Friday, 22nd November 2024

ಸುಲೂರು ವಾಯುನೆಲೆಯತ್ತ ತೆರಳಿದ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ

ತಮಿಳುನಾಡು: ಸಿಡಿಎಸ್ ಬಿಪಿನ್ ರಾವತ್ ಹಾಗೂ ಪತ್ನಿ ಸೇರಿದಂತೆ ವಿವಿಧ ಸೇನಾ ಅಧಿಕಾರಿಗಳು ತೆರಳುತ್ತಿದ್ದ ಐಎಎಫ್ ಹೆಲಿಕಾಪ್ಟರ್ ದುರಂತಕ್ಕೀಡಾಗಿದೆ.

ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸುಲೂರು ವಾಯುನೆಲೆಯತ್ತ ತಲುಪಿದ್ದಾರೆ. ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಹಾಗು ಇತರರು ಸೇರಿದಂತೆ 14 ಜನರಿದ್ದ ಐಎಎಫ್ ಹೆಲಿಕಾಪ್ಟರ್ ತಮಿಳು ನಾಡಿನ ಕುನೂರಿನಲ್ಲಿ ಪತನಗೊಂಡಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಸಭೆ ನಡೆಸಿದರೆ, ವಾಯುಪಡೆಯ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು, ಘಟನೆ ಸಂಬಂಧ ಮಾಹಿತಿ ಪಡೆಯಲು, ಘಟನಾ ಸ್ಥಳವಾದಂತ ಸುಲೂರು ವಾಯನೆಲೆಯನ್ನು ತಲುಪಿರುವುದಾಗಿ ವರದಿಯಾಗಿದೆ. ಸೇನಾ ಹೆಲಿಕಾಪ್ಟರ್ ಪತನ ಪ್ರಕರಣದಲ್ಲಿ, ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಬಿಪಿನ್ ರಾವತ್ ಹಾಗೂ ಇತರೆ ನಾಲ್ವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.