ಪಾಟ್ನಾ: ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್ ಗೂಗಲ್ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್ ಕೆಲಸ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಫೆಬ್ರವರಿ 14ರಂದು ಗೂಗಲ್ ಕಂಪನಿಗೆ ಸೇರಲಿದ್ದಾರೆ.
ಸಂಪ್ರೀತಿ ಕಳೆದ ವರ್ಷ ಮೇ ತಿಂಗಳಲ್ಲಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ದಿಂದ ಕಂಪ್ಯೂಟರ್ ಸೈನ್ಸ್ ಬಿ ಟೆಕ್ ಪದವಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ 44 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ನಲ್ಲಿ ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡುತ್ತಿ ದ್ದಾರೆ.
ಪಾಟ್ನಾದ ನೆಹರೂ ನಗರದ ನಿವಾಸಿಯಾದ ಬ್ಯಾಂಕ್ ಅಧಿಕಾರಿ ರಾಮಶಂಕರ್ ಯಾದವ್ ಹಾಗೂ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಪ್ರಭಾ ದಂಪತಿಯ ಪುತ್ರಿ ಸಂಪ್ರೀತಿ ಉನ್ನತ ಶ್ರೇಣಿಯ ಕಂಪನಿಗಳಿಂದ ಉದ್ಯೋಗದ ಆಫರ್ಗಳನ್ನು ಪಡೆದಿದ್ದರು.
ಗೂಗಲ್ ಆನ್ಲೈನ್ನಲ್ಲಿ 9 ಸುತ್ತುಗಳಲ್ಲಿ ಸಂದರ್ಶನಗಳನ್ನು ನಡೆಸಿತ್ತು. ಕಂಪನಿಯು 9 ಸುತ್ತುಗಳಲ್ಲಿ ನಡೆದ ಸಂದರ್ಶನ ದಲ್ಲಿ ನನ್ನ ಉತ್ತರಗಳಿಂದ ತೃಪ್ತವಾಯಿತು. ಹೀಗಾಗಿ ಕೆಲಸಕ್ಕೆ ಆಯ್ಕೆಯಾದೆ ಎಂದು ಸಂಪ್ರೀತಿ ಹೇಳಿದ್ದಾರೆ.