ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ದುನಿಯಾ ಚಿತ್ರದಿಂದ ಛಾಯಾಗ್ರಾಹಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿಕೊಂಡಿರುವ ಸತ್ಯ ಹೆಗಡೆ ಅದಕ್ಕೆ ಯಾವ ಶಾರ್ಟ್ ಕಟ್ ಅನ್ನೂ ಬಳಸಿಕೊಂಡಿರಲಿಲ್ಲ.
ಅವರದ್ದು ಶುದ್ಧ ಶ್ರಮ ಮತ್ತು ಪ್ರತಿಭೆ. ಈಗ ಸತ್ಯ ಹೆಗಡೆ ಶಾರ್ಟ್ ಕಟ್ ಹಾದಿ ತುಳಿದಿದ್ದಾರೆ ಎಂದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ಚಿತ್ರರಂಗದಲ್ಲಿ
ಇಷ್ಟು ವರ್ಷಗಳ ಅನುಭವದ ನಂತರ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ ಸತ್ಯ ಹೆಗಡೆ. ಅದಕ್ಕೆ ಆವರು ಆಯ್ದುಕೊಂಡಿರುವುದು ಶಾರ್ಟ್ ಸಿನಿಮಾಗಳನ್ನು. ಮಂಸೋರೆ ನಿರ್ದೇಶನದ ದಿ ಕ್ರಿಟಿಕ್ ಮತ್ತು ಅಭಿಷೇಕ್ ಕಾಸರಗೋಡು ನಿರ್ದೇಶನದ ಪಪ್ಪೆಟ್ಸ ಎಂಬ ಎರಡು ಕಿರುಚಿತ್ರಗಳ ಮೂಲಕ ತಮ್ಮ ನಿರ್ಮಾಣ ಕಾಯಕ ಶುರು ಮಾಡಿರುವ ಸತ್ಯ ಇತ್ತೀಚೆಗೆ ಈ ಎರಡು ಚಿತ್ರಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಪ್ರತಿಭಾವಂತರ ಹೊಸ ತಂಡಗಳಿಗೆ ನಮ್ಮ ಸತ್ಯ ಸ್ಟುಡಿಯೋಸ್ ಮೂಲಕ ವೇದಿಕೆ ಕಲ್ಪಿಸಿಕೊಡುತ್ತೇವೆ. ಆಸಕ್ತಿಯಿರುವವರು ನಮ್ಮನ್ನು ಸಂಪರ್ಕಿಸಬಹುದು ಎನ್ನುವ ಸತ್ಯ ಹೆಗಡೆ ಚಿತ್ರರಂಗದಲ್ಲಿ ಹೊಸದೊಂದು ಛಾಪನ್ನು ಮೂಡಿಸಿದ್ದಾರೆ ಎಂದೇ ಹೇಳಬಹುದು. ಇನ್ನು, ಸಿನಿಮಾ ಹೀರೋಗಳು ನಿರ್ಮಾಪಕರಾಗುವ ಪ್ರಕ್ರಿಯೆ ಚಿತ್ರರಂಗದಲ್ಲಿ ಹೊಸದೇನೂ ಅಲ್ಲ. ನಿರ್ಮಾಪಕರಾದವರು ಹೀರೋ ಆಗ್ತೀನಿ ಅಂದಾಗ ಮಾತ್ರ ಚಿತ್ರರಂಗದ ಪ್ರೇಕ್ಷಕ ಬೆಚ್ಚಿಬೀಳುತ್ತಾನೆ. ಆದರೆ, ನಟನೊಬ್ಬ ನಿರ್ಮಾಪಕನಾದರೆ, ಅದು ಆತನ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತದೆ.
ಈಗ ನಟ ವಿನೋದ್ ಪ್ರಭಾಕರ್ ಕೂಡ ಹುಲಿ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಹೋಮ್ ಬ್ಯಾನರ್ಗೆ ಹೆಸರಿಡುವ ವಿಷಯ ಬಂದಾಗ ತಮ್ಮ ತಂದೆ ಪ್ರಭಾಕರ್ ಅವರಿಗಿದ್ದ ಟೈಗರ್ ಎಂಬ ಬಿರುದನ್ನೇ ತಮ್ಮ ಹೋಮ್ ಬ್ಯಾನರ್ ಗೆ ಇಟ್ಟು ಟೈಗರ್ ಟಾಕೀಸ್ ಶುರು ಮಾಡಿದ್ದಾರೆ ವಿನೋದ್. ಅವರ ನಾಯಕತ್ವದಲ್ಲಿ ಟೈಗರ್ ಟಾಕೀಸ್ನ ಮೊದಲ ಕಾಣಿಕೆಯಾಗಿ ‘ಲಂಕಾಸುರ’ ಚಿತ್ರ ನಿರ್ಮಾಣ ವಾಗುತ್ತಿದೆ. ಹಾಗಾಗಿ, ಖಳನಾಯಕರಾಗಿ ಹೆಸರು ಮಾಡಿದ್ದ ಪ್ರಭಾಕರ್ ಅವರ ಪುತ್ರ, ತಮ್ಮ ನಿರ್ಮಾಣದ ಮೊದಲ ಚಿತ್ರಕ್ಕೂ ‘ಲಂಕಾಸುರ’ ಎಂಬ ಖಳನಾಯಕ ನ ಹೆಸರನ್ನೇ ಇಟ್ಟಿದ್ದಾರೆ ಎನ್ನಬಹುದು.
ಲೂಸ್ ಟಾಕ್
ಡೋಲೋ ೬೫೦(ಕಾಲ್ಪನಿಕ ಸಂದರ್ಶನ)
? ಏನ್ ಗುರೂ, ನಿಂದೇ ಹವಾ ಆಗ್ಬಿಟ್ಟಿದೆ ಊರ್ ತುಂಬಾ?
-ಹೌದು ಮತ್ತೆ, ಗುಳಿಗೆ ಸೇಲ್ ಆಗೋಕೂ, ಗಳಿಗೆ ಕೂಡಿ ಬರ್ಬೇಕು ಅಂತ ದೊಡ್ಡೋರೇ ಹೇಳಿದ್ದಾರಲ್ಲ.
? ಆದ್ರೂ, ಇದ್ದಕ್ಕಿದ್ದಂಗೆ ನಿನ್ನ ಸೇಲ್ ಅಷ್ಟೊಂದ್ ಜಾಸ್ತಿ ಆಗಿದ್ದು ಹೆಂಗೆ?
-ಅದು ಮಾಮೂಲಿ ಕೆಮ್ಮು ನೆಗಡಿ ಜ್ವರ ಬಂದು, ಇದು ಕರೋನಾನಾ ಅಲ್ವಾ ಅಂತ ಗೊತ್ತಿಲ್ದೆ, ಡೋಲಾಯಮಾನ ಸ್ಥಿತಿಯಲ್ಲಿರೋರೂ ಡೋಲೋ ೬೫೦
ತಗೊಳ್ಳೋಕೆ ಶುರು ಮಾಡಿದ್ರು. ಹಂಗಾಗಿ ನಂಗೆ ವರ್ಕ್ ಔಟ್ ಆಯ್ತು.
? ಆದ್ರೂ, ಇ ದಿನ ಇಲ್ಲದೇ ಇದ್ದಿದ್ದು, ಈಗ ಇದ್ದಕ್ಕಿದ್ದಂಗೆ ರಾತ್ರೋ ರಾತ್ರಿ ಸ್ಟಾರ್ ಆಗ್ಬಿಟ್ಯ ನೀನು?
-ಹೌದೌದು, ಎಲ್ರೂ, ‘ಹಳೇ ಮಾತ್ರೆ, ಹಳೇ ಕಬ್ಣಾ, ಹಳೇ ಝಿಂಕು’ ಅಂತ ಮಾತ್ರೆ ತಗೊಳ್ತಾ ಇರೋದ್ರ ಪರಿಣಾಮ.
? ಅದು ನಿಜ ಬಿಡು, ಆದ್ರೆ ಈ ಡೋಲೋ ೬೫೦ ಮಾತ್ರೆ ತಗೊಂಡ್ರೆ ಸೈಡ್ ಎಫೆಕ್ಟ್ ಏನೂ ಆಗಲ್ವಾ?
-‘ಆಗುತ್ತೆ ಕಣಪ್ಪಾ.. ಮಾತ್ರೆ’ ತಗೊಂಡೋರಿಗೆ ಕನ್ನಡ ವ್ಯಾಕರಣ ಚೆನ್ನಾಗಿ ಬರುತ್ತೆ.
? ಸರಿ, ಕೊನೆಗೊಂದ್ ಪ್ರಶ್ನೆ, ಈ ಕರೋನಾ, ಇದೆಯಾ, ಇಲ್ವಾ? ನೀನಾದ್ರೂ ಹೇಳ್ತೀಯಾ?
-ಅಯ್ಯೋ, ಸುಮ್ನಿರಪ್ಪಾ, ಹಂಗೆ ಮಾತ್ರೆ ತಯಾರು ಮಾಡೋರು ಮತ್ತು ನುಂಗೋರ ಹೊಟ್ಟೆ ಮೇಲೆ ಹೊಡೀಬಾರ್ದು.
ನೆಟ್ ಪಿಕ್ಸ್
ಒಂದು ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಧಿಕಾರಿಗಳಿದ್ದರು. ಖೇಮು ಮತ್ತು ಸೋಮು. ಅದರಲ್ಲಿ ಖೇಮುವನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು.
ಹಾಗಾಗಿ ಆಗ ತಾನೇ ಮದುವೆ ಆಗಿದ್ದ ಖೇಮು ಅನಿವಾರ್ಯವಾಗಿ ಯುದ್ಧಕ್ಕೆ ಹೋಗಬೇಕಾಯಿತು. ಮಹಾರಾಜ ಕೂಡ ದೇಶ ಮುಖ್ಯ ಮೊದಲು ನೀನು ಯುದ್ಧಭೂಮಿಗೆ ಹೋಗಿ ನೀನು ಹೊಸರಾಜ ಅನೋದನ್ನ ಪ್ರೂವ್ ಮಾಡು ಅಂದ. ಸರಿ ಅಂತ ಖೇಮು ಹೊರಟ. ಆದರೆ ಅವನಿಗೆ ಹೊಸದಾಗಿ ಮದುವೆ ಆಗಿದ್ದ ಹೆಂಡತಿಯನ್ನ ಬಿಟ್ಟು ಹೋಗೋಕೆ ಮನಸ್ಸಿರಲಿಲ್ಲ. ಆದರೆ ಏನ್ ಮಾಡೋದು. ರಾಜ್ಯದ ನೀತಿ ನಿಯಮದ ಪ್ರಕಾರ ಮಹಾರಾಜರ ಆಜ್ಞೆ ಪಾಲಿಸಬೇಕಾಗಿತ್ತು. ಅದರ ಪ್ರಕಾರ ಸೋಮುವನ್ನು ಕರೆದು ಹೇಳಿದ ಖೇಮು, ನೋಡು ಸೋಮು, ‘ನಾನೀಗ ಯುದ್ಧಭೂಮಿಗೆ ಹೋಗ್ತಾ ಇದ್ದೀನಿ. ನಾನು ಗೆದ್ದು ಬಂದರೆ ಸಂತೋಷ, ಆಕಸ್ಮಾತ್ ನಾನು ಸತ್ತು ಹೋದರೆ, ಮುಂದೆ ನೀನೇ ರಾಜ್ಯ ಆಳಬೇಕು. ಅಲ್ಲದೆ, ನಾನು ಮದುವೆ ಆಗಿರುವ ಹುಡುಗಿ ಕೂಡ ನಿನ್ನವಳಾಗುತ್ತಾಳೆ.
ಹಾಗಾಗಿ ಆಕೆಯನ್ನು ನನ್ನ ಕೋಣೆಯಲ್ಲಿಟ್ಟು ಬೀಗ ಹಾಕಿದ್ದೇನೆ. ಇದರ ಕೀ ಇಲ್ಲಿದೆ. ನಾನು ವಾಪಸ್ಸು ಬರದೇ ಇದ್ದರೆ ಮಾತ್ರ ಈ ಕೀ ಬಳಸಿ, ಬೀಗ ತೆಗೆ. ಆಕೆ
ನಿನ್ನವಳಾಗುತ್ತಾಳೆ’. ಸರಿ, ಖೇಮು ಕೀ ಕೊಟ್ಟು ಹೊರಟ. ಆದರೆ, ಕುದುರೆ ಹತ್ತಿ ಸ್ವಲ್ಪ ದೂರ ಹೋದಮೇಲೆ ಹಿಂದಿನಿಂದ ಯಾರೋ ಕೂಗಿದ ಹಾಗಾಯಿತು.
ಕುದುರೆಯಿಂದ ಇಳಿದು, ಹಿಂದೆ ನೋಡಿದರೆ ಯಾರೋ ಧೂಳೆಬ್ಬಿಸಿಕೊಂಡು, ಇನ್ನೊಂದು ಕುದುರೆಯ ಮೇಲೆ ಬರ್ತಾ ಇದ್ದುದು ಕಾಣಿಸಿತು. ಸ್ವಲ್ಪ ಹೊತ್ತು ನಿಂತು
ನೋಡಿದರೆ ಅಲ್ಲಿ ಬರ್ತಾ ಇದ್ದುದು, ಸೋಮು. ಸೋಮು ತೀರಾ ಅವಸರದಿಂದ ಕುದುರೆಯಿಂದ ಇಳಿದು ಖೇಮು ಬಳಿಗೆ ಬಂದ. ಏನಾಯ್ತು ಸೋಮು?, ಅಂತ
ಖೇಮು ಕೇಳಿದ್ದಕ್ಕೆ ಸೋಮು ಹೇಳಿದ, ಖೇಮು, ನೀನು ಬೈ ಮಿಸ್ಟೇಕ್ ರಾಂಗ್ ಕೀ ಕೊಟ್ಟಿದ್ದೀಯ’
ಲೈನ್ ಮ್ಯಾನ್
? ಕೆಲವರು ಕುಡಿದ ಮೇಲೆ ಫೇಸ್ ಬುಕ್ ನಲ್ಲಿ ಪೋ ಹಾಕ್ತಾರೆ, ಆದ್ರೆ ಟ್ವೀಟ್ ಮಾಡಲ್ಲ ಯಾಕೆ?
-ಯಾಕಂದ್ರೆ, ‘ಟ್ವಿಟ್ಟರ್ ನಲ್ಲಿ ಹಾಕೋಕೆ ಇ ಅಕ್ಷರ ಅಂತ ಲಿಮಿಟ’ ಇರುತ್ತೆ.
? ಬಿಜೆಪಿಯವರು ಇತಿಹಾಸದ ಎಲ್ಲ ವಿಷಯಗಳಿಗೂ ಕೇಸರಿ ಬಣ್ಣ ದ ಜತೆ ಲಿಂಕ್ ಮಾಡ್ತಾ ಇರೋದ್ ನೋಡಿದವರು ಹೇಳಿದ್ದು
-ಎಲ್ಲದಕ್ಕೂ ಕೇ‘ಸರಿ’ ಬಣ್ಣ ಬಳಿಯೋದು ತಪ್ಪು’
? ಪಾರ್ಕಿನಲ್ಲಿ ಬೆಳೆದು ನಿಂತ ಹೂವುಗಳನ್ನು ಕೀಳುವವರದ್ದು
-‘ಕೀಳು’ ಜಾತಿ
? ಎಲ್ಲದಕ್ಕೂ ಅದೇನ್ ಕಿತ್ಕೊತೀಯಾ ಕಿತ್ಕೋ ಅನ್ನೋದು
-‘ಕೀಳು’ ಅಭಿರುಚಿ
? ಕವಿ ಆಗಿ ೧೪ ವರ್ಷ ಅನುಭವ ಇರೋನ ಸಾಧನೆ
-ಕ‘ವನವಾಸ’
? ಕೈ ನಡುಗುವ ಖಾಯಿಲೆ ಇರೋನ ಸಮಸ್ಯೆ
-ಯಾರ ಜೊತೆಗಾದ್ರೂ ‘ಹ್ಯಾಂಡ್ ಶೇಕ್’ ಮಾಡೋದು ಕಷ್ಟ
? ಅನುಮಾನದ ಆಧಾರದ ಮೇಲೆ ಮಾಡಿದ ವರದಿ
-Whether ರಿಪೋರ್ಟ್
? ಉತ್ತರ ಪ್ರದೇಶದಲ್ಲಿ ಅಷ್ಟೊಂದ್ ಸಮಸ್ಯೆ ಇದ್ರೂ, ‘ರಾಜ್ಯ ಅಭಿವೃದ್ಧಿ ವಿಷಯದಲ್ಲಿ ಮೇಲೆ’ ಹೋಗ್ತಾ ಇದೆ ಅಂತ ಬಿಜೆಪಿಯೋರು ಹೇಳೋದ್ಯಾಕೆ
ಯಾಕಂದ್ರೆ, ಅದರ ಹೆಸರೇ ’’UP’
? ಟೆಲಿ ಪ್ರಾಂಪ್ಟರ್ ಕೈ ಕೊಟ್ಟಿದ್ದರಿಂದ ಏನ್ ಗೊತ್ತಾಯ್ತು?
-ಪ್ರಧಾನಿ ಮೋದಿ, ಪ್ರಾಂ ಆಗಿ ಕೆಲ್ಸ ಮಾಡ್ತಾ ಇzರೆ ಅಂತ ಗೊತ್ತಾಯ್ತು.
ಕ್ರಿಕೆಟ್ ನ್ಯೂಸ್
? ಇವ್ರ್ ಆಡ್ತಾ ಇರೋ ಹುಟ್ಟು ನೋಡಿದ್ರೆ ಇವರಿಗೆ ಲಕ್ಷ, ಲಕ್ಷ ಕೊಡೋದು ವೇಸ್ಟು, ಇನ್ಮೇಲೆ ಏಕದಿನ ಪಂದ್ಯಗಳಿಗೆ ದಿನಗೂಲಿ’ ಆಧಾರದ ಮೇಲೆ ಆಟಗಾರರ ನೇಮಕ ಮಾಡ್ಕೊತೀವಿ
-ಗಂ‘ಗೂಲಿ