ಪ್ರಸ್ತುತ
ರಮಾನಂದ ಶರ್ಮಾ
ganeshabhatv@gmail.com
ವಿದೇಶಕ್ಕೆ ಹೋಗಿ ತಮ್ಮ ಭಾರತೀಯ ನಾಗರಿಕತ್ವವನ್ನು ಬಿಟ್ಟು ಅಲ್ಲಿನ ನಾಗರಿಕತ್ವ ಪಡೆದು ಉನ್ನತ ಹುzಗೆ ಏರಿದವರಿಗೆ ತೋರಿಸುವ ಗೌರವ ನಮ್ಮ ದೇಶ ದಲ್ಲಿಯೇ ಇದ್ದು ನಮ್ಮವರೊಂದಿಗೆ ಬದುಕುವ ಮತ್ತು ದೇಶದ ಪ್ರಗತಿಗೆ ಕಾರಣರಾಗುವವರ ಬಗೆಗೆ ಅಂಥ ಮೆಚ್ಚುಗೆ ಕಾಣಬರುವುದಿಲ್ಲ. ಮುಲಾಜಿಲ್ಲದೇ ಚೌಕಾಶಿ ಯನ್ನು ತೋರಿಸುತ್ತೇವೆ. ಹೀಗೇಕೆ?
ಥಾಮಸ್ ಫ್ರೈಡ್ಮನ್ ತಮ್ಮ ಒಂದು ಭಾಷಣದಲ್ಲಿ, When we were young kids growing up in America, we were told to eat our
vegetables at dinner. Mothers said, think of the starving children in India and finish the dinner. And now I tell
my children: Finish your homework. Think of the children in India, who would become CEOs and make you starve, If you don’t .? ಎಂದು ಹೇಳಿದ್ದು, ಟ್ವಿಟರ್ನ ಹೊಸ ಸಿಇಒ ಆಗಿ ಪರಾಗ್ ಅಗ್ರವಾಲ್ ನೇಮಕವಾದ ನಂತರ. ಅಮೆರಿಕದ ಜನಪ್ರಿಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿಯುತ್ತಿದೆ. ಸತ್ಯ ನಾಡೆಲ್ಲ (ಮೈಕ್ರೋಸಾಫ್ಟ್), ಸುಂದರ ಪಿಚೈ( ಆಲ್ಫಾ ಬೆಟ್), ಶಾಂತನು ನಾರಾಯಣ್ ಅಡೋಬ್),
ಅರವಿಂದ ಕೃಷ್ಣ(ಐಬಿಎಂ), ಸಂಜಯ್ ಮೆಹ್ರೋತ್ರಾ (ಮೈಕಿರಾನ್ ಟೆಕ್ನಾಲಾಜಿ), ನಿಕೇಶ್ ಆರೋರ(ಫಾಲೋ ಆಲ್ಟೋ ನೆಟ್ವರ್ಕ್ಸ್), ಜಯಶ್ರೀ ಉಳ್ (ಅರಿಸ್ಟಾ ನೆಟ್ ವರ್ಕ್ಸ್), ಜಾರ್ಜ್ ಕುರಿಯನ್ (ನೆಟ್ ಯಾಪ್ ), ರೇವತಿ ಆದ್ವೈತಿ ( ಫ್ಯಾಕ್ಸ್), ಅಂಜಲಿ ಸೂದ್ (ಮಿಮಿಯೋ), ದಿನೇಶ್ ಪಾಲಿವಾಲ್ ( ಹರ್ಮಾನ್
ಇಂಟರ್ನ್ಯಾಷನಲ), ನೆಹಾ ನರ್ಕೇಡ್ (ಕಾನ್ -ಎಂಟ್) ಗೀತಾ ಗೋಪಿನಾಥ್ (ಐಎಮ್ಎಫ್) ಈ ಉದ್ದದ ಪಟ್ಟಿಗೆ ಇತ್ತೀಚೆಗೆ ಸೇರಿದವರು ಪರಾಗ್ ಅಗ್ರವಾಲ್( ಟ್ವಿಟರ್).
ಇದು ಅಮೆರಿಕದ ದೊಡ್ಡ ಜಾಗತಿಕ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಭಾರತೀಯರ ಪಟ್ಟಿ. ಈ ಪಟ್ಟಿಗೆ ಸಣ್ಣ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ವರನ್ನೂ ಸೇರಿಸಿದರೆ, ಮ್ಯಾನೇಜ್ ಮೆಂಟ್ ಜಗತ್ತು ಅಸೂಯೆ ಪಡುವಷ್ಟು ಮತ್ತು ಅಮೆರಿಕದಲ್ಲೂ ಮಣ್ಣಿನ ಮಕ್ಕಳು ಪರಿಕಲ್ಪನೆ ಮೊಳಕೆ ಒಡೆಯಲು ಪ್ರೇರೇ ಪಿಸುವಷ್ಟು ಉದ್ದವಾಗಿದೆ. ಇವರೆಲ್ಲ ವಿದೇಶಿ ವಿಶ್ವವಿದ್ಯಾಲಯಲ್ಲಿ ಓದಿದವರಲ್ಲ. ಬಹುತೇಕರು ಭಾರತದಲ್ಲಿಯೇ ಓದಿ ಪದವಿ ಪಡೆದವರು ಎನ್ನುವುದು ವಿಶೇಷ. ವಿಪರ್ಯಾಸ ವೆಂದರೆ ಈ ನಿಟ್ಟಿನಲ್ಲಿ ಹೆಚ್ಚು ಸಾಧಿಸಿದ, ಉನ್ನತ ಮಟ್ಟದಲ್ಲಿ ಇರುವ ಚೀನಾ, ರಷ್ಯಾ, ಅಮೆರಿಕ ಮತ್ತು ಜರ್ಮನ್ನ ರಾಷ್ಟ್ರಗಳನ್ನು ಹಿಂದಿಕ್ಕಿದೆ.
ಅಮೆರಿಕದ ಆಯ ಕಟ್ಟಿನ ಸ್ಥಳಗಳಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ ಮತ್ತು ಬಹುತೇಕ ಪ್ರತಿ ವಾರವೂ ಇನ್ನೊಬ್ಬ ಭಾರತೀಯ ಈ ಪಟ್ಟಿಗೆ ಸೇರುತ್ತಿರುವುದು ಇನ್ನೊಂದು ವಿಶೇಷ ಬೆಳವಣಿಗೆ. ವಿಚಿತ್ರವೆಂದರೆ, ಭಾರತಲ್ಲಿನ ಯಾವುದೇ ಜಾಗತಿಕ ಮಟ್ಟದ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ವಿದೇಶಿಯರ ಸಂಖ್ಯೆ ಶೂನ್ಯ ಅಥವಾ ತೀರಾ ಗೌಣ. ಭಾರತೀಯರೊಬ್ಬರು ಅಮೆರಿಕದ ಅಥವಾ ಯಾವುದಾದರೂ ಮುಂದುವರಿದ ದೇಶದಲ್ಲಿ ಉನ್ನತ ಹುದ್ದೆಗೆ ಏರಿದಾಗ, ಭಾರತೀಯರು ಹೆಮ್ಮೆ ಪಡುತ್ತಾರೆ. ಅವರ ಬಗೆಗೆ ಪುಟಗಟ್ಟಲೆ ಪ್ರಶಂಸೆಯನ್ನು ಓದುತ್ತಾರೆ.
ಮಕ್ಕಳಿಗೆ ಅವರಂತೆ ಆಗಲು ಪುಸಲಾಯಿಸುತ್ತಾರೆ. ಅವಕಾಶ ದೊರಕಿದಾಗೆಲ್ಲ ಅವರ ಸಾಧನೆ ಬಗೆಗೆ ಹೇಳಿಕೊಳ್ಳುತಾರೆ. ಇದನ್ನು ಒಂದು ರೀತಿಯಲ್ಲಿ ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಬಿಂಬಿಸುತ್ತಾರೆ. ಆದರೆ, ವಿದೇಶದಲ್ಲಿ ಸಾಧನೆಗೈಯುವ ಭಾರತೀಯರ ಬಗೆಗೆ ತೋರಿಸುವ ಗೌರವ ಮತ್ತು ಹೆಮ್ಮೆಯನ್ನು ನಮ್ಮ ದೇಶದಲ್ಲಿ ಸಾದನೆ ಗೈಯುವ ಭಾರತೀಯರ ಬಗೆಗೆ ತೋರಿಸುವಾಗ ರಸ್ತೆ ಬದಿ ವ್ಯಾಪಾರ ಮಾಡುವಾಗ ತೋರಿಸುವ ಚೌಕಾಶಿಯನ್ನು ಮುಲಾಜಿಲ್ಲದೇ ತೋರಿಸುತ್ತೇವೆ.
ಸಾಲ್ಟ್ನಿಂದ ಸಾಫ್ಟ್ ವೇರ್ವರೆಗೆ ಉದ್ಯಮವನ್ನು ಸ್ಥಾಪಿಸಿ, ಈ ದೇಶದ ಪಾಸ್ ಪೋರ್ಟ್ ಅನ್ನು ಉಳಿಸಿಕೊಂಡು, ಇಲ್ಲಿಯೇ ಬದುಕಿ ಬಾಳಿ, ಭಾರತದ
ಉತ್ಪನ್ನವನ್ನು ಜಗತ್ತಿಗೆ ಅನಾವಣಗೊಳಿಸಿ, ತಾವೂ ಬದುಕಿ ಲಕ್ಷಾಂತರ ಕುಟುಂಬಗಳಿಗೆ ಬದುಕು ನೀಡಿದ ಟಾಟಾ, ಅದಾನಿ, ಅಂಬಾನಿ, ಮಹೀಂದ್ರ, ಗೋದ್ರೆಜ್,
ಬಿರ್ಲಾ, ಸೋಮಾನಿ, ಸಿಂಘಾನಿ ನಾರಾಯಣ ಮೂರ್ತಿಗಳು, 20ನಡೆ, 200 ಪಿಚಾಯ್ ಮತ್ತು 1000 ಪರಾಗ್ಗಳು ಸೃಷ್ಟಿಸಿದ ಉದ್ಯೋಗ ಮತ್ತು ಸಂಪತ್ತಿ ಗಿಂತ 10 ಪಟ್ಟು ಹೆಚ್ಚು ಸಾಧಿಸಿದರೂ ಅವರ ಸಾಧನೆಗೆ ತೂಕ ಸಿಗುತ್ತಿಲ್ಲ. ಅವರು ಮಾಡಿರಬಹುದಾದ ಲಾಭ, ಅವರು ಬ್ಯಾಂಕ್ನಲ್ಲಿ ಬಾಕಿ ಇರಿಸಿ ಕೊಂಡಿರುವ ಸಾಲ ಮತ್ತು ಅವರ ಜೀವನ ಶೈಲಿಯನ್ನು ಟೀಕಿಸುವವರೇ ಹೆಚ್ಚು.
ಅವರು ತಮ್ಮ ವೈಯುಕ್ತಿಕ ಜೀವನದಲ್ಲಿ ನಾಲ್ಕು ಕಾಸನ್ನು ಹೆಚ್ಚು ಖರ್ಚು ಮಾಡಿದಾಗ ಅವರ ಪ್ರತಿ ನಡೆಯನ್ನೂ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳ ಲಾಗುತ್ತದೆ. ಅದನ್ನುಅಪರಾದವೆಂದು ಬಿಂಬಿಸಲಾಗುತ್ತದೆ. ಜಾಲತಾಣದಲ್ಲಿ ಅಂಬಾನಿ ಮತ್ತು ಅದಾನಿ ಬಗೆಗೆ ಬರುವ ಕುತ್ಸಿತ ಟೀಕೆಗಳನ್ನು ನೋಡಿದಾಗ
ಅಸಹ್ಯ ಎನಿಸುತ್ತದೆ. ಟಾಟಾ ಸಮೂಹದ ಕಂಪನಿಗಳಲ್ಲಿ 750000, ಎಲ್ ಟಿಯಲ್ಲಿ 338000, ಇನ್ಫೋಸಿಸ್ನಲ್ಲಿ 260000, ರಿಲಾಯನ್ಸ್ನಲ್ಲಿ 260000, ವಿಪ್ರೋ ದಲ್ಲಿ 210000, ಎಚ್ಸಿಎಲ್ ನಲ್ಲಿ 167000, ಎಚ್ಡಿಎಫ್ ಸಿ ಬ್ಯಾಂಕ್ ನಲ್ಲಿ 120000, ಐಸಿಐಸಿಐನಲ್ಲಿ 97000 ಮತ್ತು ಟಿವಿಎಸ್ನಲ್ಲಿ 60000 ಕುಟುಂಬಗಳು ಬದುಕು ಪಡೆದಿರುವುದನ್ನು ಮರೆಮಾಚಲಾಗುತ್ತದೆ. ಈ ಕಂಪನಿಗಳಲ್ಲಿ ಸುಮಾರು 25 ಲಕ್ಷ ಜನರು ಗೌರವಾನ್ವಿತ ಸಂಬಳದಿಂದ ದುಡಿಯುತ್ತಿದ್ದಾ.
ಈ ವಾಸ್ತವವನ್ನು ತಿಳಿಯುವ ಪ್ರಯತ್ನವನ್ನೂ ಮಾಡುವುದಿಲ್ಲ. ಈ ಕಂಪನಿಗಳಲ್ಲಿ ದುಡಿಯುವವರ ಸಂಖ್ಯೆ ಕೇಂದ್ರ ಸರಕಾರದ ಒಟ್ಟೂ ಉದ್ಯೋಗಿಗಳ ಸಂಖ್ಯೆಯ (48.34 ಲಕ್ಷ) ಅರ್ಧದಷ್ಟಾದರೆ, ಕರ್ನಾಟಕ ಸರಕಾರದ ಒಟ್ಟೂ ನೌಕರರ ಸಂಖ್ಯೆಯ 5 ಪಟ್ಟು ಹೆಚ್ಚು. ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮಜಿಯವರು 2020-21 ರಲ್ಲಿ ಪ್ರತಿದಿನ 27 ಕೋಟಿ ರು.ಗಳನ್ನು ಸಾಮಾಜಿಕ ಕಾರ್ಯಗಳಿಗೆ ನೀಡಿದ್ದಾರೆ. ಹನ್ನೊಂದು ಉದ್ಯಮಿಗಳು ನೂರು ಕೋಟಿ ರು.ಗೂ ಹೆಚ್ಚು ದಾನವನ್ನು 2020-21ರಲ್ಲಿ ನೀಡಿದ್ದಾರೆ. ಇನ್ಫೋಸಿಸ್ ಪೌಂಡೇಷನ್ವತಿಯಿಂದ ಕೋವಿಡ್ ನಿರ್ಮೂಲನೆಗಾಗಿ 100 ಕೋಟಿ ನೀಡಲಾಗಿದೆ.
ಉದ್ಯಮಿ ಶಿವ ನಾಡಾರ ದಾನದಲ್ಲಿ ಮತ್ತು ದೇಣಿಗೆಯಲ್ಲಿ ಇತರ ಉದ್ಯಮಿಗಳೊಂದಿಗೆ ಪೈಪೋಟಿಯಲ್ಲಿದ್ದಾರೆ. ಸಾಮಾಜಿಕ ಕಾರ್ಯಗಳಿಗಾಗಿ ದಾನ ನೀಡುವು ದರಲ್ಲಿ ಮತ್ತು ಪ್ರತಿಭೆಯನ್ನು ಗುರುತಿಸುವುದರಲ್ಲಿ ಮಹೀಂದ್ರ ಸಮೂಹ ಎತ್ತಿದ ಕೈ. ಟಾಟಾ ಸಮೂಹ ಇಂಥಹ ಕಾರ್ಯಗಳಲ್ಲಿ ಯಾವಾಗಲೂ ನಂಬರ್ ಒನ್ ಸ್ಲಾಟ್ನಲ್ಲಿಯೇ ಇರುತ್ತದೆ. ಆದರೂ ವಿದೇಶಕ್ಕೆ ಹೋಗಿ ತಮ್ಮ ಭಾರತೀಯ ನಾಗರಿಕತ್ವವನ್ನು ಬಿಟ್ಟು ಅಲ್ಲಿನ ನಾಗರಿಕತ್ವ ಪಡೆದು ಉನ್ನತ ಹುದ್ದೆಗೆ ಏರಿದವರಿಗೆ ತೋರಿಸುವ ಗೌರವ ನಮ್ಮ ದೇಶದಲ್ಲಿಯೇ ಇದ್ದು ನಮ್ಮವರೊಂದಿಗೆ ಬದುಕುವ ಮತ್ತು ದೇಶದ ಪ್ರಗತಿಗೆ ಕಾರಣರಾಗುವವರ ಬಗೆಗೆ ಅಂಥ ಮೆಚ್ಚುಗೆ ಕಾಣ ಬರುವುದಿಲ್ಲ. ಅವರ ಸಣ್ಣ ತಪ್ಪನ್ನೂದೊಡ್ಡದು ಮಾಡಿ, ಮುಖ ಪುಟಕ್ಕೆ ಮತ್ತು ಹೆಡ್ಲೈನ್ಗೆ ತಂದು ವಿಕೃತಿಯನ್ನು ಮೆರೆಯುವವರು ಇದ್ದಾರೆ.
ಇತ್ತೀಚೆಗೆ ಆದಾಯಕರ ಇಲಾಖೆಗೆ ಹೊಸ ಐಟಿ ಪೋರ್ಟಲ್ ವಿನ್ಯಾಸ ಗೊಳಿಸಿ ನೀಡುವ ನಿಟ್ಟಿನಲ್ಲಿ ಸ್ವಲ್ಪ ವಿಳಂಬವಾಗಿರುವುದಕ್ಕೆ, ಅದನ್ನು ಮಹಾಪರಾಧ ಎನ್ನು
ವಂತೆ ಚಿತ್ರಿಸಿ ಇನ್ಫೋಸಿಸ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ತಪ್ಪು ಒಪ್ಪುಗಳನ್ನು ಪರಾಮರ್ಷಿಸಿ ದಾರಿ ಹುಡುಕುವ ಬದಲು ಸಂಸ್ಥೆಯನ್ನು ಮತ್ತು
ಅದರ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಅಕಸ್ಮಾತ್ ಸಂಸ್ಥೆ ವಿದೇಶಿಯಾಗಿದ್ದರೆ, ಈ ಸಂಸ್ಥೆ ಬಲಿ ಪಶು ಆಗುತ್ತಿರಲಿಲ್ಲ. ಭಾರತೀಯರು ಅಮೆರಿ ಕಕ್ಕೆ ಹೋಗಿ ಅಲ್ಲಿ ಜಾಗತಿಕ ಕಂಪನಿಗಳಲ್ಲಿ ಸಿಇಒ ಆಗಿ ಸೇವೆಸಲ್ಲಿಸುವುದು ಹೆಮ್ಮೆಯ ವಿಷಯ. ಆದರೆ, ಇವರು ಅದರೊಂದಿಗೆ ಭಾರತದಲ್ಲಿ ಸ್ಟಾರ್ಟಪ್ ಯುನಿ ಕಾರ್ನಗಳನ್ನು( ಕನಿಷ್ಠ 7500 ಕೋಟಿ ರು. ಮೌಲ್ಯ) ತೆರೆದು, ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯತ್ತ ಗಮನ ಕೊಡಬಹುದಿತ್ತು ಎನ್ನುವ ಮಾತು ಐಟಿ ಮತ್ತು ಉದ್ಯಮ ವಲಯಗಳಲ್ಲಿ ಕೇಳಿ ಬರುತ್ತಿದೆ.
ದೇಶದಲ್ಲಿ ಈಗ ಸುಮಾರು 77 ಯುನಿಕಾರ್ನ್ಗಳು ಇದ್ದು, ಮುಂದಿನ ದಿನಗಳಲ್ಲಿ ಇವೇ ಉದ್ಯೋಗ ಸೃಷ್ಟಿಯತ್ತ ದಾಪುಗಾಲು ಹಾಕುವ ನಿರೀಕ್ಷೆ ಇದೆ. ಮೇಧಾವಿ ತನ ಮತ್ತು ಬುದ್ಧಿಮತ್ತೆ ವೈಯಕ್ತಿಕ ಹಿತಾಸಕ್ತಿಗಳಿಗೆ ಮತ್ತು ಉನ್ನತಿಗೆ ಸೀಮಿತವಾಗಿರಬಾರದು ಎನ್ನುವ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಅಭಿಪ್ರಾಯದಲ್ಲಿ ಹುರುಳಿದೆ. ಆಳವಾಗಿ ಬೇರೂರಿದ ಮತ್ತು ಜನಪ್ರಿಯವಾಗಿರುವ ಕಂಪನಿಗಳಲ್ಲಿ ಉನ್ನತ ಹುದ್ದೆ ಹಿಡಿದು ಅವರ ಬ್ಯಾಲೆನ್ಸ್ ಶೀಟನ್ನು ಇನ್ನೂ ಸದೃಢ ಮಾಡುವುದ ಕ್ಕಿಂತ, ವೈಫಲ್ಯ ಹೊಂದಿದ ಕಂಪನಿಗಳನ್ನು ಸರಿದಾರಿಗೆ ತರುವುದರಲ್ಲಿ ಮತ್ತು ಹೊಸ ಕಂಪನಿಗಳನ್ನು ಸ್ಥಾಪಿಸಿ ಹೊಸ ವಿಚಾರ ಧಾರೆ-ಅವಿಷ್ಕಾರ ಗಳಿಗೆ, ಹೊಸ ಉತ್ಪನ್ನಗಳಿಗೆ, ಹೊಸ ಮಾರುಕಟ್ಟೆಗೆ ಚಾಲನೆ ನೀಡುವುದರಲ್ಲಿ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಬಳಸಬೇಕು ಎನ್ನುವ ಚರ್ಚೆ ಕೇಳಿ ಬರುತ್ತಿದೆ.
ಪ್ರತಿಭಾವಂತರು ಮುಂದೆ ಬಂದರೆ, ಹೂಡಿಕೆದಾರರು ಕ್ಯೂ ನಿಲ್ಲುತ್ತಾರೆ. ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ ಇನ್ನೂ ಸಾವಿರ ಕಾರ್ಪೋರೇಟ್ ಕಂಪನಿಗಳ
ಸ್ಥಾಪನೆಯ ಅವಶ್ಯಕತೆ ಇದ್ದು, ಸಾವಿರಾರು ಸಿಇಒಗಳಿಗೆ ಸ್ಥಾನವಿದೆ. ಅಮೆರಿಕದ ಕಂಪನಿಗಳು ಭಾರತೀಯರನ್ನು ತಮ್ಮ ಕಂಪನಿಗಳ ಸಿಇಒಗಳನ್ನಾಗಿ ನೇಮಿಸಿ ಕೊಳ್ಳುವುದರಲ್ಲಿ ಅವರದೇ ಅದ ಅಗೋಚರ ಅಜೆಂಡಾ ಇದೆ ಎಂದು ಹೇಳಲಾಗುತ್ತದೆ. ಪ್ರತಿಯೊಂದನ್ನೂ ಕಮರ್ಷಿಯಲ್ ದೃಷ್ಟಿಯಲ್ಲಿ ನೋಡುವ ಅಮೆರಿಕನ್ನರು ಭಾರತದ ಪ್ರತಿಭೆಗಳನ್ನು ತಮ್ಮ ಕಂಪನಿಯ ವ್ಯವಹಾರವನ್ನು ಹೆಚ್ಚುಗೊಳಿಸುವುದರಲ್ಲಿ, ತನ್ಮೂಲಕ ಅರ್ಥಿಕವಾಗಿ ಇನ್ನೂ ಸದೃಢವಾಗಿ ಬೆಳೆಯಲು ಉಪಯೋ ಗಿಸಿಕೊಳ್ಳುತ್ತವೆ ಎನ್ನುವ ಗುಮಾನಿ ಚಿಂತನಾರ್ಹ.
ಭಾರತೀಯ ಮೂಲದ ಪ್ರತಿಭಾವಂತರಿಂದ ಅಮೆರಿಕ ಅಪರಿಮಿತ ಲಾಭ ಗಳಿಸಿದೆ ಎಂದು ಟೆಸ್ಲಾ ಕಂಪನಿಯ ಸಿಇಒ ಎಲನ್ ಮಸ್ಕ ಪ್ರಶಂಸೆ ವ್ಯಕ್ತ ಮಾಡಿರು ವುದು ಮಾಧ್ಯಮದಲ್ಲಿ ವರದಿಯಾಗಿದೆ. ಇಂಥ ಪರಿಸ್ಥಿತಿ ಭಾರತದಲ್ಲಿ ಇದ್ದರೆ, ಮಣ್ಣಿನ ಮಕ್ಕಳು ಘೋಷಣೆ ಮುಗಿಲಿಗೇರುತ್ತಿತ್ತು. ಒಂದು ರೀತಿಯಲ್ಲಿ ಈ ಬೆಳವಣಿಗೆ ಭಾರತಕ್ಕೆ blessing in disguise ಆದರೂ ಮುಂದಿನ ದಿನಗಳಲ್ಲಿ ಈ ರೀತಿಯ brain drain ದೇಶಕ್ಕೆ negative product ನೀಡುವುದನ್ನು ಅಲ್ಲಗಳೆಯ ಲಾಗದು. ಪ್ರತಿಭಾವಂತರನ್ನು ಗುರುತಿಸಿ ಮಹತ್ವದ ಜವಾಬ್ದಾರಿ ಯನ್ನು ನೀಡಿ ಅವರ ಪ್ರತಿಭೆಯನ್ನು ನಮ್ಮ ಕಾರ್ಪೋರೇಟ್ ಜಗತ್ತು ಬಳಸಿ ಕೊಳ್ಳಬಹುದಿತ್ತು. ನಮ್ಮ ಕಾರ್ಪೊರೇಟ್ ಎಡವಿದ್ದಲ್ಲಿ ವಿದೇಶಿ ಕಾರ್ಪೋರೇಟ್ ಗಳು, ಮುಖ್ಯವಾಗಿ ಅಮೆರಿಕನ್ ಕಾರ್ಪೋರೇಟ್ಗಳು ಎದ್ದೇಳುತ್ತಿವೆ. ಸರಕಾರವೂ ಈ ನಿಟ್ಟಿನಲ್ಲಿ ಚಿಂತಿಸುವ ಕಾಲ ಸನ್ನಿಹಿತವಾಗಿದೆ.