ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ, ಬೆಳಗಾವಿ
ಬೆಳಗಾವಿ: ಇಡೀ ರಾಜ್ಯದ ಭಾರಿ ಸದ್ದು ಮಾಡಿದ್ದ ಬೆಳಗಾವಿ-ಚಿಕ್ಕೋಡಿ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ, ಬಿಜೆಪಿಯ ಹಾಲಿ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಠಗಿಮಠ ಸೋಲು ಅನುಭವಿಸುವ ಮೂಲಕ ಭಾರಿ ಮುಖಭಂಗ ಅನುಭವಿಸಿದ್ದಾರೆ.
ಅದಕ್ಕಿಂತ ಮಿಗಿಲಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಭಾರಿ ಹಿನ್ನಡೆಯಾಗಿದೆ. ವಿಧಾನಪರಿಷತ್ ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಜಾರಕಿಹೊಳಿ ಸಹೋದರರು ಲಖನ್ ಜಾರಕಿಹೊಳಿ ಅವರಿಗೆ ಬಿಜೆಪಿಯಿಂದ ಟಿಕೆಟ್ಗೆ ಭಾರಿ ಹೋರಾಟ ಮಾಡಿದರು. ಆದರೆ ಟಿಕೆಟ್ ಸಿಗದೇ ಇದ್ದುದರಿಂದ ಪಕ್ಷೇತರವಾಗಿ ಸ್ಪರ್ಧಿಸುವಂತೆ ನೋಡಿ ಕೊಂಡರು. ರಮೇಶ್ ಜಾರಕಿಹೊಳಿ ಂದೇ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದ ಕವಟಗಿಮಠ ಅವರನ್ನೂ ಗೆಲ್ಲಿಸುವ ಜತೆಗೆ, ಸಹೋದರ ಲಖನ್ ಜಾರಕಿಹೊಳಿ ಅವರನ್ನು ಗೆಲ್ಲಿಸಿಕೊಂಡು ಬಂದು ಸಚಿವ ಸ್ಥಾನ ಕೇಳುವ ಲೆಕ್ಕಾಚಾರದಲ್ಲಿದ್ದರು. ಆದರೀಗ ಬಿಜೆಪಿಯ ಅಧಿಕೃತ ಅಭ್ಯರ್ಥಿಯೇ ಮುಗ್ಗರಿ ಸಿರುವುದು ಜಾರಕಿಹೊಳಿ ಅವರ ಈ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ.
ಲಖನ್ ಕಣದಿಂದ ಹಿಂತೆಗೆಯದಿದ್ದಾಗ ಬಿಜೆಪಿ ನಾಯಕರು, ಜತೆಗೆ ಕವಮಟಿಮಠ ಅವರನ್ನೂ ಗೆಲ್ಲಿಸಿಕೊಂಡು ಬರಬೇಕು. ಇದರಿಂದ ಬೆಳಗಾವಿಯಲ್ಲಿ ಬಿಜೆಪಿ ಕೈ ಮೇಲಾಗಲಿದೆ ಎನ್ನುವ ಸೂಚನೆಯನ್ನು ನೀಡಿದ್ದರು. ಇದರೊಂದಿಗೆ ಒಂದು ವೇಳೆ ಇಬ್ಬರನ್ನೂ ಗೆಲ್ಲಿಸಿಕೊಂಡು ಬಂದರೆ, ಸಚಿವ ಸ್ಥಾನ ನೀಡುವ ಬಗ್ಗೆಯೂ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ರಮೇಶ್ ಇದ್ದರು.
ಆ ಕಾರಣಕ್ಕಾಗಿಯೇ, ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯ ಮತವನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಲಖನ್ಗೆ ದ್ವಿತೀಯ ಪ್ರಾಶಸ್ತ್ಯ
ಮತ ಹಾಕಿಸಿ ಇಬ್ಬರನ್ನೂ ಗೆಲ್ಲಿಸುವ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪಂಚಮಸಾಲಿ ಸಮುದಾಯದ ಮತಗಳು ಹಾಗೂ ಕೆಪಿಸಿ ಕಾರ್ಯಾಧ್ಯಕ್ಷ
ಸತೀಶ್ ಜಾರಕಿಹೊಳಿ ಅವರ ಚಾಣಾಕ್ಷ ನಡೆಯಿಂದ ಲಖನ್ ಮೊದಲ ಪ್ರಾಶಸ್ತ್ಯ ಮತಗಳಿಂದ ಗೆದ್ದಿರುವುದರಿಂದ ರಮೇಶ್ ಲೆಕ್ಕಾಚಾರ ತಲೆಕೆಳಗಾಗಿದೆ.
ವೈಯಕ್ತಿಕ ಹಿನ್ನಡೆ: ಈ ಚುನಾವಣೆಯಲ್ಲಿ ಲಖನ್ ಹಾಗೂ ಚನ್ನರಾಜ್ ಗೆಲುವು ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಅಥವಾ ರಾಜಕೀಯ ಭವಿಷ್ಯದ ಅಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ತಮ್ಮ ಬದ್ಧ ವೈರಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಗೆದ್ದಿರುವುದರಿಂದ ವೈಯಕ್ತಿಕವಾಗಿಯೂ ಹಿನ್ನಡೆಯಾಗಿದೆ. ಬೆಳಗಾವಿ ಚುನಾವಣೆಯನ್ನು ರಮೇಶ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಹೋರಾಟ ಎಂದು ಬಿಂಬಿಸ ಲಾಗಿತ್ತು. ಆದ್ದರಿಂದ ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಸೋದರರೆಲ್ಲರೂ ಶಾಸಕರು: ಲಖನ್ ಗೆಲವಿನೊಂದಿಗೆ ಜಾರಿಕೀಹೊಳಿ ಇಡೀ ಕುಟುಂಬ ರಾಜಕೀಯದಲ್ಲಿದ್ದು, ಇದೀಗ ನಾಲ್ವರೂ ಶಾಸರಾದಂತಾಗಿದೆ. ಕಾಂಗ್ರೆಸ್ ನಾಯಕ ಸತೀಶ್ ಜಾರಕೀಹೊಳಿ ಹಾಗೂ ಬಿಜೆಪಿ ಮುಖಂಡ, ಮಾಜಿ ಸಚಿವ ರಮೇಶ್ ಜಾರಕೀಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕೀಹೊಳಿ, ಬಿಜೆಪಿ ಬಂಡಾಯಗಾರ ಲಖನ್ ಎಲ್ಲರಿಗೂ ಸೋದರರೆ.
ಸತೀಶ್ ಕಾಂಗ್ರೆಸ್ನಲ್ಲಿದ್ದರೆ, ಉಳಿದವರೆಲ್ಲರೂ ಬಿಜೆಪಿ. ಇನ್ನೂ ವಿಶೇಷವೆಂದರೆ ಬೆಳಗಾವಿಯಲ್ಲಿ ಗೆದ್ದ ಕಾಂಗ್ರೆಸ್ನ ಚನ್ನರಾಜ ಹಟ್ಟಿಹೊಳಿ, ಜಾರಕೀ ಹೊಳಿ ಕುಟುಂಬ ಸೇರಿದಂತೆ ಬೆಳಗಾವಿಯ ನಾಯಕರೆಲ್ಲರಿಗೂ ಸೆಡ್ಡು ಹೊಡೆದು ಬೆಳೆಯುತ್ತಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಸೋದರ. ಹಾಗೆ ನೋಡಿ ದರೆ ಸೋದರ ಗೆದ್ದುದಕ್ಕೆ ಸತೀಶ್-ರಮೇಶ್ ಇಬ್ಬರೂ ಸಂಭ್ರಮಿಸುವಂತಿಲ್ಲ.
ಸತೀಶ್ಗೆ ಲಖನ್ ವಿರೋಧ ಪಕ್ಷದಿಂದ ಬಂಡಾಯವಾಗಿ ಗೆದ್ದವ. ಇನ್ನು ರಮೇಶ್ಗೆ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಲಕನ್ ಸೋಲಿಸಿರುವುದು. ಹೀಗಾಗಿ ಮುಜುಗರದ ಪ್ರಮೇಯ. ಲಖನ್-ಚನ್ನರಾಜ್ ಇಬ್ಬರೂ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದವರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದು ಸತೀಶ್ರ ರಾಜಕೀಯ ತಂತ್ರಗಾರಿಕೆ ಹಾಗೂ ಸಾಮರ್ಥ್ಯ ಸಾಬೀತಿನ ಸಂಗತಿ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಅವರ ಹಿಡಿತ
ಹೆಚ್ಚ ಬಹುದು. ಆದರೆ, ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿ ಹಾಗೂ ಜಿಲ್ಲೆಯಲ್ಲಿ ರಮೇಶ್ ಸ್ಥಾನ ಕೆಳಕ್ಕೆ ಹೋದಂತೆಯೇ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾತ್ರವಲ್ಲ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ರಮೇಶ ಜಾರಕಿಹೊಳಿ ವಿರುದ್ಧ ಸತೀಶ್ ಸೇಡು ತೀರಿಸಿ ಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಾರೆ ಮತದಾರರು ಕುಟುಂಬ ರಾಜಕಾರಣಕ್ಕೆ ಮನ್ನಣೆಯ ಮುದ್ರೆ ಒತ್ತಿದ್ದಾರೆ.
ಚನ್ನಗೌಡ ಕೈಹಿಡಿದ ಪಂಚಮಸಾಲಿ
ಇನ್ನು ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಪರಿಷತ್ ಕ್ಷೇತ್ರದಲ್ಲಿ ಜಾರಕಿಹೊಳಿ ಅವರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೆಲವು ಸಾಧಿಸಲು ಜಾತಿ ಲೆಕ್ಕಾಚಾರ ಪ್ರಮುಖ ಪಾತ್ರವಹಿಸಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಚುನಾವಣೆ ಘೋಷಣೆಯಾದ ದಿನದಿಂದಲೂ ಹೆಬ್ಬಾರ್ಳ್ಕ ಅವರು, ಪಂಚಮ ಸಾಲಿ ಮತಗಳ ಕ್ರೋಢೀಕರಣಕ್ಕೆ ಭಾರಿ ಪ್ರಯತ್ನ ಪಟ್ಟಿದ್ದರು. ಬೆಳಗಾವಿ- ಚಿಕ್ಕೋಡಿ ಕ್ಷೇತ್ರದಲ್ಲಿರುವ ೩೧೨೬ ಪಂಚಮಸಾಲಿ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ ಬಹುತೇಕರು ಯಮ್ಮ ಪ್ರಥಮ ಪ್ರಾಶಸತಯ ಮತವನ್ನು ಚನ್ನರಾಜು ಹಟ್ಟಿಹೊಳಿ ಅವರಿಗೆ ನೀಡಿದ್ದಾರೆ. ಆದ್ದರಿಂದ ಜಾರಕಿಹೊಳಿ, ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಸೇರಿದಂತೆ ಪ್ರಭಾವಿ ನಾಯಕರಿದ್ದರೂ ರಮೇಶ್ಗೆ ಕೈ ೩೩೫೬ ಪ್ರಥಮ ಪ್ರಾಶಸ್ತ್ಯ ಮತಗಳ ಮೂಲಕ ಗೆಲವು ಸಾಧಿಸಿದ್ದಾರೆ.
ರಮೇಶ್ಗೆ ಕೈ ೩೩೫೬ ಪ್ರಥಮ ಪ್ರಾಶಸ್ತ್ಯ ಮತಗಳ ಮೂಲಕ ಗೆಲವು ಸಾಧಿಸಿದ್ದಾರೆ.
ಕೊಟ್ಟದ್ದು ಎಲ್ಲಿ?
ಪಂಚಮಸಾಲಿ ಮತಗಳ ಧ್ರುವೀಕರಣ ಅರಿಯುವಲ್ಲಿ ಬಿಜೆಪಿ ವಿಫಲ
ಮೊದಲ ಪ್ರಾಶಸ್ತ್ಯ ಮತಗಳ ನಡೆ ಗುರುತಿಸುವಲ್ಲಿ ಎಡವಿದ ರಮೇಶ್
ಬಿಜೆಪಿ ಬೆಂಬಲಿಗರಿಗೆ ಮೊದಲ ಮತ ಯಾರಿಗೆನ್ನುವ ಬಗೆಗೆ ಇದ್ದ ಗೊಂದಲ
ರಮೇಶ್ ಜತೆ ಅಂತರ ಕಾಯ್ದುಕೊಂಡೇ ಬಂದ ಪಕ್ಷದ ನಾಯಕರು.