Friday, 22nd November 2024

ಸೆಂಚುರಿಯನ್’ನಲ್ಲಿ ಟೀಂ ಇಂಡಿಯಾಕ್ಕೆ ಐತಿಹಾಸಿಕ ಗೆಲುವು

#Shami

ಸೆಂಚೂರಿಯನ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ಮುಂದಾಳತ್ವದಲ್ಲಿ ಭಾರತೀಯ ವೇಗದ ದಾಳಿಯು ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ  113 ರನ್ ಗಳ ಅದ್ಭುತ ಜಯಸಾಧಿಸಲು ಸರಣಿಯನ್ನು 1-0ರಿಂದ ಮೇಲಕ್ಕೆ ಹೋಗಲು ಕಾರಣವಾಯಿತು.

ಈ ಮೂಲಕ ಸೆಂಚುರಿಯನ್ ಮೈದಾನದಲ್ಲಿ ಭಾರತ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಕಂಡಿದೆ. 305ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 4ನೇ ದಿನವನ್ನು 94/4 ಕ್ಕೆ ಕೊನೆಗೊಳಿಸಿತ್ತು. ಆರಂಭಿಕ ಸೆಷನ್ ನಲ್ಲಿ ಭಾರತೀಯ ವೇಗಿಗಳು 3 ವಿಕೆಟ್ ಗಳನ್ನು ಕಬಳಿಸಿ ತವರು ತಂಡವನ್ನು ಬ್ಯಾಕ್ ಫೂಟ್ ನಲ್ಲಿ ತಳ್ಳಿದರು.

ಭೋಜನ ವಿರಾಮದ ನಂತರ, ಶಮಿ ಮಾರ್ಕೊ ಜಾನ್ಸನ್ ಅವರನ್ನು ಔಟ್ ಮಾಡಿದರು. ಆರ್.ಅಶ್ವಿ ನ್ ಟೆಸ್ಟ್ ಅನ್ನು ಬೇಗನೆ ಮುಗಿಸಲು ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಪಡೆದರು. ಶಮಿ ಎಂಟು-ಫಾರ್ ಗಳೊಂದಿಗೆ ಟೀಮ್ ಇಂಡಿಯಾದ ಗೆಲುವಿನ ನಗೆಯನ್ನು ಬೀರುವಂತೆ ಆಯ್ತು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 327, ದ್ವಿತೀಯ ಇನ್ನಿಂಗ್ಸ್ ನಲ್ಲಿ 174 ರನ್ ಗಳನ್ನು ಬಾರಿಸಿದರೆ, ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 197, ದ್ವಿತೀಯ ಇನ್ನಿಂಗ್ಸ್ ನಲ್ಲಿ 191 ರನ್ನಗಳನ್ನು ಗಳಿಸಿತ್ತು. ಅಂತಿಮವಾಗಿ, ಮೂರನೇ ಟೆಸ್ಟ್ ಸರಣಿ ಪಂದ್ಯದಲ್ಲಿ 1-0 ಮುನ್ನಡೆ ಕಂಡು ಭಾರತವು 113 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.