Thursday, 12th December 2024

ಗುಲಾಮ್‌ ಅಲಿಯೇ ? ಗುಲಾಮಗಿರಿಯೇ ?

ರಾವ್ ಭಾಜಿ 

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ನವ ಇತಿಹಾಸದ ಉದ್ದಕ್ಕೂ, ಐರೋಪ್ಯರ ಪ್ರಭಾವ ಭಾರತದ ಮೇಲೆ ಸಾಕಷ್ಟಾಗಿದೆ.ನಮ್ಮ ಆಡಳಿತದ ಮಾದರಿ ಅವರದ್ದೇ. ನಮ್ಮ ನ್ಯಾಯಾಂಗ
ವ್ಯವಸ್ಥೆಯೂ ಅಲ್ಲಿಯದ್ದೇ. ನಮ್ಮದೇ ಬಹುಸಂಸ್ಕೃತಿ ಪಾಶ್ಚಿಮಾತ್ಯರ ಸೋಂಕು ತಾಕಿ ಸೆಕ್ಯುಲರಿಸಂ ಪಿಡುಗು ಸರ್ವವ್ಯಾಪಿಯಾಗಿದೆ.

ಕಳೆದ ಹಲವಾರು ದಿನಗಳಿಂದ ಗಝಲ್ ಮಾಂತ್ರಿಕ ಗುಲಾಮ್ ಅಲಿಯ ಗುಂಗಲ್ಲಿದ್ದೇನೆ. ಪೌಡರ್‌ಭರಿತ ಕೇರಮ್ ಬೋರ್ಡಿನ ಪೌಚ್ ಬಳಿಯ ಪಾನಿಗೆ ಗುರಿ ಯಿಟ್ಟು ತೋರುಬೆರಳಿನಿಂದ ಸ್ಟ್ರೈಕರನ್ನು ತಳ್ಳುವಾಗ ಕಾಯಿ ಜತೆಗೆ ಸ್ಟ್ರೈಕರ್ರೂ ಪೌಚೊಳಗೆ ಬೀಳದಂತೆ ನಯವಾಗಿ ಹೊಡೆಯುವ ಚಾಂಪಿಯನ್ ಆಟಗಾರನಷ್ಟು ನವಿರಾಗಿ ಒಂದೊಂದೂ ಪದವನ್ನು ತನ್ನ ದನಿ ಪೆಟ್ಟಿಗೆಯಿಂದ ಹೊರಸೂಸುವ ಅಲಿಯ ಗಾಯನದ ನವಿರು ಬೇರಾವ ಗಝಲ್ ಗಾಯಕನಲ್ಲೂ ಕಾಣಸಿಗದು.

ಪಾಕಿಸ್ತಾನ್ ಪ್ರಜೆ ಎಂಬ ಕಾರಣಕ್ಕೆ ಅವರನ್ನು ದೂರಮಾಡಲಾರೆ. ಅವರ ಮೂರ್ನಾಲ್ಕು ಗೀತೆಗಳನ್ನು ಬಿಡುವಾದಾಗಲೆಲ್ಲ ಕೇಳುತ್ತಿದ್ದೇನೆ. ಸುಪ್ರಭಾತವೂ ಅದೇ, ರಾತ್ರಿಯ ಜೋಗುಳವೂ ಅದೇ. ಸ್ನಾನದ ವೇಳೆ ಯಲ್ಲಿ, ನನ್ನ ರಿಯಾಜ್ ಅಲಿ ಸಾಂಗತ್ಯಗುದ ನಡೆಯುತ್ತದೆ. ಆತನ ಗಾಯನ ಸಕಲ ದುಗುಡಗಳನ್ನೂ ಕಳೆಯು ತ್ತದೆ. ಕೋರ್ಟಿನ ತೀರಾ ಒಳಕ್ಕೆ ಬಿಟ್ಟುಕೊಂಡು ಕೆಡವಿಬಿಡುವ ಎದುರಾಳಿ ಕಬಡ್ಡಿ ಆಟಗಾರರಂತೆ, ಕೇಳಿದ ಎರಡೇ ನಿಮಿಷದಲ್ಲಿ ಕಲ್ಪನಾಲೋಕಕ್ಕೆ ಎಳೆದು ಕೊಂಡು ಹೋಗಿ ಎಲ್ಲವನ್ನೂ ಮರೆಸಿಬಿಡುತ್ತಾರೆ ಅಲಿ. ಸಂಗೀತದ ತಾಕತ್ತೇ ಅದಲ್ಲವೇ? ವಾರಾಣಸಿಯ ಸಂಕಟ ಮೋಚನ ಮಂದಿರದಲ್ಲಿ ನರೇಂದ್ರ ಮೋದಿಯ ಸಮಕ್ಷಮದಲ್ಲಿ ಅಲಿ ಹಾಡಿ, ಪ್ರಧಾನ ಮಂತ್ರಿಗಳ ಹೃದಯವನ್ನು ಗೆದ್ದು ಏಳು ವರ್ಷಗಳಾಗುತ್ತ ಬಂದವು. ಜಿಹಾದಿಗಳೆಲ್ಲರೂ ಗುಲಾಮ್ ಅಲಿಯಂತಿದ್ದಿದ್ದರೆ!

ಸಾಹಿತ್ಯ ಸಂಗೀತಗಳ ಉಚ್ಚ್ರಾಯ ಸ್ಥಿತಿ ಕಂಡ ಯುರೋಪ್ ಖಂಡದಲ್ಲಿ ಜಿಹಾದಿಗಳ ಪ್ರಾಬಲ್ಯ ಆತಂಕಕಾರಿ ಯಾಗಿ ಹೆಚ್ಚುತ್ತಿದೆ. ಕಿರಿಸ್ತಾನರನ್ನು ಹಿಂಸೆಗೆ ಗುರಿ ಪಡಿಸಿದ ರೋಮ್‌ನ ಐದನೇ ಚಕ್ರವರ್ತಿ ನೀರೋ ಕ್ಲಾಡಿಯಸ್, ರಾಜ್ಯಕ್ಕೆ ಕಿಚ್ಚು ಹತ್ತಿಸಿ ತಾನು ಪಿಟೀಲನ್ನು ಕುಯ್ಯುತ್ತಾ ಕುಳಿತದ್ದನ್ನು ನೆನಪಿಸುವಂತೆ ಯೂರೋಪ್ ಬೇಗುದಿಗೆ ಸಿಕ್ಕಿದೆ. ರಾಜಕೀಯವಾಗಿ ಯಾವ ಬಹುಸಂಸ್ಕೃತಿ ಪರಂಪರೆಯನ್ನು ಪೋಷಿಸಿಕೊಂಡು ಬರಲಾಗಿದೆಯೋ ಆ ಔದಾರ್ಯ ಅದರ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಕೊಡಲಾರಂಭಿಸಿದೆ.

ಅಲ್ಲಿಯ ಇತ್ತೀಚಿನ ವಿದ್ಯಮಾನಗಳ ಕೆಲವು ಉದಾಹರಣೆಗಳನ್ನು ಗಮನಿಸಿ. ವಿದೇಶೀ ಮಹಿಳೆಯರ ಸಂಖ್ಯೆ ಬೆಲ್ಜಿಯಮ್‌ನ ಒಟ್ಟು ಸಂತಾನೋತ್ಪತ್ತಿ ವಯಸ್ಸಿನ ಹೆಂಗಸರ ಆರನೇ ಒಂದರಷ್ಟಿದೆ. ಆದರೆ ಅಲ್ಲಿನ ರಾಷ್ಟ್ರೀಯ ಸಂಖ್ಯಾಶಾಸ ಸಂಸ್ಥೆಯ ವರದಿಯಂತೆ ಬೆಲ್ಜಿಯಮ್ ದೇಶದ ಒಟ್ಟಾರೆ ಜನಸಂಖ್ಯೆಯ ಮೂರನೇ ಒಂದರಷ್ಟು ಮಂದಿ ವಿದೇಶೀ ಮಹಿಳೆಯರ ಸಂತಾನ. ಫಾಜಿಯಾ ಝೋವಾರಿ ಎಂಬ (ಮುಸ್ಲಿಂ) ಪತ್ರಕರ್ತೆ ಹೇಳುತ್ತಾಳೆ: ಆಂಟ್ವರ್ಪ್ ನಗರದಲ್ಲಿನ ಒಂದರಿಂದ ಆರು ವರ್ಷದ ವಯಸ್ಸಿನ ಒಟ್ಟು ಜನಸಂಖ್ಯೆಯಲ್ಲಿ ಶೇ.78 ರಷ್ಟು ಮಂದಿ ವಿದೇಶಿಗರಿಗೆ ಹುಟ್ಟಿದ್ದು. ಬೆಲ್ಜಿಯಮ್ ಅರಬ್ ದೇಶವಾಗಿ ರೂಪತಾಳುವ ಆತಂಕ  ವ್ಯಾಪಕವಾಗುತ್ತಿದೆ.

ಈಗಾಗಲೇ, (ಸ್ಥಳೀಯ) ಮಹಿಳೆಯರು ಬ್ರಸೆಲ್ಸ್‌ನ ಕೆಲವು ಪ್ರದೇಶಗಳಲ್ಲಿ ನಿರ್ಭಯವಾಗಿ ಓಡಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಬೆಲ್ಜಿಯಮ್ ನ ಗೃಹ ಸಚಿವೆ
ಬಿಯಾಂಕಾ ಡಿಬೇಟ್ಸ್. ಎಸ್ಸೆನ್, ಬರ್ಲಿನ್ ಮತ್ತು ಡೂಯಿಸ್‌ಬರ್ಗ್ ಕೆಲವು ಬಡಾವಣೆಗಳಲ್ಲಿ ಇಂಥದ್ದೇ ಪರಿಸ್ಥಿತಿ ಇದೆ. ಅಲ್ಲಿಯ ಆಗುಹೋಗುಗಳನ್ನು ಗಮನಿಸಿ ದರೆ, ಆ ಪ್ರದೇಶಗಳು ಸರ್ಕಾರದ ನಿಯಂತ್ರಣದಲ್ಲಿರುವಂತೆ ಕಂಡುಬರುವುದಿಲ್ಲ, ಎನ್ನುವುದು ಜರ್ಮನಿಯ ಆರೋಗ್ಯ ಸಚಿವರ ಅಭಿಪ್ರಾಯ. ಇದೇನೂ ಹೊಸ ತಲ್ಲ, ಬಿಡಿ, ಮಂತ್ರಿ ಮಹೋದಯರೇ. ನಿಮ್ಮ ನಾಯಕಿ ಏಂಜೆಲಾ ಮರ್ಕೆಲ್ ಏಳು ವರ್ಷಗಳ ಹಿಂದೆಯೇ ಬಹುಸಂಸ್ಕೃತಿಕತೆ ಪ್ರತ್ಯೇಕತೆಯನ್ನು ಹುಟ್ಟುಹಾಕಿದೆ ಯೆಂದು ಒಪ್ಪಿಕೊಂಡಿದ್ದರು.

ಅದನ್ನು ಪುಷ್ಟೀಕರಿಸುವಂತೆ ಫ್ರೀಗ್‌ಬರ್ಗ್ ವಿಶ್ವವಿದ್ಯಾಲಯದ ವರದಿಯೊಂದು ಜರ್ಮನಿಯ ಅರ್ಧಕ್ಕೆ ಅರ್ಧ ಕಿರಿಸ್ತಾನರೇ ಕಣ್ಮರೆಯಾಗುವ ದಿನಗಳು ದೂರವಿಲ್ಲ
ಎಂಬ ಕರಾಳ ಭವಿಷ್ಯ ನುಡಿದಿದೆ. ಅಲ್ಲಿಯ ತೀವ್ರ ತೆರನಾದ ಬೆಳವಣಿಗೆಗಳನ್ನು ಸೂಚ್ಯವಾಗಿ ತಿಳಿಯಲು, ಡಗ್ಲಾಸ್ ಮರ್ರೆ ಎಂಬ ಲೇಖಕನ The Strange Death of Europe (ಯೂರೋಪಿನ ವಿಕ್ಷಿಪ್ತ ಅಂತ್ಯ) ಎಂಬ ಪುಸ್ತಕದ ಶೀರ್ಷಿಕೆಯೇ ಸಾಕು. ಐದು ವರ್ಷಗಳ ಹಿಂದೆ ಬಿಡುಗಡೆಯಾದ ಬ್ರಿಟಿಷ್ ಲೇಖಕನ ಈ
ಪುಸ್ತಕ ಅತ್ಯಂತ ಜನಪ್ರಿಯವಾಯಿತು. ಯುರೋಪ್‌ನ ಸಡಿಲವಾದ ಗಡಿ ನೀತಿ, ತಮ್ಮ ತಾಯಿನಾಡಿನಲ್ಲಿನ ನಿರಂತರ ಅತಂತ್ರ ಪರಿಸ್ಥಿತಿಯಿಂದ ಗುಳೇ ಎದ್ದು ಬಂದ ಮುಸ್ಲಿಮರು, ಅಗ್ಗದ ಕೂಲಿಗೆ ಸಿಗುವ ಕಾರ್ಮಿಕರು, ಕುಗ್ಗುತ್ತಿರುವ ಐರೋಪ್ಯರ ಜನಸಂಖ್ಯೆ ಮುಂತಾದ ಅಂಶಗಳನ್ನು ಅಲ್ಲಿಯ ಪ್ರಸಕ್ತ ಸಮಸ್ಯೆಗಳಿಗೆ ಕಾರಣವೆಂದು ದಾಖಲಿಸಲಾಗಿದೆ.

ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೂರ್ಯಸ್ತವೆಂಬುದೇ ಇಲ್ಲ ಎಂಬ ಧೀಮಾಕಿನ ಮಾತು ಅರ್ಥಕಳೆದುಕೊಳ್ಳುವ ದಿನಗಳು ಬಂದಾಗಿವೆ. ಆಕ್ಸ್ ಫರ್ಡ್‌ನ ಜನಸಂಖ್ಯಾ ಶಾಸಜ್ಞ ಡೇವಿಡ್ ಕೋಲ್ಮನ್‌ರ ಅಂದಾಜಿನ ಪ್ರಕಾರ ಇನ್ನು ಐವತ್ತು ವರ್ಷಗಳಲ್ಲಿ ಬ್ರಿಟನ್ನಿನ ಬಿಳಿಯರು ಅಲ್ಪಸಂಖಾತರಾಗುತ್ತಾರಷ್ಟೇ, ಅಲ್ಲದೆ ಜನಸಂಖ್ಯೆಯ ಹೆಚ್ಚಳಕ್ಕೆ ವಲಸಿಗರ ಕೊಡುಗೆಯೇ ಶೇಕಡಾ ೯೦ರಷ್ಟು. ಮಾಜಿ ಪ್ರಧಾನಿ ಟೋನಿ ಬ್ಲೇರ್‌ಗೆ ಕನ್ಸಲ್‌ಟೆಂಟ್ ಆಗಿದ್ದ ಎಡ್ ಹುಸೇನ್ ಬರೆದಿರುವ (ಮಾಸ್ಕಕಗಳ ಮಧ್ಯ) ಪುಸ್ತಕದಲ್ಲಿ, ಸೆನ್ಸಸ್ ಪ್ರಕಾರ ೨೦೩೧ ರ ಹೊತ್ತಿಗೆ ಬ್ರಾಡ್ ಫೋರ್ಡ್, ಬ್ಲಾಕ್‌ಬರ್ನ್, ಬರ್ಮಿಂಗ್‌ಹ್ಯಾಮ, ಲೀಸ್ಟರ್, ಲೂಟನ್ ಮತ್ತು ಸ್ಲೋಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿ ಏರಲಿದೆ.

ಮುಸ್ಲಿಮರ ಜನಸಂಖ್ಯೆ ಏರಿದರೆ ಏರಲಿ, ಅದಕ್ಕೆ ನಮ್ಮ ಕಣ್ಣೇಕೆ ಕೆಂಪಾಗಬೇಕು ಎಂದು ಇ ಯಾರೋ ಕೇಳಿದಂತಾಯಿತಲ್ಲ!! ಜನಸಂಖ್ಯೆಯೊಂದಿಗೆ ಆ ಜನಾಂಗದ ವರ್ತನೆಯೂ ಹೇಗೆ ಬದಲಾಗುವುದೆನ್ನುವುದು ತಿಳಿದ ವಿಷಯವೇ. ಬುಡಾಪೆಸ್ಟಿನ ವಲಸೆ ಸಂಶೋಧನಾ ಸಂಸ್ಥೆ ಯುರೋಪ್ ಖಂಡದಾದ್ಯಂತ, ಮುಸ್ಲಿಮೇತರರು ಕಾಲಿಡಲಾಗದ ಪ್ರದೇಶಗಳ ಸಂಖ್ಯೆ ಬರೋಬ್ಬರಿ ೯೦೦ ಎಂದು ವರದಿ ಮಾಡಿದೆ.

ಮುಸ್ಲಿಮರೂ ಸೇರಿದಂತೆ ವಲಸಿಗರಲ್ಲಿ ಬಹುತೇಕರು ಪರಾವಲಂಬಿಗಳು. ಸರಕಾರ ತೋರುವ ಔದಾರ್ಯದಿಂದಲೇ ಅವರ ಜೀವನ ಸಾಗಬೇಕು. ಕ್ಷೇಮಾಭಿವೃದ್ಧಿ
ಯೋಜನೆಯಡಿ ಒದಗಿಸಲಾಗುವ ನಾನಾ ಸವಲತ್ತುಗಳಿಂದ ಅವರು ಬದುಕುತ್ತಿದ್ದಾರೆ. ಆದರೆ, ಆಂಬುಲೆನ್ಸ್ ಇರಲಿ, ಸಾಮಾಜಿಕ ಕಾರ್ಯಕರ್ತರಿರಲಿ ಮುಸ್ಲಿಂ ಸಮುದಾಯದ ಗಗಳಿಗೆ ಭೇಟಿ ನೀಡಬೇಕಾದರೂ ಹೋಗಬೇಕಾದರೂ ರಕ್ಷಣೆಯೊಂದಿಗೇ. ಪೊಲೀಸರೂ ಸಕಾರಣಗಳಿಗೆ ಹೋಗಲು ಹಿಂದುಮುಂದು ನೋಡು ತ್ತಾರೆ.

ಅಯಾನ್ ಹರ್ಸಿ ಅಲಿ ಎಂಬ ಲೇಖಕಿ ತಮ್ಮ (ಬೇಟೆ) ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: ಪಾಶ್ಚಿಮಾತ್ಯರಾದ ನಾವು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ನಿರ್ಭಿಡೆಯಿಂದ ಓಡಾಡುತ್ತೇವೆ. ಬ್ರಸೆಲ್ಸ, ಲಂಡನ, ಪ್ಯಾರಿಸ್, ಸ್ಟಾಕೋಮ್ ನಗರದ ಕೆಲವೆಡೆ ಮಹಿಳೆಯರು ಹಠಾತ್ತನೆ ಕಾಣೆಯಾಗುತ್ತಾರೆ. (ಅವರು ಅಲ್ಲಿ ಓಡಾಡಲು ಹೆದರುತ್ತಾರೆ.) ಎಲ್ ಮಂಡೋ ಪತ್ರಿಕೆ ಇತ್ತೀಚೆಗೆ ವರದಿ ಮಾಡಿದಂತೆ ಸ್ಪೇನ್‌ನಲ್ಲಿ ಬಲವಂತದ ವಿವಾಹಗಳು ಹೆಚ್ಚಾಗುತ್ತಿವೆ. ಏಳು ವರ್ಷಗಳ ಹಿಂದೆ ಉಂಟಾದ ಮುಸ್ಲಿಂ ನಿರಾಶ್ರಿತರ ವಲಸೆಯ ಮುಖ್ಯ ಫಲಶ್ರುತಿಯೆಂದರೆ ಸಾಮಾಜಿಕ ಜೀವನದ ಏರುಪೇರು. ಒತ್ತಾಯ ವಿವಾಹಗಳ ಶೇ. 14ರಷ್ಟು ಪ್ರಕರಣ ಗಳಲ್ಲಿ ವಧು ಅಪ್ರಾಪ್ತ ವಯಸ್ಕಳು (15 ವರ್ಷಕ್ಕೂ ಕಡಿಮೆ). ಪ್ರತಿ ಮೂರು ಬಲಾತ್ಕಾರದ ವಿವಾಹಗಳಲ್ಲಿ, ಒಂದರದರೂ ಹುಡುಗಿಯ ವಯಸ್ಸು 18ಕ್ಕೆ ಕಡಿಮೆ.

ಡಿಸೆಂಬರ್ 8 (2021)ರಂದು, ತಮ್ಮ ಧಾರ್ಮಿಕ ಸಮಾರಂಭದಲ್ಲಿ ಸಡಗರದಿಂದ ನಿರತರಾದ 30 ಮಂದಿ ಕ್ಯಾಥೋಲಿಕರ ಮೇಲೆ ಮುಸ್ಲಿಂ ಪುಂಡರು ಮುಗಿ ಬಿದ್ದು ಹಲ್ಲೆ ನಡೆಸುತ್ತಾರೆ. ಕಾಫಿರರೇ, ಕುರಾನ್ ಮೇಲೆ ಆಣೆ ಮಾಡಿ ಹೇಳುತ್ತಿದ್ದೇವೆ. ನಿಮ್ಮ ಕತ್ತು ಸೀಳುತ್ತೇವೆ, ಇದು ನಮ್ಮ ನೆಲ, ಎಂದು ಬೆದರಿಕೆ ಹಾಕುತ್ತಾರೆ. ಇದು ನಡೆದದ್ದು ಫ್ರಾನ್ಸ್ ದೇಶದಲ್ಲಿ, ಎಂದು ಸ್ಥಳೀಯ ಲೇ ಫಿಗರೋ ಪತ್ರಿಕೆ ವರದಿ ಮಾಡಿದೆ.

ಫ್ರಾನ್ಸಿನ 500 ಜಿಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲಾಗಿದೆ. (ಪತ್ರಿಕೆಗಳ ಪ್ರಕಾರ ಆ ಸಂಖ್ಯೆ 150!) ಸ್ವೀಡನ್ನಿನ ಕತೆಯನ್ನಂತೂ ಹೇಳುವುದೇ ಬೇಡ. ದೇಶದ ಪ್ರತಿಶತ 28 ರಷ್ಟು ಜನ ವಿದೇಶೀಯರು. ಫಿನ್ಲೆಂಡ್‌ನ ಆಲ್ಟೋ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರ ಲೆಕ್ಕಾಚಾರ ದಂತೆ, ವಲಸಿಗರ ಪ್ರವಾಹ ಹೀಗೆಯೇ ಮುಂದುವರಿದರೆ, ಇನ್ನು ನಾಲ್ಕು ದಶಕಗಳ ಒಳಗೆ ಸ್ವೇಡ್ ಜನ (ಸ್ಥಳೀಯರು) ಅಲ್ಪಸಂಖ್ಯಾತರಾಗುತ್ತಾರೆ. ಸ್ವೀಡನ್ ದೇಶದಲ್ಲಿ ಮಿತಿ ಮೀರುತ್ತಿರುವ ಗನ್ ಸಂಸ್ಕೃತಿ ಕುರಿತು ಓದುತ್ತಿದ್ದೆ. ಡ್ರಗ್ಸ್ ದಂಧೆ ಬೆಳೆದಂತೆ ಗಲಭೆಗಳಲ್ಲಿ ಗನ್ ಬಳಕೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಅದನ್ನು ಹತ್ತಿಕ್ಕಲು ತಾವು ತೆಗೆದು ಕೊಳ್ಳುವ ಕ್ರಮಗಳ ಬಗ್ಗೆ ದೇಶದ ನೂತನ ಪ್ರಧಾನಿ ಮಗ್ಡಾಲೇನಾ ಆಂಡರ್ಸನ್ ಹೇಳಿಕೊಂಡಿದ್ದಾರೆ.

ನಾನು ಓದಿದ ಸುದೀರ್ಘ ಆ ಪತ್ರಿಕಾ ವರದಿಯಲ್ಲಿ ಒಮ್ಮೆಯಾದರೂ ಮುಸ್ಲಿಂ ಅಥವಾ ಇಸ್ಲಾಂ ಪದದ ಬಳಕೆಯಿಲ್ಲ. ಅರರೆ, ನಾನೇನಾದರೂ ದ ಹಿಂದೂ ಪತ್ರಿಕೆಯ ಸ್ಟಾಕೋಮ್ ಆವೃತ್ತಿಯೇನಾದರೂ ಓದುತ್ತಿದ್ದೇನಾ ಅಂತ ಡೌಟ್ ಬಂತು. ಬೊಫೋರ್ಸ್ ಹಗರಣವನ್ನು ಬಯಲುಗೊಳಿಸಿ ಸ್ವೀಡನ್ನಿಂದ ಚಿತ್ರಾ ಸುಬ್ರಮಣ್ಯಮ್ ನಿರಂತರವಾಗಿ ಆ ಪತ್ರಿಕೆಗೆ ಬರೆದರು. ವಿದೇಶದಿಂದ ಹಗರಣವನ್ನು ಬಗೆದು ತೆಗೆದ ಸೋಟಕ ಮಾಹಿತಿಯನ್ನು ‘ದಿ ಹಿಂದೂ’ ಪ್ರಕಟಿಸಿತಾದರೂ, ನಮ್ಮದೇ ದೇಶದಲ್ಲಿ ವಿಷದಂತೆ ಏರುತ್ತಿರುವ ಮುಸ್ಲಿಮರ ಜನಸಂಖ್ಯೆಯನ್ನು ಕುರಿತ ಬಹಿರಂಗ ಮಾಹಿತಿಯನ್ನು ಎನ್. ರಾಮ್ ಒಪ್ಪಿಕೊಳ್ಳುವುದಿಲ್ಲ.

ನವ ಇತಿಹಾಸದ ಉದ್ದಕ್ಕೂ, ಐರೋಪ್ಯರ ಪ್ರಭಾವ ಭಾರತದ ಮೇಲೆ ಸಾಕಷ್ಟಾಗಿದೆ. ನಾವು ಆಮದು ಮಾಡಿಕೊಂಡಿರುವ ಆಡಳಿತದ ಮಾದರಿ ಅವರದ್ದೇ. ನಮ್ಮ
ನ್ಯಾಯಾಂಗ ವ್ಯವಸ್ಥೆಯೂ ಅಲ್ಲಿಯದ್ದೇ. ಮಾಧ್ಯಮವೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯೇ. ಬಹುಸಂಸ್ಕೃತಿ ನಮ್ಮದೇ. ಅದಕ್ಕೆ ಪಾಶ್ಚಿಮಾತ್ಯರ ಸೋಂಕು ತಾಕಿ ಸೆಕ್ಯುಲರಿಸಂ ಪಿಡುಗು ಸರ್ವವ್ಯಾಪಿಯಾಗಿದೆ. ಯುರೋಪಿಯರನ್ನ ನುಸರಿಸುತ್ತಲೇ ಬಂದಿರುವ ನಾವು, ವಿನಾಶದಂಚಿನಲ್ಲಿರುವ ಅವರ ಅಸ್ತಿತ್ವವನ್ನು ನೋಡಿ ಎಚ್ಚೆತ್ತುಕೊಳ್ಳಬೇಕಾದ ಜರೂರಿದೆ.

ಜಿಹಾದಿ ಬಿಸಿ ನಮ್ಮನ್ನು ತಗುಲಿ ಯಾವುದೋ ಕಾಲವಾಯಿತು. ಅವರಿಗೆ ಈಗ ಮುಟ್ಟುತ್ತಿದೆ. ಅಲ್ಪಸಂಖ್ಯಾತ ಮುಸ್ಲಿಮರ ನಿತ್ಯ ದಾಂಧಲೆಗೆ ಯುರೋಪ್ ನುಜ್ಜು ಗೊಜಗುತ್ತಿದೆ. ಅದರ ಬಗ್ಗೆ ದನಿ ಎತ್ತುವವರನ್ನು ಮುಸ್ಲಿಂ ವಿರೋಧಿ ಎಂದು ಬ್ರಾಂಡ್ ಮಾಡುವ ಪದ್ಧತಿ ಅಲ್ಲೂ ಇದೆ. ಆ ಎಂಜಲು ಚಿಂತನೆಯನ್ನೇ ತಲೆಗೆ ತುಂಬಿ ಕೊಂಡ ಭಾರತೀಯ ಮುಖ್ಯವಾಹಿನಿಯ ಅಪಾಯಕಾರೀ ಪ್ರಲಾಪ ನಿಲ್ಲಬೇಕಿದೆ. ಅದು ನಿಲ್ಲುವುದು ಬಹುಸಂಖ್ಯಾತ ಹಿಂದೂಗಳು ತಮ್ಮ ತಲೆಯ ಮೇಲೆ ತೂಗಾ ಡುತ್ತಿರುವ ಕತ್ತಿಯನ್ನು ಕಂಡಾಗ.

ನಿಜ, ಗುಲಾಮ್ ಅಲಿಯ ಗಝಲ್ ಸುಶ್ರಾವ್ಯ. ಅದರ ನಶೆಯಿಂದ ಹೊರಬಂದು ಇದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುವುದು ಕರ್ತವ್ಯ. ಹಿಂದೂಗಳು ಮತ್ತೆ
ಗುಲಾಮರಾಗದಿರಲು ಎಲ್ಲ ನಶೆಗಳೂ ವರ್ಜ್ಯ.