Monday, 25th November 2024

ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳಿಗೆ ರಜೆ ಕೊಡುವ ಉದ್ದೇಶವೇ ಇಲ್ಲ

ಸಂದರ್ಶನ : ಅರವಿಂದ ಬಿರಾದಾರ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ : ಬಿ.ಸಿ.ನಾಗೇಶ್

ಈ ಬಾರಿ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಅದಕ್ಕೆ ಮೊದಲು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎರಡು ಬಾರಿ ನಡೆಸಲಾಗುತ್ತದೆ. ಹಳೇ ಪದ್ಧತಿಯಂತೇ ಈ ಬಾರಿಯೂ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳನ್ನು ನಡೆಸಲಾಗುವುದು. ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದು ಹೀಗೆ. ಎಸ್ ಎಸ್‌ಎಲ್‌ಸಿ ಪಠ್ಯವನ್ನು ಶೇ.೨೦ರಷ್ಟು ಕಡಿತಗೊಳಿಸ ಲಾಗಿದೆ ಎಂದು ಹೇಳಿರುವ ಸಚಿವರು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲೆಗೆ ರಜೆ ಕೊಡುವ ಉದ್ದೇಶ
ಇಲ್ಲ ಎಂದಿರುವ ಸಚಿವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸೇರಿದಂತೆ ವಿವಿಧ ವಿಚಾರಗಳನ್ನು ವಿಶ್ವವಾಣಿ ಜತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಎನ್‌ಇಪಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆಯಲ್ಲ?
ಆಯಾ ಕಾಲ, ಪರಿಸ್ಥಿತಿಗೆ ತಕ್ಕಂತೆ ಎನ್‌ಇಪಿ ಜಾರಿಗೊಳಿಸಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಗಮನ ದಲ್ಲಿಟ್ಟು ಕೊಂಡು ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ರಾಜ್ಯ ಮತ್ತು ದೇಶದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸಿಗೆ ಪ್ರತಿಪಕ್ಷವಾಗಿ ಕೆಲಸ ಮಾಡಿ ಅನುಭವವಿಲ್ಲ. ಹೀಗಾಗಿ ಪ್ರತಿಪಕ್ಷ ಎಂದರೆ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವುದು ಎಂದು ತಿಳಿದುಕೊಂಡಿದ್ದಾರೆ. ಕೋವಿಡ್‌ಗೆ ಲಸಿಕೆ, ಜಿಎಸ್‌ಟಿ, ಕೃಷಿ ಕಾಯಿದೆ ಜಾರಿ ಹೀಗೆ ಎಲ್ಲ ಸಂದರ್ಭದಲ್ಲಿ ವಿರೋಧಿಸುವುದೇ ಅವರ ಕೆಲಸ. ಇಂತಹ ರೋಗಕ್ಕೆ ಔಷಧವೇ ಇಲ್ಲ.

ಎನ್‌ಇಪಿ ಕುರಿತು ಜನರಿಕೆ ಮನವರಿಕೆ ಮಾಡಿಕೊಡುವಲ್ಲಿ ಸರಕಾರ ಎಡವಿದೆಯಾ?
ಖಂಡಿತ ಇಲ್ಲ, ಕಾಂಗ್ರೆಸ್ ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ. ಅವರ ಸ್ವಭಾವವೇ ಹಾಗೆ, ಇದರಲ್ಲಿ ಖಾಸಗೀಕರಣದ ಶಬ್ದವೇ ಇಲ್ಲ, ಜತೆಗೆ ಪ್ರಾದೇಶಿಕ ಭಾಷೆಗೂ ತೊಂದರೆ ಉಂಟಾಗುವುದಿಲ್ಲ. ಮಾತೃಭಾಷೆಯ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ. ಪ್ರಾದೇಶಿಕ ಅವಶ್ಯಕತೆಗೆ ತಕ್ಕಂತೆ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ.

ಈ ವಿಚಾರದಲ್ಲಿ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಾ?
ಖಂಡಿತ. ಆದರೆ, ಅದಕ್ಕಿಂತ ಮೊದಲು ಇದನ್ನು ಅವರು ಸರಿಯಾಗಿ ಓದಿಕೊಂಡು ಬರಲಿ. ಅವರ ಸಲಹೆ, ಸೂಚನೆ ಏನೇ ಇದ್ದರೂ ಅದು ಸೂಕ್ತವಾಗಿದೆ ಎಂದಾದರೆ ಸ್ವೀಕರಿಸುತ್ತೇವೆ. ಇದು ಮಕ್ಕಳ ವೈeನಿಕ ಶಕ್ತಿಯನ್ನು ಆಚೆ ತರಲು ಸಹಾಯ ಮಾಡುತ್ತದೆ. ಇದರ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂಬುದು ನನ್ನ ಕಳಕಳಿಯ ಪ್ರಾರ್ಥನೆ.