ಅಲೆಮಾರಿಯ ಡೈರಿ
ಸಂರೋಷಕುಮಾರ ಮೆಹೆಂದಳೆ
mehendale100@gmail.com
ಸಾಮಾನ್ಯವಾಗಿ ಹತ್ತನ್ನೆರಡು ಸಾವಿರ ಅಡಿಯ ಮೇಲೆ ಏನೂ ಬೆಳೆಯಲಾರದು. ಅದರಲ್ಲೂ ಹನ್ನೆರಡು ಸಾವಿರ ಅಡಿ ದಾಟುತ್ತಿದ್ದಂತೆ
ಅಲ್ಲಲ್ಲಿ ಕುರುಚಲು ಪೊದೆ ಬಿಟ್ಟರೆ ಬೇರೆ ಬೆಳೆಯುವುದು ಭೂಮಿಯ ಮೇಲೆ ಎದರೂ ಇದ್ದರೆ ಅದು ಡೆಮುಲ್‌ನಲ್ಲಿ ಮಾತ್ರ.
ಮೊಬೈಲ್ ಸಿಗ್ನಲ್ ಬರುತ್ತಾ..? ಇಲ್ಲ. ಲ್ಯಾಂಡ್ ಲೈನ್ ಇದೆಯಾ..? ವೈ..ಫೈ.. ? ಹಂಗಂದ್ರೇನು ಸರ್ ಜೀ..?.. ಎನ್ನುತ್ತಾರೆ. ಹಾಲು.. ತರಕಾರಿ.. ಇನಿತರ ದಿನಸಿ.. ಮೆಡಿಸಿನ್ನು.. ಇವೆಲ್ಲ ಹೋಗಲಿ ಕೊನೆಗೆ ಅಗತ್ಯಕ್ಕೆ ಬಿದ್ದರೆ ತಕ್ಷಣಕ್ಕೆ ಹೊರಕ್ಕೆ ಬಂದು ನಗರ ತಲುಪಿ ಬದುಕಿಕೊಳ್ಳೊಣ ಎಂದರೆ ಅನಾಮತ್ತು
ಹತ್ತಾರು ಕಿ.ಮೀ. ಟ್ರೆಕ್ ಮಾಡುವ ಅಗತ್ಯ ಬೇಡುವ ಮತ್ತು ಅದೆಲ್ಲ ದಾಟಿ ಬಂದ ನಂತರವೂ ಹತ್ತಾರು ಕಿ.ಮೀ. ದೂರದ ವರೆಗೆ ರಸ್ತೆ ಮೂಲಕ ಪಯಣಿಸಿದರೆ ದಕ್ಕುವ ಸಣ್ಣ ಪಟ್ಟಣ ಲಿಡಾಂಗ್‌ನಲ್ಲಿ ಲಭ್ಯ ಇರುವ ವ್ಯವಸ್ಥೆಯ ಮೂಲಕ ಜೀವನಾವಶ್ಯಕಗಳನ್ನು ದಕ್ಕಿಸಿಕೊಳ್ಳಬೇಕು.
ಇಷ್ಟೆಲ್ಲ ಕಷ್ಟಪಟ್ಟು ಇಂಥಲ್ಲ ಇರೋದ್ಯಾಕೆ? ಹಾಗಾದರೆ ಸೀದಾ ಲಿಡಾಂಗ್‌ನಲ್ಲೇ ಮನೆಮಠ ಕಟ್ಟಿಕೊಂಡು ಬದುಕ ಬಹುದಿತ್ತಲ್ಲ. ಈ ರೇಂಜ್‌ನ ಕಷ್ಟಗಳ ಮಧ್ಯೆ ಬದುಕಬೇಕಾ? ಅಷ್ಟು ಎತ್ತರದಲ್ಲಿ ಇರುವುದಾದರೂ ಏನು? ಯಾಕಿರಬೇಕು? ಕರೆಕ್ಟ್. ಆದರೆ. ಜನನೀ ಜನ್ಮ ಭೂಮಿಶ್ಚ… ಅಂತಾ ಇದೆಯಲ್ಲ. ಅದು ಎಲ್ಲ ಕಾಲಕ್ಕೂ ಎಡೆಗೂ ಅಪ್ಲೈ ಆಗುವ ಮಾತೇ. ಅದಕ್ಕೆ ಬದುಕುವ ದಾರಿ ಮತ್ತು ಉತ್ತಮ ಯೋಜನೆ ಎರಡೂ ರೂಪಿಸಿಕೊಂಡಿ ರುವ ಡೆಮುಲ್ ಹಳ್ಳಿಯ ಜನರಿಗೆ ಉಳಿದೆಲ್ಲ ಜಾಗಕ್ಕಿಂತ ತಮ್ಮ ಊರೇ ಅತ್ಯಂತ ಉತ್ತಮ ಮತ್ತು ಪರಮ ಶ್ರೇಷ್ಠ. ಅದು ನಿಜವೂ ಇರಬಹುದು.
ಕಾರಣ ನಮ್ಮ ನಿಮ್ಮಲ್ಲಿಗೆ ಎಷ್ಟು ಜನ ಬಂದಾರು? ಎಷ್ಟು ಜನ ವಿವಿಧ ಪ್ರದೇಶದ, ಅಲ್ಲಿನ ವೈವಿಧ್ಯತೆಯ ಪರಿಚಯ ಮಾಡಿಕೊಟ್ಟಾರು? ಆದರೆ ಡೆಮುಲ್ ಈ ವಿಷಯದಲ್ಲಿ ದೊಡ್ಡ ದೊಡ್ಡ ಪಟ್ಟಣಗಳನ್ನೂ ಮೀರಿಸುವ ದಾಖಲೆಯಲ್ಲಿದೆ. ಕಾರಣ ಪ್ರತಿ ವರ್ಷ ಈ ಹಳ್ಳಿ ಅಥವಾ ಒದ್ದೆ ಮರುಭೂಮಿಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಅನಾಮತ್ತು ಅರವತ್ತರಿಂದ ಅರವತೈದು ಸಾವಿರ. ಪ್ರತಿ ವರ್ಷ ಏರುತ್ತಿರುವ ಸಂಖ್ಯೆಗೆ ಅನುಗುಣವಾಗಿ ಏನೆಲ್ಲ ಲಭ್ಯವೂ ಇಲ್ಲವಾಗುವು ದರೊಂದಿಗೆ ಮುಂಗಡ ಬುಕಿಂಗ್ ಬೇಕೇ ಬೇಕು. ಆದರೆ ಯಾವ ಸಂಪರ್ಕ ಸಂವಹನವೇ ಇಲ್ಲದಿದ್ದರೆ ಬುಕಿಂಗ್ ಹೇಗೆ? ಈ ಭೂಮಿಯ ಮೇಲೆ ಹದಿನೈದು ಸಾವಿರ ಅಡಿ ಎತ್ತರದಲ್ಲಿ ಇವತ್ತಿಗೂ ಬದುಕು ಮತ್ತು ಹಸಿರು ಎರಡೂ ಅರಳುತ್ತಿದೆಯೆಂದಾದರೆ ಅದು ಡೆಮುಲ್‌ನಲ್ಲಿ ಮಾತ್ರ. ನಾನು ಸ್ಪಿಟಿ ವ್ಯಾಲಿಯ ಆರಂಭದ ಎಡಕ್ಕೆ ತಿರುಗಿ ಮೇಲಕ್ಕೆ ಕ್ರಮಿಸಿದರೆ ಸಿಕ್ಕುವ ನಾಕೋ ಎಂಬ ಬಟಾಣಿ ಬೆಳೆಯುವ ಹಳ್ಳಿಗೆ ತಿರುಗುವ ಹಂತದಲ್ಲಿ, ಮೇಲ್ಮುಖವಾಗಿ ಟ್ರೆಕ್ ಮಾಡುತ್ತಿದ್ದಾಗ, ಅ ಕೋಲು ಕೋಲಾಗಿ ಬರುತ್ತಿದ್ದ ಬಿಸಿಲು ಕಾಯಿ ಸುತ್ತ ದಾರಿ ಮೇಲೆ ಕೂತಿದ್ದ ದೊಡ್ಡ ಗುಂಪು ಗಮನ ಸೆಳೆದಿತ್ತು.
ಯಾರಿವರೆಲ್ಲ ಎಂದು ಡ್ರೈವರ್ ಕಮ್ ಗೈಡ್ ಆಗಿದ್ದ ಪೆರಮಾಂಗ್‌ನನ್ನು ವಿಚಾರಿದರೆ ಅವರೆಲ್ಲ ಡೆಮುಲ್‌ಗೆ ಹೋಗುವವರು ಎಂದು ಗೊತ್ತಾಗಿತ್ತು. ಊರಿಗೆ ಹೊರಟವರ ಗುಳೇ ಇದ್ದಂತಿತ್ತು. ಒಮ್ಮೆ ಕೆಳಗಿನಿಂದ ಮೇಲಕ್ಕೆ ಯಾಕ್ ಮತ್ತು ಹೆಸರಗತ್ತೆಗಳ ಮೇಲೆ ಸಾಮಾನು ಸರಂಜಾಮು ಹೇರಿಕೊಂಡು ಲಿಡಾಂಗ್ ಬಿಟ್ಟರೆ ಎರಡನೆಯ ದಿನ ಸಂಜೆಗೆ ಈ ತಂಡ ಡೆಮುಲ್ ತಲುಪುತ್ತದೆ. ಅದರಲ್ಲಿ ಹಳ್ಳಿಗರ ಅಗತ್ಯವನ್ನೆಲ್ಲ ಪೂರೈಸುವ ಸಾಮಾನಿನ ಪಟ್ಟಿ ಪ್ರಕಾರ ಖರೀದಿಯಾಗಿರುತ್ತದೆ. ಅವರ ಮೊದಲ ಹಂತದ ದಾರಿ ಕ್ರಮಿಸುವಿಕೆ ನಿಲ್ಲುವುದೇ ಈ ಪಾಯಿಂಟ್ ಬಳಿ. ತತಕ್ಷಣ ಕೆಳಗಿಳಿದು ಮಾಹಿತಿ ಪಡೆದಿದ್ದೆ.
ಆ ಬಾರಿ ಡೆಮುಲ್ ತಲುಪಲಾಗಿರದಿದ್ದರೂ ಕಳೆದ ವರ್ಷ ರೊಥಾಂಗ್ ನೆತ್ತಿಯ ಮೂಲಕ ಕೆಳಗಿಳಿಯುವಾಗ ಡೆಮುಲ್ ತಲುಪುವ ಯೋಜನೆ ಮೊದಲೇ ಸಿದ್ಧವಾಗಿತ್ತು. ಲಾಹುಲ್ ಸ್ಪಿಟಿ ವ್ಯಾಲಿಯ ಕಾಮಿಕ್ ಹಾಯ್ದು, ಲಿಡಾಂಗ್ ಮೂಲಕ ಮೊದಲ ಇಪ್ಪತ್ತು ಕಿ.ಮೀ ಕ್ರಮಿಸಿದರೆ ನಂತರ ಐದಾರು ಕಿ.ಮೀ ಮಾತ್ರ ಎಂಥಾ ಪ್ರವಾಸಿಗನಿಗೂ ಉಸಿರು ನೆತ್ತಿಗೇರುತ್ತದೆ. ಕಾರಣ ಡೆಮುಲ್ ಬರೋಬ್ಬರಿ ಹದಿನೈದು ಸಾವಿರ ಅಡಿಗೂ ಮಿಗಿಲಾದ ಎತ್ತರದ ಕಣಿವೆ ಪ್ರದೇಶ ದಲ್ಲಿ ನೆಲೆಗೊಂಡಿರುವ ಹಸಿರು ಮರುಭೂಮಿ. ತಲುಪಲು ಸುಲಭ ಸಾಧ್ಯವಿಲ್ಲ.
ದೈಹಿಕ ಸಿದ್ಧತೆ ಮತ್ತು ಮಾನಸಿಕ ಬದ್ಧತೆ ಎರಡನ್ನೂ ಬೇಡುವ ಡೆಮುಲ್ ತಲುಪಿದ ಮೇಲೆ ಮಾತ್ರ ಸ್ವರ್ಗ ಸದೃಶ್ಯ. ಡೆಮು ಎಂದರೆ ಹೆಣ್ಣು ಯಾಕ್.
ತನ್ನ ಪ್ರೀತಿಯ ಯಾಕ್‌ನನ್ನು ಕಳೆದುಕೊಂಡ ಶಿಮ್ಲಾದ ಕಡೆಯ ಮಾಲಿಕನೋಬ್ಬ ಲಿಡಾಂಗ್‌ನಿಂದ ಹುಡುಕುತ್ತ ನಾಲ್ಕು ದಿನಗಳ ಕಾಲ ದಾರಿ ಕ್ರಮಿಸಿ ಮೇಲೆ ಏರಿ ಬಂದಾಗ ದೊರಕಿದ್ದು ಈ ಜಾಗ. ಅಲ್ಲಿ ನೋಡಿದರೆ ಹಸಿರು ಹುಲ್ಲುಗಾವಲು ಮಧ್ಯೆ ಅವನ ಪ್ರೀತಿಯ ಎಮ್ಮೆ ಮೇಯುತ್ತ ನಿಂತಿದ್ದು ಕಂಡಿದೆ. ಆಶ್ಚರ್ಯ ಎಂದರೆ ಆ ಎತ್ತರದಲ್ಲಿ ನೀರು ಸಾಯಲಿ, ರಿಯಾಗಿ ಗಾಳಿಯೂ ಆಡದ ಪ್ರದೇಶ ಅದು. ಅಲ್ಲಿ ಇಂತಹ ಹಸಿರೇ ಎನ್ನುವುದೇ ಅಚ್ಚರಿ.
ಅಲ್ಲೇ ನೆಲೆ ನಿಂತ ಅವನು ಜತೆಗೆ ತನ್ನೂರಿನ ಹಲವು ಜನರನ್ನು ತಂದು ನೆಲೆಗೊಳಿಸಿದ. ಅವನ ಡೆಮುವಿನಿಂದಾಗಿ ಊರಿಗೆ ಡೆಮುಲ್ ಎನ್ನುವ ಹೆಸರು
ಬಂದರೆ, ಆ ಎತ್ತರದಲ್ಲಿ ಹಸಿರು ನೆಲೆ ಕಂಡಿದ್ದು ವಿಸ್ಮಯ. ಸಾಮಾನ್ಯವಾಗಿ ಹತ್ತನ್ನೆರಡು ಸಾವಿರ ಅಡಿಯ ಮೇಲೆ ಯಾವ ರೀತಿಯ ಹಸಿರೂ ಬೆಳೆಯ ಲಾರದು. ಅದರಲ್ಲೂ ಹನ್ನೆರಡು ಸಾವಿರ ಅಡಿ ದಾಟುತ್ತಿದ್ದಂತೆ ಅಲ್ಲಲ್ಲಿ ಕುರುಚಲು ಪೊದೆ ಬಿಟ್ಟರೆ ಬೇರೆ ಬೆಳೆಯುವುದು ಭೂಮಿಯ ಮೇಲೆ ಎದರೂ ಇದ್ದರೆ ಅದು ಡೆಮುಲ್‌ನಲ್ಲಿ ಮಾತ್ರ. ವರ್ಷದ ಆರು ತಿಂಗಳು ಹಿಮ ಹೊಡೆತಕ್ಕೆ ನಲುಗುವ ಡೆಮುಲ್ ನಂತರದಲ್ಲಿ ಅಪ್ಪಟ ಹಸಿರು ಹುಲ್ಲು ಗಾವಲು. ಯಾವ ಬೆಳೆಗೂ ಸೈ. ಹಾಗಾಗಿ ಆ ಸಮಯದಲ್ಲಿ ಎಲ್ಲವನ್ನೂ ಬೆಳೆದುಕೊಳ್ಳುವ, ಇತರ ಚಟುವಟಿಕೆ ಗರಿಗೆದರುತ್ತಿದ್ದರೆ ಕೆಳಗಿನಿಂದ ಬರುವ ಚಾರಣಿಗ ರಿಗೆ ಡೆಮುಲ್ ಟ್ರಾನ್ಸಿಟ್ ಪ್ರದೇಶ ಇದ್ದಂತೆ.
ಅದರಲ್ಲೂ ನಾಲ್ಕೂ ದಿಕ್ಕಿನಲ್ಲೂ ಅಪರಿಮಿತ ಸೃಷ್ಟಿ ಸೌಂದರ್ಯ ಹೊಂದಿರುವುದರಿಂದ ಡೆಮುಲ್ ಪ್ರತೀ ಚಾರಣಿಗರ ಪ್ರವಾಸಿಗರ ಆಕರ್ಷಣೀಯ ಕೇಂದ್ರ. ಫೋಟೊಗ್ರಫಿಗೆ ಹೇಳಿ ಮಾಡಿಸಿದ ತಾಣ. ಊರಿನ ಪ್ರಧಾನ ಮನೆಯಂದು ಸೆಟ್‌ಲೈಟ್ ಫೋನ್ ಸೌಲಭ್ಯ ಬಿಟ್ಟರೆ ಬೇರಾವ ಸಂವಹನವೂ ಇರದ ಪ್ರದೇಶದಲ್ಲಿ ಯಾತ್ರಿಕನಿಗೆ ದೈಹಿಕ ತಯಾರಿ ಅತ್ಯಗತ್ಯ ಇಲ್ಲಿ ತಲುಪಲು. ನಾಲ್ಕು ಪಟ್ಟು ಆಮ್ಲಜನಕ ಕಡಿಮೆ ಇರುವ ಡೆಮುಲ್ ಭೌಗೋಳಿಕವಾಗಿ ಅದ್ಭುತ ಲ್ಯಾಂಡ್‌ಸ್ಕೇಪು. ಇರುವ ಅರವತ್ತೈದು ಮನೆಗಳಲ್ಲಿ ಪ್ರತೀ ಮನೆಯೂ ಪೆಯಿಂಗ್ ಗೆಸ್ಟ್‌ಹೌಸುಗಳೇ. ಆದರೆ ಸರದಿಯ ಮೇಲೆ ಅತಿಥಿಗಳಿಗೆ ಮನೆ ಒದಗಿಸಲು ಒಬ್ಬ ಮುಖಂಡ ನಿಯಮಿತನಾಗಿದ್ದು ಸಮಾನವಾಗಿ ಎಲ್ಲರಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳುತ್ತಾನೆ.
ಇದರಿಂದ ಪ್ರತಿ ಮನೆಗೂ ಸಮಾನ ಆದಾಯ. ಆದಾಗ್ಯೂ ಮನೆಗಳು ಖಾಲಿ ಇರುವ ಸಮಯ ತುಂಬ ಕಮ್ಮಿ. ಕೆಲವೊಮ್ಮೆ ತಾತ್ಪೂರ್ತಿಕ ಗುಡಾರ ಎಬ್ಬಿಸಿ, ಟೆಂಟ್‌ಗಳನ್ನು ಹೂಡಿ ಅಗತ್ಯಕ್ಕೆ ತಕ್ಕ ವ್ಯವಸ್ಥೆ ಮಾಡಿ ಬಂದವರನ್ನು ಉಪಚರಿಸುವ ಕ್ರಮ ಕೈಗೊಂಡಿದ್ದೂ ಇದೆ. ಅತಿಥಿ ಉಪಚಾರಕ್ಕೆ, ಸೇವೆಗೆ ಡೆಮುಲ್ ಎಲ್ಲಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಸಮಯ ಮೀಸಲಿಡುವ ಕಾರಣ ಎರಡು ಕಾರ್ಯದಲ್ಲಿ ನಿರಂತರವಾಗಿರುತ್ತದೆ. ಒಂದು ಬರುವ ಚಾರಣಿಗ ರಿಗೆ ಸೌಲಭ್ಯ ಕಲ್ಪಿಸುವುದು, ಸೇವೆ ನೀಡುವುದು.
ಇನ್ನೊಂದು ಡೆಮುವಿನ ಗಂಡಸರು ಸರದಿಯ ಮೇರೆಗೆ ಕೆಳಗಿನ ಲಿಡಾಂಗ್‌ಗೆ ಹೋಗಿ ಸಾಮಾನು ಸರಂಜಾಮು ತರುವುದು. ಪ್ರತಿ ಶನಿವಾರ ಒಂದು ತಂಡ ಸರದಿಯ ಪ್ರಕಾರ ಗುಂಪಾಗಿ ಕೆಳಗಿಳಿದರೆ ಮಂಗಳವಾರ ರಾತ್ರಿಗೆ ಊರು ತಲುಪುತ್ತಾರೆ. ಕೆಲವೊಮ್ಮೆ ಮರುದಿನಕ್ಕೂ ಮುಂದುವರಿದರೂ ಆದೀತು. ಎಲ್ಲ ನಿಸರ್ಗದ ಮೇಲೆ. ಮತ್ತೆ ಇನ್ನೊಂದು ತಂಡ ಶನಿವಾರಕ್ಕೆ ಯಾದಿ ಸಿದ್ಧಪಡಿಸಿಕೊಂಡು ಕೆಳಕ್ಕೆ ಹೊರಡುತ್ತದೆ. ಇದಕ್ಕೂ ಸರದಿಯ ಪ್ರಕಾರ ಊರ ಜನವೆಲ್ಲ ಒಳಗೊಳ್ಳುವುದರಿಂದ ಯಾವ ಬಾಧೆ ಇಲ್ಲದೆ ಊರಿನ ಅಷ್ಟೂ ಅಗತ್ಯ ಪೂರೈಕೆಯಾಗುತ್ತಿರುತ್ತದೆ.
ನಿರಂತರ ದುಡಿಮೆ, ಓಡಾಟ, ಶುದ್ಧ ಪರಿಸರ ಮತ್ತು ತೆರಪಿಲ್ಲದ ಚಟವಟಿಕೆ ಜತೆಗೆ ತಾವೆ ಬೆಳೆದು ಜೋಪಾನವಾಗಿ ಕಾಯ್ದಿರಿಸಿಕೊಳ್ಳುವ ಶುದ್ಧ ಆಹಾ
ರೋತ್ಪನ್ನ ಇವರ ಆರೋಗ್ಯ ಮತ್ತು ಅಂಗ ಸೌಷ್ಟವದ ಗುಟ್ಟು. ಊರ ಮಹಿಳೆಯರು ಅತಿಥಿ ಉಪಚಾರದ ಇತರೆ ಕಾರ್ಯಗಳನ್ನು ಪೂರೈಸುತ್ತಿರುತ್ತಾರೆ. ಮಕ್ಕಳಿಗಾಗಿ ಒಂದು ಶಾಲೆಯೂ ಇಲ್ಲಿ ಕಣ್ಬಿಟ್ಟಿದೆ. ಒಮ್ಮೆ ಮೇಲೆ ಬರುವ ಮೇಷ್ಟ್ರು ಮತ್ತೆ ಕೆಳಕ್ಕೆ ಹೋಗಲಾರ. ಸರಕಾರಿ ಇತರ ಸವಲತ್ತು ಇತ್ಯಾದಿ
ಮನೆ ಬಾಗಿಲಿಗೆ ತಲುಪುತ್ತದೆ. ಎಲ್ಲ ಸೇವೆ ಇತ್ಯಾದಿ ಹೋಲ್ ಸೇಲ್ ಆಗಿ ಮೇಲೇರುವ ಅನಿವಾರ್ಯಕ್ಕೆ ವ್ಯವಸ್ಥೆ ಪಕ್ಕಾಗಿದೆ.
ಮೇ ನಂತರ ಪರ್ವತಗಳೆಲ್ಲ ಬೋಳಾಗುತ್ತ, ನೆಲವೆಲ್ಲ ಹಸಿರಾಗಿ ನಿಲ್ಲುವ ವಿಸ್ಮಯದ ಜತೆಗೆ ಬೆಳಕು ಸಂಜೆಗಳ ಸೂರ್ಯನ ವಿನ್ಯಾಸದ ಬೆಳಕಿನಾಟ ಡೆಮುಲ್‌ನಲ್ಲಿ ಮಾತ್ರ ಸಾಧ್ಯ. ಅದರಲ್ಲೂ ಆಗಸ ಶುಭ್ರವಾಗಿರುವುದು ನಕ್ಷತ್ರ ನೋಡುವವರಿಗೂ ಇದು ಕರ್ಮ ಭೂಮಿ. ಬೈನಾಕ್ಯೂಲರ್ ಹೂಡಿ ಕುಳಿತು ಕೊಳ್ಳುವವರ ಮಧ್ಯೆ ಡೆಮುಲ್ ಮತ್ತಷ್ಟು ಹಸಿರಾಗುತ್ತಿರುತ್ತದೆ. ಕೊಂಚ ತಲುಪುವುದು ಕಷ್ಟವಾದರೂ ಅಪರೂಪದ ಆತಿಥ್ಯ ಮತ್ತು ಪ್ರಕೃತಿಯಿಂದ ಆಫ್ ಬೀಟ್ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಮಾಡಿಬಿಡಿ ಡೆಮುಲ್ ಸವಾರಿ.