ಪ್ರಸ್ತುತ
ಸಂತೋಷ್
ಅಕ್ಟೋಬರ್ ಮಾಸ ಕಳೆದು ನವೆಂಬರ್ ಆರಂಭವಾಗುತ್ತಿದ್ದಂತೆ ಕನ್ನಡ ನಾಡಿನಲ್ಲಿ ಸಂಭ್ರಮದ ವಾತಾವರಣ ಆರಂಭಗೊಳ್ಳುತ್ತದೆ. ಇದಕ್ಕೆೆ ಕಾರಣ ಕನ್ನಡ ರಾಜ್ಯೋೋತ್ಸವ. ನಾಡಿನ ಪ್ರತಿಯೊಬ್ಬರ ಈ ಸಂಭ್ರಮದದಲ್ಲಿ ಇದೇ ಮಾಸದ ಮತ್ತೊೊಂದು ಮಹತ್ವದ ಆಚರಣೆಯನ್ನು ಸಹ ನಾವು ಮರೆಯುವಂತಿಲ್ಲ. ಅದುವೇ ಗ್ರಂಥಾಲಯ ಸಪ್ತಾಾಹ. ಇದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಘನತೆಯನ್ನು ಹೆಚ್ಚಿಿಸುವಲ್ಲಿ ಪೂರಕವಾದ ಆಚರಣೆ.
ಇಂಡಿಯನ್ ಲೈಬ್ರರಿ ಅಸೋಸಿಯೇಷನ್ ನಿರ್ಧಾರದಂತೆ ದೇಶದಲ್ಲಿ 1968ರಿಂದ ಪ್ರತಿವರ್ಷ ನ.14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಾಹವನ್ನು ಆಚರಿಸುತ್ತ ಬರಲಾಗಿದೆ. ಇದು ಗ್ರಂಥಾಲಯ ಇಲಾಖೆಗೆ ಸಂಭ್ರಮದ ಸಂಗತಿ ಎಂಬುದಾಗಿ ನಾವೇಲ್ಲರೂ ಭಾವಿಸಿದ್ದೇವೆ. ಆದರೆ, ಈ ಆಚರಣೆ ಕೇವಲ ಒಂದು ಇಲಾಖೆಗಾಗಲೀ, ಸರಕಾರಕ್ಕಾಾಗಲೀ ಮಾತ್ರವೇ ಸಂಬಂಧಿಸಿದ್ದಲ್ಲ. ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಸಂಬಂಧಿಸುವಂಥದ್ದು. ಏಕೆಂದರೆ, ಕನ್ನಡದ ಸಾಹಿತ್ಯ-ಸಂಸ್ಕೃತಿಯ ಮಹತ್ವವನ್ನು ಸಾರುವ ಕೃತಿಗಳನ್ನು ಕೇವಲ ನಾಲ್ಕುಕೋಣೆಗಳ ನಡುವೆ ಕಪಾಟುಗಳಲ್ಲಿ ಇಟ್ಟು, ಅದನ್ನು ಗ್ರಂಥಾಲಯ ಎಂದು ಹೇಳುವುದು ಸರಿಯಲ್ಲ. ಎಲ್ಲ ವರ್ಗ ಮತ್ತು ವಯೋಮಾನದ ಜನರಲ್ಲಿ ಗ್ರಂಥಾಲಯಗಳ ಕುರಿತು ಸಹಕಾರ ಮನೋಭಾವನೆ ಬೆಳೆಸಬೇಕೆಂಬುದು ಈ ಸಪ್ತಾಾಹದ ಬಹುಮುಖ್ಯ ಉದ್ದೇಶ.
ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗಳು ಇಂದು ಉನ್ನತ ಸ್ಥಿಿತಿಗೆ ತಲುಪಲು ಭಾರತ ಗ್ರಂಥಾಲಯದ ಪಿತಾಮಹ ಎಂದು ಕರೆಯಲ್ಪಡುವ ಡಾ.ಎಸ್.ಆರ್.ರಂಗನಾಥ್ ಅವರ ಪರಿಶ್ರಮದ ಕಾರಣ. ಸಾರ್ವಜನಿಕ ಗ್ರಂಥಾಲಯಗಳು ತಮ್ಮದೇ ಆದ ಸಂಪನ್ಮೂಲವನ್ನು ಕ್ರೋೋಡೀಕರಿಸಿಕೊಳ್ಳಲು ತಮ್ಮದೇ ಆದ ಗ್ರಂಥಾಲಯ ಕಾಯ್ದೆೆಯನ್ನು ರೂಪಿಸಿಕೊಳ್ಳುವುದು ಅಗತ್ಯ ಎಂಬುದು ಇವರ ಪ್ರತಿಪಾದನೆಯಾಗಿತ್ತು. ಆಯಾಯ ರಾಜ್ಯ ಸರಕಾರಗಳ ಅಂಗ ಸಂಸ್ಥೆೆಯಂತೆ ಇವುಗಳು ಕೆಲಸ ನಿರ್ವಹಿಸಬೇಕೆಂದು ಬಯಸಿದ್ದರು. ಅದರಂತೆ 1930ರಲ್ಲಿ ಗ್ರಂಥಾಲಯ ಕಾಯಿದೆ ರೂಪುಗೊಂಡಿತು. ನಂತರ ಕರ್ನಾಟಕ ಸರಕಾರ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯಿದೆ ರೂಪಿಸಿ ಸಾರ್ವಜನಿಕ ಗ್ರಂಥಾಲಯಗಳ ಜಾಲದ ಬೆಳವಣಿಗೆಗೆ ಬುನಾದಿ ಹಾಕಿತು. ಇದೀಗ ಸಾರ್ವಜನಿಕ ಗ್ರಂಥಾಲಯಗಳು ಉತ್ತಮ ಪುಸ್ತಕಗಳ ಸಂಗ್ರಹಣೆಯನ್ನು ಹೊಂದುವುದರ ಜತೆಗೆ ಓದುಗರನ್ನು ಹೆಚ್ಚುಹೆಚ್ಚು ಆಕರ್ಷಿಸುವಲ್ಲಿ ಯಶಸ್ವಿಿಯಾಗಿವೆ.
ಸಾಹಿತ್ಯಾಾಭಿರುಚಿ, ರಾಜಕೀಯ, ಸಾಮಾಜಿಕ ಆರ್ಥಿಕ ಪ್ರಜ್ಞೆೆಯನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಗ್ರಂಥಾಲಯ ವ್ಯವಸ್ಥೆೆಯ ಮುಖ್ಯ ಗುರಿಯಾಗಿದ್ದು, ಎಲ್ಲ ವಯೋಮಾನದವರಿಗೆ ಜ್ಞಾನ ನೀಡುವ ಮತ್ತು ಮಾಹಿತಿ ಪ್ರಸಾರ ಮಾಡುವ ಶಕ್ತಿಿಯಾಗಿ ಸೇವೆ ಸಲ್ಲಿಸುತ್ತಿಿದೆ. ಇಂತಹ ಇಲಾಖೆಯು ನಮ್ಮೆೆಲ್ಲರ ಒಳಿತಿಗಾಗಿ ಆಯೋಜಿಸುವ ‘ಗ್ರಂಥಾಲಯ ಸಪ್ತಾಾಹ’ವನ್ನು ನಾವು ನಮ್ಮೆೆಲ್ಲರ ಹೆಮ್ಮೆೆಯ ಆಚರಣೆಯಾಗಿ ಭಾವಿಸುವುದರ ಜತೆಗೆ ಸದ್ಬಳಕೆಮಾಡಿಕೊಳ್ಳಬೇಕಿದೆ.
ರಾಜ್ಯದಲ್ಲಿ ಪ್ರಸ್ತುತ ಸಾಲಿನವರೆಗೆ 1 ರಾಜ್ಯ ಕೇಂದ್ರ ಗ್ರಂಥಾಲಯ, 30 ಜಿಲ್ಲಾ ಕೇಂದ್ರ ಗ್ರಂಥಾಲಯ, 26 ನಗರ ಕೇಂದ್ರ ಗ್ರಂಥಾಲಯಗಳನ್ನು ಮತ್ತು 490 ಶಾಖೆಗಳನ್ನು ಪ್ರಾಾರಂಭಿಸಿ ಸಾರ್ವಜನಿಕರಿಗೆ ಓದುವ ಸಾಮಗ್ರಿಿಗಳನ್ನು ಒದಗಿಸಲಾಗುತ್ತಿಿದೆ. ಅಲ್ಲದೆ ಗ್ರಾಾಮೀಣ ಜನತೆಗೆ 5,766 ಗ್ರಾಾಮ ಪಂಚಾಯಿತಿ ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ಪ್ರಾಾರಂಭಿಸಿ ಗ್ರಂಥಾಲಯ ಸೇವೆ ನೀಡಲಾಗುತ್ತಿಿದೆ. ಅದೇ ರೀತಿ ವೃದ್ಧರು, ಮಹಿಳೆಯರಿಗಾಗಿ ಮನೆ ಬಾಗಿಲಲ್ಲೇ ಪುಸ್ತಕಗಳನ್ನು ಒದಗಿಸುವ ಸಲುವಾಗಿ 14 ಸಚಾರಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿಿವೆ. ಗ್ರಂಥಾಲಯಗಳ ಸುವ್ಯವಸ್ಥೆೆಗೆ ರಾಜ್ಯ, ಜಿಲ್ಲೆೆ ಹಾಗೂ ನಗರ ಗ್ರಂಥಾಲಯ ಪ್ರಾಾಧಿಕಾರಗಳು ಕಾರ್ಯನಿರ್ವಹಿಸುತ್ತಿಿದ್ದು, ತಮ್ಮ ವ್ಯಾಾಪ್ತಿಿಗೆ ಒಳಪಟ್ಟ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳ ಅನುಷ್ಠಾಾನದ ಮೇಲ್ವಿಿಚಾರಣೆ ಮಾಡುತ್ತಿಿವೆ. ಓದುಗರ ಅನುಕೂಲಕ್ಕಾಾಗಿ ಗ್ರಂಥಾಲಯ ಇಲಾಖೆ ಇಷ್ಟೊೊಂದು ಸೌಲಭ್ಯಗಳು ಒದಗಿಸಿರುವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ತಾನೇ?