ಪ್ರಸ್ತುತ
ರಾಜದೀಪ್ ಸರ್‌ದೇಸಾಯಿ
ಲಂಚ ಪ್ರಪಂಚದ ತರಹೆಗಳು ನೂರಾರಿರಬಹುದು. ಆದರೆ ರಾಜಕೀಯ ಮತ್ತು ಅಧಿಕಾರಿಶಾಹಿ ವಲಯದಲ್ಲಿ ಆಳವಾಗಿ ಬೇರೂರಿರುವ ವ್ಯವಹಾರ ಕುದುರಿಸುವ ಕಲೆ ಮಾತ್ರ ಅನನ್ಯ. ತಮ್ಮ ಸಾರ್ವಜನಿಕ ಹುದ್ದೆಗಳ ದುರುಪಯೋಗ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಬಿಜೆಪಿ ಆಡಳಿತವೇ ಇರುವ ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ?
ಇಂದು ಜಿಜ್ಞಾಸೆಯಿದೆ. ನರೇಂದ್ರ ಮೋದಿಯವರ ಏಳು ವರುಷಗಳ ಆಡಳಿತ ಕಾಲದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯೇ, ಜಾಸ್ತಿಯಾಗಿದೆಯೇ
ಅಥವಾ ಇದ್ದಲ್ಲಿಯೇ ಇದೆಯೇ ಎಂಬುದೇ ಆ ಪ್ರಶ್ನೆ. ನಾನೂ ತಿನ್ನೋದಿಲ್ಲ, ತಿನ್ನೋದಕ್ಕೂ ಬಿಡೋದಿಲ್ಲ ( ನ ಖಾವೂಂಗಾ, ನ ಖಾನೇ ದೂಂಗಾ) ಎಂದು ಮೋದಿಯವರು 2014ರಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಚುರಪಡಿಸಿದ ವಿಚಾರಪ್ರಚೋದಕ ಹೇಳಿಕೆ ಬಹಳ ಜನಜನಿತವಾದದ್ದು.
ಈ ಪ್ರಶ್ನೆಯನ್ನೀಗ ಕರ್ನಾಟಕ ರಾಜ್ಯಗುತ್ತಿಗೆದಾರರ ಸಂಘಕ್ಕೆ ಕೇಳಬೇಕಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಟೆಂಡರ್ ಪ್ರಕ್ರಿಯೆಯ ನಂತರ ಯಾವುದೇ ಕಾಮಗಾರಿ ಶುರು ಮಾಡುವುದಕ್ಕೆ ಮೊದಲು ಜನಪ್ರತಿನಿಧಿಗಳಿಗೆ ಗುತ್ತಿಗೆ ಮೊತ್ತದ ಶೇ.25-30ರಷ್ಟು ಹಣವನ್ನು ಲಂಚದ ರೂಪದಲ್ಲಿ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಪ್ರಧಾನಮಂತ್ರಿಗಳಿಗೆ ಪತ್ರವೊಂದನ್ನು ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ ಗುತ್ತಿಗೆದಾರರು.
ಇದಿಷ್ಟೇ ಅಲ್ಲದೇ ಕಾಮಗಾರಿ ಪೂರ್ಣವಾದ ನಂತರ ಬಿಲ್ ಪಾಸ್ ಆಗುವುದಕ್ಕೆ ಮತ್ತೆ ಶೇ.೫ ಕಕ್ಕಬೇಕಾಗುತ್ತದೆ ಎಂತಲೂ ಹೇಳಿಕೊಂಡಿದ್ದಾರೆ. ಇದೇ ಪ್ರಶ್ನೆಯನ್ನು ಗೋವಾರಾಜ್ಯದ ಸರಕಾರಿ ನೌಕರರಲ್ಲಿ ಕೇಳಿ. ಅಲ್ಲಿ ಬಿಜೆಪಿ ಸರಕಾರವೇ ಇದೆ. ಅಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿ ಸಿಕ್ಕ ಬೇಕೆಂದಾದರೆ ಪಿಡಬ್ಲೂಡಿ ಸಚಿವರಿಗೆ 25-30 ಲಕ್ಷ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಅಲ್ಲಿಯ ಶಾಸಕರೊಬ್ಬರೇ ನೇರವಾಗಿ ಆರೋಪಿಸಿ ದ್ದಾರೆ.
ಮಹಾರಾಷ್ಟದ ಕಥೆಯಂತೂ ಬಟಾಬಯಲಾಗಿದೆ. ಅಲ್ಲಿನ ಗೃಹಮಂತ್ರಿ ತಿಂಗಳಿಗೆ ನೂರುಕೋಟಿ ವಸೂಲಿ ಮಾಡುತ್ತಿzರೆಂದು ಅಲ್ಲಿನ ಮಾಜಿ ಪೋಲೀಸ್ ಮುಖ್ಯಸ್ಥರೇ ಬಹಿರಂಗ ಆರೋಪ ಮಾಡಿದ್ದರು. ಕರ್ನಾಟಕ ಮತ್ತು ಗೋವಾದಲ್ಲಿ ಬಿಜೆಪಿ ಸರಕಾರವಿದೆ. ಮಹಾರಾಷ್ಟದಲ್ಲಿರುವುದು ಸಮ್ಮಿಶ್ರ ಸರಕಾರ. ಪಾರ್ಟಿ ಯಾವುದೇ ಇರಲಿ ಭ್ರಷ್ಟಾಚಾರ ಮತ್ತು ಲಂಚಗುಳಿತನದ ವಿಚಾರಕ್ಕೆ ಬಂದಾಗ ಎಲ್ಲೂ ಸಮಾನತೆ ಇದೆ. 2014ರ ಚುನಾವಣೆಯ ವೇಳೆ ಮೋದಿ ಯವರು ತಮ್ಮ ಭೀಷಣ ಭಾಷಣಗಳಲ್ಲಿ ಹೇಳುತ್ತಿದ್ದ ಲಂಚಾವ ತಾರದ ವಿರುದ್ಧದ ಧರ್ಮಯುದ್ಧದ ಮಾತುಗಳೇ ಅವರಿಗೆ ಗೆಲುವನ್ನು ತಂದುಕೊಡಲು ಕಾರಣವಾಗಿದ್ದು ಎಂಬುದನ್ನು ಮರೆಯುವಂತಿಲ್ಲ.
2014ರ ಚುನಾವಣಾ ಸ್ಲೋಗನ್ ‘ಭ್ರಷ್ಟಾಚಾರ ಅತಿಯಾಯಿತು – ಈ ಬಾರಿ ಮೋದಿ ಸರಕಾರ (ಬಹುತ್ ಹುವಾ ಭ್ರಷ್ಟಾಚಾರ್- ಅಬ್ಕೀ ಬಾರ್ ಮೋದಿ ಸರ್ಕಾರ್)’ ಜೋರಾಗಿ ಕೇಳಿಸುತ್ತಿತ್ತು. ಅದು ನೇರವಾಗಿ ಕಾಂಗ್ರೆಸ್ ಸಂಚಾಲಿತ ಯುಪಿಎ ವಿರುದ್ಧವೇ ಧ್ವನಿಸುವಂತಿತ್ತು. ಆದರೆ ನಂತರ ಏನಾಯಿತು? ಭ್ರಷ್ಟಾಚಾರ ಕಡಿಮೆಯಾಯಿತೇ? ಇದು ಪರಾಮರ್ಶೆ ಆಗಬೇಕಾಗಿರುವ ಸಂಗತಿ. ಜನವರಿಯಲ್ಲಿ ಪ್ರಕಟಗೊಂಡ ಅಂತಾರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ ಭ್ರಷ್ಟಾಚಾರದ ಸೂಚ್ಯಂಕದಲ್ಲಿ 86ನೇ ರ‍್ಯಾಂಕ್ ಪಡೆಯುವ ಮೂಲಕ ಹಿಂದಿನ ಬಾರಿಗಿಂತ ಕೊಂಚ ಸುಧಾರಿಸಿಕೊಂಡಿದೆ. ಏಕೆಂದರೆ 2013ರ ಸೂಚ್ಯಂಕದಲ್ಲಿ ಅದು 94ನೇ ಸ್ಥಾನದಲ್ಲಿತ್ತು.
ಜಾಗತಿಕವಾಗಿ ಲಂಚಗುಳಿತನದ ಅಪಾಯದ ಸೂಚ್ಯಂಕದಲ್ಲಿ 2014ರಲ್ಲಿ 185 ನೇ ಸ್ಥಾನದಲ್ಲಿದ್ದರೆ 2020ರಲ್ಲಿ ಅದು 77ನೇ ಸ್ಥಾನಕ್ಕೆ ಬಂದು ನಿಂತಿದೆ. ಅಷ್ಟರ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳಬೇಕು. ಸರಕಾರಿ ಮಟ್ಟದಲ್ಲಿ ವಿವೇಚನಾಽಕಾರದ ಹೆಸರಿನಲ್ಲಿ ಆಗುತ್ತಿದ್ದ ಭ್ರಷ್ಟಾಚಾರವನ್ನು ಡಿಜಿಟಲೀಕರಣ ಮತ್ತು ತಂತ್ರಜ್ಞಾನದ ನೆರವಿ ನಿಂದ ಸ್ವಲ್ಪಮಟ್ಟಿಗೆ ಹತ್ತಿಕ್ಕುವುದು ಸಾಧ್ಯವಾಗಿದೆ. ಮೋದಿಯವರ ಪ್ರಕಾರ, ಈ ಹಿಂದಿನ ಯುಪಿಎ ಆಡಳಿತದ ವೇಳೆ ಆಗಿದ್ದ ಭ್ರಷ್ಟಾಚಾರದ ಹಗರಣಗಳಂತೆ ನಂತರದ ವರುಷಗಳಲ್ಲಿ ಯಾವ ಹಗರಣವೂ ಬೆಳಕಿಗೆ ಬಂದಿಲ್ಲ.
ಯುಪಿಎ ಸರಕಾರ ಹಲವು ರಾಜಕೀಯ ಪಕ್ಷಗಳ ಖಿಚಡಿ ಆಗಿದ್ದ ಕಾರಣದಿಂದ ಹಲವಾರು ವಿಚಾರಗಳಲ್ಲಿ ರಾಜಿಮಾಡಿಕೊಳ್ಳಬೇಕಿತ್ತು. ಹಾಗಾಗಿ
ಭ್ರಷ್ಟಾಚಾರ ವ್ಯಾಪಕವಾಯಿತು ಎಂಬುದು ಕೂಡ ಅಷ್ಟೇ ಸತ್ಯ. ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಹಗರಣಗಳನ್ನು ಪತ್ತೆಹಚ್ಚಿ ಬಹಿರಂಗಗೊಳಿಸುವ ಕಾವಲುಗಾರನಾಗಿ ಕೆಲಸ ಮಾಡಬೇಕಾದ ಸಂಸ್ಥೆಗಳಿಗೆ ಸ್ವಾಯುತ್ತತೆ ಮತ್ತು ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕಾಗಿರುವುದು ಕೂಡ ಅಷ್ಟೇ ಮುಖ್ಯ.
ಪ್ರಬಲ ರಾಜಕೀಯ ಪಕ್ಷದ ಆಡಳಿತದಲ್ಲಿ ನೀತಿನಿರೂಪಣೆಗಳ ಕುರಿತಾದ ಸಂಗತಿಗಳ ಪಾರದರ್ಶಕತೆಯನ್ನು ಮರೆಮಾಚುವ ಯತ್ನಗಳಾಗುತ್ತಿವೆ ಮತ್ತು ಇದು ಸಾಂಸ್ಥಿಕವಾದ ಸೋಲು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮಾಹಿತಿಹಕ್ಕು ಕಾಯಿದೆ ಅಡಿ ಕೆಲವೇ ಕೆಲವು ತಕರಾರುಗಳಿಗೆ ಸಶಕ್ತ ಉತ್ತರ
ಸಿಗುತ್ತಿದೆ. ಕಂಟ್ರೋಲರ್ ಎಂಡ್ ಅಡಿಟರ್ ಜನರಲ್ (ಸಿಎಜಿ) ವರದಿಗಳು ಇಂದು ಬಹುಚರ್ಚಿತ ಸಂಗತಿಗಳಾಗಿ ಉಳಿದಿಲ್ಲ. ಇದೆಲ್ಲದರ ನಡುವೆ ಬಹು ಚರ್ಚಿತ ಲೋಕಪಾಲ್ ಇನ್ನೂ ಕಾರ್ಯಾರಂಭ ಮಾಡಿಲ್ಲ. ಒಂದೊಮ್ಮೆ ಮಾಧ್ಯಮ ವಾಹಿನಿಗಳು ಯಾವುದಾದರೂ ಪ್ರಕರಣವನ್ನು ತನಿಖೆಗೆತ್ತಿ
ಕೊಂಡಲ್ಲಿ ಅದಕ್ಕೆ ಸಶಕ್ತ ಬೆಂಬಲವೇ ಸಿಗುತ್ತಿಲ್ಲ.
ರಾಜಕೀಯ ಪಕ್ಷಗಳಿಗೆ ಫಂಡಿಂಗ್ ಮಾಡುವ ವಿಚಾರದಲ್ಲಿ ನಿಯಂತ್ರಣವೇ ಇಲ್ಲದ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಕುರಿತಾದ ವಿವಾದ ಹಾಗೆಯೇ ಇದೆ. 2019-20ರ ಅಂಕಿ- ಅಂಶಗಳ ಪ್ರಕಾರ ಒಟ್ಟಾರೆಯಾಗಿ ರಾಜಕೀಯ ಪಕ್ಷಗಳು ಪಡೆದುಕೊಂಡ 3249 ಕೋಟಿ ರೂಪಾಯಿಗಳ ಫಂಡ್‌ನಲ್ಲಿ ಬಿಜೆಪಿಯದ್ದೇ ಸಿಂಹಪಾಲು. ಅದು 2606 ಕೋಟಿ ಫಂಡ್ ಪಡೆದುಕೊಂಡಿದೆ. ಅಂದರೆ ಒಟ್ಟು ಸಂಗ್ರಹಿತ ನಿಧಿಯ ಶೇ.75 ಬಿಜೆಪಿ ಬುಟ್ಟಿಗೆ ಬಿದ್ದಿದೆ. ಇಂತಹ ವ್ಯವಸ್ಥೆ ಸಂಪೂರ್ಣ ಅಪಾರ ದರ್ಶಕವಾಗಿದ್ದು, ರಾಜಕೀಯ ಪಕ್ಷಗಳಿಗೆ ಮಾತ್ರ ಹಣಕಾಸಿನ ಆವಕದ ಸಂಪೂರ್ಣ ಮಾಹಿತಿ ಸಿಗುವಂತಾಗಿದೆ. ಇದರಿಂದ
ರಾಜಕೀಯ ಪಕ್ಷಗಳ ನಡುವಣ ನೈಚ್ಛಾನು ಸಂಧಾನದ ಬಗ್ಗೆ ಜನರಲ್ಲಿ ಅನುಮಾನ ಮೂಡುವಂತಾಗಿದೆ.
ಸುಪ್ರೀಂ ಕೋರ್ಟ್ ಕೂಡ ಎಲೆಕ್ಟೋರಲ್ ಬಾಂಡ್ ವಿಚಾರ ವನ್ನು ಮುಂದೂಡುತ್ತಲೇ ಬಂದಿದೆ. ಇಂತಹ ವಿಚಾರಗಳಲ್ಲಿ ಸರಕಾರಕ್ಕೆ ಎಚ್ಚರಿಕೆಯ
ಗಂಟೆಯನ್ನು ಕೊಟ್ಟು ಬಡಿದೆಬ್ಬಿಸ ಬೇಕಾಗಿದ್ದ ಸಂಸ್ಥೆಗಳು ಕೂಡ ಹೇಗೆ ಸಾಂವಿಧಾನಿಕ ಕರ್ತವ್ಯ ದಿಂದ ವಿಮುಖವಾಗಿವೆ ಎಂಬುದನ್ನು ವಿಷಾದ ದಿಂದಲೇ ಉಲ್ಲೇಖಿಸಬೇಕಾಗಿದೆ. ಚುನಾವಣೆಗಳು ನಡೆಯುವುದು ಪ್ರಜಾತಾಂತ್ರಿಕ ವ್ಯವಸ್ಥೆಯ ಅಡಿಯಲ್ಲಿ.
ಅಧಿಕಾರದ ಯಂತ್ರ ನಡೆಯಬೇಕಾದರೆ ಬಹಳ ಪ್ರಮುಖವಾಗಿ ಬೇಕಿರುವ ದುಬಾರಿ ತೈಲ ಝಣಝಣ ಕಾಂಚಾಣ. ಗ್ರಾಮಪಂಚಾಯತ್‌ನಿಂದ ದಲ್ಗೊಂಡು ಸಂಸತ್ ಚುನಾವಣೆಯವರೆಗೆ ಎಲ್ಲಿಯೂ ಅಪಾರ ಹಣದ ಹರಿವು ಇದ್ದೇ ಇದೆ. ದೊಡ್ಡ ರಾಜಕೀಯ ಪಕ್ಷಗಳು ಕಾರ್ಪೊರೇಟ್ ಕುಳಗಳಿಂದ ರಾಜಕೀಯ ಫಂಡುಗಳನ್ನು ಪಡೆದರೆ ಕೆಳಹಂತದ ರಾಜಕೀಯಕ್ಕೆ ಫಂಡಿಂಗ್ ಮಾಡುವ ಸ್ಥಳೀಯ ಸಿಂಡಿಕೇಟ್ ಇದ್ದೇ ಇರುತ್ತದೆ. ಕೇಂದ್ರೀಕೃತವಾದ ಅಧಿಕಾರದ ಚುಕ್ಕಾಣಿ ಒಂದು ಕಡೆಯಾದರೆ, ವಿಕೇಂದ್ರೀಕೃತ ಭ್ರಷ್ಟಾಚಾರ ವ್ಯವಸ್ಥೆ ಸಮಾನಾಂತರವಾಗಿ ಕೆಲಸ ಮಾಡುತ್ತಲೇ ಇದೆ. ಲಂಚಗುಳಿತನದ ಪರಿಪ್ರಮಾಣ ಬೇರೆಬೇರೆಯಾಗಿರಬಹುದು. ಆದರೆ ವ್ಯವಹಾರ ಕುದುರಿಸುವ ಕಲೆ ಮಾತ್ರ ರಾಜಕೀಯ ಮತ್ತು ಅಧಿಕಾರಶಾಹಿ ವರ್ಗದಲ್ಲಿ ಅಂತರ್ಗತವಾಗಿ ಹಾಸುಹೊಕ್ಕಾಗಿ ಬೇರುಬಿಟ್ಟಿದೆ.
ಇದೀಗ ಎನ್‌ಡಿಎ ಉದ್ಘೋಷಿಸುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೇಳಿಕೆಗಳು ಕೇವಲ ಚುನಾವಣಾ ಕಾಲಕ್ಕೆ ಸೀಮಿತವಾಗಿದ್ದು ಅದಕ್ಕೆ ಯಾವ ತಳಹದಿಯೂ ಇಲ್ಲ ಎಂಬುದು ಗೋಚರವಾಗುತ್ತಿದೆ. ತಮ್ಮ ಸಾರ್ವಜನಿಕ ಹುದ್ದೆಗಳ ದುರು ಪಯೋಗ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಬಿಜೆಪಿ ಆಡಳಿ
ತವೇ ಇರುವ ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ? ಈಗ ಆಗುತ್ತಿರುವ ಉಪಕ್ರಮಗಳನ್ನು ಗಮನಿಸಿದರೆ, ಕೇಂದ್ರದ ಜಾರಿ ನಿರ್ದೇಶನ ಸಂಸ್ಥೆಗಳು ಇರುವುದು ಕೇವಲ ವಿರೋಧಪಕ್ಷಗಳ ರಾಜಕಾರಣಿಗಳನ್ನು ಮಾತ್ರ ಮಟ್ಟಹಾಕಲು ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಮೂಡುವುದಿಲ್ಲವೇ? ಈ ಹಿಂದಿನ ಆಡಳಿತ ಪಕ್ಷಗಳ ಪಾಪಕರ್ಮಗಳನ್ನು ನಿಂದಿಸುತ್ತ ಎಷ್ಟು ದಿನ ಲೊಚಗುಟ್ಟುವಿರಿ? ಕರ್ನಾಟಕದ ಗುತ್ತಿಗೆದಾರರ ಹೇಳಿಕೆಯ ಪ್ರಕಾರ ಈ ಹಿಂದಿನ ಜೆಡಿಎಸ್ ಸರಕಾರದಲ್ಲಿ ಪರ್ಸೆಂಟೇಜ್ ಪ್ರಮಾಣ ಶೇ.೧೦ರಷ್ಟು ಇದ್ದರೆ ಈಗ ಅದು ಶೇ.30ಕ್ಕೆ ಏರಿಕೆಯಾಗಿದೆಯಂತೆ.
ಹಾಗಿದ್ದರೆ ಭ್ರಷ್ಟಾಚಾರದ ಕಥೆ ಎಲ್ಲಿಗೆ ತಲುಪಿದೆ. ಹಣದುಬ್ಬರದ ಜತೆಗೆ ಅದೂ ಏರಿಕೆ ಕಂಡಿದೆಯೇ?
ಕೊನೆಯ ಮಾತು: ಕಳೆದ ತಿಂಗಳು ನಾನು ಮೇಘಾಲಯದ ರಾಜ್ಯಪಾಲ ಮತ್ತು ಸತ್ಯನಿಷ್ಠುರ ವ್ಯಕ್ತಿ ಸತ್ಯಪಾಲ ಮಲಿಕ್‌ರ ಸಂದರ್ಶನ ಮಾಡಿದ್ದೆ. ಅವರು ಈ ಹಿಂದೆ ಗೋವಾ ರಾಜ್ಯಪಾಲರಾಗಿದ್ದ ಸಮಯದಲ್ಲಿ ಅಲ್ಲಿನ ಬಿಜೆಪಿ ಸರಕಾರ ಕೋವಿಡ್-19 ಪರಿಹಾರಕ್ರಮದಲ್ಲಿ ಸಾಕಷ್ಟು ಭ್ರಷ್ಟಾಚಾರ ದಲ್ಲಿ ತೊಡಗಿತ್ತು ಎಂದು ಹೇಳುತ್ತ ಅದನ್ನವರು ಪ್ರಧಾನ ಮಂತ್ರಿಗಳ ಗಮನಕ್ಕೂ ತಂದಿದ್ದಾಗಿ ನನಗೆ ತಿಳಿಸಿದರು. ಮುಂದೇನಾಯಿತು, ಎಂದು ನಾನು ಪ್ರಶ್ನಿಸಿದೆ. ಅದಕ್ಕವರು ನನ್ನನ್ನು ಅಲ್ಲಿಂದ ಕಿತ್ತು ಶಿಂಗ್‌ಗೆ ಹಾಕಿದರು ಎಂದು ನಿರ್ಭಾವುಕರಾಗಿ ಹೇಳಿ ನಿಟ್ಟುಸಿರು ಬಿಟ್ಟರು.