Monday, 16th September 2024

ಮಹಿಳೆಯರಿಗೆ ಮಾಸಿಕ ಭತ್ಯೆ 2500 ರೂ ಗೆ ಹೆಚ್ಚಳ: ಅರವಿಂದ ಆಫರ್‌

Arvind Kejrival

ಪಣಜಿ: ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಉಚಿತ ನೀರು, ಉಚಿತ ತೀರ್ಥಯಾತ್ರೆ ಭರವಸೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇನ್ನೊಂದು ಭರವಸೆ ನೀಡಿದ್ದು, ಗೋವಾದಲ್ಲಿ ಮಹಿಳೆಯರಿಗೆ ಗೃಹ ಆಧಾರ ಮಾಸಿಕ ಭತ್ಯೆಯನ್ನು 1,500 ರೂ ನಿಂದ 2500 ರೂ ಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

ಭಾನುವಾರ ಮಡಗಾಂವ್ ನಲ್ಲಿ ಕರೆದಿದ್ದ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯನ್ನು ದ್ದೇಶಿಸಿ ಮಾತನಾಡಿ, ಗೃಹ ಆಧಾರ ಯೋಜನೆಯ ಅಡಿಯಲ್ಲಿ ಮಾಸಿಕ ಭತ್ಯೆ ಲಭಿಸದ ಗೃಹಿಣಿಯರ ಖಾತೆಗೆ ಪ್ರತಿ ತಿಂಗಳು ನೇರವಾಗಿ 1000 ರೂ ಹಣ ಜಮಾವಣೆ ಮಾಡಲಾಗು ವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಈ ಹಿಂದೆ ಕೇಜ್ರಿವಾಲ್ ಅವರು, ಗೋವಾದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಖಾತ್ರಿ ಮತ್ತು ಟ್ಯಾಕ್ಸಿ ಡ್ರೈವರ್ ಗಳಿಗೆ ಡಿಜಿಟಲ್ ಮೀಟರ್ ನಿಂದ ವಿನಾಯತಿ ನೀಡುವ ಭರಸವೆ ನೀಡಿದ್ದರು.

ಗೋವಾದ ಒಟ್ಟೂ ಬಜೆಟ್ 22,000 ಕೋಟಿ ರೂ. ಈ ಹಣದಲ್ಲಿ ಕೆಲಸ ಮಾಡುವಾಗ ಸದ್ಯ ಶೇ 20 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಭಾವಿಸಿ ದರೆ ಈ ಮೊತ್ತ 4,000 ಕೋಟಿ ರೂಗಳಾಗಲಿದೆ. ನಾನು ಘೋಷಿಸಿದ ಯೋಜನೆಯ ಗರಿಷ್ಠ ವೆಚ್ಛ 1000 ಕೋಟಿ ರೂ. ಗೋವಾದಲ್ಲಿ ಭ್ರಷ್ಟಾಚಾರ ತಡೆದರೆ ಹೆಚ್ಚುವರಿಯಾಗಿ 3,000 ಕೋಟಿ ರೂ ಹಣ ಉಳಿತಾಯವಾಗಲಿದೆ ಎಂದು ಹೇಳಿದರು.