ಮಾನ್ವಿ: ಅಂದಾಜು ಪಟ್ಟಿಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಜಿ.ಪಂ.ಸಿ.ಇ.ಒ. ತನ್ವೀರ್ ಅಸಿಫ್ ಸೂಚಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಇಂದು ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೨೧-೨೨ನೇ ಸಲಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು ಕುರ್ಡಿ ಗ್ರಾಮದ ಸರಕಾರಿ ಬಾಲಕರ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ ಯನ್ನು ನೀಡುತ್ತಿದ್ದಾರೆಯೇ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿ ತಿಳಿದುಕೊಂಡರು.
ಮ.ಗಾ.ರಾ.ಗ್ರಾ.ಉ.ಖಾ. ಯೋಜನೆಯಡಿಯಲ್ಲಿ ನಿರ್ಮಿಸಲಾದ ಬಿಸಿಯೂಟ ಕೊಠಡಿ,ಅಂಗನವಾಡಿ ಕೇಂದ್ರ ವೀಕ್ಷಿಸಿದರು,ಸರಕಾರಿ ಪ್ರೌಡಶಾಲೆಯಲ್ಲಿ ನಿರ್ಮಿಸಿರುವ ಭೋಜನಾಲಯ,ಸರಕಾರಿ ಉರ್ದು ಶಾಲೆಯಲ್ಲಿನ ಭೋಜನಾಲಯ ಹಾಗೂ ಬಿಸಿಯೂಟ ಕೋಣೆ, ಗೊರ್ಕಲ್ ಗ್ರಾಮದಲ್ಲಿ ಮ.ಗಾ.ರಾ.ಗ್ರಾ.ಉ.ಖಾ. ಯೋಜನೆ ಯಡಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ ,ಭೋಜನಾಲಯ ಹಾಗೂ ಜಲ ಜೀವನ್ ಮೀಷನ್ ಅಡಿ ಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಕೆರೆ ಕಾಮಗಾರಿಗೆ ಭೇಟಿ ನೀಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸ ಬೇಕಾಗಿರುವುದರಿಂದ ಗುಣ ಮಟ್ಟದ ಪೈಪ್ ಲೈನ್ ಆಳವಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸ್ಟೇಲಾ ವರ್ಗೀಸ್ ಹಾಗೂ ಮ.ಗಾ.ರಾ.ಗ್ರಾ.ಉ.ಖಾ. ಯೋಜನೆಯ ಸಹಾಯಕ ನಿರ್ದೇಶಕ ಅಲಂ ಬಾಷ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎ.ಇ.ಇ.ಅಮೀನುದ್ದಿನ್ ಮುಖಂಡರಾದ ಈರಣ್ಣ, ಸೈಯಾದ್ ಅಹಾದ್ ಬಾಷ ಹಾಗೂ ಗ್ರಾ.ಪಂ.ಸದಸ್ಯರು ಇದ್ದರು.