Friday, 22nd November 2024

ಒಂದಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್

#Sim Cards

ನವದೆಹಲಿ: ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚಿಗೆ ದೂರಸಂಪರ್ಕ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್​ಗಳನ್ನು ಪರಿಶೀಲಿಸು  ತ್ತಾರೆ. ಒಂಬತ್ತಕ್ಕಿಂತ ಹೆಚ್ಚು ಸಿಮ್​ಗಳಿರುವುದು ಗಮನಕ್ಕೆ ಬಂದಲ್ಲಿ ಒಂದು ಸಿಮ್​ ಹೊರತುಪಡಿಸಿ ಮಿಕ್ಕೆಲ್ಲ ಸಿಮ್​ಗಳನ್ನು ನಿಷ್ಕ್ರಿಯ ಗೊಳಿಸಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ವಾಸಿಸುವ ಜನರಿಗೆ ಆರು ಸಿಮ್​ಗಳನ್ನು ಮರುಪರಿಶೀಲನೆ ಮಾಡಲಾ ಗುತ್ತದೆ.

ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್​ನ್ನು ಆಯ್ಕೆ ಮಾಡಲು ಹಾಗೂ ಉಳಿದ ಸಿಮ್​ಗಳನ್ನು ನಿಷ್ಕ್ರಿಯ ಗೊಳಿಸಲು ಆಯ್ಕೆ ನೀಡಲಾಗುತ್ತದೆ.

ಒಬ್ಬ ಚಂದಾದಾರನು ವೈಯಕ್ತಿಕವಾಗಿ ಒಂಬತ್ತಕ್ಕಿಂತ ಹೆಚ್ಚು ಮೊಬೈಲ್​ ಸಂಪರ್ಕ ಗಳನ್ನು ಹೊಂದಿದ್ದಲ್ಲಿ ಮರುಪರಿಶೀಲನೆ ಗಾಗಿ ಮೊಬೈಲ್​ ಸಂಪರ್ಕಗಳನ್ನು ಫ್ಲ್ಯಾಗ್​ ಮಾಡಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ.

ಸೈಬರ್​ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.