ಗಜೇಂದ್ರ ಚೌಹಾಣ್ ಶ್ರೀನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ, ಅರವಿಂದ್ ವರ್ಮಾ ಕೋಟ್‌ದ್ವಾರದಿಂದ ಸ್ಪರ್ಧಿಸಲಿದ್ದಾರೆ. ನಾರಾಯಣ ಸುರಡಿ ಅವರು ಧಾರ್ಚುಲಾದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದು, ಪ್ರಕಾಶ್‌ಚಂದ್ ಉಪಾಧ್ಯಾಯ ದ್ವಾರಹತ್ ನಿಂದ ಕಣಕ್ಕಿಳಿದಿದ್ದಾರೆ.
ಜಾಗೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾರಾದತ್ ಪಾಂಡೆ ಅವರನ್ನು ಪಕ್ಷ ಆಯ್ಕೆ ಮಾಡಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಆಯ್ಕೆಯಾದ ಇತರ ಅಭ್ಯರ್ಥಿಗಳೆಂದರೆ ಸಾಗರ್ ಪಾಂಡೆ, ಭುವನ್ ಆರ್ಯ, ಜರ್ನೈಲ್ ಸಿಂಗ್ ಕಾಲಿ ಮತ್ತು ಕುಲ್ವಂತ್ ಸಿಂಗ್ ಅವರು ಕ್ರಮವಾಗಿ ಭೀಮತಾಲ್, ನೈನಿತಾಲ್ (ಎಸ್‌ಸಿ), ಗದರ್‌ಪುರ ಮತ್ತು ಕಿಚ್ಚಾ ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿ ದಿದ್ದಾರೆ.
ಒಟ್ಟು 70 ಸ್ಥಾನಗಳ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಕುರಿತು ಶನಿವಾರ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಉತ್ತರಾ ಖಂಡ ಸೇರಿದಂತೆ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಮತ್ತು ಉತ್ತರಾಖಂಡದ ಮತ ಎಣಿಕೆ ಮತ್ತು ಫಲಿತಾಂಶ ಮಾರ್ಚ್ 10ರಂದು ನಡೆಯಲಿದೆ.
ಕೋವಿಡ್- 19 ಹಿನ್ನೆಲೆಯಲ್ಲಿ ಜ.15ರವರೆಗೆ ಯಾವುದೇ ಭೌತಿಕ ರಾಜಕೀಯ ಮೆರವಣಿಗೆಗಳು ಮತ್ತು ರೋಡ್‌ಶೋಗಳನ್ನು ಅನುಮತಿಸ ಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ನಿರ್ದೇಶಿಸಿದೆ. ಆದಾಗ್ಯೂ, ಮುಂದಿನ ಮೆರವಣಿಗೆಗಳು ಮತ್ತು ಚುನಾವಣಾ ಪ್ರಚಾರ ಸಭೆಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮತ್ತು ಜಿಲ್ಲಾಡಳಿತದ ಪೂರ್ವಾನುಮತಿಯೊಂದಿಗೆ ಮಾತ್ರ ಅನುಮತಿಸಲಾಗುವುದು.
ಉತ್ತರಾಖಂಡ ಸರ್ಕಾರವು ಜ.16ರವರೆಗೆ ರಾಜ್ಯದಲ್ಲಿ ಎಲ್ಲಾ ರಾಜಕೀಯ ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ.