ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು, ಕರ್ನಾಟಕದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಮರಳಿದ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮೊದಲು ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲಿ ಒಬ್ಬರು ಬೆಂಗಳೂರಿನ ವೈದ್ಯರಾಗಿದ್ದರು. ಮತ್ತೊಬ್ಬರು ದ.ಆಫ್ರಿಕಾದವರಾಗಿದ್ದು, ಸೋಂಕಿರುವುದು ಪತ್ತೆಯಾಗಿತ್ತು. ಐರ್ಯಲ್ಯಾಂಡ್ ಪ್ರವಾಸ ಮಾಡಿ ಮರಳಿದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಿಗೆ ಶನಿವಾರ ಕೋವಿಡ್ ಪರೀಕ್ಷೆ ಮಾಡ ಲಾಗಿತ್ತು.
ದೇಶದಲ್ಲಿ ನಿನ್ನೆಯವರೆಗೂ 33 ಪ್ರಕರಣಗಳು ವರದಿಯಾಗಿದ್ದವು. ಆಂಧ್ರ ಪ್ರದೇಶವೂ ಸೇರಿ 35ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 17 ಪ್ರಕರಣಗಳು ವರದಿಯಾಗಿದ್ದು, ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.