Sunday, 15th December 2024

ಟಿ-20: ಸೂಪರ್ ಲೀಗ್‌ಗೆ ದೆಹಲಿ

ಸೂರತ್:
ಲಲಿತ್ ಯಾದವ್ (10 ಕ್ಕೆೆ 3) ಅವರ ಸ್ಪಿಿನ್ ಮೋಡಿಯ ನೆರವಿನಿಂದ ದೆಹಲಿ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಲೀಗ್ ಕೊನೆಯ ಪಂದ್ಯದಲ್ಲಿ ಓಡಿಶಾ ವಿರುದ್ಧ 20 ರನ್‌ಗಳ ಜಯ ಸಾಧಿಸಿತು. ಇದರೊಂದಿಗೆ ಸೂಪರ್ ಲೀಗ್‌ಗೆ ಅರ್ಹತೆ ಪಡೆಯುವಲ್ಲಿ ಸಫಲವಾಯಿತು.

ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ದೆಹಲಿ ತಂಡ ನಿಗದಿತ 20 ಓವರ್‌ಗಳಿಗೆ ಆರು ವಿಕೆಟ್ ನಷ್ಟಕ್ಕೆೆ 149 ರನ್ ಗಳಿಸಿತು. ಬಳಿಕ 150 ರನ್ ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಓಡಿಶಾ ತಂಡ 18.1 ಓವರ್‌ಗಳಿಗೆ 129 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಒಪ್ಪಿಿಕೊಂಡಿತು.

ದೆಹಲಿ ಪರ ಶಿಖರ್ ಧವನ್ 35, ಹಿಟೆನ್ ದಲಾಲ್ 20 ಹಾಗೂ ಧೃವ್ ಶೋರೆ 26 ರನ್ ಗಳಿಸಿದರು. ಓಡಿಶಾ ಪರ ಅಭಿಷೇಕ್ ರಾವಲ್ ಎರಡು ವಿಕೆಟ್ ಪಡೆದರು.

150 ರನ್ ಸ್ಪರ್ಧಾತ್ಮ ಗುರಿ ಹಿಂಬಾಲಿಸಿದ ಓಡಿಶಾ ತಂಡ ಆರಂಭದಲ್ಲೆೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ರಾಜೇಶ್ ಧುಪರ್ (1) ಹಾಗೂ ಸುಬ್ರಾಾಂಶು ಸೇನಾಪತಿ(4) ಬೇಗ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬಿಪ್ಲಬ್ ಸಮಂತ್ರಾಾಯ (34) ಹಾಗೂ ಸೂರ್ಯಕಾಂತ್ (48) ಅತ್ಯುತ್ತಮ ಬ್ಯಾಾಟಿಂಗ್ ಮಾಡಿದರು. ಆದರೆ, ಓಡಿಶಾ ಗೆಲುವಿನ ನಗೆ ಬೀರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ರನ್ ಗಳಿಂದ ಸೋಲು ಅನುಭವಿಸಬೇಕಾಯಿತು.
ದೆಹಲಿ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಲಲಿತ್ ಯಾದವ್ 10 ರನ್ ನೀಡಿ ಮೂರು ವಿಕೆಟ್ ಕಿತ್ತರು. ಇವರಿಗೆ ಸಾಥ್ ನೀಡಿದ ಪವನ್ ನೇಗಿ ಹಾಗೂ ನಿತೀಶ್ ರಾಣಾ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ದೆಹಲಿ: 20 ಓವರ್‌ಗಳಿಗೆ 149/6 (ಶಿಖರ್ ಧವನ್ 35, ಧೃವ್ ಶೋರೆ 26, ಹಿಟೆನ್ ದಲಾಲ್ 20; ಅಭಿಷೇಕ್ ರಾವತ್ 21 ಕ್ಕೆೆ 2)
ಓಡಿಶಾ: 18.1 ಓವರ್‌ಗಳಿಗೆ 129/10(ಬಿಪ್ಲಬ್ ಸಮಂತ್ರಾಾಯ 34, ಸೂರ್ಯಕಾಂತ್ ಪ್ರಧಾನ್ 48; ಲಲಿತ್ ಯಾದವ್ 10 ಕ್ಕೆೆ 3, ಪವನ್ ನೇಗಿ 38 ಕ್ಕೆೆ 2, ನಿತೀಶ್ ರಾಣಾ 6 ಕ್ಕೆೆ 2)