Saturday, 14th December 2024

ದೇಶದಲ್ಲಿ ಸಾವಿನ ಲೆಕ್ಕಕ್ಕೆ ಯಾರು ಹೊಣೆ ?

Farmer Protest

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಸಂಸತ್ತಿನಲ್ಲಿ ಕೇಂದ್ರ ಸರಕಾರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ದೆಹಲಿಯ ಗಡಿಯ ಭಾಗದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಯ
ಸಂದರ್ಭದಲ್ಲಿ ಮೃತಪಟ್ಟ ರೈತರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿತು.

ಯಥಾ ಪ್ರಕಾರ ಬಿಜೆಪಿ ವಿರೋಧಿಗಳು ವಿಶೇಷವಾಗಿ ಮೋದಿ ವಿರೋಧಿಗಳು ಇದರ ವಿರುದ್ಧ ಆಕ್ರೋಶ ಹೊರಹಾಕಿ ಇದೊಂದು ಅಮಾನವೀಯ ರೈತ ವಿರೋಧಿ ಸರಕಾರ ಎಂದು ಕಟುವಾಗಿ ಟೀಕಿಸಿದರು. 2021ರ ಮಾರ್ಚ್‌ನಲ್ಲಿ ದೇಶದಲ್ಲಿ ಮೊದಲ ಕರೋನಾ ಪ್ರಕರಣ ಪತ್ತೆಯಾದ ವೇಳೆ ಇಡಿ ದೇಶವೇ ತಲ್ಲಣ ಗೊಂಡಿತ್ತು.

ವೇಗವಾಗಿ ಹರಡುವ ಈ ವೈರಾಣುವನ್ನು ಎದುರಿಸಲು ಮೂಲಭೂತ ಸೌಕರ್ಯವಾಗಲಿ ಔಷಽಯಾಗಲಿ ಇಲ್ಲದಿರುವಾಗ ಭಾರತದಲ್ಲಿ ಇದರಿಂದಾಗುವ  ಅನಾಹುತ ಎಲ್ಲರಲ್ಲಿಯೂ ಭೀತಿಯ ಅಲೆ ಹುಟ್ಚಿಹಾಕಿತ್ತು. ಕರೊನಾ ಎದುರಿಸಲು ಕೇಂದ್ರ ಸರಕಾರ ಮಾರ್ಚ್ 23ರಂದು ದೇಶಾದ್ಯಂತ್ಯ ಕಠಿಣ ಲಾಕ್‌ಡೌನ್ ಘೋಷಣೆ ಮಾಡಿತ್ತು. ಎಲ್ಲ ಸಾರಿಗೆ ಸಂಚಾರ ಸ್ತಬ್ದವಾಯಿತು. ನಮ್ಮಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ಉತ್ತರ ಪ್ರದೇಶ ಬಿಹಾರ ಈಶಾನ್ಯ ಭಾರತ ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಿಂದ ಮಹಾರಾಷ್ಟ್ರ, ಕರ್ನಾಟಕ. ಗುಜರಾತ್ ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮೊದಲನೆಯ ೧೫ ದಿನದ ತರುವಾಯ ಆ ಕಾರ್ಮಿಕರು ವಾಪಸು ತಮ್ಮ ಮನೆಗೆ ಹಿಂದಿರುಗಲು ನಡಿಗೆ, ಸೈಕಲ್ ಮತ್ತು ದೊರೆತ ವಾಹನ ಗಳ ಮೂಲಕ ಆರಂಭಿಸಿದರು.

ಸರಕಾರ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಹಲವರು ಅಪಘಾತದಲ್ಲಿ ಸಾವಿಗೀಡಾದರು. ಒಂದು ಅಂದಾಜಿನ ಪ್ರಕಾರ 970ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮೃತ ಪಟ್ಟರು ಎಂದು ವರದಿಯಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಅಂಕಿ ಅಂಶವಿಲ್ಲ ಎಂದು ಉತ್ತರಿಸಿದೆ ಕಳೆದ 22 ತಿಂಗಳಿನಿಂದ ದೇಶವನ್ನು ಕಾಡುತ್ತಿರುವ ಕರೊನಾ ವೈರಾಣುವಿಗೆ ಈಗಾಗಲೆ 4.75ಲಕ್ಷ ಜನ ಬಲಿಯಾ ಗಿದ್ದಾರೆ.

ಮರಣ ಪ್ರಮಾಣ ಶೇ. 1.37ರಷ್ಟು ಇರುವುದು. ಗಮನಾರ್ಹವೆಂದರೆ ದೇಶದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರುವುದು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯ ಗಳಲ್ಲಿ. ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ ಮೆಂಟ್ ವರದಿಯಲ್ಲಿ ಭಾರತದ ಕೊವಿಡ್ ಸಾವು 50 ಲಕ್ಷ ಎಂದು ಅಂದಾಜಿಸಿದೆ. ಇದಕ್ಕೆ ಆಧಾರವಾಗಲಿ ಸಮರ್ಥಿಸುವ ಅಂಕಿ-ಅಂಶವಾಗಲಿ ಇಲ್ಲ. ಭಾರತ ಕರೊನಾ ನಿವರ್ಹಣೆಯಲ್ಲಿ ವಿಫಲವಾಗಿದೆ ಎಂದು ವಿಶ್ವಕ್ಕೆ ಸಾರುವುದು ಮಾತ್ರ. ಇಂತಹ ಬುಡವಿಲ್ಲದ ವರದಿ ಮುಂದಿಟ್ಟುಕೊಂಡು ಪ್ರತಿಪಕ್ಷ ಸಾಮಾಜಿಕ ತಾಣದಲ್ಲಿ ಹೋರಾಟ ಕೈಗೊಂಡು ಸರಕಾರ ಸತ್ಯ ಮುಚ್ಚಿಡುತ್ತಿದೆ ಎಂದು ಆರೋಪ ಮಾಡುತ್ತಿದೆ.

ಕಳೆದ 22 ತಿಂಗಳಲ್ಲಿ ಸಂಭವಿಸಿರುವ ಈ ನಾಲ್ಕು ಘಟನೆಗಳಲ್ಲಿ ಎದ್ದಿರುವ ಪ್ರಶ್ನೆ ಮೃತಪಟ್ಟವರ ಲೆಕ್ಕ ಗೊತ್ತಿಲ್ಲ ಎಂದು ಕೇಂದ್ರ ಸರಕಾರ ನುಣಿಚಿಕೊಳ್ಳುತ್ತಿದೆ ಎಂಬ ಆರೋಪ. ಈ ಹಿನ್ನೆಲೆಯಲ್ಲಿ ಸತ್ಯವೇನು ಮತ್ತು ಸಾವಿನ ಸಂಖ್ಯೆ ದಾಖಲಿಸುವವರು ಯಾರು ಮತ್ತು ಕೇಂದ್ರ ಸರ್ಕಾರ ಮಾಹಿತಿ ಇಲ್ಲ ಎನ್ನುವ ಬದಲು ಸಂಗ್ರಹಿಸಿ ನೀಡಲಾಗುವುದು ಎಂದು ಉತ್ತರಿಸಬಹುದಿತ್ತ? ಎಂಬ ಪ್ರಶ್ನೆ ಸಹಜ. ರಾಜ್ಯಗಳಲ್ಲಿ ಅವಘಡಗಳು ಸಂಭವಿಸಿದಾಗ ಉದಾಹರಣೆಗೆ ಪ್ರವಾಹ, ಬರ ಮತ್ತು ಭೂಕಂಪ ಮುಂತಾದ ವೇಳೆ ಯಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಾವು ನೋವು ಮತ್ತು ಉಂಟಾಗಿರುವ ನಷ್ಟವ ಕುರಿತು ವರದಿಯನ್ನು
ಸಲ್ಲಿಸುತ್ತದೆ. ಇದರ ಆಧಾರದ ಮೇಲೆಯೇ ಕೇಂದ್ರ ಸರಕಾರ ಪರಿಹಾರ ಮತ್ತು ಇನ್ನಿತರ ಸಹಾಯವನ್ನು ಒದಗಿಸುವುದು.

ಕೇಂದ್ರ ಸರಕಾರ ತನ್ನ ತಂಡವನ್ನು ಅನಾಹುತದ ಪರಿಶೀಲನೆಗೆ ಕಳುಹಿಸುವುದೇ ವಿನಹ ನೇರವಾಗಿ ಕೇಂದ್ರ ಯಾವುದೇ ಅಂಕಿ-ಅಂಶಗಳನ್ನು ಸಂಗ್ರಹಿಸುವು ದಿಲ್ಲ. ಉದಾಹರಣೆಗೆ ರಸ್ತೆಯಲ್ಲಿ ನಡೆಯುವ ಅಪಘಾತಗಳ ಸಾವು ನೋವು ವಿವರಗಳನ್ನು ಆಯಾ ರಾಜ್ಯಗಳ ಪೊಲೀಸರು ಅಧಿಕೃತ ದಾಖಲೆ ನೀಡುತ್ತಾರೆ. ಹಾಗೆಯೇ ಸಾವು ಸಂಭವಿಸಿ ದಾಗ ವೈದ್ಯರು ನೀಡುವ ಮರಣ ಪ್ರಮಾಣ ಪತ್ರದಲ್ಲಿ ನಮೂದಿಸುವ ಕಾರಣವೇ ಅಂತಿಮ ಮತ್ತು ಅದರ ಮೇಲೆಯೇ ರಾಜ್ಯ
ಮತ್ತು ಕೇಂದ್ರ ಸರಕಾರಗಳು ಅವಲಂಬಿಸುವುದು.

ಸರಕಾರ ಅಧಿಕೃತ ದಾಖಲೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವುದೇ ವಿನಹ ಯಾವುದೇ ರಾಜಕೀಯ ಪಕ್ಷಗಳ ಅಥವಾ ಮಾಧ್ಯಮಗಳ ಸುದ್ದಿಯ ಆಧಾರದ ಮೇಲೆ ನಡೆಯುವುದಿಲ್ಲ. ಅದರರ್ಥ ಕೇಂದ್ರ ಸರಕಾರಕ್ಕೆ ಮಾಹಿತಿಯನ್ನು ಸಂಗ್ರಹಿಸುವ ಹೊಣೆಗಾರಿಕೆ ಇಲ್ಲವೆಂದಲ್ಲ ಆದರೆ ಮಾಹಿತಿ ನೀಡಬೇಕಾ ದವರ ಜವಾಬ್ದಾರಿಯು ಹೆಚ್ಚಿರುವುದು. ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಕಣ್ಮರೆಯಾದರೆ 7 ವರ್ಷ ಗಳ ಕಾಲ ಕುಟುಂಬಸ್ಥರಿಗೆ ಅಧಿಕೃತವಾದ ಮರಣ ಪ್ರಮಾಣ
ಪತ್ರ ದೊರೆಯುವುದಿಲ್ಲ. ಪ್ರವಾಹ ಮತ್ತು ಪ್ರಕೃತಿ ಅವಘಡ ಗಳಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕಾಣೆಯಾದವರಿಗೆ ಮಾನವೀಯ ಕಾರಣಗಳಿಗೆ ಮರಣ ಪ್ರಮಾಣ ಪತ್ರ ನೀಡಿ ಪರಿಹಾರ ನೀಡುತ್ತಾರೆ.

ಕೊವಿಡ್ ಸಂದರ್ಭದಲ್ಲಿ ಆಕ್ಸಿಜನ್ ದೊರೆಯದೇ ಮೃತಪಟ್ಟಿದ್ದರೆ ಅದನ್ನು ವೈದ್ಯರು ಮರಣ ಪತ್ರ ನೀಡುವಾಗ ನಮೂದಿಸಬೇಕಿತ್ತು. ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿ ಪ್ರಮಾಣ ಪತ್ರವನ್ನು ಆಸ್ಪತ್ರೆಗಳು ನೀಡಿಲ್ಲ. ಕೋವಿಡ್‌ನಿಂದ ಮೃತಪಟ್ಟವರು ಮರಣೋತ್ತರ ಪರೀಕ್ಷೆಗೆ ಒಳಪಡದಿ ರುವುದು ಮತ್ತೊಂದು ಪ್ರಮುಖ ಕಾರಣ. ಆಕ್ಸಿಜನ್ ಕೊರತೆ ಯಿಂದ ಸಾವು ಎಂದು ಆಸ್ಪತ್ರೆಯ ದಾಖಲೆಯಲ್ಲಿ ಉಲ್ಲೇಖಿಸದಿರುವ ಕಾರಣ ಕೇಂದ್ರ ಮಾಹಿತಿ ಇಲ್ಲ ಎಂದು ಹೇಳಿರುವುದು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 23 ನತದೃಷ್ಟ ಕೊವಿಡ್ ಸೋಂಕಿತರು ಮೃತಪಟ್ಟರು.

ರಾಜ್ಯದಲ್ಲಿ ಬಹು ದೊಡ್ಡ ಕೋಲಾಹಲವನ್ನೇ ಇದು ಸೃಷ್ಟಿಸಿತು. ಆದರೆ ಆಕ್ಸಿಜನ್ ಕೊರತೆಯ ಕಾರಣದಿಂದ ಸಾವು ಸಂಭವಿಸಿತು ಎಂದು ಆಸ್ಪತ್ರೆಯ ಪ್ರಮಾಣ ಪತ್ರದಲ್ಲಿ ನಮೂದಿಸಲಿಲ್ಲ. ಅವರು ಮೃತ ಪಟ್ಟಾಗ ದೊಡ್ಡ ಸದ್ದು ಮಾಡಿ ರಾಜಕೀಯ ಮಾಡಿದವರು ಈ ಲೋಪವಾದಾಗ ಸರಕಾರವನ್ನು ಪ್ರಶ್ನಿಸಿ ಅದನ್ನು
ಬದಲಾಯಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇವರ ಸಾವು ದಾಖಲಿಸಿದ ವೈದ್ಯರು ಇದರ ಉಲ್ಲೇಖ ಮಾಡಬೇಕಿತ್ತು. ಆದರೆ ಆ ಅಮಾಯಕರ ಸಾವಿ ನೊಂದಿಗೆ ಈ ಪ್ರಮಾದವು ಮಣ್ಣಾಗಿಯೇ ಹೋಯಿತು.

ಕಳೆದ ಒಂದು ವರ್ಷದಲ್ಲಿ ಪ್ರತಿಭಟನೆಯಲ್ಲಿ ಭಾಗಿ ಯಾಗಿದ್ದ 700 ರೈತರು ಮೃತಪಟ್ಟಿzರೆ ಎಂದು ರೈತ ಸಂಘ ಹೇಳಿದೆ. ಆದರೆ ದೆಹಲಿ ಸರಕಾರವಾಗಲೀ ರೈತ ಸಂಘಗಳಾಗಲಿ ಅದರ ಬಗ್ಗೆ ಅಽಕೃತವಾದ ದಾಖಲೆಯನ್ನು ಸೃಷ್ಟಿಸದ ಕಾರಣ ಆ ಸಾವಿನ ಕುರಿತು ತಮ್ಮ ಬಳಿ ಅದರ ಮಾಹಿತಿ ಯೂ ಇಲ್ಲ ಎಂದು ಕೇಂದ್ರ ಸರಕಾರ ನಿರಾಕರಿಸಿದೆ. ವಾಸ್ತವ ವಾಗಿ ರೈತ ಮುಖಂಡರು ಹಾಗೂ ದೆಹಲಿ ಸರಕಾರ ಈ ಸಾವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ದಾಖಲೆಯನ್ನು ಇಡಬೇಕಿತ್ತು.

ರಾಹುಲ್ ಗಾಂಧಿ, ರೈತ ಹೋರಾಟದಲ್ಲಿ ಮೃತಪಟ್ಟವರ ಪಟ್ಟಿ ತಮ್ಮ ಬಳಿ ಇದೆ ಎಂದು ಹೆಸರುಗಳನ್ನು ಓದಿದರು. ಪಂಜಾಬ್ ಸರಕಾರ ಮೃತಪಟ್ಟ ವರ ವಿವರವನ್ನು ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಆದರೆ ಅದನ್ನು ರಾಹುಲ್ ಗಾಂಧಿಗೆ ನೀಡಿದರೆ ಅದು ಅಧಿಕೃತ ಅಂಕಿ-ಅಂಶ ಹೇಗೆ ಆದೀತು. 50 ವರ್ಷ ದೇಶವನ್ನು ಆಳಿರುವ ಕಾಂಗ್ರೆಸ್ ಸರ್ಕಾರವೇ ಈ ಎಲ್ಲ ನಿಯಮಗಳನ್ನು ಜಾರಿಗೆ ತಂದಿರುವುದು ಈಗ ರಾಜಕೀಯ ಕಾರಣಗಳಿಗೆ ಅವುಗಳ ಕುರಿತು ಜಾಣ ಮರೆವು ತೋರಿ ಕ್ಷುಧ್ರ ರಾಜಕೀಯ ಮಾಡುತ್ತಿದೆ. ಹಾಗೆಯೇ ಕೊವಿಡ್ ಸೊಂಕಿಗೆ ೫೦ಲಕ್ಷ ಜನ ಮೃತಪಟ್ಟಿದ್ದಾರೆ ಕೇಂದ್ರ ಸರಕಾರ ಸತ್ಯವನ್ನು ಮರೆಮಾಚುತ್ತಿದೆ ಎಂದು ಮತ್ತೊಂದು ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ.

speakupfor covidnyay ಎಂದು ಸಾಮಾಜಿಕ ತಾಣದಲ್ಲಿ ಅಭಿಯಾನವನ್ನು ಕೈಗೊಂಡರು. ವಿಶ್ವದಲ್ಲಿ ಕರೊನಾ ಸಮರ್ಥ ನಿರ್ವಹಣೆಯ ಕಾರಣ ಭಾರತದಲ್ಲಿ ಸಾವಿನ ಪ್ರಮಾಣ ಅತ್ಯಂತ ಕನಿಷ್ಠ ಸಂಭವಿಸಿರುವುದು. ರಾಜ್ಯ ಸರಕಾರಗಳು ಕರೊನಾಗೆ ಬಲಿಯಾದವರ ವಿವರವನ್ನು ಪ್ರತಿನಿತ್ಯ ಕೇಂದ್ರಕ್ಕೆ ನೀಡುತ್ತಿವೆ. ಅದರ ಆಧಾರವೇ ದೇಶದಲ್ಲಿ ಸಂಭವಿಸಿರುವ ಸಾವಿನ ವಿವರಗಳಿಗೆ.

ಶೇಕಡಾ ೫೦ರಷ್ಟು ರಾಜ್ಯಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಆಡಳಿತದಲ್ಲಿ ಇರುವುದು ಹಾಗೊಂದು ವೇಳೆ ಕೇಂದ್ರ ಸರಕಾರ ತಪ್ಪು ಮಾಹಿತಿ ನೀಡುತ್ತಿದ್ದರೆ, ರಾಜ್ಯ ರಕಾರಗಳು ತಂತಮ್ಮ ರಾಜ್ಯಗಳಲ್ಲಿ ಸಂಭವಿಸಿರುವ ನಿಜವಾದ ಸಾವಿನ ಸಂಖ್ಯೆ ತಿಳಿಸಿದರೆ ಕೇಂದ್ರದ ತಪ್ಪು ಬಯಲಾಗುತ್ತದೆ ಮತ್ತು ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ತರಾಟೆಗೆ ತೆಗೆದುಕೊಳ್ಳಬಹುದಿತ್ತು.

ಒಂದು ಜೀವ ಹೋದರೂ ಅದು ಅತ್ಯಂತ ನೋವಿನ ಸಂಗತಿ. ಅವರ ಕುಟುಂಬಸ್ಥರಿಗೆ ಬಹುದೊಡ್ಡ ನಷ್ಟ. ಇಂತಹ ಸೂಕ್ಷ್ಮ ವಿಚಾರ ರಾಜಕೀಯ ದಾಳವಾಗ ಬಾರದು. ಆಡಳಿತದ ಅನುಭವವಿರುವವರು ಜನರಿಗೆ ಸರಿಯಾದ ಮಾಹಿತಿ ನೀಡಬೇಕೆ ವಿನಹ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಬಾರದು.

ಕಳೆದ ೭ವರ್ಷದಲ್ಲಿ ಅಽಕಾರ ಇಲ್ಲದೆ ನೀರಿನಿಂದ ಹೊರಬಿದ್ದ ಮೀನಾಗಿರುವ ಶಕ್ತಿಗಳು ರಾಷ್ಟ್ರೀಯ ಭದ್ರತೆ, ಆಡಳಿತ ಸುಧಾರಣೆಯ ಕಾಯಿದೆ ಮತ್ತು ಅಭಿವೃದ್ಧಿ
ಯೋಜನೆಗಳಿಗೆ ಅಡ್ಡಗಾಲು ಹಾಕಿ ಮೋದಿ ಸರಕಾರಕ್ಕೆ ಮುಜುಗರ ಉಂಟುಮಾಡುವ ಸತತ ಪ್ರಯತ್ನ ನಡೆಸುತ್ತಿವೆ. ಅದರ ಮುಂದುವರಿದ ಭಾಗವೇ ಸತ್ಯವನ್ನು ಮರೆಮಾಚಿ ಸಾವಿನ ಲೆಕ್ಕದ ಪ್ರಶ್ನೆ ಮಾಡುವ ರಾಜಕೀಯವಾಗಿದೆ, ವಿನಹ ಜನಹಿತ ದೃಷ್ಟಿಯಿಂದಲ್ಲ