ಅಮಾನತು ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ಪಕ್ಷದ ಆರು ಮಂದಿ, ಟಿಎಂಸಿ ಮತ್ತು ಶಿವಸೇನೆಯ ಇಬ್ಬರು, ಸಿಪಿಐಎಂ ಮತ್ತು ಸಿಪಿಐನ ತಲಾ ಒಬ್ಬರು ಸದಸ್ಯರು ಅನಿರ್ದಿಷ್ಟಾ ವಧಿಯ ಧರಣಿ ನಡೆಸುತ್ತಿದ್ದಾರೆ.
ಮುಂಗಾರು ಅಧಿವೇಶನದ ವೇಳೆ ಸದನದಲ್ಲಿ ಕೋಲಾಹಲ ಎಬ್ಬಿಸಿದ ಕಾರಣಕ್ಕೆ ಅಮಾ ನತು ಮಾಡುವ ಕುರಿತ ನಿರ್ಣಯ ಚಳಿಗಾಲದ ಅಧಿವೇಶನದಲ್ಲಿ ಆಂಗೀಕಾರ ಪಡೆದ ಹಿನ್ನೆಲೆಯಲ್ಲಿ ಕಳೆದ ವಾರ 12 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.
ಹಿರಿಯ ಕಾಂಗ್ರೆಸ್ ಮುಖಂಡರು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರನ್ನು ಭೇಟಿ ಮಾಡಿ, ವಿರೋಧ ಪಕ್ಷಗಳ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ. ತಮ್ಮ ಪಕ್ಷದ ಸದಸ್ಯರು ಡಿ.23ರ ವರೆಗೆ ಪ್ರತಿ ದಿನ ಧರಣಿ ನಡೆಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ ಪ್ರಕಟಿಸಿದ್ದಾರೆ.