Saturday, 23rd November 2024

ಬಸ್ಸಿನಲ್ಲಿ ಚಿಲ್ಲರೆ ಕೇಳಿದರೆ, ಕಂಡಕ್ಟರ್‌ಗಳ ಜತೆ ಮಾತಿನ ಚಕಮಕಿಗೆ ಆಗಲಿದೆ ಮೂರು ವರ್ಷ ಜೈಲು

ಬೆಂಗಳೂರು: ಬಸ್ಸುಗಳಲ್ಲಿ ಸಂಚರಿಸುವ ವೇಳೆ ಚಿಲ್ಲರೆ ಕೇಳುವುದನ್ನು ‘ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು’ ಎಂದು ಭಾವಿಸಲಾಗುವುದು ಹಾಗೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಮೂರು ವರ್ಷಗಳವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುವುದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪೋಸ್ಟರ್‌ಗಳನ್ನು ತನ್ನೆಲ್ಲಾ ವಾಹನಗಳ ಮೇಲೆ ಅಂಟಿಸಿದೆ.

ಬಸ್ಸುಗಳಲ್ಲಿ ಟಿಕೆಟ್ ಪಡೆಯುವ ವೇಳೆ ಚಿಲ್ಲರೆಗಾಗಿ ಪ್ರಯಾಣಿಕರು ಹಾಗೂ ಕಂಡಕ್ಟರ್‌ಗಳ ನಡುವೆ ಮಾತಿನ ಚಕಮಕಿ ನಡೆಯು ವುದು ಸಹಜ. ನಾಣ್ಯಗಳು ಸಿಗದೇ ಇದ್ದಾಗ ಕಂಡಕ್ಟರ್‌ ಗಳು ಹಾಗೂ ಪ್ರಯಾಣಿಕರ ನಡುವೆ ಜಗಳಗಳು ಸಂಭವಿಸುವುದು ಸಾಮಾನ್ಯ.

ಈ ಪೋಸ್ಟರ್‌ ಅನ್ನು ಓದಿದ ಬಾಗಲಕೋಟೆ ಜಿಲ್ಲೆಯ ಕೆಂಪಣ್ಣ ಹವಾಲ್ದಾರ್‌ “ನನ್ನ ಬಳಿ ಸರಿಯಾದ ಚಿಲ್ಲರೆ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ಪರ್ಸ್ ಚೆಕ್ ಮಾಡಿದೆ. ಖಾತ್ರಿ ಯಾದ ಬಳಿಕವೇ ನಾನು ಬಸ್ ಏರಲು ನಿರ್ಧರಿಸಿದೆ. 

ಕೆಲಸ ಮಾಡುವ ಚಾಲಕರು ಹಾಗೂ ಕಂಡಕ್ಟರ್‌ಗಳನ್ನು ಸುಪ್ರೀಂ ಕೋರ್ಟ್ ಸಾರ್ವಜನಿಕ ಸೇವಕರೆಂದು ಪರಿಗಣಿಸಿದೆ. ಹೀಗಾಗಿ ಅವರ ಕರ್ತವ್ಯಕ್ಕೆ ಭಂಗ ತರುವುದು, ಅಥವಾ ಚಾಲಕನ ಮೇಲೆ ಹಲ್ಲೆ ಮಾಡುವುದು ಅಥವಾ ಕಂಡಕ್ಟರ್‌ ತನ್ನ ಕೆಲಸ ಮಾಡ ದಂತೆ ತಡೆಯುವುದು ಮಾಡುವುದು ಶಿಕ್ಷಾರ್ಹ ಅಪರಾಧ. ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಐಪಿಸಿಯ ಸೆಕ್ಷನ್ 186ರ ಅಡಿ ಮೂರು ತಿಂಗಳ ಸೆರೆವಾಸವನ್ನು ಈ ನಿಯಮ ಪಾಲಿಸದಿದ್ದರೆ ನೀಡಬಹುದಾಗಿದೆ,” ಎಂದು ಕನ್ನಡದಲ್ಲಿ ಬರೆದಿರುವ ನೋಟ್‌ನಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿರುವ ಆರ್‌ಟಿಸಿಗಳ ಅನೇಕ ಬಸ್ಸುಗಳು ನಗದುರಹಿತವಾಗುತ್ತಿದ್ದು, ಡಿಜಿಟಲ್ ಪಾವತಿಗಳಿಗೆ ಅವಕಾಶ ಕಲ್ಪಿಸಲು ಆರಂಭಿಸಿವೆ.

ವಾ.ಕ.ರ.ಸಾ.ಸಂನ ಹುಬ್ಬಳಿ ಘಟಕದ ಮುಖ್ಯ ಸಂಚಾರಿ ನಿರ್ವಾಹಕರು, ಶೀಘ್ರದಲ್ಲೇ ಈ ಪೋಸ್ಟರ್‌ಗಳನ್ನು ಹಿಂದಕ್ಕೆ ಪಡೆಯ ಲಾಗುವುದು ಎಂದಿದ್ದು, ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ಕಂಡಕ್ಟರ್‌ಗಳು ಪ್ರಯಾಣಿಕರ ಬಳಿ ಮನವಿ ಮಾಡ ಬಹುದಾಗಿದೆ ಅಷ್ಟೇ ಎಂದಿದ್ದಾರೆ.