Friday, 25th October 2024

ಕ್ಲಬ್‌ ಹೌಸ್‌ನಲ್ಲಿ ಕವನದ ಕುಂಭದ್ರೋಣ ಮಳೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 162

ಬಾಲ್ಯದಲ್ಲಾಡಿದ ಚಿಣ್ಣಾಟಗಳಿಂದ ಹಿಡಿದು, ಯೌವ್ವನದ ಚೆಲ್ಲಾಟ, ಆಧ್ಯಾತ್ಮದ ನೋಟ, ಕೆಣಕಿ ಕಾಲೆಳೆಯುವ ಸೊಗಸುಗಳ ವೇದಿಕೆಯಲಿ ದಿವ್ಯಾನುಭವದ ದರ್ಶನ 

ಗಾನ ಗಾಯತ್ರಿ ಮಂತ್ರದಲಿ ಕೇಳುಗನಾದ ತನ್ಮಯ

ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್ ಅಂಗಳದಲ್ಲಿಂದು ಕವಿಗಳ ಮನದೊಳಗಿನ ಹನಿಹನಿಗಳ ಜೋಡಣೆ ಅಲೆಯ ಆರ್ಭಟ ಪಡೆದು ರಭಸವಾಗಿ ಹರಿದು, ಅಲ್ಲಲ್ಲಿ ಮುತ್ತುಕ್ಕಿ ಕಗ್ಗಲ್ಲುಗಳಿಗೂ, ಕೇಳುಗರ ಮನಸಾಗರಕೆ ಸೇರಿ ತನ್ಮಯವಾಗಿದಂತಹ ಅನುಭವ.

ಅಬ್ಬಾ, ಕ್ಲಬ್‌ಹೌಸ್‌ನ ತುಂಬ ಪಿಸುನುಡಿಯ ಸಪ್ಪಳ, ನಲ್ಲೆನಲ್ಲೆಯರೆಲ್ಲೋ ಮರೆಯಲ್ಲಿ ನಿಂತು, ಸಲ್ಲಾಪ ವಾಡುತ್ತಾ, ಮೆಲುನುಡಿಯಲಿ ತಮ್ಮ ಮನ ದಾಳದ ಮಾತುಗಳ ವಿನಿಮಯ ಮಾಡಿಕೊಳ್ಳುವ ಗಳಿಗೆಯಲಿ ನುಸುಳಿದ ಕೇಳಿದ ಅನುಭವ. ಬಾಲ್ಯದಲ್ಲಾಡಿದ ಚಿಣ್ಣಾಟಗಳಿಂದ ಹಿಡಿದು, ಯೌವ್ವನದ ಚೆಲ್ಲಾಟ, ಆಧ್ಯಾತ್ಮದ ನೋಟ, ರತಿರಮಣರ ರಗಳೆ, ಕೆಣಕಿ ಕಾಲೆಳೆಯುವ ಸೊಗಸುಗಳೆಲ್ಲವೂ ಒಂದೇ ವೇದಿಕೆಯಲಿ ಮೂಡಿ ಬಂದ ದಿವ್ಯಾನುಭವದ ದರ್ಶನವಾಯಿತು.

ಕವನಗಳ ಧಾರೆಯನರಿಸುವ ಸಲುವಾಗಿ ಆಗಮಿಸಿದ ಗಾಯತ್ರಿ ಮತ್ತು ಚಿನ್ಮಯಿ ಅವರ ದನಿಗೆ ಇಡೀ ವಿಶ್ವವಾಣಿ ಕೇಳುವ ಕಿವಿಗಳು ಒಂದೂವರೆ ಗಂಟೆ ಕಾಲ ತನ್ಮಯವಾಗಿ ನೆಟ್ಟಿದ್ದವು. ಅಪರೂಪದಲ್ಲಿ ಅಪರೂಪದ ಕಾರ್ಯ ಕ್ರಮ ರೂಪಿಸಿದ ವಿಶ್ವವಾಣಿಯ ವಿನ್ಯಾಸಕ್ಕೆ ಕೇಳುಗರು ಉಘೇ ಎಂದು ಹೇಳಿದ್ದು ಕಾರ್ಯಕ್ರಮದಲ್ಲಿ ನಡೆಯಿತು.

ಚಿನ್ಮಯ-ಗಾಯತ್ರಿ ಕಾವ್ಯಾಧಾರೆಯನ್ನಂತೂ ಮುದ್ದಣ್ಣ-ಮನರೋಮೆಯರ ಸರಸಕ್ಕೆ ಹೋಲಿಸಿದ್ದು ಅತಿ ಶಯೋಕ್ತಿಯಲ್ಲ ಎನ್ನಬಹುದು. ಬಹುತೇಕ ಕವಿತೆಗಳು, ಕಾವ್ಯಾಸಾಕ್ಷಾತ್ಕಾರಗಳಂತೆಯೇ ಕ್ಲಬ್‌ಹೌಸ್‌ನ ಕಾವ್ಯಸಂವಾಧವೂ ಕೂಡ ಪ್ರೀತಿಯಿಂದಲೇ ಆರಂಭವಾಗಿದ್ದು ಸುಳ್ಳಲ್ಲ. ಮಧುವ ತರಲು ನಾ ಕರುವ ತರಲೇ ಬೇಕಿಲ್ಲ, ಮಧುಕರನಾದರೇನು ದಿನಕರನು ಬರಲೇಬೇಕಲ್ಲ ಎನ್ನುತ್ತಾ ಚಿನ್ಮಯ್ ಅವರು ಮಧು ಮತ್ತು ಮಧುಕರನ ದಿನನಿತ್ಯದ ಒಲವಾಲಿಂಗನದ ಹೊನಪು ಹರಿಸಿದರೆ, ಅದಕ್ಕುತ್ತರ ನೀಡಿದ ಗಾಯತ್ರಿ ಅವರು, ನಡುರಾತ್ರಿಯಲಿ ಕೆಂಡಸಂಪಿಗೆಯೊಂದು ಅರಳಿತ್ತು, ತನ್ನ ಪರಿಮಳದ ಗಂಧವ ಊರೆಲ್ಲ ಪಸರಿಸಿತ್ತು ಎಂದು ಹೆಣ್ಮನದ ಭಾವ ಸಂಚಲನವನ್ನು ಕಾವ್ಯ ರೂಪದಲ್ಲಿ ಹರಡಿದರು.

ಸ್ವಪ್ನದಲೂ ಕಾಡಬೇಡ ನೀನು ಎಂದು ಸರಸದ ಮಾತನಾಡಿದರೆ, ಕಾಡಿಸದೆ ಇರಲಾರೆ, ನಿನ್ನೆಲ್ಲ ಕನಸಿಗೆ ನಾಳೆ ಸೂಕ್ತ ವೇದಿಕೆ ನಿರ್ಮಿಸಬೇಕಿದೆ
ಎಂದೆನುವ ಇನಿಯನ ಮಾತುಗಳು ರಿಂಗಣಿಸಿದವು. ನಿತ್ಯ ಸತ್ಯದ ಅಂತರ್ ಸತ್ವ, ಮನವೆಂಬ ಮರ್ಕಟವ ಸಂಬಾಳಿಸುವ ಚತುರನೆಂಬುದು ಗೊತ್ತು ಎಂದು ತನ್ನಿನಯ ಹಿರಿಮೆ ತಿಳಿದವಳಂತೆ ಹೆಮ್ಮೆ ಪಡುವ ಹೆಣ್ಣಿನ ಅಂತರಾಳದ ಭಾವನೆಯನ್ನು ಗಾಯತ್ರಿ ಅವರು, ಬಿಂಬಿಸಿದರೆ, ಕಾಡದಿರು ಕನಸಿನಲ್ಲೂ, ಒಲವ ಹೊಸಕತೆಗೆ ಮುನ್ನಿಡಯ ನೀ ಬರೆಯ ದಿರುವ ಕಾರಣವೇ ಇಲ್ಲ, ನಿನ್ನೊಲವ ಸಾಗರವ ಸೇರಲು ನಾ ಉತ್ಸುಕ. ಪರಿಪರಿಯ ಪರೀಕ್ಷೆಗಳು, ಫಲವೇನು ಪರಿತಪಿಸಿ, ನಿನ್ನೊಲವಿನ ಕಡಲ ಸೇರುವುದೊಂದೇ ದಾರಿ ಎಂದು ಹಿರಿಹಿರಿ ಹಿಗ್ಗುವ ಪುರುಷ ಪಾತ್ರದ ದನಿಯ ಚೆಲ್ಲಿದರು ಚಿನ್ಮಯಿ.

ಹರಿದಾಡಿದ ಪ್ರೇಮರಸ !: ಸೊಗಸಾದ ಸಂಜೆಯಲಿ ಕಾರ್ಮೋಡದ ಮರೆಯಲಿ, ಹನಿಯೊಂದು ಮೂಡಿದೆ, ಭುವಿಗೆ ಬರಲು ಕಾದಿದೆ ಎಂದು ಸಾಗಿದ
ಇನಿಯನ ಸರಸ ಸಲ್ಲಾಪಕ್ಕೆ ಸ್ವಲ್ಪ ನಿಲ್ಲು, ಪ್ರೀತಿಗೆ ಮೊದಲು ಹೃದಯಕ್ಕೆ ಆತಂಕ ಎಂಬ ಗೆಳತಿಯ ಭಯ, ಕ್ಷಮಿಸಿಬಿಡು ಗೆಳತಿ ನಿನ್ನ ಅಭಿಮಾನಿಯೂ
ನಾ, ನೀನುಲಿಯುವ ಸಂಗೀತೆಕೆ ಅಭಿಮಾನಿ ನಾ. ನಾವಿಕನೋ ನಾಯಕನೋ ನೆನಪುಗಳೇಕೋ ಮರಕಳಿಸಿದೆ ಎಂದು ನೇವರಿಸುವ ಇನಿಯನ ಭರವಸೆ.

ನೆನಪಿಗೆ ಬೇಕಂತೆ ಮತ್ತೇ ನಿನ್ನ ಸಾಂಗತ್ಯ, ನಿನ್ನ ಕಂಗಳಲಿ, ನನ್ನ ಕಂಗಳಲಿ, ದುಃಖವೇಕೋ ಮಡುಗಟ್ಟಿ ನಿಂತಿರುವಂತಿದೆ ಎಂದು ತೊದಲುವ
ಹರಯ ದುಡಿಯ ದುಗುಡಗಳೆಲ್ಲವೂ ಈ ಇಬ್ಬರು ಕವಿ ಪುಂಗವರ ಮಾತುಗಳಲ್ಲಿ ತೇಲಿ ತೇಲಿ ಕವಿತೆಗಳಾಗಿ ಹರಿದಾಡಿದವು.

ಮಾರ್ಡನ್ ಸಲ್ಲಾಪವೂ ಇತ್ತು !: ಚಳಿಯ ಕುರಿತು ಮಾತನಾಡಿದ ಈ ಜೋಡಿ ಕವಿಪುಂಗವರು ಮಾರ್ಡನ್ ಪ್ರೇಮಿಗಳ ಸರಸ-ಸಲ್ಲಾಪವನ್ನು ತಮ್ಮ
ಕವಿತೆಗಳಲ್ಲಿ ಕಾಣಿಸಿದರು. ಚಳಿಯನ್ನು ಮರೆತು ಕುಳಿತ ಸಂಜು ಮತ್ತು ಗೀತಾ ಇರುವ ಜಾಗದಲ್ಲಿ ನಂಜು ಮತ್ತು ಶೀತ ಇರಬೇಕೆಂಬ ಅನುಭವ ನನ್ನದು
ಎಂದವನಂದರೆ, ನೀನೆಂದರೆ ಪಂಚಪ್ರಾಣ, ನೀನೆ ನನ್ನೊಲವ ನಿಲ್ದಾಣ, ಪ್ರೀತಿ ಕಿಕ್ಕಲ್ಲಿ ಕೆಲಸ ಮಾಡೋಕ್ ಬೇಜಾರು, ಕವನ ಬರೆಯೋಕ್ ಹೋದ್ರೂನು ನನ್ ಪೆನ್ನು ಬರೆಯುತ್ತೆ ನಿನ್ ಹೆಸರು ಎನ್ನುವ ನುಡಿ ಹೆಣ್ಣು ಜೀವದ್ದು, ಅದರೊಟ್ಟಿಗೆ ಬಂದಿರುವುದು ಕರೋನಾ ವೈರಸ್ ಜ್ವರವಲ್ಲ, ಕ್ವಾರಂಟೈನ್
ಮಾಡಿದರೆ ಹೋಗುವುದಕ್ಕೆ, ಇದು ನಿನ್ನ ಪ್ರೀತಿಯ ಜ್ವರ ಕಾಣೋ ಗೆಳೆಯ ಎಂಬ ಪ್ರೀತಿಯಲ್ಲಿ ಬಿದ್ದ ಯುವತಿಯ ಮಾತುಗಳು.

ಮುಂದುವರಿದು, ಮಲ್ಲ, ಹೌದೇನೋ ನನ್ನ ನಲ್ಲ, ಕನಸಿನಲ್ಲೇ ಕಚಗುಳಿಯನ್ನಿಟ್ಟೆಯಲ್ಲ ಎಂದು ಕೆಣಕಿದರೆ, ಮಲ್ಲ ಜಗಜಟ್ಟಿ ಮಲ್ಲ, ಆದರೆ, ಜೀವನದ ಭರವಸೆಗಳಿಲ್ಲ. ನೀನೇ ಕನಸಾದೆ, ಬೆಳಕಾದೆ ಎಂಬ ಮಾತು ಗೆಳೆಯನದ್ದು. ಹೃದಯದ ಆರ್ಭಟವ ನಿಲ್ಲಿಸಿ ನೀ ಕೇಳು, ಬಂಗಾರದ ಜಿಂಕೆ ಬೇಕೆಂದು ನಾ
ಕೇಳುವುದಿಲ್ಲ ಎಂಬ ಸಾಂತ್ವನ ಹೆಣ್ಣಿನದು. ಪ್ರೀತಿ ತಿಳಿಹಾಸ್ಯದ ತಿರುವು ಪಡೆದಾಗ ಱನೀ ನಕ್ಕಾಗ ಪಾರ್ಕಿನಲ್ಲಿ ನಕ್ಕಿದ್ದೆ ನಕ್ಕಿದ್ದು, ಬೈದಾಗ ಬಾರಿನಲ್ಲಿ
ಕುಡಿದು ಕಕ್ಕಿದ್ದೆ ಕಕ್ಕಿದ್ದು ಎಂಬ ಮಾರ್ಡನ್ ಸತ್ಯಾಂಶಗಳು ಈ ಇಬ್ಬರು ಕವಿಗಳ ಬಾಯಲ್ಲಿ ನಲಿದಾಡಿದ ನುಡಿಮುತ್ತುಗಳೆನ್ನಬಹುದು.

***

ಜೀವನದರ್ಶನ ಮಾಡಿಸಿದ ಸಂವಾದ ಕವಿತೆಗಳ ಸಂವಾದ ಕೇವಲ ಪ್ರೀತಿ, ಪ್ರಣಯಕ್ಕಷ್ಟೇ ಸೀಮಿತವಾಗದೆ ಜೀವನ ದರ್ಶನದ ಕವಿತೆಗಳೂ ಇಲ್ಲಿ ಕೇಳಿ ಬಂದವು. ಪರಿಸ್ಥಿತಿಯ ಅನಿವಾರ್ಯತೆ, ಜೀವನದಲ್ಲಿ ಬರುವ ಕಷ್ಟ ಸುಖಗಳ ಕುರಿತು ಕವಿತೆಗಳ ಮೂಲಕ ಹೇಳಿದ ಸಂವಾದಕಾರರು, ಕತ್ತಲೆಯಲಿ ಕುಳಿತು ಕತ್ತಲೆಯನು ಬೈಯ್ಯದಿರು ಮೂಢ, ನೂರಾರು ದಾರಿಗಳಿರಲಿ, ಆದರೆ, ನೀ ನಡೆದಿದ್ದೆ ದಾರಿ ಎಂದು ಜೀವನತತ್ವ ಭೋದಿಸಿದರೆ, ನಮ್ಮ ಶಿಲೆಯ ನಾವೇ ಕೆತ್ತಿಕೊಳ್ಳಬೇಕು, ನಮ್ಮ ಬದುಕು ನಮ್ಮ ಅಂಗೈಯಲ್ಲೇ ಇದೆ ಗೆಳೆಯಾ ಎಂದು ಬುದ್ದಿ ಹೇಳುವ ಕವಿತೆಗಳು ಕೇಳಿಸಿದವು.

ಅಳುತ್ತಾ ಬಂದವನು ನಾನು ನಗುತ್ತಾ ತೇಲುವೆನೇನು? ಎಂದು ತಾನೆಷ್ಟು ಗಟ್ಟಿಗನಾಗಿರುವೆ ಎಂಬುದನ್ನು ತಿಳಿಸುವ ಯುವಕನ ಮಾತುಗಳಿಗೆ ಕವಿತೆಯ
ರೂಪಕೊಟ್ಟರು. ಮಾರು ಹೋದವನು ಮಾರು ದೂರು ಇರುವೆಯೇಕೆ, ಮಾರುದ್ದದ್ದ ಮಲ್ಲಿಗೆಗೆ ಮರುಳು ಹೋಗಿರುವೆ ಗೆಳೆಯಾ ತಂದು ಮುಡಿಸುವೆಯಾ ನನ್ನ ಮುಡಿಗೆ ಮಾರುದ್ದದ್ದ ಮಲ್ಲಿಗೆಯ ಎನ್ನುತ್ತಾ ಪ್ರೀತಿಯಲ್ಲೇ ಜೀವನದರ್ಶನದ ಅನುಭವವ ತರಿಸಿದರು.

ಕಾಡಿದ ಬಾಲ್ಯದ ನೆನಪು
ಬಾಲ್ಯ ಮರಳಿ ಬರದು ಎಂಬುದನ್ನು ಸುಂದರವಾಗಿ ವರ್ಣಿಸುತ್ತಾ, ಈ ಇಬ್ಬರು ನಡೆಸಿದ ಕಾವ್ಯ ಸಂವಾದದಲ್ಲಿ ಕೇಳುಗರೆಲ್ಲ ಬಾಲ್ಯವನ್ನು ಕಂಡು ಕೊಂಡರು ಎಂದರೆ ಸುಳ್ಳಲ್ಲ. ಇನಿಯನ ರೇಗಿಸುವ ಗೆಳತಿ, ನಿನ್ನ ನಾ ಕಂಡಿಲ್ಲವೇ ಸಣ್ಣವನಿದ್ದಾಗ ನೀ ಚಡ್ಡಿ ಹಾಕಿ ಒಣಕಲು ಕಡ್ಡಿಯಂತಿದ್ದೆ. ಜಾರು ಬಂಡೆಯಾಡಿ ಓಡಿದ್ದು ನಾ ನೋಡಿದ್ದೇನೆ. ನಿನ್ನಪ್ಪನ ಕೈಯಿಂದ ಒದೆ ತಿಂದಿದ್ದು, ನನಗೆ ನೆನಪಿದೆ ಎಂದು ರೇಗಿಸುವ ಪ್ರಸಂಗ ಪ್ರತಿಯೊಬ್ಬರ ಬಾಲ್ಯ ವನ್ನು ನೆನಪಿಸಿತು. ಬಾಲ್ಯವ ಮರೆತಿಲ್ಲ. ಕಾಡುವ ನೆನಪುಗಳು ನಮ್ಮ ಬಟ್ಟೆಗಳಂತೆ. ಅಲ್ಲಲ್ಲಿ ತೇಪೆ, ಮಾಸಿದ ನೆನಪುಗಳ ಚಿಂದಿ ನಮ್ಮ ಜೀವನದ ದಿಕ್ಕು ದಿಕ್ಕಿನಲ್ಲಿ ಎನ್ನುವ ಮೂಲಕ ಬಾಲ್ಯದ ಘಟನೆಗಳನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟರು.

12 ದಿನಗಳ ಪರಿಷಯವಷ್ಟೇ !
ಸುಮಾರು ಒಂದೂವರೆ ತಾಸು ಕಾಲ ಕವನ ಸಂವಾದ ನಡೆಸಿದ ಗಾಯತ್ರಿ ಮತ್ತು ಚಿನ್ಮಯ್ ಅವರು ಈವರೆಗೆ ಪರಸ್ಪರ ಭೇಟಿಯೇ ಆಗಿಲ್ಲ ಎಂಬುದು
ಕುತೂಹಲದ ಸಂಗತಿ. ಈ ಇಬ್ಬರು ಕಾವ್ಯವಾಚಕರು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೇ ಪರಸ್ಪರ ಪರಿಚಿತರು. ಕ್ಲಬ್‌ಹೌಸ್‌ನ ಸಂವಾದಗಳ ಮೂಲಕವೇ ಈ ಇಬ್ಬರಿಗೆ ಪರಿಚಯವಾಗಿತ್ತು. ಕಳೆದೆರಡು ದಿನಗಳಿಂದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇವರ ವಾಚನಗಳನ್ನು ಕೇಳಿದ ರವೀಂದ್ರ ಶಾನುಭೋಗ್ ಅವರು, ವಿಶ್ವವಾಣಿಯಂತಹ ವೇದಿಕೆ ಕಲ್ಪಿಸುವ ಭರವಸೆ ನೀಡಿದ್ದರು. ಅದನ್ನು ವಿಶ್ವೇಶ್ವರ ಭಟ್ ಅವರ ಬಳಿ ಹೇಳಿಕೊಂಡು ಅವಕಾಶ ಕಲ್ಪಿಸಿ, ಕಾವ್ಯ ತೋರಣ ಕಟ್ಟಲು ಅನುವು ಮಾಡಿಕೊಟ್ಟದ್ದನ್ನು ನೆನೆದರು.

ಗಮನ ಸೆಳೆದ ಸಾಲುಗಳು
? ಮಾತಿನಲ್ಲಿ ಮುಗಿಸಿಯೇ, ಕವಳಕ್ಕೆ ದಾರಿ ಮಾಡು, ಕಳವಳಕ್ಕೆ ದಾರಿ ಮಾಡದಿರು
? ಇಣುಕಿದಾಗಲೆಲ್ಲ ಕಂಡಿದ್ದು ನಿನ್ನ ಮರ್ಕಟದ ಮನಸು
? ಪ್ರಾಮಾಣಿಕತೆ ಹಳಸಿರುವಾಗ ಕುಟಿಲತೆಗೇನು ಮದ್ದು
? ಬದುಕೊಳಗೆ ಕಷ್ಟ ಸೇರಿರಲು, ಅತಿಶಯದ ಬಾಳು ನೂರಾರು ಗೆಳೆಯಾ
? ನಿಲ್ಲಿಸುವ ಉಮೇದು ನಮಗಿಲ್ಲ, ಆದರೆ, ಸಮಯ ಯಾರಿಗೂ ಕಾಯುವುದಿಲ್ಲ
? ಕೊಲ್ಲುವುದಾದರೆ ಕೊಂದುಬಿಡು, ಬಂದೂಕಿಗೆ ಎದೆಯೊಡ್ಡಿ ನಿಲ್ಲುವೆ
? ಹರಿದೋಗಲಿ ನೆತ್ತರಿನೊಡೆ ನೀ ಬೆಕೆಂಬ ಹಂಬಲದ ಸೆ