರು ಮೂವತ್ತು ನಿಮಿಷಕ್ಕಿಂತ ಜಾಸ್ತಿ ದೂರದ ದಾರಿಯಾದರೆ ಹೆಲಿಕಾಪ್ಟರ್ ಅನ್ನೇ ಬಳಸುತ್ತಾರೆ. ಏಕೆಂದರೆ ಮೋಟರ್ ಕೇಡ್ ಹೆಲಿಕಾ ಪ್ಟರ್‌ಗಿಂತ ಹೆಚ್ಚು ಅಸುರಕ್ಷಿತ. ಅಧ್ಯಕ್ಷರು ಹೋಗುವ ಹೆಲಿಕಾಪ್ಟರ್ ಅನ್ನು ಮರೀನ್ 1 ಎನ್ನಲಾಗುತ್ತದೆ. ಒಂದೆರಡು ತಾಸಿನ ಹಾರಾಟಕ್ಕೆ ಅದರ ಬಳಕೆ. ಆಗ ಕೂಡ ಹಾಗೆಯೇ – ಒಂದೇ ತೆರನಾದ ಐದು ಅಥವಾ ಆರು ಹೆಲಿಕಾಪ್ಟರ್‌ಗಳು ಜತೆಯಲ್ಲಿ ಹಾರುತ್ತವೆ, ಸ್ಥಾನ ಬದಲಿಸುತ್ತವೆ, ಒಂದರಲ್ಲಿ ಅಧ್ಯಕ್ಷರಿರುತ್ತಾರೆ.
ಅಧ್ಯಕ್ಷರು ಹಾರುವ ವಿಮಾನಾದ ಹೆಸರು ಏರಫೋರ್ಸ್ ಒನ್. ಅಧ್ಯಕ್ಷರು ಎಲ್ಲಿಗೇ, ಯಾವುದೇ ದೇಶಕ್ಕೆ ಹೋದರೂ ಅವರು ಹೋಗಿ ಮುಟ್ಟುವುದಕ್ಕಿಂತ ಮೊದಲು ಅವರ ಕಾರು ಮತ್ತು ಪಡಚಾಕರಿ ಕಾರುಗಳು ಅಲ್ಲಿ ಮುಟ್ಟಿರುತ್ತವೆ.

ರಕ್ಷಣೆ ಪರಮ ಜಟಿಲವಾಗುವುದು ವಿದೇಶಗಳಲ್ಲಿ. ಅದರಲ್ಲೂ ಒಂದು ಅಸ್ಥಿರ ವ್ಯವಸ್ಥೆ, ಉಗ್ರಗಾಮಿಗಳ ದೇಶಗಳಿಗೆ ಹೋದಾಗ. ಅಧ್ಯಕ್ಷರ ಪ್ರಾಣ ತೆಗೆಯುವ ಸಂಚು – ಅಲ್ಲಿನ ಮಂತ್ರಿಗಳು, ಪೊಲೀಸರು ಯಾರೂ ಮಾಡಿರಬಹುದು. ಹಾಗಂತ ಆತಂಕವಿದೆಯೆಂದು ಅಧ್ಯಕ್ಷರು ಮನೆಯ ಎಲ್ಲ ಕಾಲ ಕೂರುವಂತೆಯೂ ಇಲ್ಲ.
ಪಾಕಿಸ್ತಾನದಲ್ಲಿ ಮಿಲಿಟರಿ ದಂಗೆ ಮೂಲಕ ಮುಷರ್ರಫ್ ಅಧಿಕಾರ ಹಿಡಿದ ಸಮಯ. ಆಂತರಿಕ ವ್ಯವಸ್ಥೆಯೇ ಬುಡಮೇಲಾಗಿತ್ತು. ಮುಷರ್ರಫ್ ಪ್ರಜಾಪ್ರಭುತ್ವ ಮರು
ಸ್ಥಾಪಿಸಲು ಒಪ್ಪುತ್ತಿರಲಿಲ್ಲ. ಬೀದಿ ಬೀದಿಗಳಲ್ಲಿ ಉಗ್ರರು ರಾಜಾರೋಷ ಓಡಾಡಿಕೊಂಡಿದ್ದ ಕಾಲ. ಪಾಕಿಸ್ತಾನವನ್ನು ಪರೋಕ್ಷವಾಗಿ ಅಲ್ ಖೈದಾ ತೆಕ್ಕೆಗೆ ತೆಗೆದುಕೊಂಡಿತ್ತು.

ಅಂದಿನ ಅಧ್ಯಕ್ಷ ಕ್ಲಿಂಟನ್ ಭಾರತದ ಭೇಟಿಯ ಕೊನೆಯಲ್ಲಿ, ಕೆಲವು ಗಂಟೆ ಪಾಕಿಸ್ತಾನಕ್ಕೆ ಹೋಗಲು ಮುಂದಾದರು. ಇಡೀ ಪಾಕಿಸ್ತಾನಕ್ಕೆ ಪಾಕಿಸ್ತಾನವೇ ‘ಕ್ಲಿಂಟನ್, ಕಿಲ್ಲರ್ ಆಫ್ ಮುಸ್ಲಿಂ ವಲ್ಡ’ ಎಂದು ಧಿಕ್ಕಾರ ಕೂಗುತ್ತಿತ್ತು. ಸೀಕ್ರೆಟ್ ಸರ್ವಿಸ್ ಬೇಡವೇ ಬೇಡ ಎಂದರು ಕ್ಲಿಂಟನ್ ಹಠಕ್ಕೆ ಬಿದ್ದವರಂತೆ – ನನ್ನ ರಕ್ಷಣೆ ನಿಮ್ಮ ಕೆಲಸ, ಅದನ್ನು ಮಾಡಿ ಎಂಬ ತಾಕೀತು. ಬಹುಶಃ ಸೀಕ್ರೆಟ್ ಸರ್ವಿಸ್ ಅನುಭವಿಸಿದ ಮತ್ತು ನಿಭಾಯಿಸಿದ ಅತ್ಯಂತ ಕಠಿಣ ಸಮಯವದು. ಬಿನ್
ಲಾಡೆನ್ ‘ಡೆತ್ ಟು ಅಮೆರಿಕ’ ಎಂದೇ ಖುಲ್ಲಂ ಖು ಹೇಳಿಕೆ ಕೊಟ್ಟಿದ್ದ. ಕೊನೆ ಕ್ಷಣದಲ್ಲಿ ಬಿನ್ ಲಾಡೆನ್, ಕ್ಲಿಂಟನ್ ಪ್ರಾಣ ತೆಗೆವ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್‌ಗೆ ಸುದ್ದಿ ಬಂತು. ಕ್ಲಿಂಟನ್ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ವಿಮಾನ ನಿಲ್ದಾಣದ ಸುತ್ತ ಮುತ್ತಲಿನ ಹಲವು ಮನೆಗಳಲ್ಲಿ ಬೃಹತ್ ಪ್ರಮಾಣದ ಮದ್ದು ಗುಂಡುಗಳು, ರಾಕೆಟ್ ಲಾಂಚರ್‌ಗಳು ಪತ್ತೆಯಾದವು. ಅಲ್ ಖೈದಾ ಹತ್ತಿರ ವಿಮಾನವನ್ನು ಹೊಡೆದುರುಳಿಸುವ ಮಿಸೈಲ್‌ಗಳೂ ಇದ್ದವು.

‘ಏರ್ ಫೋರ್ಸ್-೧’ ಬಂದಿಳಿಯಿತು ಆದರೆ ಕ್ಲಿಂಟನ್ ಇರಲಿಲ್ಲ. ಅದೇ ಸಮಯದಲ್ಲಿ ಒಂದು ಚಿಕ್ಕ ಚಾರ್ಟರ್ ವಿಮಾನದಲ್ಲಿ ಕ್ಲಿಂಟನ್ ಬಂದು ಹೋದದ್ದು ತಿಳಿಯಲೇ ಇಲ್ಲ. ಇದೆಲ್ಲವನ್ನು ಕರಾರುವಕ್ಕಾಗಿ, ಪಾಕಿಸ್ತಾನ ಪೊಲೀಸರಿಗೂ ತಿಳಿಯದಂತೆ ಮಾಡಿ ಮುಗಿಸಿದ್ದು ಸೀಕ್ರೆಟ್ ಸರ್ವಿಸ್. ನಂತರ ಸಿಐಎಯಿಂದ ಇನ್ನೊಂದು ಸುದ್ದಿ ಬಂತು. ಪಾಕಿಸ್ತಾನದ ಪೊಲೀಸರಲ್ಲಿ ಕೆಲ ಅಲ್ ಖೈದಾ ಉಗ್ರರೂ ಸೇರಿದ್ದರು. ತಕ್ಷಣ ಸುಮಾರು 15 ಒಂದೇ ರೀತಿಯ ಲಿಮೋಸಿನ್ ವ್ಯವಸ್ಥೆಯಾಗಿ ಅವುಗಳ
ಲ್ಲೊಂದರಲ್ಲಿ ಕ್ಲಿಂಟನ್‌ರನ್ನು ಒಯ್ಯಲಾಯಿತು. ಕ್ಲಿಂಟನ್ ಪಾಕ್ ನೆಲದಲ್ಲಿಳಿದು ಸರಕಾರಿ ಬಂಗಲೆ ಹೊಕ್ಕಿಯಾಗಿತ್ತು. ಆದರೆ ಇದು ಪಾಕಿಸ್ತಾನಿ ಮೀಡಿಯಾ ಸುದ್ದಿ ಮಾಡಿದವು. ಅಧ್ಯಕ್ಷರನ್ನು ಅಲ್ಲಿಂದ ಅಮೆರಿಕಕ್ಕೆ ಕರೆದೊಯ್ಯುವುದು ಇನ್ನಷ್ಟು ಜಟಿಲವಾಯಿತು.

ನಂತರ ಹೇಗೆ ಅಮೆರಿಕಕ್ಕೆ ಮುಟ್ಟಿಸಲಾಯಿತು ಎನ್ನುವುದು ಇಂದಿಗೂ ನಿಗೂಢ. ನಮ್ಮ ಮೋದಿಯವರ ರಕ್ಷಣಾ ವ್ಯವಸ್ಥೆಯೂ ಇದೆಲ್ಲದಕ್ಕಿಂತ ಭಿನ್ನವಾಗಿರಲಿಕ್ಕಿಲ್ಲ. ಇದೆಲ್ಲ ರಕ್ಷಣೆ ಖರ್ಚು ವಿದೇಶ ಪ್ರವಾಸದ ಖರ್ಚಿನ ದೊಡ್ಡ ಬಾಬ್ತಾಗಿರುತ್ತದೆ. ಮೋದಿ ವಿದೇಶ ಪ್ರವಾಸಕ್ಕೆ ಇಷ್ಟು ಖರ್ಚಾಯಿತು ಎಂದು ಲೆಕ್ಕ ಕೇಳುವ ಕೆಲವರದು ನಾನ್ಸೆನ್ಸ್ ಅನ್ನಿಸುವುದೇ ಈ ಕಾರಣಕ್ಕೆ. ರಾಷ್ಟ್ರದ ಉಚ್ಚ ನಾಯಕರ ರಕ್ಷಣೆ ಯಾವುದೇ ದೇಶದ ಮೊದಲ ಕರ್ತವ್ಯ ಮತ್ತು ಆದ್ಯತೆ. ಅದಕ್ಕೆ ಖರ್ಚಾಗುತ್ತದೆ –
ಖರ್ಚು ಮಾಡಲೇ ಬೇಕು. ಅದೇ ಸರಿ.

ಮೇಲಿನ ಘಟನೆಯಲ್ಲಿ ಸ್ವಲ್ಪ ಸಮಯವಾದರೂ ಇತ್ತು. ಎಲ್ಲ ಸಂದರ್ಭಗಳೂ ಹಾಗಲ್ಲ. 1999 – ಅಧ್ಯಕ್ಷ ಕ್ಲಿಂಟನ್ ವಾಷಿಂಗ್ಟನ್‌ನಿಂದ ಸಿನ್ಸಿನಾಟಿಗೆ ವಿಮಾನದಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಮೊರಾಕೊದ ದೊರೆ ಸತ್ತ ಸುದ್ದಿ ಬಂತು. ಕ್ಲಿಂಟನ್ ಅವರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವುದಾಗಿ ಆಜ್ಞಾಪಿಸಿಬಿಟ್ಟರು. ಸುಮಾರು 60 ದೇಶದ ಪ್ರಮುಖರು ಭಾಗವಹಿಸುವ, ಸುಮಾರು 3ಕಿ.ಮೀ. ಮೆರವಣಿಗೆಯಲ್ಲಿ ಸಾಗುವುದು ಕ್ಲಿಂಟನ್ ಇಚ್ಛೆ. ಅಲ್ಲದೇ ಸಾವಿರಾರು ಪೊಲೀ
ಸರು, ಆಯಾ ದೇಶದ ರಕ್ಷಣಾ ವ್ಯವಸ್ಥೆಯವರು. ಎಲ್ಲರ ಬಳಿಯೂ ಬಂದೂಕು. ಇದಕ್ಕಿಂತ ಅಲ್ಲಿ 20ಲಕ್ಷ ಮಂದಿ. ಮನೆಗಳ ನಡುವೆ ಮೆರವಣಿಗೆ. ಇಂಥ ಸಂದರ್ಭ ಪೂರ್ಣ ರಕ್ಷಣೆ ಅಸಾಧ್ಯವೇ ಸರಿ.

ಫ್ಲ್ಯಾಶ್ ಮಾಬ್ – ಒಮ್ಮಿಂದೊಮ್ಮೆಲೆ ನೂಕು ನುಗ್ಗಲು ಇತ್ಯಾದಿ. ಇದೆಲ್ಲದರ ನಡುವೆ ಕ್ಲಿಂಟನ್ ರನ್ನು ರಕ್ಷಿಸಿ ಕರೆತಂದಿದ್ದು ಮಿರಾಕಲ್ ಎಂದು ಸೀಕ್ರೆಟ್
ಸರ್ವಿಸ್ ಎಜೆಂಟ್ ರೀಡ್ರಿಗಾಸ್ ಆತ್ಮಚರಿತ್ರೆಯಲ್ಲಿ ಬರೆದು ಕೊಂಡಿzನೆ. ಪನಾಮದಲ್ಲಿ ಹಿರಿಯ ಬುಷ್ ಭಾಷಣಕ್ಕೆ ವೇದಿಕೆ ಹತ್ತಿದಾಗ ಒಮ್ಮಿಂದೊಮ್ಮೆಲೆ ಸಾವಿರಾರು ಪ್ರತಿಭಟನಾಕಾರರು ಮುನ್ನುಗ್ಗಿದ್ದು, ಗುಂಡಿನ ಚಕಮಕಿಯಾದದ್ದು, ಮತ್ತು ಇದೇ ಸೀಕ್ರೆಟ್ ಸರ್ವಿಸ್ ಅವರನ್ನು ಕೂದಲೆಳೆಯ ಅಂತರದಲ್ಲಿ ರಕ್ಷಿಸಿಕೊಂಡು ಬಂದದ್ದು.. ಒಂದಕ್ಕಿಂತ ಒಂದು ರೋಮಾಂಚಕಾರಿ ಸಾಹಸ. ಹೀಗೆ ಅದೆಷ್ಟೇ ತಯಾರಿ, ಯೋಜನೆ ಮಾಡಿಕೊಂಡರೂ ಕೆಲವೊಮ್ಮೆ ಅದೆಲ್ಲ ಮೀರಿ
ದಾಳಿಗಳಾದದ್ದು ಇದೆ. ಉದಾಹರಣೆಗೆ ಅಧ್ಯಕ್ಷ (ಕಿರಿಯ) ಬುಷ್ ಮೇಲೆ 2015ರಲ್ಲಿ ಜಾರ್ಜಿಯಾದಲ್ಲಿ ಆದ ಗ್ರನೇಡ್ ದಾಳಿ. ಅದೃಷ್ಟವಶಾತ್ ಅದು ಸಕ್ರೀಯ ಗೊಳ್ಳದೇ ಅಂದು ಬುಷ್ ಬದುಕಿಕೊಂಡಿದ್ದರು. ಹೀಗೆ ಕೆಲವೇ ಕೆಲವು ಬಾರಿ ಈ ಸೀಕ್ರೆಟ್ ಸರ್ವಿಸ್ ವಿಫಲವಾದದ್ದು ಸುದ್ದಿಯಾಗಿದೆ. ಆದರೆ ಇಂಥದ್ದೆಲ್ಲ ಹಾಗೆಯೇ ಅಲ್ಲವೇ – ಯಶಸ್ವಿ ಎಂದರೆ ಏನೂ ಆಗದೆ ಇರುವುದು, ಅದು ಎಂದಿಗೂ ಸುದ್ದಿಯಾಗುವುದಿಲ್ಲ.