Monday, 16th September 2024

ರೈತ ಮುಖಂಡನಿಂದ ಹೊಸ ರಾಜಕೀಯ ಪಕ್ಷ ಆರಂಭ

#Punjab

ಚಂಡೀಗಢ: ರೈತ ಮುಖಂಡ ಗುರ್ನಾಮ್ ಸಿಂಗ್ ಚದುನಿ ಹೊಸ ರಾಜಕೀಯ ಪಕ್ಷ ಆರಂಭಿಸಿದ್ದಾರೆ. ಹೆಸರು ಸಂಯುಕ್ತ ಸಂಘರ್ಷ ಪಕ್ಷವಾಗಿದ್ದು ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿಕೊಂಡಿದ್ದಾರೆ.

ಚದುನಿಯವರು ಸಂಯುಕ್ತ ಕಿಸಾನ್ ಮೋರ್ಚದ ಸದಸ್ಯರಾಗಿದ್ದು ಅದು 40 ರೈತ ಸಂಘಟನೆಗಳ ಶಾಖೆಯಾಗಿದೆ. ಇದರ ನೇತೃತ್ವದಲ್ಲಿ ದೆಹಲಿ ಗಡಿಭಾಗ ದಲ್ಲಿ ಕಳೆದ ಒಂದು ವರ್ಷ ಕೇಂದ್ರ ಸರ್ಕಾರದ ತಿದ್ದುಪಡಿ ರೈತ ಮಸೂದೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು.

ನಾವು ಸಯುಕ್ತ ಸಂಘರ್ಷ ಪಕ್ಷವನ್ನು ಆರಂಭಿಸುತ್ತಿದ್ದೇವೆ. ಪಂಜಾಬ್ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಗುರ್ನಾಮ್ ಸಿಂಗ್ ಚದುನಿ ಹೇಳಿದರು.

ತಮ್ಮ ಪಕ್ಷ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರಯ ತ್ನಿಸುತ್ತದೆ ಎಂದರು. ಮಿಷನ್ ಪಂಜಾಬ್ ಬಗ್ಗೆ ಮಾತನಾಡಿ, ರೈತ ಸಂಘಟನೆ ಗಳನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿದ್ದಾರೆ.