ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬಿಜೆಪಿ ಸಂಸ ದೀಯ ಮಂಡಳಿ ಸಭೆಯಲ್ಲಿ ಮೋದಿ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಸಂಸದೀಯ ವ್ಯವ ಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಂಸದರು ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಂಸದರ ಹಾಜರಾತಿ ಬಗ್ಗೆಯೂ ಮೋದಿ ಸಲಹೆಗಳನ್ನು ನೀಡಿದ್ದು, ಸಂಸತ್ ಅಧಿವೇಶನದ ಕಲಾಪಗಳಲ್ಲಿ ಸಂಸದರು ತಪ್ಪದೇ ಭಾಗಿಯಾಗಬೇಕು, ಮಕ್ಕಳೂ ಸಹ ಪದೇ ಪದೇ ಹೇಳಿದರೆ ಮಾಡಿದ ತಪ್ಪನ್ನೇ ಮಾಡುವುದಿಲ್ಲ ಎಂದು ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ನೀವಾಗಿಯೇ ಬದಲಾಗಿ ಇಲ್ಲದೇ ಇದ್ದಲ್ಲಿ ಕಾಲದ ಜೊತೆ ಬದಲಾವಣೆ ತಾನಾಗಿಯೇ ಆಗಲಿದೆ ಎಂದು ಸಂಸದರಿಗೆ ಮೋದಿ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ನಿಮ್ಮನ್ನು ನೀವು ಬದಲಿಸಿಕೊಳ್ಳದೆ ಇದ್ದರೆ, ಒಂದಷ್ಟು ಬದಲಾವಣೆಗಳು ಆಗುತ್ತವೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸಂಸತ್ತು ಮತ್ತು ಪಕ್ಷದ ಸಭೆಗಳಲ್ಲಿ ಸಂಸದರ, ಪ್ರಮುಖ ನಾಯಕರ ಗೈರು ಹೆಚ್ಚಾಗುತ್ತಿರುವುದರಿಂದ ಈ ಖಡಕ್ ವಾರ್ನ್ ಮಾಡಿದ್ದಾರೆ ಎಂದು ಹೇಳಲಾ ಗಿದೆ.
ಇಂದಿನ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಎಸ್.ಜೈಶಂಕರ್, ಪಿಯೂಷ್ ಗೋಯಲ್, ಪ್ರಲ್ಹಾದ ಜೋಶಿ, ಜಿತೇಂದ್ರ ಸಿಂಗ್ ಮತ್ತು ಅರ್ಜುನ್ ರಾಮ್ ಮೇಘ್ವಾಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಇದ್ದರು.
ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ನಡೆದ ದುರಂತ ಸೇರಿ, ಹಲವು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಸಂಸತ್ತಿ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿವೆ. ಆದರೆ ಬಿಜೆಪಿ ಸಂಸದರು ಅಧಿವೇಶನಕ್ಕೆ ಹಾಜರಾಗುತ್ತಿಲ್ಲ.