Saturday, 14th December 2024

ಹಿಂಸೆಗೂ ಮಾನವೀಯ ಮುಖವಾಡ ಇದೆಯೇ?

ಚರ್ಚೆ

ಡಾ. ಸಿ.ಜಿ.ರಾಘವೇಂದ್ರ ವೈಲಾಯ, ಮಕ್ಕಳ ತಜ್ಞರು, ಶಿವಮೊಗ್ಗ 

ಈ ದುಷ್ಟ ಚಿಗುರನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕು. ಅಧ್ಯಯನ ಮಾಡುವುದಿದ್ದರೆ ಶಾಂತವಾಗಿ ಶಿಸ್ತು ಶ್ರದ್ಧೆೆಗಳಿಂದ ಕಲಿತು ವಿಧೇಯರಾಗಿ ವರ್ತಿಸಿರಿ. ಗೂಂಡಾಗಳೇ ಜೆಎನ್‌ಯು ಬಿಟ್ಟು ತೊಲಗಿ. ಕೊನೆಗೊಂದು ಜಿಜ್ಞಾಸೆ. ಹಿಂಸೆಗೂ ಮಾನವೀಯ ಮುಖವಾಡ ಇದೆಯೇ?

ವಿವೇಕಾನಂದರನ್ನು ಒಪ್ಪಿಿಕೊಳ್ಳದವರು ಯಾರೂ ಇಲ್ಲ. ಪ್ರಗತಿಪರ, ವೈಚಾರಿಕ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಆಧುನಿಕ ಭಾರತಕ್ಕೆೆ ಅಡಿಗಲ್ಲು ಹಾಕಿದವರು ಸ್ವಾಾಮಿ ವಿವೇಕಾನಂದರು. ಭಾರತದ ವೈಜ್ಞಾನಿಕ ಕೈಗಾರಿಕಾ ಕ್ರಾಾಂತಿಗೂ ಸ್ಫೂರ್ತಿಯೇ ಪ್ರೇರಕ. ಸನಾತನ ಧರ್ಮದ ಪುನರುತ್ಥಾಾನದ ಹರಿಕಾರರು ಇವರು. ವಿಶ್ವಧರ್ಮ ಸಮನ್ವಯದ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಹಬಾಳ್ವೆೆಯ ಕುರಿತು ಸ್ವಾಾಮೀಜಿಯವರ ಚಿಂತನೆಗಳಿಗೆ ಸಮಸ್ತ ಜಗತ್ತೇ ತಲೆದೂಗಿತ್ತು. ವಿದ್ಯಾಾರ್ಥಿಗಳು ಯುವಕರ ಪಾಲಿಗಂತೂ ಅವರು ಸಾರ್ವಕಾಲಿಕ ಆದರ್ಶ. ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ ರಾಷ್ಟ್ರವಾದವನ್ನು ಪುನರುಜ್ಜೀವನ ಗೊಳಿಸಿದ ಮಹಾತ್ಮ ಇವರು. ಆದರೆ, ಇತ್ತೀಚೆಗೆ ಜೆಎನ್‌ಯು ವಿಶ್ವವಿದ್ಯಾಾಲಯದಲ್ಲಿ ಸದ್ಯದಲ್ಲೇ ಅನಾವರಣಗೊಳ್ಳಲಿದ್ದ ವಿವೇಕಾನಂದರ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಯ ಬಗ್ಗೆೆ ತಿಳಿದಾಗ ಕಾಡಿದ ಮೊದಲ ಪ್ರಶ್ನೆೆ ಇದು ಇವರು ವಿದ್ಯಾಾರ್ಥಿಗಳೋ ಭಯೋತ್ಪಾಾದಕರೋ?

ಭಾರತದಲ್ಲಿರುವ 800ಕ್ಕೂ ಮಿಕ್ಕಿಿದ ವಿಶ್ವವಿದ್ಯಾಾಲಯಗಳಲ್ಲಿ ಇತ್ತೀಚೆಗಂತೂ ವಿವಾದಗಳ ಸರಮಾಲೆಗಳಿಂದ ಕುಖ್ಯಾಾತಿಯನ್ನು ಪಡೆದು ಸದಾ ಒಂದಿಲ್ಲೊಂದು ಅನಪೇಕ್ಷಿತ ಕಾರಣಗಳಿಂದ ಸುದ್ದಿಯಾಗುತ್ತಿಿದೆ ಜೆಎನ್‌ಯು. ಇದು ಇಂದಿರಾಗಾಂಧಿಯವರ ಕಾಲದಲ್ಲಿ ಜಿ.ಪಾರ್ಥಸಾರಥಿಯವರ ನೇತೃತ್ವದಲ್ಲಿ ಸ್ಥಾಾಪನೆಯಾಯಿತು. ಅಂದಿನಿಂದ ಇಂದಿನ ವರೆಗೂ ಅದು ಎಡಪಂಥೀಯರ ಪ್ರಯೋಗ ಶಾಲೆಯೆಂದೇ ಕರೆಸಿಕೊಂಡಿತು. ಸದಾ ಭಾರತ ವಿರೋಧಿ ನಿಲುವುಗಳು, ಸ್ತ್ರೀವಾದದ ಹೆಸರಿನಲ್ಲಿ ದೊಂಬಿ, ದಲಿತ, ಅಲ್ಪಸಂಖ್ಯಾಾತರ ಹೋರಾಟದ ನೆಪದಲ್ಲಿ ಅಸಹಿಷ್ಣುತೆಯ ವೃದ್ಧಿಿ, ದೇಶ ವಿಭಜಕ ಶಕ್ತಿಿಗಳೊಂದಿಗೆ ಒಳಸಂಚು, ನಕ್ಸಲ್ ಪರ ಧೋರಣೆ, ಹಿಂದೂ ವಿರೋಧಿ ನಿಲುವುಗಳು, ಪ್ರತ್ಯೇಕತೆಗೆ ಕುಮ್ಮಕ್ಕು ಮೊದಲಾದ ಅಪದ್ಧಗಳಿಗೆ ಹೆಸರುವಾಸಿಯಾಗಿದೆ ಈ ಸಂಸ್ಥೆೆ. ಸಮಸ್ಯೆೆ ಎಲ್ಲಿ ತಾನೇ ಇರೋದಿಲ್ಲ!

ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ಸಂಜಯ್ ಬಾರು, ಜೆಎನ್‌ಯುನ ಅಹ್ಮದ್ ಬಿನ್ ಸೈಫ್ ಅಲ್ ನಹ್ಯಾಾನ್, ಲಿಬ್ಯಾಾದ ಅಲಿ ಜೈದಿನ್, ಕೆನಡಾದ ಆದಿತ್ಯ ಝಾ, ನೇಪಾಳದ ಬಾಬುರಾಂ ಭಟ್ಟಾಾರಿ, ನೋಬೆಲ್ ಪ್ರಶಸ್ತಿಿ ವಿಜೇತ ಅಭಿಜಿತ್ ಬ್ಯಾಾನರ್ಜಿ ಮೊದಲಾದ ಅನೇಕ ಹೆಸರಾಂತ ವ್ಯಕ್ತಿಿಗಳು ಒಂದೊಮ್ಮೆೆ ಜೆಎನ್‌ಯುನಲ್ಲಿದ್ದವರೇ. ಬರಬರುತ್ತಾಾ ವ್ಯಾಾಸಂಗಕ್ಕಿಿಂತ ಹೆಚ್ಚು ರಾಜಕೀಯ ಚಟುವಟಿಕೆಗಳಿಗೇ ಪ್ರಾಾಮುಖ್ಯತೆ ದೊರೆತು ಶಿಕ್ಷಣ ಶಿಸ್ತು ಹಳ್ಳ ಹಿಡಿಯಿತು. ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್, ಪ್ರಕಾಶ್ ಕಾರಟ್ ಮೊದಲಾದ ಅನೇಕ ಕಮ್ಯೂನಿಸ್ಟರು ಇಲ್ಲೇ ಹುಟ್ಟಿಿದ್ದು. ರೋನಾ ವಿಲ್ಸನ್, ಗೌತಮ್ ನೌಲಖಾ, ಅರುಣ್ ಪಿರೇರಾ ಮೊದಲಾದ ಪ್ರಗತಿ ವಿರೋಧಿ ನಗರ ನಕ್ಸಲರ ತವರುಮನೆ ಇದೇ ಜೆಎನ್‌ಯು. ಇವರ ಹಿಡನ್ ಅಜೆಂಡಾ ಅಮಾಯಕ ವಿದ್ಯಾಾರ್ಥಿಗಳನ್ನು ಬ್ರೈನ್ ವಾಶ್ ಮಾಡಿ ದಿಕ್ಕುತಪ್ಪಿಿಸುವುದು. ವಿವೇಕಾನಂದರನ್ನು ಬಿಟ್ಟು ಈ ಕಾಮ್ರೆೆಡ್‌ಗಳು ಇನ್ಯಾಾವ ಆದರ್ಶದ ಹಿಂದೆ ಹೊರಟಿದ್ದಾರೆ.

ಹೀಗೆ ಬರಬರುತ್ತಾಾ ಜೆಎನ್‌ಯು ತನ್ನ ಸೈದ್ಧಾಾಂತಿಕ ಹಳಿಯನ್ನು ಬಿಟ್ಟು ದಾರಿತಪ್ಪಿಿ ಪಡ್ಡೆೆ ದೇಶದ್ರೋಹಿಗಳ ಅಡ್ಡೆೆಯಾಗಿ ದೇಶ ವಿರೋಧಿ ಶಕ್ತಿಿಗಳಿಗೆ ಕಮ್ಮಟವಾಯಿತು. ಸಂಸತ್ತಿಿಗೆ ಬಾಂಬ್ ಹಾಕಿದ ಅಪರಾಧಕ್ಕೆೆ ಗಲ್ಲಿಗೇರಿಸಲ್ಪಟ್ಟ ಅಫ್ಜಲ್ ಗುರುವಿನ ಜನ್ಮದಿನವನ್ನು 2016ರಲ್ಲಿ ಆಚರಿಸಿದ, ಆಜಾದಿ ಘೋಷಣೆಯಿಂದ ಕುಖ್ಯಾಾತಿ ಪಡೆದ ಕನ್ಹಯ್ಯಾಾ ಕುಮಾರ್ ಮತ್ತು ಟುಕ್ಡೇ ಟುಕ್ಡೇ ಖ್ಯಾಾತಿಯ ಉಮರ್ ಖಾಲಿದ್ ಕೂಡ ಜೆಎನ್‌ಯುನ ಆನುವಂಶಿಕ ಕುಡಿಗಳೇ. ಇತ್ತೀಚೆಗೆ ಕಾಶ್ಮೀರದ 370ನೇ ವಿಧಿಯ ರದ್ದತಿಯನ್ನು ವಿರೋಧಿಸಿ ಘೋಷಣೆ ಕೂಗಿ ಕರಾಳ ದಿನವನ್ನಾಾಗಿ ಆಚರಿಸಿದ್ದು, ಪಾಕಿಸ್ತಾಾನದ ಮೇಲಿನ ಸರ್ಜಿಕಲ್ ಸ್ಟ್ರೈಕನ್ನು ವಿರೋಧಿಸಿದ್ದು, ಅಯೋಧ್ಯೆೆಯ ತೀರ್ಪನ್ನು ವಿರೋಧಿಸಿದ್ದು ಮೊದಲಾದ ದೇಶದ್ರೋಹಿ ಚಟುವಟಿಕೆಗಳ ತವರೂ ಇದೇ ಜೆಎನ್‌ಯು. ಹೀಗೆ ಭಾರತದ ಹೆಚ್ಚಿಿನ ದೀರ್ಘಕಾಲಿಕ ಸಮಸ್ಯೆೆಗಳ ಪಿತಾಮಹನ ಹೆಸರು ಜೆಎನ್‌ಯುಗೆ ದೊರೆತಿದ್ದು ಕಾಕತಾಳಿಯವಲ್ಲವಷ್ಟೇ!

‘ವಿದ್ಯಾಾ ದದಾತಿ ವಿನಯಂ, ವಿನಯಾದ್ಯಾಾತಿ ಪಾತ್ರತಾಂ’ ಎಂದು ನಂಬಿದವರು ನಾವು. ಜೆಎನ್‌ಯುನ ಧರಣಿ, ಗೂಂಡಾಗಿರಿ, ಹರತಾಳಗಳ ಮೂಲಕ ಶಿಕ್ಷಕಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಕೇಂದ್ರದ ಸಚಿವರನ್ನೇ ಒತ್ತೆೆಯಾಳಿನಂತೆ ಇರಿಸಿಕೊಳ್ಳುವ ಬ್ಯ್ಲಾಾಕ್ ಮೇಲ್ ತಂತ್ರಗಾರಿಕೆಗಳನ್ನು ಕಂಡಾಗ ಆಧುನಿಕ ಶೈಕ್ಷಣಿಕ ವ್ಯವಸ್ಥೆೆಯ ಬಗ್ಗೆೆ ನಮಗೆ ಭ್ರಮನಿರಸನ ವಾಗುವುದು ಸಹಜವೇ. ದೆಹಲಿಯ ಲುಟ್ಯೆೆನ್ ಮಾಧ್ಯಮ ಗಳಂತೂ ಇವರ ಸೈದ್ಧಾಾಂತಿಕ ಬೆಂಬಲಕ್ಕೆೆ ಸರ್ವದಾ ನಿಂತುಬಿಡುತ್ತವೆ. ದೇಶ ವಿದೇಶಗಳಲ್ಲೂ ಎನ್‌ಜಿಒ ಬುದ್ಧಿಿಜೀವಿಗಳ ವಲಯದಲ್ಲಿ ಇವರ ಲಾಬಿ ಜೋರಾಗಿದೆ. ಇಸ್ಲಾಾಮಿಕ್, ಮಿಷನರಿ ಮೂಲಭೂತವಾದಿಗಳು, ಸೆಕ್ಯುಲರ್ ಸೋಗಲಾಡಿಗಳು ದೇಶ-ವಿಭಜಕ ನಕ್ಸಲೀಯರ ಸಹಭಾಹಗಿತ್ವದ ಅಪಾಯಕಾರಿ ಮಿಶ್ರಣವೇಜೆಎನ್‌ಯು.

ಈ ಪುಂಡ ವಿದ್ಯಾಾರ್ಥಿಗಳ ಮಾನಸಿಕ ವಿಕೃತಿಯನ್ನು ಹಿಂಸಾತ್ಮಕ ಪ್ರವೃತ್ತಿಿಯನ್ನು ಅಭಿವ್ಯಕ್ತಿಿ ಸ್ವಾಾತಂತ್ರ್ಯವೆಂಬ ಹೊರಹೊದ್ದಿಕೆಯಲ್ಲಿ ಮುಚ್ಚಿಿಟ್ಟು ಇವರನ್ನು ಹುತಾತ್ಮ ರೆಂಬಂತೆ ಬಿಂಬಿಸಲಾಗುತ್ತದೆ. ಅರಾಜಕತೆ, ಕೋಮುಗಲಭೆ ಪ್ರತ್ಯೇಕತೆಯನ್ನು ದೇಶದೆಲ್ಲೆಡೆ ಹರಡುವುದಕ್ಕೆೆ ಇವರನ್ನು ದಾಳಗಳಾಗಿ ಬಳಸಲಾಗುತ್ತಿಿದೆ. ಈ ದೇಶ ಸಮಾಜ ವಿರೋಧಿ ಗೂಂಡಾಗಳಿಗೆ ನಮ್ಮ ದೇಶದ ಪ್ರಾಾಮಾಣಿಕ ಪ್ರಜೆಗಳು ತಮ್ಮ ತೆರಿಗೆಯ ಹಣದಿಂದ ಸಬ್ಸಿಿಡಿ ನೀಡಿ ಏಕೆ ಸಾಕಬೇಕು? ಪ್ರಪಂಚದೆಲ್ಲೆಡೆ ಫೇಲಾದ ಮಾರ್ಕ್‌ಸ್‌ ವಾದವನ್ನು ಕೃತಕ ಉಸಿರಾಟ ನೀಡಿ ಬದುಕಿಸುವ ಹುಚ್ಚು ಪ್ರಯತ್ನ ಇವರದ್ದು. ಇದು ಬೂಟಾಟಿಕೆಯಲ್ಲದೇ ಇನ್ನೇನು?

ಕಳೆದ 40 ವರ್ಷಗಳಿಂದ ದುಬಾರಿ ದೆಹಲಿಯಲ್ಲಿ ಜೆಎನ್‌ಯು ಕ್ಯಾಾಂಪಸ್‌ನಲ್ಲಿ ತಿಂಗಳೊಂದಕ್ಕೆೆ ಕೇವಲ 10 ರುಪಾಯಿ ನೀಡಿ ಮೊಕ್ಕಾಾಂ ಹೂಡಿ ಪುಂಡಾಟ ಮಾಡಿಕೊಂಡಿದ್ದ ಸೋಂಬೇರಿಗಳಿಗೆ ಹಾಸ್ಟೆೆಲ್ ದರವನ್ನು ಏಕಾಏಕಿ 300ಕ್ಕೆೆ ಏರಿಸಿದರೆ ಮೈಗೆ ಬೆಂಕಿ ಹತ್ತದಿರುವುದೇ? ಆದರೆ, ಇವರ ಹೋರಾಟಕ್ಕೆೆ ಅಸಲಿ ಕಾರಣ ಬೇರೆಯೇ ಇದೆ. ವಸತಿ ನಿಲಯದಲ್ಲಿ ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ದೃಷ್ಟಿಿಯಿಂದ ಕಲಿಕೆಗೆ ಸಹಾಯವಾಗುವಂತೆ ಕಾನೂನಿಗೆ ಕೆಲವಾರು ಅಮೂಲಾಗ್ರ ಬದಲಾವಣೆಗಳನ್ನು ಇತ್ತೀಚೆಗೆ ವಿ.ಸಿ.ಯವರು ಮಾಡಿದ್ದು ಈ ಪೋಲಿಪುಂಡರ ಕಣ್ಣು ಕೆಂಪಾಗಿಸಿದೆ. ಇತ್ತೀಚೆಗೆ ಅನೈತಿಕ ಚಟುವಟಿಕೆ (ಸೆಕ್‌ಸ್‌) ಮಾದಕ ದ್ರವ್ಯಗಳ ಅಡ್ಡೆೆಯಾಗಿದ್ದ ಜೆಎನ್‌ಯುನಲ್ಲಿ ಸದಾ ನಶೆಯೇರಿಸಿಕೊಂಡಿದ್ದ ಪುಂಡರು ಸುಮ್ಮನಿರುತ್ತಾಾರೆಯೇ? ಆದರೆ, ದೃಶ್ಯ ಮಾಧ್ಯಮದ ಹದ್ದಿನ ಕಣ್ಣಿಿನಿಂದ ಇವರಿಗೀಗ ತಪ್ಪಿಿಸಿಕೊಳ್ಳುವುದು ಅಸಾಧ್ಯವಾಗಿ ಎಲ್ಲರೆದುರಿಗೂ ಪೂರ್ಣ ಬೆತ್ತಲಾಗಿದ್ದಾರೆ. ಅಮಾಯಕರೆಂಬ ಮುಸುಕು ಹರಿದು ಇವರ ದುಷ್ಟ ಅಸಲಿಯತ್ತು ಈಗ ಜಗಜ್ಜಾಾಹೀರಾಗಿದೆ.

ಆದರ್ಶ ವಿದ್ಯಾಾರ್ಥಿಯ ಯಾವೊಂದು ಲಕ್ಷಣಗಳೂ ಇವರಲ್ಲಿ ಕಾಣುತ್ತಿಿಲ್ಲವೇಕೆ? ಕೆಲವರಂತೂ ಹತ್ತಾಾರು ವರ್ಷಗಳಿಂದ ನಪಾಸಾಗುತ್ತಾಾ ವಯಸ್ಸು ನಲ್ವತ್ತಾಾದರೂ ಏನೂ ಕೆಲಸ ಮಾಡದೇ ನಿಲಯದಲ್ಲಿ ಅಗ್ಗವಾಗಿ ದೊರೆಯುವ ಪುಕ್ಕಟೆ ಅಶನ ವಸತಿಗಳ ಮಜಾ ಉಡಾಯಿಸುತ್ತಾಾ ಕೇವಲ ರಾಜಕೀಯ ಚಟುವಟಿಕೆಯನ್ನು ಮಾಡಿ ಬದುಕುತ್ತಿಿದ್ದಾರೆ. ಇವರಿಗೆ ನಿಲಯದ ಶುಲ್ಕ ಕಟ್ಟಲು ಹಣವಿಲ್ಲವಾದರೂ ಪ್ರತಿಭಟನೆಯ ಪೋಸ್ಟರ್‌ಗಳಿಗೆ, ದುಬಾರಿ ಮೇಕಪ್‌ಗೆ ಸಂಪನ್ಮೂಲದ ಕೊರತೆಯಿಲ್ಲ. ಇವರ ಆಪಲ್ ಫೋನಿಗೆ, ರ್ಯಾಾಡೋ ವಾಚಿಗೆ, ವಿಮಾನದಲ್ಲಿ ಪ್ರಯಾಣಕ್ಕೆೆ ದುಡ್ಡು ಯಾರಪ್ಪನ ಮರದಲ್ಲಿ ಬೆಳೆದಿದ್ದು? ಇವರ ಹಿಂದೆ ಯಾರೆಲ್ಲಾ ಇದ್ದಾರೆ? ಈ ಪ್ರಶ್ನೆೆ ಕೇಳಬೇಕಾದ್ದೇ.

ಪ್ರಜಾಪ್ರಭುತ್ವದಲ್ಲಿ ವಿರೋಧಕ್ಕೆೆ ಆಸ್ಪದವಿದೆ. ಆದರೆ, ಅದಕ್ಕೂ ರೀತಿ ನಿಯಮಗಳಿವೆ. ಪ್ರತಿಭಟನೆಯ ಅಭಿವ್ಯಕ್ತಿಿಗೂ ಒಂದು ಚೌಕಟ್ಟಿಿರಬೇಕು. ಕಾನೂನು ಸಭ್ಯತೆಯ ಎಲ್ಲೆಯನ್ನು ಮೀರಿ ಈ ರೀತಿ ಗಲಭೆಯನ್ನು ಮಾಡುವ ಅನಾಗರಿಕರನ್ನು ವಿದ್ಯಾಾರ್ಥಿಗಳೆಂದು ಹೇಳಬಹುದೇ? ಇವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವು ಲಾಗೂ ಆಗೋದಿಲ್ಲವೇ? ಸಾರ್ವಜನಿಕ ಸ್ವತ್ತಾಾದ ಶಿಕ್ಷಣ ಸಂಸ್ಥೆೆಯ ಗೋಡೆಗಳಿಗೆ ಬಣ್ಣಬಳಿದು, ಕಲ್ಲು ತೂರಿ ಗಾಜು ಒಡೆದು, ಪೀಠೋಪಕರಣಗಳನ್ನು ಮುರಿದು, ಹಾನಿ ಮಾಡುವವರಿಗೆ ನಮ್ಮ ಕಾನೂನಿನಲ್ಲಿ ಯಾವ ಶಿಕ್ಷೆಯೂ ಇಲ್ಲವೇ? ಇವರನ್ನು ಗೂಂಡಾ ಕಾಯಿದೆ ಅನ್ವಯ ಒದ್ದು ಲಾಕಪ್ಪಿಿಗೆ ಹಾಕಿ ಸಜ್ಜನ ವಿದ್ಯಾಾರ್ಥಿಗಳ ಕಲಿಕೆಗೆ ಅನುವುಮಾಡಿ ಕೊಡಬೇಕಿದೆ. ಜೆಎನ್‌ಯುವನ್ನು ಹೊಲಸು ರಾಜಕೀಯದಿಂದ ಮುಕ್ತವಾಗಿಸಬೇಕಿದೆ. ಪುಂಡರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನುಕ್ರಮ ಕೈಗೊಳ್ಳದಿದ್ದರೆ ಮುಂದೆ ದೇಶದ ಇತರೆಡೆಗಳಲ್ಲೂ ಅಶಿಸ್ತಿಿಗೆ ನಾಂದಿಯಾದೀತು. ಈ ದುಷ್ಟ ಚಿಗುರನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕು. ಅಧ್ಯಯನ ಮಾಡುವುದಿದ್ದರೆ ಶಾಂತವಾಗಿ ಶಿಸ್ತು ಶ್ರದ್ಧೆೆಗಳಿಂದ ಕಲಿತು ವಿಧೇಯರಾಗಿ ವರ್ತಿಸಿರಿ. ಗೂಂಡಾಗಳೇ ಜೆಎನ್‌ಯು ಬಿಟ್ಟು ತೊಲಗಿ. ಕೊನೆಗೊಂದು ಜಿಜ್ಞಾಸೆ. ಹಿಂಸೆಗೂ ಮಾನವೀಯ ಮುಖವಾಡ ಇದೆಯೇ?