ಮಾನ್ವಿ: ನರೇಗಾ ಯೋಜನೆಯಡಿ ಬ್ಯಾಗವಟ್ ಗ್ರಾಮದಲ್ಲಿ ಮಾದರಿ ಶಾಲೆ ಕಾಂಪೌ0ಡು. ಶಾಲೆಗಳಲ್ಲಿ ಅಡುಗೆ ಕೋಣೆ,ಸಂತೆ ಕಟ್ಟೆ. ಗ್ರಾಮೀಣ ಗೋಧಾಮು ಸೇರಿದಂತೆ ಬಹು ಬಾಳಿಕೆ ಬರುವಂತಹ ಅನೇಕ ಅಭಿವೃದ್ಧಿ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳುವುದರೊಂದಿಗೆ ಗ್ರಾಮದ ಜನರಿಗೆ ಕೂಲಿ ಕೆಲಸವನ್ನು ನೀಡಲಾಗಿದೆ ಎಂದು ತಾಲ್ಲೂಕ ಐಇಸಿ ಸಂಯೋಜಕ ವಿರೇಶ ತಿಳಿಸಿದರು.
ತಾಲ್ಲೂಕಿನ ಬ್ಯಾಗವಾಟ್ ಗ್ರಾಮ ಪಂಚಾಯತಿವತಿಯಿAದ ಶ್ರೀ ಅಂಜಿನೇಯ್ಯಸ್ವಾಮಿ ದೇವಸ್ದಾನದ ಆವರಣ ದಲ್ಲಿ ನಡೆದ ವಿಷಯಧಾರಿತ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಂದು ದಿನ ಕೆಲಸಕ್ಕೆ ೨೮೯ ಕೂಲಿ ಹಾಗೂ ಸಲಕರಣೆ ವೆಚ್ಚ ೧೦ರೂ ನಂತೆ ಪ್ರತಿ ದಿನಕ್ಕೆ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೆ ೧೦೦ ದಿನಗಳ ಕೂಲಿ ಕೆಲಸವನ್ನು ಮಾಡಲು ಅವಕಾಶವಿದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸರಕಾರವು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೇ ಇಲಾಖೆಗಳ ಮೂಲಕ ವೈಯಕ್ತಿಕ ವಾಗಿ ಕೃಷಿ ಹೊಂಡ, ಬದು ನಿರ್ಮಾಣ, ದನದದೊಡ್ಡಿ, ಕುರಿದೊಡ್ಡಿ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಮಲ್ಲಿಗೆ,ಗುಲಾಬಿ ಹೂ, ಕರಿಬೇವು, ಪಪ್ಪಾಯಿ, ಪೇರಲ, ಮೊಸಂಬಿ,ನುಗ್ಗೆ ಎಲೆ ತೋಟ, ಇನ್ನೂಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ.
ವಸತಿ ಯೋಜನೆಯಡಿಯಲ್ಲಿ ಮಂಜೂರಾದ ಮನೆಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಿಕೊಳ್ಳಲು ೯೦ ಮಾನವ ದಿನಗಳ ಕೂಲಿ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತಿದೆ. ಮಹಿಳಾ ಕೂಲಿಕಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳಾ ಕಾಯಕ ಬಂಧುಗಳಿಗೆ ಪ್ರತಿ ದಿನಕ್ಕೆ ೫ರೂ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಗಾರದಲ್ಲಿ ಗ್ರಾಮದ ಕೂಲಿಕಾರರು. ಸ್ವ-ಸಹಾಯ ಗುಂಪಿನ ಸದ್ಯಸರು. ರೈತರು ಹಾಗೂ ಗ್ರಾಮ ಕಾಯಕ ಮಿತ್ರರು ಹಾಜರಿದ್ದರು.