Sunday, 15th December 2024

ಭಾಷೆಗೆ ವ್ಯಾಕರಣ ಅನಿವಾರ್ಯವೇ?

ಡಾ. ಪ್ರಮೀಳಾ ಮಾಧವ್, ಬೆಂಗಳೂರು

ಇತ್ತೀಚೆಗೆ ಭಾಷೆ ಮತ್ತು ಸಾಹಿತ್ಯಕ್ಕೆೆ ಸಂಬಂಧಿಸಿದಂತೆ ವ್ಯಾಾಕರಣ ಅನಗತ್ಯವೆಂಬ ಅಭಿಪ್ರಾಾಯ ಹೆಚ್ಚುಹೆಚ್ಚಾಾಗಿ ಕೇಳಿಬರುತ್ತಿಿದೆ. ಹಳ್ಳಿಿಯ ಅನಕ್ಷರಸ್ಥ ಜನರ ಮಾತಿನಲ್ಲಿ ನಗರದ ವಿದ್ಯಾಾವಂತರ ಉಚ್ಚಾಾರದಲ್ಲೂ ವ್ಯಾಾಕರಣರಹಿತ ಭಾಷಾಪ್ರಯೋಗಗಳು ಕೇಳಿಬರುತ್ತವೆ.

ಕನ್ನಡಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಿಿಬೆಳೆಸಿದ ವಿದ್ವತ್ ಪರಂಪರೆ ನಶಿಸುತ್ತಿಿರುವ ಈ ದಿನಗಳಲ್ಲಿ ವಿಚಾರಸಂಕಿರಣದಂತಹ ಕೆಲವು ಕನ್ನಡ ಕಾರ್ಯಕ್ರಮಗಳು ಕನ್ನಡ ಶಾರದೆಗೆ ಉಸಿರುತುಂಬಿಸುವ, ಕನ್ನಡ ಮನಸ್ಸುಗಳನ್ನು ಅರಳಿಸುವ ಶ್ಲಾಾಘನೀಯ ಕೆಲಸವನ್ನು ಮಾಡುತ್ತಿಿವೆ. ಇಂತಹ ಸಂದರ್ಭದಲ್ಲಿ ‘ಕನ್ನಡ ಭಾಷೆಗೆ ವ್ಯಾಾಕರಣ ಬೇಕೆ ಬೇಡವೇ? ಎಂಬ ವಿಚಾರ ಕೂಡ ಚರ್ಚೆಗೆ ಒಳಪಡುತ್ತಿಿರುವುದು ಕುತೂಹಲ ಹುಟ್ಟಿಿಸಿದೆ.

ಹುಟ್ಟಿಿದ ಮಗುವಿಗೆ ಬಟ್ಟೆೆ ಎಷ್ಟು ಅಗತ್ಯವೋ ಅದೇ ರೀತಿ ಭಾಷೆಗೆ ವ್ಯಾಾಕರಣ, ಛಂದಸ್ಸುಗಳೂ ಅಷ್ಟೇ ಅಗತ್ಯ. ವ್ಯಾಾಕರಣ ಮತ್ತು ಛಂದಸ್ಸು ಒಂದು ಭಾಷೆ ಅಥವಾ ಸಾಹಿತ್ಯ ಕೃತಿಗೆ ಶಿಸ್ತು, ಸೌಂದರ್ಯ, ಲಾವಣ್ಯವನ್ನು ಕೊಡುವ ಪ್ರಸಾಧನ(ಉಡುಗೆ ತೊಡುಗೆ)ಗಳು. ಒಂದು ಪದ ಅಥವ ವಾಕ್ಯವನ್ನು ತಪ್ಪಿಿಲ್ಲದೆ ಅರಿಯಲೂ, ಒರೆಯಲೂ(ಹೇಳು), ಬರೆಯಲೂ ಸಾಧ್ಯವಾಗುವುದು ವ್ಯಾಾಕರಣದಿಂದಲೇ. ಕೇಶಿರಾಜ ತನ್ನ ‘ಶಬ್ದಮಣಿ ದರ್ಪಣ’ದಲ್ಲಿ ವ್ಯಾಾಕರಣದ ಅಧ್ಯಯನದಿಂದ ಮೋಕ್ಷವನ್ನೇ ಪಡೆಯಬಹುದೆಂದಿದ್ದಾಾನೆ. ‘ವ್ಯಾಾಕರಣದಿಂದೆ ಪದಮ್, ಆ ಪದದಿನರ್ಥಂ, ಅರ್ಥದೆ ತತ್ವಾಾಲೋಕಂ, ತತ್ವಾಾಲೋಕದಿನ್ ಆಕಾಂಕ್ಷಿಪ ಮುಕ್ತಿಿಯಕ್ಕು, ಅದೆ ಬುಧರ್ಗೆ ಫಲಂ.) ಭಟ್ಟಾಾಕಳಂಕನೆಂಬ ವೈಯಾಕರಣಿ ‘ಲೋಕದಲ್ಲಿ ವ್ಯಾಾಕರಣವನ್ನು ಬಿಟ್ಟರೆ ಬೇರೆ ಯಾವುದೂ ಇಲ್ಲ ಅಂದಿದ್ದಾಾನೆ.(‘ಸರ್ವವಿದ್ಯಾಾನಾಂ ಪ್ರದೀಪಭೂತಂ ವಾಙ್ಮಲಾನಾಂ ಚಿಕಿತ್ಸಿಿಕರೂಪಂ ಪದಸಿದ್ಧ್ಯರ್ಥನಿರ್ಣಯ ದ್ವಾಾರಾ ನಿಃಶ್ರೇಯಸ ಸಾಧನಂ ನಾಪರಂ ಲೋಕೇ ವ್ಯಾಾಕರಣಾತ್.) ಒಂದು ಪ್ರತ್ಯಯದ ತಪ್ಪಿಿನಿಂದ, ಒಂದು ಅಲ್ಪವಿರಾಮದ ಕೊರತೆಯಿಂದ ಎಂಥೆಂಥ ಅನರ್ಥಗಳು ಸಂಭವಿಸಿದ ಉದಾಹರಣೆಗಳಿವೆ.

ವಿದ್ಯಾಾರ್ಜನೆಗೆ ಹೊರಟ ಮಗನಿಗೆ ಅವನ ತಂದೆ ‘ನೀನು ಇನ್ನೇನನ್ನು ಕಲಿಯದಿದ್ದರೂ ಪರವಾಗಿಲ್ಲ. ಆದರೆ ವ್ಯಾಾಕರಣವನ್ನು ಕಲಿ. ಏಕೆಂದರೆ ನಿನ್ನ ಉಚ್ಚಾಾರದಲ್ಲಿ ಸ್ವಜನ(ನಮ್ಮ ಜನ) ಶ್ವಜನ(ನಾಯಿಜನ), ಸಕಲಂ(ಎಲ್ಲ) ಶಕಲಂ(ಚೂರು), ಸಕೃತ್(ಒಮ್ಮೆೆ) ಶಕೃತ್(ಸೆಗಣಿ) ಎಂದಾಗದಿರಲಿ ಎಂದು ಉಪದೇಶಿಸಿದನಂತೆ. (‘ಯದ್ಯಪಿ ಬಹು ನಾಧೀಷೇ ತಥಾಪಿ ಪಠ ಪುತ್ರ ವ್ಯಾಾಕರಣಂ ಸ್ವಜನಃ ಶ್ವಜನೋ ಮಾಭೂತ್ ಸಕಲಂ ಶಕಲಂ ಸಕೃತ್ ಶಕೃತ್.)

ಇತ್ತೀಚೆಗೆ ಭಾಷೆ ಮತ್ತು ಸಾಹಿತ್ಯಕ್ಕೆೆ ಸಂಬಂಧಿಸಿದಂತೆ ವ್ಯಾಾಕರಣ ಅನಗತ್ಯವೆಂಬ ಅಭಿಪ್ರಾಾಯ ಹೆಚ್ಚುಹೆಚ್ಚಾಾಗಿ ಕೇಳಿಬರುತ್ತಿಿದೆ. ಹಳ್ಳಿಿಯ ಅನಕ್ಷರಸ್ಥ ಜನರ ಮಾತಿನಲ್ಲಿ ಮಾತ್ರವಲ್ಲ, ನಗರದ ವಿದ್ಯಾಾವಂತರ ಉಚ್ಚಾಾರದಲ್ಲೂ ವ್ಯಾಾಕರಣರಹಿತ ಭಾಷಾಪ್ರಯೋಗಗಳು ಕೇಳಿಬರುತ್ತವೆ. ಭಾಷಾಶುದ್ಧತೆಯ ಬಗ್ಗೆೆ ಕಾಳಜಿಯೇ ಇಲ್ಲ. ವಾಹಿನಿಯಲ್ಲಿ ಬಿತ್ತರವಾಗುತ್ತಿಿರುವ ಕಾರ್ಯಕ್ರಮಗಳ

ಭಾಷೆ, ನುಡಿಗಟ್ಟುಗಳು ಕೆಲವೊಮ್ಮೆೆ ಎಷ್ಟು ಆಭಾಸವಾಗುತ್ತದೆ ಎಂದರೆ ಕನ್ನಡಿಗರು ನಾಚಿಕೊಳ್ಳಬೇಕು. ಪ್ರಶಸ್ತಿಿಪ್ರಧಾನ (ಪ್ರಶಸ್ತಿಿ ಪ್ರದಾನ), ಸಾಹಿತ್ಯಪ್ರಾಾಕಾರ (ಸಾಹಿತ್ಯ ಪ್ರಕಾರ), ನೀರಾಹಾರ(ನಿರಾಹಾರ) ಅಜೀವ(ಆಜೀವ), ವೈಯುಕ್ತಿಿಕ(ವೈಯಕ್ತಿಿಕ), ಕೂಲಂಕುಷ (ಕೂಲಂಕಷ), ಜಾತ್ಯಾಾತೀತ(ಜಾತ್ಯತೀತ), ಪಲಹಾರ(ಫಲಾಹಾರ)ಇತ್ಯಾಾದಿ ಪದಗಳು ಸಲೀಸಾಗಿ ಬಳಕೆಯಾಗುತ್ತವೆ. ರಸ್ತೆೆಯ ಇಕ್ಕೆೆಲಗಳ ಮಾಹಿತಿಫಲಕಗಳ ಬರಹಗಳಲ್ಲಿ ಕಾಣುವ ವಿಭಕ್ತಿಿಪ್ರತ್ಯಯ, ಅಕಾರ ಹಕಾರ, ಹ್ರಸ್ವ ದೀರ್ಘ, ಅಲ್ಪಪ್ರಾಾಣ, ಮಹಾಪ್ರಾಾಣಗಳ ದೋಷಕ್ಕೆೆ ಮಿತಿಯೇ ಇಲ್ಲ. ಹುಣಿಸು(ಉಣಿಸು), ಮನೇನಲ್ಲಿ(ಮನೆಯಲ್ಲಿ), ಗೆದ್ದಿ(ಗೆದ್ದು), ಜನಾನ(ಜನರನ್ನು) ಉರಿದುಂಬಿಸಿ (ಹುರಿದುಂಬಿಸಿ), ಉಣಸೇಅಣ್ಣು(ಹುಣಸೆಹಣ್ಣು), ಓಯೇನೆ, ಓರಾಟ, ಒಟ್ಟೆೆಕಿಚ್ಚು, (ಹೋಗುತ್ತೇನೆ, ಹೋರಾಟ, ಹೊಟ್ಟೆೆಕಿಚ್ಚು), ಶ್ರೇಷ್ಟ,(ಶ್ರೇಷ್ಠ) ಸಂಬಂದ,(ಸಂಬಂಧ) ಶಬ್ಧ (ಶಬ್ದ), ವಿಧ್ಯಾಾರ್ತಿ(ವಿದ್ಯಾಾರ್ಥಿ), ಅದ್ಯಾಾಪಕ(ಅಧ್ಯಾಾಪಕ)-ಹೀಗೆ.

ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋೋ ಲೋಕಾರ್ಪಣೆಯಾದ ಸಂದರ್ಭದಲ್ಲಿ ಯಾರೋ ಹಿರಿಯರು ‘ಬೆಂಗಳೂರಿನ ಹೆಗ್ಗಳಿಕೆಗೆ ಮೆಟ್ರೋೋ ಒಂದು ದೃಷ್ಟಿಿಬೊಟ್ಟಿಿನಂತಿದೆ (ಮೆಟ್ರೋೋದಿಂದ ಬೆಂಗಳೂರಿನ ಹೆಗ್ಗಳಿಕೆ ಹೆಚ್ಚಿಿತು ಎನ್ನುವುದು ಅವರ ಮಾತಿನ ಇಂಗಿತ), ಮಾನ್ಯಮಂತ್ರಿಿಗಳು ತುಂಬ ಹಾಸ್ಯಾಾಸ್ಪದವಾಗಿ ಮಾತನಾಡಿದರು (ತುಂಬ ರಸವತ್ತಾಾಗಿ ಮಾತನಾಡಿದರು) ಎಂದದ್ದು ನೆನಪಿಗೆ ಬರುತ್ತದೆ. ವ್ಯವಹಾರದಲ್ಲಿ ಬಳಕೆಯಾಗುವ ನೀಜ, ಮೋಸ್ಸ (ನಿಜ, ನಾನು, ಮೋಸ)ಮುಂತಾದ ಪದಗಳನ್ನೂ ಗಮನಿಸಬಹುದು. ಕನ್ನಡದಲ್ಲಿ ಸುಲಭವಾಗಿರುವ ಪದಗಳ ಜಾಗದಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸುವ ಆಂಗ್ಲಪದಗಳು, ಗಣಕಯಂತ್ರದ ಆವಿಷ್ಕಾಾರ, ಮೊಬೈಲ್‌ಫೋನುಗಳ ದುರ್ಬಳಕೆ, ಸೌಲಭ್ಯಾಾಕಾಂಕ್ಷೆಗಳು, ಭಾಷೆಯ ಬಗೆಗಿನ ಅವಜ್ಞೆ ಮತ್ತು ಅಲಕ್ಷ್ಯ-ಇವೆಲ್ಲ ಈ ಅನರ್ಥ, ಆಭಾಸಗಳಿಗೆ ಕಾರಣವೆಂದು ನನಗನ್ನಿಿಸುತ್ತದೆ.

ಹಲವು ವರ್ಷಗಳ ಹಿಂದೆ (2010ರ ಏ.23) ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ‘ಕನ್ನಡದ ಬರವಣಿಗೆಯ ಸಮಸ್ಯೆೆಗಳು’ ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು. ಅನೇಕ ವಿದ್ವಾಾಂಸರು ಅದರಲ್ಲಿ ಭಾಗವಹಿಸಿದ್ದರು. ಮಾತನಾಡಿದವರಲ್ಲಿ ಅನೇಕರು ‘ಭಾಷೆ ಎನ್ನುವುದು ಸಂವಹನಕ್ಕಿಿರುವ ಮಾಧ್ಯಮ. ಅದು ಕೇಳುಗನಿಗೆ ಅರ್ಥವಾದರೆ ಸಾಕು. ಭಾಷೆಗೆ ವ್ಯಾಾಕರಣ ಬೇಕಾಗಿಲ್ಲ. ಹ್ರಸ್ವ, ದೀರ್ಘ, ಪದಬಂಧಗಳಲ್ಲಿ ದೋಷವಿದ್ದರೆ ಅದನ್ನು ದೋಷವೆಂದು ಪರಿಗಣಿಸಬೇಕಿಲ್ಲ. ಭಾಷೆಯಲ್ಲಿ ವ್ಯಾಾಕರಣ ದೋಷವನ್ನು ಹುಡುಕುವುದೇ ತಪ್ಪುು. ಪ್ರಶಸ್ತಿಿ ವಿಜೇತರೆಲ್ಲ ಬಳಸುವ ಭಾಷೆ ಎಷ್ಟು ವ್ಯಾಾಕರಣ ಬದ್ಧವಾಗಿದೆ? ಎಸ್.ಎಲ್. ಭೈರಪ್ಪನವರು ‘ಮಾಡುಲ್ಲ, ಕೇಳುಲ್ಲ ಅನ್ತಾಾರೆ. ದೇವನೂರ ಮಹಾದೇವರ ಭಾಷೆ ಎಷ್ಟು ಗ್ರಂಥಸ್ಥವಾಗಿದೆ? ವ್ಯಾಾಕರಣಾದಿಗಳನ್ನು ಕಡ್ಡಾಾಯಗೊಳಿಸಿದರೆ ಗ್ರಾಾಮೀಣವಿದ್ಯಾಾರ್ಥಿಗಳಿಗೆ ಭಾಷಾಕಲಿಕೆ ಒಂದು ಸವಾಲಾಗಿ ಅದರ ಆಸಕ್ತಿಿ, ಅಭಿರುಚಿಗಳೇ ಹೊರಟುಹೋಗ್ತವೆ. ಸಾಹಿತ್ಯಕೃತಿಗಳೂ ಅಷ್ಟೇ. ಸಾಹಿತ್ಯವೆನ್ನುವುದು ಜನರ ಭಾವನೆ, ಬದುಕುಗಳಿಗೆ ಪ್ರತೀಕವಾಗಿರುವ ಲಿಖಿತ ದಾಖಲೆ. ಅದು ಜನರ ಅನುಭವಗಳನ್ನು ಹಸಿಹಸಿಯಾಗಿಯೇ ತೆರೆದಿಡಬೇಕು. ಕೃತಕವಾದ ಗ್ರಂಥಸ್ಥಭಾಷೆಗಿಂತ ಸಹಜಸ್ವರೂಪದ ಆಡುಭಾಷೆಯ ರಚನೆಯೇ ಸೂಕ್ತ ಎಂಬಿತ್ಯಾಾದಿ ಅಭಿಪ್ರಾಾಯಗಳನ್ನು ವ್ಯಕ್ತಪಡಿಸಿದರು.

2010ರಲ್ಲಿ ಡಾ. ಆರ್. ಚಲಪತಿಯೆಂಬುವರ ‘ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ’ ಎಂಬ ಪಿಎಚ್‌ಡಿ ಸಂಶೋಧನಗ್ರಂಥ ಪ್ರಕಟವಾಯ್ತು. ಅದರಲ್ಲಿ ಕನ್ನಡ ವರ್ಣಮಾಲೆಗೆ ಸಂಬಂಧಿಸಿದಂತೆ ಕೆಲವು ನೂತನ ಪ್ರಯೋಗಗಳಿವೆ. ಲೇಖಕರು ಮೂರ್ಧನ್ಯಕ್ಕೆೆ ತಾಲವ್ಯವನ್ನೂ, ಞ,ಙಗಳಿಗೆ ಕಾರವನ್ನೂ, ಅರ್ಕಾವೊತ್ತಿಿಗೆ ರಕಾರವನ್ನೂ ಬಳಸಿ ಇಡೀ ಗ್ರಂಥವನ್ನು ರಚಿಸಿದ್ದಾಾರೆ. ಜ್ನಾಾನ, ಶಿಕ್ಶಣ, ಭಾಶೆ, ಸೃಶ್ಟಿಿ, ಸಂದರ‌್ಭ, ಪ್ರತಿಜ್ನೆೆ, ಕೃತಗ್ನ ಹೀಗೆ. ಬೆಂಗಳೂರಿನಲ್ಲಿ ನಾನು ಗಮನಿಸಿದಂತೆ ಬಹುತೇಕ ಜನರು ಞ,ಙ ಗಳನ್ನು ಅಂಥ ವ್ಯತ್ಯಾಾಸವಿಲ್ಲದೆಯೇ ಉಚ್ಚರಿಸುತ್ತಾಾರೆ. ಜ್ಞಾಾನ ಭಾರತಿ ಎಂಬುದಕ್ಕೆೆ ಗ್ಯಾಾನ ಭಾರತಿ, ಕೃತಜ್ಞತೆ ಎಂಬುದಕ್ಕೆೆ ಕೃತಘ್ಯತೆ, ಜ್ಞಾಾನಿಗೆ ಘ್ನಾಾನಿ ಹೀಗೆ. ಕೆಲವು ವರ್ಷಗಳ ಹಿಂದೆ ಬೊಳುವಾರು ಮಹಮ್ಮದ್ ಕುಞಿಯವರ ಕಥಾಸಂಕಲನ ಬೆಂಗಳೂರು ವಿ.ವಿ.ಗೆ ಪಠ್ಯವಾಗಿತ್ತು. ನಮ್ಮ ವಿದ್ಯಾಾರ್ಥಿಗಳು ಅಧ್ಯಾಾಪಕರೂ ಆ ಪದವನ್ನು ‘ಕುಯಿ ಎಂದೇ ಉಚ್ಚರಿಸುತ್ತಿಿದ್ದರು. ಕಯ್ಯಾಾರ ಕಿಞ್ಞಣ್ಣ ರೈಯವರನ್ನು ಕಿಯ್ಯಣ್ಣರೈಯೆಂದೇ ಉಚ್ಚರಿಸುತ್ತಾಾರೆ.

ಬದಲಾವಣೆಯೆಂಬುದು ಜೀವಂತಿಕೆಯ ಲಕ್ಷಣ. ಅದು ಅನಿವಾರ್ಯ ಮತ್ತು ಅಗತ್ಯವೂ ಹೌದು. ಅದು ಭಾಷೆಯೆಂದಲ್ಲ. ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವಂಥದ್ದು. ಯಾವುದೇ ಬದಲಾವಣೆಯಾದರೂ ಪ್ರಾಾರಂಭದಲ್ಲಿ ಹುರುಳಿಲ್ಲವೆಂದೂ, ಅಪರಾಧವೆಂದೂ, ದೋಷವೆಂದೂ ಅನಿಸಬಹುದು. ಕ್ರಮೇಣ ಅದೇ ರೂಢಿಯಾಗುತ್ತದೆ. ಋ,ಲೃ ವರ್ಣ, ಶ,ಷ, ಃ, ಜಿಹ್ವಾಾಮೂಲೀಯ, ಉಪಧ್ಮಾಾನೀಯ, ಕ್ಷಳ ಇತ್ಯಾಾದಿ ಅಕ್ಷರಗಳನ್ನು ಬಿಟ್ಟು ಕನ್ನಡ ವರ್ಣಮಾಲೆಯನ್ನು ಶುದ್ಧಗೊಳಿಸುವ ಇಂಗಿತ ಕೇಶಿರಾಜನ ಕಾಲಕ್ಕಾಾಗಲೇ ಮಹಾಪ್ರಾಾಣಾಕ್ಷರಗಳು ಕನ್ನಡಕ್ಕೆೆ ಸಹಜವಲ್ಲ ಎಂಬುದನ್ನು ಕೇಶಿರಾಜನೂ ಯೋಚಿಸಿದ್ದ. ಒಂದು ಕಾಲದಲ್ಲಿ ಹರಿಹರನಂಥ

ಯುಗಕವಿಯೇ ಕನ್ನಡದ ರಳ, ಕುಳ, ಕ್ಷಳಗಳ ಬಗೆಗಿನ (‘ನೋಡುವಡೊಂ ದಕ್ಕರಮದು ಮಾಡುವೊಡುಚ್ಚರಣೆಗರಿದು ಮೂರು(ಶಕಟರೇಫ) ತೆರನಂ ಕೂಡೆ ಕವಿತತಿ ವಿಚಾರಿಸಬೇಡದರಿಂ ರಳ ಕುಳ ಕ್ಷಳಂಗಳನಿದರೊಳ್) ಗೊಂದಲವನ್ನು ಪ್ರಸ್ತಾಾಪಿಸುತ್ತ ತಾನು ಒಂದೇ ಳಕಾರವನ್ನು ಬಳಸುತ್ತೇನೆಂದು ಸವಾಲು ಹಾಕಿ ಯಶಸ್ವಿಿಯೂ ಆದ. ಬಿ.ಎಂ. ಶ್ರೀಯವರ ‘ಕನ್ನಡ ಬಾವುಟ’ದ ದೀರ್ಘಾಕ್ಷರಗಳ ವಿಶಿಷ್ಟ ಪ್ರಯೋಗವನ್ನಾಾಗಲೀ ಆಧುನಿಕ ಭಾಷಾಶಾಸ್ತ್ರಜ್ಞರ 32 ಅಕ್ಷರಗಳು ಮಾತ್ರ ಕನ್ನಡ ಸಾಕೆನ್ನುವ ವಾದವನ್ನಾಾಗಲಿ ಗಮನಿಸಬಹುದು. ಛಂದಸ್ಸಿಿನ ವಿಷಯದಲ್ಲೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಪ್ರಾಾಸ ಬಿಟ್ಟಾಾಗ ಎಂಥ ಕ್ರಾಾಂತಿ ನಡೆದಿತ್ತು ಎಂಬುದನ್ನು ಯೋಚಿಸಿದರೆ ಚಲಪತಿಯವರ ನಿರೂಪಣೆಯನ್ನು ಸಾರಾಸಗಟಾಗಿ ಅಲ್ಲಗಳೆಯುವುದಕ್ಕೆೆ ಸಾಧ್ಯವಿಲ್ಲ.

ಈ ಕೃತಿಗೆ ಮುನ್ನುಡಿಯನ್ನು ಬರೆದ ಡಾ. ಕೆ.ವಿ. ನಾರಾಯಣರು ಕೂಡ ‘ಋಕಾರದ ಬಗ್ಗೆೆ ಒಂದು ಗಂಭೀರ ವಿಚಾರವನ್ನು ಮುಂದಿಡುತ್ತಾಾರೆ. ಅದೇನೆಂದರೆ ‘ಋಲಿಪಿ ಕನ್ನಡಕ್ಕೆೆ ಬೇಡವೆನ್ನುವವರ ನಿಲುವು ಅದು ಕನ್ನಡದಲ್ಲಿ ಹೆಚ್ಚಾಾಗಿ ಬಳಕೆಯಾಗುವುದಿಲ್ಲ ಎಂಬುದಲ್ಲ. ‘ಋ ಲಿಪಿ ಗುರುತು ಕನ್ನಡವನ್ನು ಮಾನದಂಡಗಳಿಂದ ನೋಡುವ ನೆಲೆಯನ್ನು ಗಟ್ಟಿಿಗೊಳಿಸುತ್ತದೆ. ನಾವೀಗ ಆ ನೆಲೆಯಿಂದ ಹೊರಬರಬೇಕೆಂದು ಹೇಳುತ್ತಿಿರುವುದರಿಂದ ನಮ್ಮ ನಿಲುವಿನ ಸೂಚನೆಯಾಗಿ ‘ಋ ಎಂಬ ಲಿಪಿಗುರುತಿನ ಕಲಿಕೆಯನ್ನು ನಿಲ್ಲಿಸಬೇಕು. ಅದಕ್ಕೆೆ ಎದುರು ವಾದಿಸುವವರು ಏನೇ ಕಾರಣಗಳನ್ನು ನೀಡಿದರೂ ಅವರ ನಿಲುವಿನ ಹಿಂದಿನ ತಿಳಿವಿನ ಚೌಕಟ್ಟು ಅಂಗೈಮೇಲಿನ ನೆಲ್ಲಿಕಾಯಿಯಂತೆ ಕಾಣುವಂತಿತ್ತು. ಅವರು ಈಗಿರುವಂತೆ ಸಂಸ್ಕೃತದ ಯಜಮಾನಿಕೆಯನ್ನು ಮುಂದುವರೆಸುವ ಇರಾದೆಯನ್ನು ಹೊಂದಿದ್ದರು. ಸಂಸ್ಕೃತದ ಯಜಮಾನಿಕೆ ಅಂದರೇನು? ಅದು ನುಡಿಯ ಯಜಮಾನಿಕೆಯಲ್ಲ. ಅದರ ಮೂಲಕ ಜನರ ಒಂದು ಗುಂಪು ಹೊರಗಿಡುವ, ಅವರನ್ನು ತಾವೇ ಕೈಹಿಡಿದು ನಡೆಸಬೇಕೆನ್ನುವ ಹಟವನ್ನು ಮಾಡುತ್ತಿಿದ್ದರು.

ಅಂದರೆ ಇದು ಕೇವಲ ಲಿಪಿಗುರುತಿನ ಮಾತಾಗಿ ಉಳಿಯಲಿಲ್ಲ. ನಾವು ಮತ್ತು ಬೇರೆಯವರು ಎಂದು ಒಡೆದು ನೋಡುವ ಬಗೆಯನ್ನು ಮುಂದುವರಿಸಬೇಕೆನ್ನುವವರು ಒಂದು ಕಡೆಯಾದರೆ, ಎಲ್ಲರನ್ನೂ ಒಳಗೊಳ್ಳುವ ನೆಲೆಯನ್ನು ತಲುಪಬೇಕಾದರೆ ಈಗಿರುವ ಯಜಮಾನಿಕೆಯ ನೆಲೆಗಳಿಗೆ ಪೆಟ್ಟುಕೊಡಬೇಕೆನ್ನುವವರು ಇನ್ನೊೊಂದು ಕಡೆ ಇದ್ದರು ಎನ್ನುತ್ತಾಾರೆ. ಮುಂದುವರಿಸುತ್ತ ‘ಇವತ್ತು ಕಲಿಯುವವರು ಮೊದಲಿನಂತೆ ತಲೆಮಾರುಗಳಿಂದ ಕಲಿಕೆ ಮತ್ತು ತಿಳಿವಿನ ಹಕ್ಕನ್ನು ಪಡೆದುಕೊಂಡವರಷ್ಟೇ ಆಗಿಲ್ಲ. ಈಗ ಹಲವು ಮೂಲೆ ಮಕ್ಕಳು ಕಲಿಯುವ ವಲಯಕ್ಕೆೆ ಬರುತ್ತಿಿದ್ದಾಾರೆ. ಆದರೆ ಅವರು ಏನನ್ನು ಕಲಿಯಬೇಕು ಎಂದು ಹೇಳುವವರು ಮಾತ್ರ ಈ ಬದಲಾವಣೆಗೆ ತಾವೂ ಸಜ್ಜುಗೊಳ್ಳಬೇಕೆಂದು ತಿಳಿದಿಲ್ಲ. ಇದು ತಿಳಿವಿನ ಕೊರತೆಯೆಂದು ಹೇಳಲಾಗದು. ಬೇಕೆಂತಲೇ ಕಲಿಕೆಯಲ್ಲಿ ನಡೆಯಬೇಕಿದ್ದ ಬದಲಾವಣೆಗಳನ್ನು ಹತ್ತಿಿಕ್ಕುವುದು ಮತ್ತು ತಾರತಮ್ಯಗಳನ್ನು ಮುಂದುವರೆಸುವುದು ಗುರಿಗಳಾಗಿವೆ. ಇವು ಕೇವಲ ಹೇಳಿಕೆಗಳಲ್ಲ.

ಈ ನಿಬಂಧ ಅದಕ್ಕೆೆ ತಕ್ಕ ಪುರಾವೆಗಳನ್ನು ನಮ್ಮೆೆದುರು ತೆರೆದಿಡುತ್ತದೆ ಎನ್ನುತ್ತಾಾರೆ. ಭಾಷೆ, ವ್ಯಾಾಕರಣ, ಛಂದಸ್ಸುಗಳನ್ನು ಒಂದು

ಯಜಮಾನ ಸಂಸ್ಕೃತಿಯ ಭಾಗವಾಗಿ ಕಲಿಯುವ ಅಗತ್ಯವೇನಿದೆ? ಪ್ರಶ್ನಿಿಸುತ್ತಾಾರೆ.
ಇವುಗಳನ್ನು ಸವಾಲುಗಳೆನ್ನಿಿ, ಇಲ್ಲ ಅಭಿಪ್ರಾಾಯಗಳೆನ್ನಿಿ. ಏನೇ ಆದರೂ ಇವುಗಳಲ್ಲಿ ಗಂಭೀರವಾಗಿ ಯೋಚಿಸತಕ್ಕ ಅಂಶಗಳಿವೆಯೆನ್ನುವುದು ನಿರ್ವಿವಾದ. ಇವುಗಳೊಂದಿಗೆ ಕನ್ನಡ ಭಾಷೆ, ಬರಹಗಳನ್ನು ಅವು ಈಗಿರುವ ನೆಲೆಯಲ್ಲಿ ವಿಚಾರಿಸಿದಾಗ ಎರಡು ಅಂಶಗಳು

ಪರಿಭಾವನಾಯೋಗ್ಯ. ಮಾತು ಮತ್ತು ಬರವಣಿಗೆಯಲ್ಲಿ ತದ್ಭವ ಅಥವಾ ಗ್ರಾಾಮ್ಯಭಾಷೆಗಳ ಬಳಕೆ ಒಂದು, ಗ್ರಂಥಸ್ಥವಾದರೂ ಛಂದೋವ್ಯಾಾಕರಣಗಳ ನಿರ್ಬಂಧವಿಲ್ಲದ ಭಾಷೆಯ ಬಳಕೆ ಇನ್ನೊೊಂದು. ತದ್ಭವ ಮತ್ತು ಗ್ರಾಾಮ್ಯಭಾಷೆಗಳು ಸೊಗಸಾಗಿಯೇ ಇರುತ್ತವೆ. ಕನ್ನಡ ನಾಡಿನ ಭಾಷಾಶ್ರೀಮಂತಿಕೆಗೆ ಅವು ಅನನ್ಯ ಸಾಕ್ಷಿ. ಕನ್ನಡನಾಡಿನಲ್ಲಿ ನಾಲಗೆಯುಳ್ಳ ಆದಿಶೇಷನಿಗೂ ಅರಿಯಲಾಗದಷ್ಟು ಭಾಷಾವೈವಿಧ್ಯತೆಯಿದೆಯಲ್ಲ! ಒಮ್ಮೆೆ ದಾವಣಗೆರೆ ಕಡೆಯ ಮಿತ್ರರೊಂದಿಗೆ ಮಾತನಾಡಿ ಹೊರಡುವಾಗ ಅವರು

‘ಅಗಲಗಲ ಬನ್ರಿಿ ಅಂದರು. ನನಗೋ ದಿಗ್ಭಮೆ. ‘ಅಗಲಗಲ ಬರುವುದೆಂದರೇನು? ಆಮೇಲೆ ಅದು ‘ಆಗಾಗ್ಗೆೆ ಎಂಬುದರ ಪರ್ಯಾಯ ಪದವೆಂದು ಗೊತ್ತಾಾಯ್ತು. ಮಂಗಳೂರಿನಿಂದ ಧಾರವಾಡಕ್ಕೆೆ ಪ್ರವಾಸ ಹೋಗಿದ್ದಾಾಗ ಅಲ್ಲಿ ಮಾತನಾಡುವ ಕನ್ನಡ ಅರ್ಥವಾಗದೆ ತಬ್ಬಿಿಬ್ಬಾಾಗಿದ್ದರೂ ಉತ್ತರ ಕರ್ನಾಟಕದ ಭಾಷೆಯ ಇಂಪು, ಕಂಪು, ಧ್ವನಿ ನನಗೆ ಯಾವಾಗಲೂ ಇಷ್ಟ. ಇವೆಲ್ಲ ಎಷ್ಟೇ ಸೊಗಸಾಗಿದ್ದರೂ ಪ್ರಾಾದೇಶಿಕ ವೈಲಕ್ಷ್ಯಣ್ಯಗಳಿಗೆ ಬರವಣಿಗೆಯಲ್ಲಿ ಮಿತಿಗಳಿವೆ. ಆಡುಮಾತು ಮತ್ತು ಸೃಜನಶೀಲ ಸಾಹಿತ್ಯ(ಕತೆ, ಕಾದಂಬರಿ, ನಾಟಕ ಇತ್ಯಾಾದಿ)ದಲ್ಲಿ ಗ್ರಾಾಮೀಣ ಉಪಭಾಷೆಯನ್ನು ಬಳಸುವುದು ಅಪೇಕ್ಷಣೀಯವೇ.

ಆದರೆ ಸೃಜನೇತರ ಸಾಹಿತ್ಯದಲ್ಲಿ (ಶಾಸ್ತ್ರ, ಸಂಶೋಧನೆ, ಪ್ರಬಂಧ, ಭಾಷಣ, ವರದಿ, ನಿರೂಪಣೆ) ಎಲ್ಲರಿಗೂ ಒಪ್ಪಿಿತವಾಗುವ ಏಕರೂಪಿ ಗ್ರಂಥಸ್ಥಭಾಷೆಯೇ ಇರಬೇಕೆನ್ನುವುದು ನನ್ನ ಅಭಿಮತ. ಹಾಗೆಯೇ ಭಾಷೆಯಲ್ಲಿ ಅಪಾರ್ಥ, ಅಶ್ಲೀಲಾರ್ಥ, ಅನ್ಯಾಾರ್ಥಗಳು ನುಸುಳದಿರುವಷ್ಟಾಾದರೂ ಭಾಷೆ ವ್ಯಾಾಕರಣಶುದ್ಧವಾಗಿರಬೇಕು. ಕಲಿಕೆಯನ್ನು ಸರಳಗೊಳಿಸುವ ಕಾರಣಕ್ಕಾಾಗಿ ಶಾಸ್ತ್ರಾಾಧ್ಯಯನ ಬೇಡವೆನ್ನುವುದು ಅರ್ಥಹೀನ. ಪ್ರಾಾಥಮಿಕ ಹಂತದಿಂದಲೇ ಭಾಷಾಕಲಿಕೆಯೊಂದಿಗೆ ವ್ಯಾಾಕರಣ, ಛಂದಸ್ಸುಗಳ ಅಧ್ಯಯನವನ್ನೂ ಕಡ್ಡಾಾಯಗೊಳಿಸಿದರೆ ಬಹುಸುಲಭದಲ್ಲಿ ಗ್ರಹಿಸುತ್ತಾಾರೆ. ಕನ್ನಡನಾಡಿನ ಮಕ್ಕಳಿಗೆ ಅನ್ಯರಾಷ್ಟ್ರದ ಭಾಷೆಗಳನ್ನು ಕಲಿಯುವುದು ಸುಲಭಸಾಧ್ಯವಾದರೆ ತಮ್ಮ ಮಾತೃಭಾಷೆಯನ್ನು ಕಲಿಯುವುದು ಕಷ್ಟವೇ? ಕೇಶಿರಾಜ ಹೇಳುವಂತೆ ಯಾವ ಭಾಷೆಯಲ್ಲಿ ಸಂಬಂಧ, ಅಭಿಧೇಯ, ಶಕ್ಯಾಾನುಷ್ಠಾಾನ ಇರುವುದಿಲ್ಲವೋ ಅಂಥ ಭಾಷೆಯಿಂದ ಇಷ್ಟಸಿದ್ಧಿಿಯಾಗುವುದಿಲ್ಲ.