ಬಾಲಿ : ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶನಿವಾರ ನಡೆದ ಸೆಮಿಫೈನಲ್ʼನಲ್ಲಿ ಜಪಾನ್ʼನ ಅಕೇನ್ ಯಮಗುಚಿ ಮಣಿಸಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಗೆ ಪ್ರವೇಶಿಸಿದರು.
ಹಾಲಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ರಾದ ಸಿಂಧು ರೋಮಾಂಚಕ ಪಂದ್ಯದಲ್ಲಿ ಯಮ ಗುಚಿ ಅವರನ್ನ 21-15, 15-21, 21-19ರಿಂದ ಸೋಲಿಸಿದರು. ಋತುವಿನ ಅಂತ್ಯದ ಪಂದ್ಯಾವಳಿಯಲ್ಲಿ ಸಿಂಧು ಅವರ ಮೂರನೇ ಅಂತಿಮ ಪ್ರದರ್ಶನವಾಗಿದೆ. ಅವರು 2018ರಲ್ಲಿ ಪ್ರಶಸ್ತಿ ಗೆದ್ದಿದ್ದು, ಈ ಸಾಧನೆ ಮಾಡಿದ ಏಕೈಕ ಭಾರತೀಯರು ಎನಿಸಿಕೊಂಡಿ ದ್ದಾರೆ.
ವಿಶ್ವದ ಮೂರನೇ ಕ್ರಮಾಂಕದ ಜಪಾನೀಸ್ ವಿರುದ್ಧ ಒಟ್ಟಾರೆ 12-8ರ ಗೆಲುವಿನ ದಾಖಲೆಯೊಂದಿಗೆ ವಿಶ್ವದ 7ನೇ ಕ್ರಮಾಂಕದ ಭಾರತೀಯ ಪಂದ್ಯಕ್ಕೆ ಬಂದಿದ್ದರು. ಇನ್ನು ಟೋಕಿಯೊ ಒಲಿಂಪಿಕ್ಸ್ʼನಲ್ಲಿ ಕಂಚು ಪಡೆದ ಸಿಂಧು ಉತ್ತಮ ಫಾರ್ಮ್ʼನಲ್ಲಿದ್ದಾರೆ.
ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ʼಗೆ ಬರುವ ಮೊದಲು ಅವರು ತಮ್ಮ ಕೊನೆಯ ಮೂರು ಸ್ಪರ್ಧೆಗಳಾದ ಫ್ರೆಂಚ್ ಓಪನ್, ಇಂಡೋನೇಷ್ಯಾ ಮಾಸ್ಟರ್ಸ್ ಮತ್ತು ಇಂಡೋನೇಷ್ಯಾ ಓಪನ್ʼನಲ್ಲಿ ಸೆಮಿ ತಲುಪಿದ್ದರು.