Sunday, 15th December 2024

ಮತಾಂತರದ ನಿಚ್ಚಳಾರ್ಥವನ್ನು ಎಚ್ಚರಿಸಿದ್ದರು !

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ಒಬ್ಬ ವ್ಯಕ್ತಿಯ ಧರ್ಮಬೋಧನೆಯಿಂದ, ಸ್ವಾಮಿ ವಿವೇಕಾನಂದರ ಪ್ರಕಾರ- ಒಬ್ಬ ಹಿಂದೂ ಉತ್ತಮ ಹಿಂದೂ ಆಗಬೇಕು. ಒಬ್ಬ ಮುಸ್ಲಿಂ ಉತ್ತಮ ಮುಸ್ಲಿಂ ಆಗಬೇಕು. ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು. ಇದರರ್ಥ ಒಬ್ಬ ಉತ್ತಮ ಮನುಷ್ಯ ಆಗಬೇಕು. ಗಾಂಧಿ ಹೇಳಿದ್ದೂ ಇದೇ.

ಒಬ್ಬ ಹಿಂದೂ ಮತಾಂತರ ಹೊಂದಿದರೆ ಹಿಂದುಗಳಲ್ಲಿ ಒಬ್ಬ ಕಡಿಮೆ ಆಗುವುದು ಮಾತ್ರವಲ್ಲ, ಹಿಂದೂ ಧರ್ಮದ ಒಬ್ಬ ಶತ್ರು ಹೆಚ್ಚಾಗುತ್ತಾನೆ- For
every convert that is lost, it is not just one lost, but one enemy more- (swami vivekaananda). ಕಾಶ್ಮೀರದ ಮುಸ್ಲಿಮರೆಲ್ಲ ಒಂದು ಕಾಲಕ್ಕೆ ಹಿಂದೂಗಳೇ-ಅವರು ಅರೇಬಿಯಾದ ಮುಸ್ಲಿಮರಿಗಿಂತ ಹೆಚ್ಚು ಹಿಂದೂ ದ್ವೇಷಿಗಳಾಗಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎನ್ನುತ್ತಾರೆ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು.

ಮತಾಂತರದ ಮನೆಹಾಳಿನ ನಿವ್ವಳಾರ್ಥದ ಬಗ್ಗೆ ಪುಟಗಟ್ಟಳೆ ಅವರು ಬರೆದವರು. ಮತಾಂತರ-ಒಳ, ಹೊರ ಆಯಾಮಗಳು ಎಂಬ ಪುಸ್ತಕವನ್ನೇ ಬರೆದರು. ಅದರಲ್ಲಿ ಅವರು ಆಡಿದ ಮಾತೊಂದು ಹೀಗಿದೆ: ಭಾರತವು ಕೋಮು ಯುದ್ಧದಲ್ಲಿ ಸಾಯಲೆಂದು ದೇವರಿಗೆ ಇಷ್ಟವಿಲ್ಲ ಎಂದು ನಾನು ನಂಬುತ್ತೇನೆ. ಅದರ ಬದುಕು ಹಿಂದೂ ಸದೃಢತೆ, ಹಿಂದೂ ವ್ಯಾಪ್ತಿ, ಹಿಂದೂ ಧರ್ಮದ ಎಲ್ಲವನ್ನೂ ಒಳಗೊಳ್ಳುವ ಪ್ರೇಮ ಬಾಹುಶಕ್ತಿಯಲ್ಲೇ ಇದೆ. ಅದು ರಾಷ್ಟ್ರದ ಬೆನ್ನೆಲುಬು, ಅದರ ಚಾಲಕ ಶಕ್ತಿ, ರಕ್ತ, ಮಾಂಸ, ಮೆದುಳು. ಆಮೇಲೆ ಬಂದ ಮತಗಳು ಸೊಸೆ ಯಂತೆ ಬಾಳಲು ಇನ್ನೂ ಕಲಿತಿಲ್ಲ.

ನಮ್ಮ ಮುಖಂಡರು ಹಾಗೆ ಬೆರೆಯಲು ಬಿಡುತ್ತಿಲ್ಲ. ಮನೆ ಒಡೆಯುವ ಕೆಲಸ ಮಾಡುತ್ತಿ ದ್ದಾರೆ. ಸೊಸೆ, ಬೀದಿಯವರನ್ನೆಲ್ಲ ಅತ್ತೆಯ ಮೇಲೆ ಎತ್ತಿ ಕಟ್ಟುವ ರಂಪದ ಕೆಲಸಕ್ಕೆ ಕೈ ಹಾಕಿದರೆ ಹೋಗುವುದು ಕುಟುಂಬದ ಮಾನವಷ್ಟೆ? ಹೊಂದದ ಸೊಸೆ ಓಡಿಯೂ ಹೋದಾಳು, ಗಂಡನನ್ನೂ ಕೊಂದಾಳು, ವಿಚ್ಛೇದನ ಮಾಡಿ
ಯಾಳು. ಅದು ಅವಳ ಚಾಳಿ. ಕ್ರೈಸ್ತ, ಮುಸಲ್ಮಾನರು ಬಲಿತ ಯಾವ ನಾಡಿ ನಲ್ಲೂ ಯಾವ ಧರ್ಮವನ್ನೂ ಇವರು ಉಳಿಸಿಲ್ಲ. ಅವರ ಚರಿತ್ರೆಯೇ ಹಿಂಸಾಕಾಂಡ, ಹತ್ಯಾಕಾಂಡ.

ಇದೆಲ್ಲ ವಿಶ್ವಪ್ರಸಿದ್ಧ. ಹಿಂದೂಗಳನ್ನು ಮುಸಲ್ಮಾನ, ಕ್ರೈಸ್ತರು ಸುಳ್ಳು ಆಮಿಷಗಳಿಂದ ಮತಾಂತರಿಸಿದರೆ ತಪ್ಪಲ್ಲ, ಅದನ್ನು ಪ್ರತಿಭಟಿಸುವುದು, ಪ್ರತೀಕಾರ ಮಾಡುವುದು, ಸ್ವಸಮುದಾಯವನ್ನು ಹಿಂದೂಗಳು ಮಾತ್ರ ರಕ್ಷಿಸಿಕೊಳ್ಳುವುದೇ ತಪ್ಪು ಎಂದು ಬಾಯಿ ಬಾಯಿ ಬಡ ಕೊಂಡು ಗಂಟಲು ನರ ಕಿತ್ತು ಹೋಗುವಷ್ಟು ಕೂಗಿಕೊಳ್ಳುವವರಿಗೆ, ಬುದ್ಧಿಹೀನರಿಗೆ, ದೇಶ ಭವಿಷ್ಯದ ಪ್ರeಯಿಲ್ಲದವರಿಗೆ, ಅಧಿಕಾರದ ಪರಮ ಲಾಲಸೆಯಿರುವವ ರಿಗೆ ಮತಾಂತರ ನಿಷೇಧ ಕಾಯ್ದೆ ಸಹಿಸೀತೆ? ಆದೀತೆ? ಒಗ್ಗೀತೆ? ಭಾವಕ್ಕಷ್ಟೇ ಬಡತನವಲ್ಲ, ಬುದ್ಧಿಗೂ ಬಡತನ ವಕ್ಕರಿ ಸಿಕೊಂಡರೆ ಎಂಥಾ ಅಭಿವ್ಯಕ್ತಿ ಅಭಿರುಚಿ ಹುಟ್ಟೀತು? ಕಂಡೀತು? ದಲಿತರು ಸಾಮೂಹಿಕವಾಗಿ ಮತಾಂತರಗೊಳ್ಳಬೇಕೆಂದು ಅಂಬೇಡ್ಕರರು ಕರೆಕೊಟ್ಟಾಗ ಗಾಂಧಿ ಹೇಳಿದ್ದಿದು: ಧರ್ಮವೆಂಬುದು ಮನೆ ಯಂತೆಯೋ, ಬಟ್ಟೆಯಂತೆಯೋ, ಇಷ್ಟ ಬಂದಂತೆ ಬದಲಾಯಿಸುವ ಪದಾರ್ಥವಲ್ಲ!

ಅದು ಮನುಷ್ಯ ನಿಗೂ ದೇವರಿಗೂ ಇರುವ ವೈಯಕ್ತಿಕ ನಂಟಿನ ಸಂಬಂಧವುಳ್ಳದ್ದು. ಶರೀರ ಹೋದರೂ ಉಳಿಯುವುದು ಈ ಧರ್ಮ. ಮತಾಂತರದ ಒಟ್ಟೂ ನಿವ್ವಳಾರ್ಥದ ಬಗ್ಗೆ ಆಚಾರ್ಯರು ಬಿಡಿಸಿ ಹೇಳಿದ್ದಿದು: ಇದು ಈಗ ಸಮಾಜಾಂತರ, ದೇಶಾಂತರ,ಶ್ರದ್ಧಾಂತರ, ರಾಷ್ಟ್ರಂತರ, ಕುಟುಂಬಾಂತರವಾಗಿ ಬಿಡುತ್ತದೆ.
ಮತಾಂತರ ಬರೀ ಸೋಗು! ಮಿಷನರಿಗಳು, ಮತಾಂತರಿಗೆ ಮಿಷನರಿಗಳು, ಮತಾಂತರಿಗೆ ಅವನ ಪೂರ್ವಸಮಾಜ, ಅದರ ದೇವರು, ಪೂರ್ವಜರು, ದೇಶನಿಷ್ಠೆ, ರಾಷ್ಟ್ರೀಯತೆ, ಸೋದ ರರು, ಕುಟುಂಬದವರು, ಕುಲಬಾಂಧವರು- ಎಲ್ಲ ರನ್ನೂ ದ್ವೇಷಿಸುವಂತೆ ಬೋಧಿಸುತ್ತಾರೆ.

ಹುಬ್ಬಳ್ಳಿ ರೈಲ್ವೆ ಕಾಲೊನಿಯಲ್ಲಿ ನಾನು ಇದನ್ನೆಲ್ಲ ಕೇಳಿದ್ದೇನೆ. ಖುದ್ದಾಗಿ! ಅಂದರೆ ಸಂವಿಧಾನದಡಿ ಇದು ಶಿಕ್ಷಾರ್ಹ ಅಪರಾಧ, ದ್ವೇಷ ಬೋಧನೆ. ಒಂದು ಸಮಾಜವನ್ನು ಇನ್ನೊಂದರ ಮೇಲೆ ಎತ್ತಿ ಕಟ್ಟುವುದು,  ಗಾಲ್ಯಾಂಡು, ಅಸ್ಸಾಂ, ತ್ರಿಪುರಾ, ಮಿಝೋರಾಂ, ಓರಿಸ್ಸಾ, ಮಧ್ಯ ಪ್ರದೇಶಾದಿಗಳಲ್ಲಿ ಇಂದೂ ನಡೆಯು ತ್ತಿರುವುದೇ ಈ ದ್ವೇಷಪ್ರಚಾರ! ಆದರೆ ಮತಾಂತರಗೊಳ್ಳುವವನಿಗೆ ಇದು ಬಹಳ ತಿಳಿಯು ವುದಿಲ್ಲ! ಅವನಿಗೆ ತಿಳಿಯುವುದು ಹಣ. ಒಂದು ತಲೆ ಪರಿವ
ರ್ತಿತವಾಗಬೇಕಾದರೆ ಆರ್ಚ್ ಬಿಷಪ್, ಕಾರ್ಡಿನಲ್, ಪಾದ್ರಿ, ಆ ಬೇರೊಂದು ಸಮಾಜದ ತಲೆಹಿಡುಕ ಏಜೆಂಟು, ಮುದ್ರೆ ಯೊತ್ತುವ ಚರ್ಚಿನ ಅಽಕಾರಿಗಳು, ಗ್ರಾಮದ ಸಹಾಯಕರು- ಇವರೆಲ್ಲರ ನಡುವೆ ಎಷ್ಟೊಂದು ಕೋಟಿ ಯೂ ಖರ್ಚಾಗುತ್ತದೆ ಎಂಬುದನ್ನು ಹಿಂದೂ ವಾಯ್ಸ್ ಪತ್ರಿಕೆಯ ಶ್ರೀ ದೈವಮುತ್ತು ಲೆಕ್ಕ ಮಾಡಿಬಿಟ್ಟಿದ್ದನ್ನು ಆಚಾ ರ್ಯರು ಬರೆಯುತ್ತಾರೆ.

ಮುಸ್ಲಿಮರ ತಂತ್ರವೂ ಹೀಗೆಯೇ! ಮರಳಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದು. ಅನಾಥ, ಕ್ರೈಸ್ತ ಪರಿವರ್ತಿತ ಬಂಧುಗಳೇ! ನೀವು ಬೈಬಲ್
ಓದಿದ್ದೀರಾ? ನನ್ನನ್ನು ನಂಬದವರು ಒಣಗಿದ ಕಟ್ಟಿಗೆ ತುಂಡುಗಳಂತೆ. ಅವರನ್ನು ಹಿಡಿದು ಸುಟ್ಟು ಬಿಡಿ ಎಂದು ಕ್ರೈಸ್ತ ಮಹಾಶಯನು ಬೋಧಿಸಿದ್ದು ನ್ಯೂ ಟೆಸ್ಟ್ ಮೆಂಟಿನಲ್ಲಿ ಇದ್ದು, ಅದಲ್ಲವೇ ಕ್ರೈಸ್ತೇತರರನ್ನು ಸಾಮೂಹಿಕ ಇನ್ ಕ್ವೆಸಿಷನ್ ಹೆಸರಲ್ಲಿ ಸುಡಲು ಕ್ರೈಸ್ತಮತ ಮುಖಂಡರಿಗೆ ಪ್ರೇರಣೆ ಇತ್ತದ್ದು? ಅದರಿಂದಲ್ಲವೆ ಭಾರತದಲ್ಲೂ ಗೋವೆಯಲ್ಲಿ ಬರೀ ಎರಡು-ಮೂರು ನೂರು ವರ್ಷಗಳ ಹಿಂದೆ ಸಂತ ಕ್ಸೇವಿಯರನು ಸಾವಿರಾರು ಜನರನ್ನು ಸುಟ್ಟದ್ದು? ಗೋವಾಸ್
ಇನ್ ಕ್ವೆಸಿಷನ್ ಎಂಬ ಪ್ರೊ.ಪ್ರಿಯೋಳ್ಕರರ ಪುಸ್ತಕ ಓದಿದ್ದೀರಾ? ನಿಮ್ಮ ಪರಿವರ್ತಕರು, ನಿಮ್ಮ ಭೂಮಿಯನ್ನು ಕಸಿದು, ಅಲ್ಲೇ ಪ್ರಾರ್ಥನಾ ಮಂದಿರ, ಸ್ಮಶಾನಗಳನ್ನು ನಿರ್ಮಿಸಿ, ಸತ್ತವರೂ ಆಕ್ರಮಣಕಾರರಾಗಲು ಕಾರಣರಾಗಿದ್ದೇ ಅಲ್ಲವೇ ಓರಿಸ್ಸಾದಲ್ಲಿ, ಹಿಂದೆ ಮಧ್ಯಪ್ರದೇಶದ ಝಬುವಾದಲ್ಲಿ, ಬೇರೆಡೆ ಹಿಂದೂ-ಕ್ರೈಸ್ತ ಗಲಭೆಗೆ ಕಾರಣಗಳಾದದ್ದು? ಗಲಭೆಗೆ ಕಾರಣ ಯಾರು? ನಿಮ್ಮ ಬುದ್ಧಿಗೇಡಿತನ ಅಲ್ಲವೆ? ಎಂದು ಆಚಾರ್ಯರು ಕೇಳುತ್ತಾರೆ.

ಆಚಾರ್ಯರ ಮಾತಿನ ಒಟ್ಟೂ ನಿವ್ವಳಾರ್ಥವನ್ನು ಯಾವ ಸಂದರ್ಭ-ಸನ್ನಿವೇಶದಲ್ಲಿ ಅಂದು ಅವರು ಬರೆದರೋ ಅದನ್ನೇ (ದುರಂತವೇನೆಂದರೆ, ಇಂದೂ ಅದೇ ಸ್ಥಿತಿಯಲ್ಲಿ ಹಿಂದೂ ಸಮಾಜವಿದೆ) ಹೇಳುವುದಾದರೆ, ಈಗ ನಡೆಯುತ್ತಿರುವುದು ಹಿಂದೂ ಸಮಾಜನಾಶದ, ಆ ಮೂಲಕ ಭಾರತದ ಮೂಲಸ್ವರೂಪದ ಬುಡಮೇಲು ಉದ್ದೇಶ್ಯದ ರಾಷ್ಟ್ರ ದ್ರೋಹವೇ ಹೊರತು, ಐಚ್ಛಿಕ ಮತಾಂತರವಲ್ಲ. ಅಷ್ಟಕ್ಕೂ ಒಬ್ಬ ವ್ಯಕ್ತಿ ಒಂದು ಮತದಿಂದ ಮತ್ತೊಂದು ಮತಕ್ಕೆ ಬದಲಾದ ತಕ್ಷಣ ವ್ಯಕ್ತಿಯ ಗುಣಸ್ವಭಾವದಲ್ಲಿ ಆಗುವ ಅಂಥಾ ಪರಿಯ ಬದಲಾವಣೆಯೇನು ಎಂಬುದು ಸರಿ ಹೊತ್ತಿಗೂ ಅರ್ಥವಾಗಲೇ ಇಲ್ಲ. ಮತಾಂತರದಿಂದ ಸಮಾಜದಲ್ಲಿ ಸಂಘರ್ಷಗಳು ಉಂಟಾಗಿ ಕುಟುಂಬಗಳು ಒಡೆಯುತ್ತವೆ. ಆ ಕಾರಣದಿಂದಾಗಿಯೇ ಸುಪ್ರೀಂ ಮತಾಂತರ ಬೇಡ ಅನ್ನುತ್ತದೆ ಎಂದು ನ್ಯಾ.ಎಂ. ರಾಮಾಜೋಯಿಸರು ಬರೆದಿದ್ದಾರೆ.

ಸಂವಿಧಾನದಲ್ಲಿ- Freedom of religion ಅಂದರೆ right to propagate one’s religion ಇದರರ್ಥ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮವನ್ನು ಆಚರಿಸುವ, ಬೋಽಸುವ ಹಕ್ಕು ಇದೆಯೇ ಹೊರತು ಇನ್ನೊಬ್ಬನನ್ನು ಮತಾಂತರಿಸುವ ಹಕ್ಕು ಇಲ್ಲ. ಈ ಬಗ್ಗೆ 1977ರ ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠದ ತೀರ್ಪಿನ ಒಂದು ಭಾಗ ಹೀಗಿದೆ:(AIR 1977 Supreme Court, 998=1977. CRI L.J. 551)-(A) Constitution of India, Article 25,(1) Freedom of religion- Right to propagate one’s religion-meaning- There is not fundamental right to convert any person to one’s own religion..

ಸಂವಿಧಾನದಲ್ಲಿ ಧರ್ಮ ಬೋಧನೆಗೆ ಅವಕಾಶವಿದೆಯೇ ಹೊರತು ಮತಾಂತರಕ್ಕೆ ಅವಕಾಶವಿಲ್ಲ. ಅದೇ ತೀರ್ಪು ಹೇಳುತ್ತದೆ- ಮತಾಂತರಗಳು ಸಾಮಾಜಿಕ ವ್ಯವಸ್ಥೆಯನ್ನು ಭಂಗಗೊಳಿಸುತ್ತವೆ ಎಂದು. ಒಬ್ಬ ವ್ಯಕ್ತಿಯ ಧರ್ಮಬೋಧನೆಯಿಂದ, ಸ್ವಾಮಿ ವಿವೇಕಾನಂದರ ಮಾತಿನ ಪ್ರಕಾರ- ಒಬ್ಬ ಹಿಂದೂ ಉತ್ತಮ ಹಿಂದೂ ಆಗಬೇಕು. ಒಬ್ಬ ಮುಸ್ಲಿಂ ಉತ್ತಮ ಮುಸ್ಲಿಂ ಆಗಬೇಕು. ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು. ಇದರರ್ಥ ಒಬ್ಬ ಉತ್ತಮ ಮನುಷ್ಯ ಆಗ ಬೇಕು. ಗಾಂಧಿ ಹೇಳಿದ್ದೂ ಇದೇ.

ಕೊನೆಯ ಮಾತು: ಆಚಾರ್ಯರ ಮಾತನ್ನು ನೆನಪಿಸುತ್ತೇನೆ: ಈಶ್ವರ ಅಲ್ಲಾ ತೇರೇ ನಾಮ್, ಸಬಕೋ ಸನ್ಮತಿ ದೇ ಭಗವಾನ್- ಗಾಂಧಿಯ ಭಜನೆ ಹಿಂದೂಗಳ ಬಾಯಲ್ಲಿ ಉಳಿಯುತ್ತದೆ. ಉಳಿದವರ ಬಾಯಿಂದ? ಬಹುಶಃ ಅಸಾಧ್ಯ.