Saturday, 23rd November 2024

ಓಮಿಕ್ರಾನ್ ಸೋಂಕಿನ ಪ್ರಕರಣಗಳ ಸಂಖ್ಯೆ 961ಕ್ಕೇರಿಕೆ

Omicrone V

ನವದೆಹಲಿ: ದಿನಕ್ಕೆ 180 ಹೊಸ ಪ್ರಕರಣಗಳೊಂದಿಗೆ ಭಾರತದಲ್ಲಿ ಓಮಿಕ್ರಾನ್ ಸೋಂಕಿನ ಪ್ರಕರಣಗಳ ಸಂಖ್ಯೆ 961ಕ್ಕೇರಿದೆ.

ಇದುವರೆಗೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 961 ಓಮಿಕ್ರಾನ್ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 320 ಜನರು ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ ಅತ್ಯಧಿಕ (263) ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ (252), ಗುಜರಾತ್ (97), ರಾಜಸ್ಥಾನ (69), ಕೇರಳ (65) ಮತ್ತು ತೆಲಂಗಾಣ (62) ನಂತರದ ಸ್ಥಾನಗಳಲ್ಲಿವೆ.

ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು 49 ದಿನಗಳ ಬಳಿಕ ದೈನಿಕ ಏರಿಕೆ ಪ್ರಮಾಣ 13,000ದ ಗಡಿ ದಾಟಿದೆ. ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 3,48,22,040ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 82,402ಕ್ಕೆ ಹೆಚ್ಚಳ ಗೊಂಡಿವೆ.

ಕಳೆದ 24 ಗಂಟೆಗಳಲ್ಲಿ ಕೋವಿಡ್‍ನಿಂದ 268 ಮಂದಿ ಮರಣಿಸಿದ್ದು, ಒಟ್ಟಾರೆ ಮರಣ ಸಂಖ್ಯೆ 4,80,860ಕ್ಕೆ ತುಲುಪಿದೆ.