Thursday, 12th December 2024

ಮೋಟಾರ್ ಸೈಕಲ್ – ಸ್ಫೋಟಕ ಸಾಗಿಸುತ್ತಿದ್ದ ಟ್ರಕ್ ಡಿಕ್ಕಿ: 17 ಮಂದಿ ಸಾವು

ಘಾನಾ : ಗಣಿಗಾರಿಕೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು 17 ಜನರು ಮೃತಪಟ್ಟಿದ್ದಾರೆ. ಪಶ್ಚಿಮ ಘಾನಾದಲ್ಲಿ ಈ ಘಟನೆ ನಡೆದಿದೆ.

ಪಶ್ಚಿಮ ಆಫ್ರಿಕಾ ದೇಶದ ರಾಜಧಾನಿ ಅಕ್ರಾದಿಂದ ಪಶ್ಚಿಮಕ್ಕೆ 300 ಕಿ.ಮೀ ದೂರದಲ್ಲಿರುವ ಗಣಿ ನಗರ ಬೊಗೊಸೊ ಬಳಿಯ ಅಪಿಯಾಟೆಯಲ್ಲಿ ಅಪಘಾತ ಸಂಭವಿಸಿದೆ.

ಖನಿಜ ಸಮೃದ್ಧ ಪ್ರದೇಶದ ಎರಡು ಚಿನ್ನದ ಗಣಿಗಳ ನಡುವೆ ಪ್ರಯಾಣಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ನಂತರ ಸ್ಫೋಟ ಸಂಭವಿಸಿದ್ದು, 17 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ಸ್ಥಳೀಯ ಮಾಧ್ಯಮಗಳಿಗೆ ಅಧಿಕಾರಿಗಳು ಇಲ್ಲಿಯವರೆಗೆ ಸುಮಾರು 17 ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.