Sunday, 15th December 2024

ಕೊನೆಯ ಪಂದ್ಯದಲ್ಲೂ ಜಯ

ದೆಹಲಿ:
ಜೆಮಿಮಾ ರೊಡ್ರಿಿಗಸ್(50) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ 57) ಇವರ ಭರ್ಜರಿ ಬ್ಯಾಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ, ವೆಸ್‌ಟ್‌ ಇಂಡೀಸ್ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ 61 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತ ವನಿತೆಯರು ಕ್ಲೀನ್ ಸ್ವೀಪ್ ಮಾಡಿಕೊಂಡರು. ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆೆ ರನ್ ಕಲೆ ಹಾಕಿತು. ಗುರಿ ಹಿಂಬಾಲಿಸಿದ ಆತಿಥೇಯ ವೆಸ್‌ಟ್‌ ಇಂಡೀಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಗೆ 73 ರನ್ ಗಳಿಗೆ ಶಕ್ತವಾಯಿತು.