Friday, 20th September 2024

ಓಮನ್ ವಿರುದ್ಧ ಭಾರತಕ್ಕೆ ಸೋಲು

ಮಸ್ಕತ್:
ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಕೊನೆಯ ಪಂದ್ಯದಲ್ಲಿ ಬಲಿಷ್ಟ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್ ಅರ್ಹತೆ ಪಡೆಯುವ ಸುನೀಲ್ ಚೆಟ್ರಿಿ ಪಡೆಯ ಹಾದಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ.
ಇಲ್ಲಿನ ಸುಲ್ತಾಾನ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಅಲ್ ಘಸ್ಸಾಾನಿ(33ನೇ ನಿ.) ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಓಮನ್ ತಂಡ 1-0 ಅಂತರದಲ್ಲಿ ಭಾರತದ ವಿರುದ್ಧ ಗೆಲುವಿನ ನಗೆ ಬೀರಿತು. ಗೆಲುವಿನೊಂದಿಗೆ ಓಮನ್ ತನ್ನ ಖಾತೆಗೆ ಮೂರು ಅಂಕಗಳನ್ನು ಪಡೆಯಿತು. ಒಟ್ಟಾಾರೆ 12 ಅಂಕಗಳೊಂದಿಗೆ ಓಮನ್ ‘ಇ’ ಗುಂಪಿನ ಪಟ್ಟಿಿಯಲ್ಲಿ ಎರಡನೇ ಸ್ಥಾಾನವನ್ನು ಗಟ್ಟಿಿ ಮಾಡಿಕೊಂಡಿತು. ಅಗ್ರ ಸ್ಥಾಾನದಲ್ಲಿ 13 ಅಂಕಗಳೊಂದಿಗೆ ಕತಾರ್ ಇದೆ. ಕೇವಲ ಮೂರು ಅಂಕಗಳೊಂದಿಗೆ ಭಾರತ ನಾಲ್ಕನೇ ಸ್ಥಾಾನಕ್ಕೆೆ ತೃಪ್ತಿಿಪಟ್ಟುಕೊಂಡಿತು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆದಿತ್ತು. ಇದರ ನಡುವೆ 24ನೇ ನಿಮಿಷದಲ್ಲಿ ಭಾರತದ ಆದಿಲ್ ಖಾನ್ ತಪ್ಪುು ಎಸಗಿದ್ದರಿಂದ ಮ್ಯಾಾಚ್ ರೆಫರಿಯಿಂದ ಹಳದಿ ಕಾರ್ಡ್ ಪಡೆದುಕೊಂಡರು. ನಂತರ, ಚೆಂಡಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಿಯಾದ ಓಮನ್ ಮೊದಲಾರ್ಧ ಅವಧಿಯಲ್ಲಿ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಿಯಾಯಿತು. 33ನೇ ನಿಮಿಷದಲ್ಲಿ ಭಾರತ ರಕ್ಷಣಾ ವಿಭಾಗದಲ್ಲಿ ಮಾಡಿದ ತಪ್ಪುುಗಳನ್ನು ಸದುಪಯೋಗಪಡಿಸಿಕೊಂಡ ಎದುರಾಳಿ ತಂಡದ ಅಲ್ ಘಸ್ಸಾಾನಿ ಅವರು ಓಮನ್‌ಗೆ ಮೊದಲನೇ ಗೋಲು ತಂದುಕೊಟ್ಟರು. ಇದರೊಂದಿಗೆ ಮೊದಲನೇ ಅವಧಿಯಲ್ಲಿ ಓಮನ್ 1-0 ಮುನ್ನಡೆಯೊಂದಿಗೆ ವಿಶ್ರಾಾಂತಿಗೆ ತೆರಳಿತು.
ಬಳಿಕ, ತೀವ್ರ ಒತ್ತಡದಲ್ಲಿ ಕಣಕ್ಕೆೆ ಇಳಿದ ಬ್ಲೂ ಟೈಗರ್ಸ್ ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿತು. ಆದರೆ, ಸಾಧ್ಯವಾಗಲಿಲ್ಲ. 67ನೇ ನಿಮಿಷದಲ್ಲಿ ರಾಹುಲ್ ಭೆಕೆ ಅವರು ಅಂಗಳದಿಂದ ಹೊರ ನಡೆದು ಸಾರ್ಥಕ್ ಗೊಲುಯಿ ಅವರಿಗೆ ಅವಕಾಶ ಕಲ್ಪಿಿಸಿದರು. ಕೊನೆಯ ನಿಮಿಷದವರೆಗೂ ಗೋಲು ಗಳಿಸಿಲು ಸಾಕಷ್ಟು ಪ್ರಯತ್ನ ನಡೆಸಿದ ಭಾರತಕ್ಕೆೆ ಓಮನ್ ಅಡ್ಡಗಾಲು ಹಾಕಿತು. ಅಂತಿಮವಾಗಿ ಭಾರತ 0-1 ಅಂತರದಲ್ಲಿ ಸೋಲು ಅನುಭವಿಸಿತು. ಐದು ಪಂದ್ಯಗಳಿಂದ ಭಾರತ ಕೇವಲ ಮೂರು ಅಂಕಗಳೊಂದಿಗೆ ತನ್ನ ಅಭಿಯಾನ ಮುಗಿಸಿತು.
==