Saturday, 23rd November 2024

ಮೇ. 31ರವರೆಗೂ ಉಚಿತ ಪಡಿತರ ವಿಸ್ತರಣೆ: ಕೇಜ್ರಿವಾಲ್

Arvind Kejrival

ನವದೆಹಲಿ: ಉಚಿತ ಪಡಿತರ ವಿತರಣೆಯನ್ನು ಮುಂದಿನ ವರ್ಷದ ಮೇ. 31ರವರೆಗೂ ವಿಸ್ತರಿಸಲು ದೆಹಲಿ ಸರ್ಕಾರ ತೀರ್ಮಾ ನಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಿಳಿಸಿದರು.

ಕರೋನಾ ವೈರಸ್ ಪ್ರಾರಂಭವಾದಾಗಿನಿಂದ ಆರಂಭಿಸಲಾದ ಉಚಿತ ಪಡಿತರ ವಿತರಣೆ ಅವಧಿ ಪೂರ್ಣಗೊಂಡಿದೆ. ಆದ್ದರಿಂದ ಇನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದೆ. ಮುಂದಿನ ವರ್ಷದ ಮೇ ತಿಂಗಳವರೆಗೂ ಮುಂದುವರೆಸಲು ಸಂಪುಟ ಸಭೆ ತೀರ್ಮಾ ನಿಸಿದೆ ಎಂದು ಕೇಜ್ರಿವಾಲ್ ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ಮತ್ತು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಫಲಾನುಭವಿಗಳಿಗೆ ದೆಹಲಿ ಸರ್ಕಾರ ಉಚಿತವಾಗಿ ಪಡಿತರ ವಿತರಿಸುತ್ತಿದೆ. ದೆಹಲಿಯಲ್ಲಿ ಸುಮಾರು 2,000 ನ್ಯಾಯ ಬೆಲೆ ಅಂಗಡಿಗಳಿದ್ದು, 17, 77 ಲಕ್ಷ ಪಡಿತರ ಕಾರ್ಡ್ ದಾರರು ಮತ್ತು ಸುಮಾರು 72. 78 ಲಕ್ಷ ಫಲಾನುಭವಿಗಳಿದ್ದಾರೆ. ಪಡಿತರ ಅಂಗಡಿಗಳ ಮೂಲಕ ಉಚಿತವಾಗಿ ಪಡಿತರ ನೀಡಲಾಗುತ್ತಿದೆ.