Thursday, 12th December 2024

ಓಶೋಗೆ ಸೆಕ್ಸ್ ಗುರು ಹಣೆಪಟ್ಟಿ ಅಸಮಂಜಸ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಓಶೋ ಜೀವನ ಲಹರಿ

ರಜನೀಶ್ ವಿಚಾರಧಾರೆ ಹಂಚಿದ ವಾಸುದೇವ್ ಮೂರ್ತಿ

ಬೆಂಗಳೂರು: ಓಶೋ ಅವರು ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸ್ವ-ವಿಮರ್ಶೆಗೊಳಪಟ್ಟ ಚಿಂತಕನಾಗಿದ್ದರೂ, ಅವರಿಗೆ ಸೆಕ್ಸ್ ಗುರು, ಕಾರ್ಪೊರೇಟ್ ಗುರು ಎಂಬ ಹಣಪಟ್ಟಿ ಕಟ್ಟಿದ್ದು ವಿಷಾಧನೀಯ ಸಂಗತಿ ಎಂದು ವಾಸುದೇವ್ ಮೂರ್ತಿ ಅಭಿಪ್ರಾಯಪಟ್ಟರು.

ವಿಶ್ವವಾಣಿ ಕ್ಲಬ್‌ಹೌಸ್‌ನ ‘ದೇವರು… ಸೆಕ್ಸ್… ಆಧ್ಯಾತ್ಮ : ಓಶೋ ಚಿಂತನೆ’ ಸಂವಾದದಲ್ಲಿ ಮಾತನಾಡಿದ ಅವರು, ಓಶೋ ಅಧ್ಯಾತ್ಮದ ಬಗ್ಗೆ ಮಾತನಾ ಡಿದಾಗ ಆಚಾರ್ಯ ರಜನೀಶ್ ಎನ್ನಲಾಯಿತು. ಧರ್ಮದ ಬಗ್ಗೆ ಮಾತನಾಡಿದಾಗ ಭಗವಾನ್ ರಜನೀಶ್ ಎನ್ನಲಾಯಿತು.

ಧರ್ಮದ ಕುರಿತು ವಿಮರ್ಶೆ ಮಾಡಲು ಶುರು ಮಾಡಿದಾಗ ಬರಿ ರಜನೀಶ್ ಎನ್ನಲಾಯಿತು. ಜೆನ್ ಪ್ರಭಾವಕ್ಕೆ ಒಳ ಗಾದ ನಂತರ ಅವರು ಓಶೋ ರಜನೀಶ್ ಆದರು. ಹೀಗೆ, ಸಮಾಜದ ಅಭಿವ್ಯಕ್ತಿಗೆ ತಕ್ಕಂತೆ ಅವರ ಪಾತ್ರ ಬದಲಾಯಿತು ಎಂದು ತಿಳಿಸಿದರು.

ಓಶೋ ಅವರ ಪರಿಚಯ ನಾವು ಮಾಡಲು ಸಾಧ್ಯವಿಲ್ಲ. ಹೀಗಾಗಿ, ಅವರ ಪ್ರವಚನದ ವಿಡಿಯೋ ಮೂಲಕವೇ ಅವರನ್ನು ಪರಿಚಯ  ಮಾಡಿ ಕೊಡುತ್ತೇನೆ. ಓಶೊ ಅವರನ್ನು ಸೆಕ್ಸ್ ಗುರು ಎನ್ನಲಾಗಿದೆ. ಹೀಗಾಗಿ, ಅವರನ್ನು ಮರು ನಿರ್ಮಾಣ ಮಾಡುವ ಅಗತ್ಯತೆ ಇದೆ. ೨೪/೭ಚಾನೆಲ್‌ಗಳು ಈಗ ಏನು ಮಾತಾಡಿದರೂ ವಿವಾದ ಮಾಡುತ್ತವೆ. ಆದರೆ, ಹಿಂದೆ ಚಾನೆಲ್ ಇಲ್ಲದಿದ್ದರೂ, ಕೆಲ ಪತ್ರಕರ್ತರು ವಿವಾದ ಹುಟ್ಟುಹಾಕು ತ್ತಿದ್ದರು.

‘ಸಂಭೋಗದಿಂದ ಸಮಾದಿಯೆಡೆಗೆ’ ಪ್ರವಚನ ಶುರು ಮಾಡಿದಾಗ ಅವರನ್ನು ‘ಸೆಕ್ಸ್ ಗುರು’ ಎಂದು ಮೂದಲಿ ಸಲಾಯಿತು. ಆಗ ಓಶೋ ಕಾಮ ನಿಗ್ರಹದಿಂದ, ಕಾಮ ವಿಶ್ಲೇಷಣೆ ಮಾಡದಿರುವ ಮುಲ್ಲಾಗಳು, ಗುರುಗಳು ಸಮಾಜದ ಈ ದುಸ್ಥಿತಿಗೆ ಕಾರಣ ಎಂದು ಪ್ರತಿಕ್ರಿಯೆ ಕೊಟ್ಟಿದ್ದರು ಎಂದು ಮೆಲುಕು ಹಾಕಿದರು.

ಸೆಕ್ಸ್ ಗುರು ಎಂದು ಸುದ್ದಿ ಮಾಡುತ್ತಿದದಂತೆ ಸಾವಿರಾರು ಸಂಖ್ಯೆಯ ಜನ ಕಾರ್ಯಕ್ರಮಗಳಿಗೆ ಬರಲಾರಂಭಿಸಿದರು. ಮೊದಲು ಸಭಾಂಗಣದಲ್ಲಿ, ಬಳಿಕ ಮೈದಾನಗಳಿಗೆ ಶಿಫ್ಟ್ ಆಯಿತು. ವಾಪಸ್ ಹೋಗುವಾಗ ಮನುಷ್ಯನ ಮಾತುಗಳನ್ನು ಹೇಗೆ ತಿರುಚಬಹುದು ಎಂದು ಮಾತನಾಡಿಕೊಂಡು ಹೋಗುತ್ತಿ
ದ್ದರಂತೆ. ಕಾರ್ಪೊರೇಟ್ ಗುರು ಎಂಬ ಅಪಪ್ರಚಾರವೂ ಇತ್ತು. ಎಲ್ಲ ಕಾರ್ಪೋರೇಟ್ ಗುರುಗಳು ರಾಜಕಾರಣಿಗಳ ಜತೆ ಉತ್ತಮ ಬಾಂಧವ್ಯ ಹೊಂದಿರು ತ್ತಾರೆ. ಆದರೆ, ಓಶೋ ಎಲ್ಲ ರಾಜಕಾರಣಿಗಳನ್ನು ವಿರೋಧಿಸಿದ್ದರು.

ಮುಕ್ತ ಕಾಮದ ಪ್ರಚೋಧನೆ ಆರೋಪ: ಓಶೋ ಅವರು ಸೆಕ್ಸ್ ಬಗ್ಗೆ ಮಾತನ್ನಾಡುತ್ತಲೇ ಮದುವೆಯನ್ನೇ ವಿರೋಧಿಸುತ್ತಾರೆ. ಕುಟುಂಬ ವ್ಯವಸ್ಥೆ ವಿರೋಧಿಸುತ್ತಾರೆ. ಕಮ್ಯುನಿಸ್ಟ್ ಚಿಂತಕ ಕಿಶನ್  ಪಟ್ನಾಯಕ್ ಇದೇ ಮಾತು ಹೇಳುತ್ತಾರೆ. ಆದರೆ, ಓಶೋ ಅವರ ವಿರುದ್ಧ ಮಾತ್ರ ಮುಕ್ತ ಕಾಮ ಪ್ರಚೋ ಧಿಸುತಾರೆ ಎಂದು ಆರೋಪವಿದೆ. ರಜನೀಶ್ ಪುರ ಎಂಬ ಜಾಗದಲ್ಲಿ ದೊಡ್ಡ ಕಾಡನ್ನು ಬೆಳೆಸುತ್ತಾರೆ. ಅಲ್ಲಿಯೇ ವಿದ್ಯುತ್ ತಯಾರಿಸುವ ಕೆಲಸ
ಮಾಡು ತ್ತಾರೆ. ಓಶೋ ಅರ್ಥಶಾಸಜ್ಞನ ಕಣ್ಣಲ್ಲಿ ಬೇರೆ ಥರ, ಪರಿಸರ ತಜ್ಞರ ಕಣ್ಣಲ್ಲಿ ಬೇರೆ ಥರ, ಹೀಗೆ, ಓಶೋ ಅವರು ಆಯಾಯ ವ್ಯಕ್ತಿ ಅವರನ್ನು ಯಾವ ಕೋನದಲ್ಲಿ ನೋಡುತ್ತಾರೆ ಹಾಗೆಯೇ ಕಾಣುತ್ತಾರೆ ಎಂದರು.

ಪೋಪ್ ನ್ಯೂಡ್ ಕ್ಲಬ್ ಕೇಳಿದ್ದು

ಪೋಪ್ ಅವರು ಅಮೆರಿಕಾ ಪ್ರವಾಸ ಮಾಡುವಾಗ ಪತ್ರಕರ್ತರ ಬಳಿ ಉಷಾರಾಗಿರುವಂತೆ ಅನೇಕರು ಸಲಹೆ ನೀಡಿದ್ದರಂತೆ. ಅಮೆರಿಕಕ್ಕೆ ಬಂದಿಳಿ ಯುತ್ತಿದ್ದಂತೆ, ಅಮೆರಿಕಾದ ನೂಡ್ ಕ್ಲಬ್‌ಗೆ ನೀವು ಹೋಗುತ್ತೀರಾ ಎಂಬ ಪ್ರಶ್ನೆ ಎದುರಾಯ್ತಂತೆ. ಅದಕ್ಕೆ ಪೋಪ್ ಜಾಣ್ಮೆಯ ಉತ್ತರ ನೀಡಲು ನಿರ್ಧರಿಸಿ, ಹೌದಾ, ಅಮೆರಿಕಾದಲ್ಲಿ ನ್ಯೂಡ್ ಕ್ಲಬ್‌ಗಳಿವೆಯೇ? ಎಂದು ಪ್ರಶ್ನಿಸಿ, ಹೆಮ್ಮೆಯಿಂದ ತೆರಳಿದರಂತೆ. ಆದರೆ, ಪತ್ರಿಕೆಗಳಲ್ಲಿ ಅಮೆರಿಕಾಗೆ ಬಂದಿಳಿಯು ತ್ತಿದ್ದಂತೆ ಪೋಪ್, ‘ನ್ಯೂಡ್ ಕ್ಲಬ್’ ಇರುವ ಜಾಗದ ಬಗ್ಗೆ ವಿಚಾರಿಸಿದರು ಎಂದು ಪ್ರಕಟವಾಗಿತ್ತು.

ಗೋಮುಖ ವ್ಯಾಘ್ರಗಳ ಬಗ್ಗೆ ಮಾತು ಕಾಂಗ್ರೆಸ್ ಮುಸ್ಲೀಮರ ಓಲೈಕೆ ಮಾಡುತ್ತಿತ್ತು. ಅದೇ ರೀತಿ ಜೆಪಿ ಅವರು ಹಿಂದೂ ಮತಗಳ ಕ್ರೋಡೀಕರಣದ ಪ್ರಯತ್ನ ಮಾಡಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಬಿರ್ಲಾ ಖಾಲಿ ಚೆಕ್ ಕೊಟ್ಟಿದ್ದರು. ಕಾರಣ ಕೇಳಿದ್ದಕ್ಕೆ ಹಿಂದೂ ಧರ್ಮ ಮತ್ತು ಗೋರಕ್ಷಣೆ ಬಗ್ಗೆ ಮಾತಾಡಬೇಕು ಎಂದು ಕಂಡೀಷನ್ ಹಾಕಿದ್ದರಂತೆ. ಆಗ ಆ ಚೆಕ್ ವಾಪಸ್ ಕೊಟ್ಟ ಓಶೋ, ನಾನು ಗೋರಕ್ಷಣೆ ಬಗ್ಗೆ ಮಾತನಾಡು ವುದಿಲ್ಲ. ಗೋಮುಖ ವ್ಯಾಘ್ರಗಳ ಬಗ್ಗೆ  ಮಾತಾಡ್ತೇನೆ ಎಂದು ಹೇಳಿದ್ದರು.

ಲಂಕೇಶ್‌ಗೆ ಓಶೋ ಬಗ್ಗೆ ಓದುವಂತೆ ತಾಕೀತು
ಓಶೋ ಭಾಷಣದ ಬಗ್ಗೆ ಲಂಕೇಶ್ ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆಯಲಾಗುತ್ತಿತ್ತು. ಇದನ್ನು ಸಹಿಸದೆ ಡಿ.ಆರ್. ನಾಗರಾಜ್, ಲಂಕೇಶ್ ಅವರಿಗೆ ಓಶೋ ಬಗ್ಗೆ ಓದಿಕೊಂಡು, ಅರ್ಥೈಸಿಕೊಂಡು ಬರೆಯಲು ಸಲಹೆ ನೀಡಿದ್ದರು. ಈ ವಿಷಯವನ್ನು ನನಗೆ ಶೂದ್ರ ಶ್ರೀನಿವಾಸ್ ಒಮ್ಮೆ ಹೇಳಿಕೊಂಡಿದ್ದರು. ಉಡುಪಿ ರಥ ಬೀದಿ ಗೆಳೆಯರು, ಅಮೆರಿಕದ ನಾಮ್ ಚಾಮ್ ಸ್ಕೀ, ಮತ್ತು ಓಶೋ ಅವರನ್ನು ಕೂರಿಸಿ ಸಮಾರಂಭ ಮಾಡಲು ತೀರ್ಮಾನಿಸಿದ್ದರು. ಆದರೆ, ಅದು ಕಾರ
ಣಾಂತರದಿಂದ ಸಾಧ್ಯವಾಗಲಿಲ್ಲ. ಓಶೋ ಬೆಂಗಳೂರಿಗೂ ಆಗಾಗ ಬರುತ್ತಿದ್ದರಂತೆ. ಆದರೆ, ಇದು ಬಹುತೇಕರಿಗೆ ಅದು ಗೊತ್ತಿಲ್ಲ. ಎಂದು ವಾಸುದೇವ್ ಮೂರ್ತಿ ನೆನಪು ಮಾಡಿಕೊಂಡರು.

ಕಾಣೆಯಾದ ನಾಲ್ಕನೇ ಕೋತಿ
ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮದಲ್ಲಿ ಮೂರು ಕೋತಿಗಳ ಪ್ರತಿಮೆ ಇತ್ತು. ಆಗ ಓಶೋ ಕೇಳಿದರು. ನಾಲ್ಕನೇ ಕೋತಿ ಎಲ್ಲಿ ಎಂದು. ಅದಕ್ಕೆ ಗಾಂಧಿ ಪುತ್ರ ತಬ್ಬಿಬ್ಬಾದ. ಇದು ಚೀನಾದ ಕಥೆ, ಅಲ್ಲಿ ನಾಲ್ಕು ಕೋತಿಗಳಿವೆ. ಮೂರು ಕೋತಿಗಳು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿವೆ. ಆದರೆ, ನಾಲ್ಕನೆಯದು ಜನನೇಂದ್ರೀಯ ಮುಚ್ಚಿಕೊಂಡಿದೆ. ಆದರೆ, ಇಲ್ಲಿ ನಾಲ್ಕನೇ ಕೋತಿ ಕಾಣಿಸುತ್ತಿಲ್ಲ ಎಂದರೆ, ಅದು ನಿಮ್ಮ ತಂದೆ ಕಾಟಕ್ಕೆ ತಪ್ಪಿಸಿಕೊಂಡು ಓಡಿರಬೇಕು ಎಂದರಂತೆ ಓಶೋ.

ಜಗತ್ತಿನ ಅತಿದೊಡ್ಡ ಖಾಸಗಿ ಗ್ರಂಥಾಲಯ ಓಶೋ ಬಳಿಯಿತ್ತು ಅದರ ಮೇಲೆ ಎಷ್ಟೋ ಜನ ಪಿಎಚ್‌ಡಿ ಮಾಡಿದ್ದಾರೆ ಒಬ್ಬ ಸಿವಾದಿಯಷ್ಟೇ ಪರಿಣಾಮಕಾರಿ ಮಾತುಗಳನ್ನು ಆಡಿದ್ದರು

? ೭೫೦ ಪುಸ್ತಕ ಓದಿದವರು ಕಡಿಮೆ, ಓಶೋ ೭೫೦ ಪುಸ್ತಕ ಬರೆದಿದ್ದಾರೆ.

ಓಶೋ ಅವರ ಇನ್ನು ಎಷ್ಟೋ ವಿಚಾರಗಳು ಪ್ರಕಟವಾಗಿಲ್ಲ. ಇನ್ನೂ ಒಂದು ನೂರು ಪುಸ್ತಕಗಳಿಗೆ ಆಗುವಷ್ಟು ವಿಚಾರಗಳಿವೆ. ತುಂಬಾ ಕತೆಗಳನ್ನು ಹೇಳುತ್ತಿದ್ದರು. ವೃಷ್ಟಾಂತಗಳನ್ನು ಹೇಳುತ್ತಿದ್ದರು. ಹೀಗಾಗಿ ಪ್ರವಚನ ಸಾರಸ್ಯಕರವಾಗಿರುತ್ತಿತ್ತು. ಜೋಕ್ ಗಳನ್ನು ನಗಿಸುವುದಕ್ಕೆ ಹೇಳುತ್ತಿರಲಿಲ್ಲ. ಓಶೋ ಹೇಳಿದ ಜೋಕ್ ಗಳು ಎಂದು ಪುಸ್ತಕ ಮಾಡಲು ಮುಂದಾಗುತ್ತಾರೆ. ಆದರೆ, ಅದನ್ನು ಓಶೊ ವಿರೋಧಿಸುತ್ತಾರೆ. ಹಾಸ್ಯದ ಹಿಂದೆ ಬಹಳ ಅರ್ಥವಿರುತ್ತದೆ. ಸನ್ನಿವೇಶ ಅರ್ಥ ಮಾಡಿಕೊಳ್ಳದೆ ಜೋಕ್ ಮಾಡಿದರೆ ತಪ್ಪಾಗುತ್ತದೆ ಎಂದು ನಿರಾಕರಿಸುತ್ತಾರೆ.

– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು
೧೦ ಸೆಕೆಂಡ್‌ನಲ್ಲಾದ ಬದಲಾವಣೆ

***
ಓಶೋ ಎಲ್ಲ ಧರ್ಮದ ನಂಬಿಕೆ ಪ್ರಶ್ನೆ ಮಾಡ್ತಾರೆ. ಜೈನ ಧರ್ಮದ ಸನ್ಯಾಸಿ ಪ್ರಶ್ನೆ ಮಾಡ್ತಾರೆ, ಅದ್ವೈತ ಸಿದ್ಧಾಂತ ಪ್ರಶ್ನೆ ಮಾಡ್ತಾರೆ. ಒಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿಶಂಕರಪೀಠದ ಸ್ವಾಮೀಜಿ ಮಾತು ನಿಲ್ಲಿಸುವಂತೆ ಹೇಳ್ತಾರೆ. ಆಗ ಅಧ್ಯಕ್ಷ ಪೀಠದಲ್ಲಿ ಇರುವವರು ಹೇಳಿದ್ದೀರಿ, ನಿಮ್ಮ ಮಾತು ಕೇಳಬೇಕು. ಆದರೆ, ೧೦ ಸೆಕೆಂಡ್ ಸಮಯ ಕೊಡಿ ಎನ್ನುತ್ತಾರೆ. ಆಗ ಜನರ ಬಳಿ ಕೇಳ್ತಾರೆ. ೨ ಸಾವಿರ ಜನರು ಮಾತನಾಡುವಂತೆ ಕೈ
ಎತ್ತುತ್ತಾರೆ. ಆಗ ಸ್ವಾಮೀಜಿಗಳಿಗೆ ನಿಮ್ಮ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದಾರೆ ಬಿಡಿ, ಈಗ ನೀವೇನೂ ಹೇಳುವಂತಿಲ್ಲ ಎಂದು ಓಶೋ ಮಾತು ಮುಂದುವರಿಸುತ್ತಾರೆ.