Saturday, 14th December 2024

ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಮಾನ್ ರಾಜೀನಾಮೆ

ಜಲಂಧರ್: ಶುಕ್ರವಾರ ಕಾಂಗ್ರೆಸ್‌ಗೆ ಮತ್ತು ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್‌ನ ಅಧ್ಯಕ್ಷ ಸ್ಥಾನಕ್ಕೆ ಜೋಗಿಂದರ್ ಸಿಂಗ್ ಮಾನ್ ರಾಜೀನಾಮೆ ನೀಡಿದರು.

ಈ ಮೂಲಕ ಪಂಜಾಬ್‌ನ ಮಾಜಿ ಸಚಿವ ಮತ್ತು ಫಗ್ವಾರಾದಲ್ಲಿ ಪಕ್ಷದ ಪರಿಶಿಷ್ಟ ಜಾತಿ ನಾಯಕ ಜೋಗಿಂದರ್ ಸಿಂಗ್ ಮಾನ್ ಅವರು ಕಾಂಗ್ರೆಸ್‌ನೊಂದಿಗೆ ಐದು ದಶಕಗಳ ಕಾಲದ ಸಂಬಂಧಕ್ಕೆ ತೆರೆ ಎಳೆದರು.

ವಾಲ್ಮೀಕಿ ಮಾಧ್ವಿ ಸಿಖ್ ಆಗಿರುವ ಮಾನ್ ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸ ದಿದ್ದರೂ, ಅವರು ಆಮ್ ಆದ್ಮಿ ಪಕ್ಷದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ, ‘ನಾನು ಸತ್ತಾಗ ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ನನ್ನ ದೇಹಕ್ಕೆ ಸುತ್ತಿಕೊಳ್ಳ ಬಹುದು ಎಂದು ನಾನು ಕನಸು ಕಂಡೆ. ಆದರೆ ಪೋಸ್ಟ್- ಮೆಟ್ರಿಕ್ ವಿದ್ಯಾರ್ಥಿವೇತನ ಹಗರಣದಲ್ಲಿ ಕಾಂಗ್ರೆಸ್ ತಪ್ಪಿತಸ್ಥ ಎಂದಾಗ ನನ್ನ ಆತ್ಮಸಾಕ್ಷಿಯು ನನ್ನನ್ನು ಇಲ್ಲಿ ಉಳಿಯಲು ಬಿಡುವುದಿಲ್ಲ ಎಂದಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಅವರು ಹಗರಣದಿಂದ ವೃತ್ತಿಜೀವನವನ್ನು ನಾಶಪಡಿಸಿದ ಲಕ್ಷಾಂತರ ಎಸ್‌ಸಿ ವಿದ್ಯಾರ್ಥಿಗಳ ಆಲೋಚನೆಗಳಿಂದ ನಾನು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹಾಲಿ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ ಅವರ ಮುಂದೆ ಫಗ್ವಾರಾಗೆ ಜಿಲ್ಲಾ ಸ್ಥಾನಮಾನ ನೀಡಿ ಎಂದು ಪದೇ ಪದೇ ಕೇಳಿದ್ದೇನೆ ಎಂದು ಮಾನ್ ಹೇಳಿದರು. ಫಗ್ವಾರಾ ನಿವಾಸಿಗಳ ಬಹುಕಾಲದ ಬೇಡಿಕೆಯನ್ನು ಮುಖ್ಯಮಂತ್ರಿಗಳು ನಿರ್ಲಕ್ಷಿಸಿದ್ದಾರೆ ಎಂದು ಮಾನ್ ಹೇಳಿದ್ದಾರೆ.