ಕೇಂದ್ರವು ಎಂಎಸ್ಪಿ ಕುರಿತು ಸಮಿತಿಯನ್ನು ರಚಿಸಿಲ್ಲ ಅಥವಾ ಅದರ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ. ಲಖಿಂಪುರ ಖೇರಿ ಘಟನೆಯಲ್ಲಿ ಭಾಗಿಯಾಗಿರುವ ಆಶಿಸ್ ಮಿಶ್ರಾ ಅವರ ತಂದೆ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಕೇಂದ್ರ ಸರ್ಕಾರ ಅಧಿಕಾರದಿಂದ ತೆಗೆದುಹಾಕಿಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ನಾವು ಜ.31 ರಂದು ‘ವಿರೋಧ್ ದಿವಸ್’ ಆಚರಿಸುತ್ತೇವೆ ಎಂದು ಬಿಕೆಯುನ ಯುಧ್ವೀರ್ ಸಿಂಗ್ ಹೇಳಿದ್ದಾರೆ.
ಸರ್ಕಾರವು ನಮ್ಮ ಬೇಡಿಕೆಗಳಿಗೆ ಇನ್ನೂ ಸ್ಪಂದಿಸಿಲ್ಲ. ನಾವು ಜ.31 ರಂದು ದೇಶದಾದ್ಯಂತ ಸರ್ಕಾರದ ಪ್ರತಿಕೃತಿ ಗಳನ್ನು ಸುಡುತ್ತೇವೆ. ಫೆಬ್ರವರಿ 1 ರಿಂದ ಉತ್ತರಪ್ರದೇಶ ದಲ್ಲಿ ಒಕ್ಕೂಟವು ಮತ್ತೆ ಆಂದೋಲನವನ್ನು ಪುನರಾ ರಂಭಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜ.21 ರಿಂದ 3-4 ದಿನಗಳ ಕಾಲ ಲಖಿಂಪುರ ಖೇರಿಯಲ್ಲಿ ಸಂತ್ರಸ್ತ ರೈತ ಕುಟುಂಬಗಳನ್ನು ಭೇಟಿ ಮಾಡಲಿದ್ದೇನೆ ಎಂದು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ನಾವು ಜನವರಿ 21 ರಿಂದ 3-4 ದಿನಗಳ ಕಾಲ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಭೇಟಿ ನೀಡುತ್ತೇವೆ. ಜೊತೆಗೆ ಸಂತ್ರಸ್ತ ರೈತರ ಕುಟುಂಬ ಗಳನ್ನು ಭೇಟಿ ಮಾಡುತ್ತೇವೆ ಎಂದು ಟಿಕಾಯತ್ ಹೇಳಿದ್ದಾರೆ.