Friday, 22nd November 2024

ಓಮೈಕ್ರಾನ್: ದೇಶಾದ್ಯಂತ 3,071 ಪ್ರಕರಣ ಪತ್ತೆ

Omicrone V

ನವದೆಹಲಿ: ಭಾರತದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈವರೆಗೂ ದೇಶಾದ್ಯಂತ 3,071 ಪ್ರಕರಣಗಳು ವರದಿಯಾಗಿದೆ.

ದೇಶಾದ್ಯಂತ ಇರುವ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 3,071ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿದಂತೆ ದೇಶದ ಒಟ್ಟು 27 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿ ಯಾಗಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 876 ಮಂದಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 381 ಮಂದಿ ಸೋಂಕಿತರು ಗುಣಮುಖ ರಾಗಿದ್ದಾರೆ ಎನ್ನಲಾಗಿದೆ.

ದೆಹಲಿ 513, ಕರ್ನಾಟಕ 333, ರಾಜಸ್ಥಾನ 291, ಕೇರಳ 284, ಗುಜರಾತ್ 204, ತಮಿಳುನಾಡು 121, ಹರಿಯಾಣ 114, ತೆಲಂಗಾಣ 123, ಒಡಿಶಾ 60, ಉತ್ತರಪ್ರದೇಶ 31, ಆಂಧ್ರಪ್ರದೇಶ 28, ಪಶ್ಚಿಮ ಬಂಗಾಳ 27, ಗೋವಾ 19, ಅಸ್ಸಾಂ 9, ಮಧ್ಯಪ್ರದೇಶ 9, ಉತ್ತರಾಖಂಡ 8, ಮೇಘಾಲಯ 4, ಅಂಡಮಾನ್ ನಿಕೋಬಾರ್ 3, ಜಮ್ಮು ಮತ್ತು ಕಾಶ್ಮೀರ 2, ಪಾಂಡಿಚೆರಿ 2 ಪಂಜಾಬ್ 2 ಪ್ರಕರಣಗಳು ವರದಿಯಾಗಿವೆ.

ಹಿಮಾಚಲಪ್ರದೇಶ, ಲಡಾಖ್, ಚಂಡೀಗಢ 1, ಮಣಿಪುರ ತಲಾ ಒಂದು ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.