Thursday, 19th September 2024

ಆದಾಯ ಅಸಮಾನತೆಯ ಪ್ರತಿಧ್ವನಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’

ವಿಜಯಕುಮಾರ್ ಎಸ್. ಅಂಟೀನ ಬೆಂಗಳೂರು.

ನೊಬೆಲ್ ಪ್ರಶಸ್ತಿಿಗೆ ಭಾಜನರಾದ ಅಭಿಜಿತ್ ಬ್ಯಾಾನರ್ಜಿ ಮತ್ತು ಎಸ್ತರ್ ಡುಫ್ಲೋೋ ಅವರ ಕೃತಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’ನ ಇಣುಕು ನೋಟ ಇದಾಗಿದೆ.
ನೊಬೆಲ್ ಪ್ರಶಸ್ತಿಿಗೆ ಭಾಜನರಾದ ಅಭಿಜಿತ್ ಬ್ಯಾಾನರ್ಜಿ ಮತ್ತು ಎಸ್ತರ್ ಡುಫ್ಲೋೋ ಅವರ ಕೃತಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’ನ್ನು ಆನ್‌ಲೈನ್ ಮೂಲಕ ತರಿಸಿಕೊಂಡು ಎರಡು ಓದಿದೆ. ಓದುವಿಕೆ ಎಂದೂ ಅಜೀರ್ಣವಾಗಬಾರದು. ಹಾಗಾದರೆ ಜೀರ್ಣವಾಗುವವರೆಗೆ ಓದಬೇಕು. ಅದೇನೋ, ಭಾರತದ ಬಡತನವನ್ನು ವೈಭವೀಕರಿಸಿ ಬರೆದವರಿಗೆಲ್ಲ ಪುರಸ್ಕಾಾರಗಳು!. ಆದರೆ ಅಭಿವೃದ್ಧಿಿಶೀಲತೆ ಬಗ್ಗೆೆ ಯಾರೂ ಚಕಾರ ಎತ್ತುವುದಿಲ್ಲ ಎಂಬುದು ವಿಷಾದಕರ ಸಂಗತಿ. ಎಂಐಟಿ ಅರ್ಥಶಾಸ್ತ್ರಜ್ಞರಾದ ಅಭಿಜಿತ್ ಬ್ಯಾಾನರ್ಜಿ ಮತ್ತು ಎಸ್ತರ್ ಡುಫ್ಲೋೋ ಅವರು ಚೆನ್ನಾಾಗಿ ಬರೆಯುತ್ತಾಾರೆ ಮತ್ತು ವಿಷಯಗಳನ್ನು ಸಂಪೂರ್ಣ ಅರಿತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾನವೀಯತೆ ಎದುರಿಸುತ್ತಿಿರುವ ಅತ್ಯಂತ ನಿರ್ಣಾಯಕ ಸಮಸ್ಯೆೆಗಳನ್ನು (ವಲಸೆ, ವ್ಯಾಾಪಾರ ಸಮರ, ಅಸಮಾನತೆ, ಹವಾಮಾನ ಕೃತಿಯ ಮೂಲಕ ವಿಶ್ಲೇಷಣೆಗೆ ಒಳಪಡಿಸುವಲ್ಲಿಯೂ ಉತ್ತಮ ಪ್ರಯತ್ನತೋರಿದ್ದಾಾರೆ.

ಲೇಖಕರು ವಿಶ್ವದ ಬಡ ಜನರ ನಾನಾ ಸಂದರ್ಭಗಳನ್ನು ಅಧ್ಯಯನ ಮಾಡಿ, ಅದನ್ನು ಕೃತಿಯ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾಾರೆ. ಉನ್ನತ ಮಹತ್ವಾಾಕಾಂಕ್ಷೆ ಅನೇಕ ಅರ್ಥಶಾಸ್ತ್ರಜ್ಞರಲ್ಲಿ ಭವ್ಯತೆಯ ಅಪಾಯಕಾರಿ ಭ್ರಮೆ ಹುಟ್ಟುಹಾಕಿದೆ. ಅವರ ಸಿದ್ಧಾಾಂತಗಳು ಅನೇಕ ಜನರಿಗೆ ದೊಡ್ಡ ಕಷ್ಟಗಳನ್ನು ಉಂಟುಮಾಡಿದೆ. ಆದರೆ ಉತ್ತಮ ಅರ್ಥಶಾಸ್ತ್ರದಲ್ಲಿ ಇದಕ್ಕೂ ಮೀರಿದ ಅನೇಕ ಹಾದಿಗಳಿವೆ.

ಬ್ಯಾಾನರ್ಜಿ ಮತ್ತು ಡುಫ್ಲೋೋ ಸ್ಯಾಾಂಡರ್ಸ್ ಉದ್ಯೋೋಗ ಖಾತರಿ ಯೋಜನೆಯನ್ನು ಮತ್ತೊೊಂದಡೆ ಅದನ್ನು ತಿರಸ್ಕರಿಸುತ್ತಾಾರೆ. ಏಕೆಂದರೆ ರಾಜ್ಯವು ಅಂತಹ ದೊಡ್ಡ ಸಂಖ್ಯೆೆಯಲ್ಲಿ ಯೋಗ್ಯವಾದ ಉದ್ಯೋೋಗಗಳನ್ನು ಉತ್ಪಾಾದಿಸಬಹುದೆಂದು ಅವರು ನಂಬುವುದಿಲ್ಲ.

ವಾರೆನ್‌ರ ಸಂಪತ್ತು ತೆರಿಗೆಯು ಸರಿಯಾದದ್ದಾದರೂ, ಅಮೆರಿಕದ ರಾಷ್ಟ್ರೀಯ ಆದಾಯದ 1%ಕ್ಕಿಿಂತ ಹೆಚ್ಚು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಅವರು ಪ್ರಸ್ತಾಾಪಿಸುತ್ತಾಾರೆ. ಆದರೆ ಒಕಾಸಿಯೊ-ಕಾರ್ಟೆಜ್‌ನ 70% ರಷ್ಟು ಅತೀ ಶ್ರೀಮಂತರಿಗೆ ಕನಿಷ್ಟ ತೆರಿಗೆ ದರವು ಲಾಭವನ್ನು ವಿತರಿಸದಂತೆ ಸಂಸ್ಥೆೆಗಳನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆಯ ಯಾವುದೇ ಗಂಭೀರ ನಿಭಾಯಿಸುವಿಕೆಯು ಒಟ್ಟು ಆದಾಯದ 5% ರಷ್ಟು ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಅಂತಾರಾಷ್ಟ್ರೀಯ ಹಸಿರು ಹೊಸ ಒಪ್ಪಂದ ಮತ್ತು ಮಾನವೀಯತೆಗೆ ಅಗತ್ಯವಿರುವ ಸಂಪತ್ತಿಿನ ಪುನರ್ ವಿತರಣೆಗೆ ಅಗತ್ಯವಾದ ಹಣ ಎಲ್ಲಿಂದ ಬರುತ್ತದೆ? ಎಂದು ಬ್ಯಾಾನರ್ಜಿ ಮತ್ತು ಡುಫ್ಲೋೋ ಎಲ್ಲೂ ಹೇಳುವುದಿಲ್ಲ. ಆದರೂ ದೇಶಗಳ ನಾನಾ ಸಮಸ್ಯೆೆಗಳನ್ನು ಕಂಡುಹಿಡಿಯಲು
ಅರ್ಥಶಾಸ್ತ್ರವನ್ನು ಬಳಸಿಕೊಳ್ಳಬಹುದು ಎಂಬುದನ್ನು ಕೃತಿಯ ಮೂಲಕ ವಿವರಿಸುವುದು, ಆರ್ಥಿಕ ಸವಾಲು ನಿಭಾಯಿಸುವುದು ಹಾಗೂ ಆದಾಯ ಅಸಮಾನತೆಯನ್ನು ಪರಿಹರಿಸುವ ಮಾರ್ಗಗಳನ್ನು ತಿಳಿಸುವಲ್ಲಿ ಈ ಕೃತಿ ಮಹತ್ವದ ಕೊಡುಗೆಯಾಗಿದೆ.

Leave a Reply

Your email address will not be published. Required fields are marked *