Monday, 16th September 2024

ನವದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ತೆರವು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾರಾಂತ್ಯ ಕರ್ಫ್ಯೂವನ್ನು ತೆರವುಗೊಳಿಸಲಾಗುತ್ತಿದ್ದು, ರಾತ್ರಿ ಕರ್ಫ್ಯೂವನ್ನು ಮುಂದುವರೆಯಲಿದೆ.

ಉಪ ರಾಜ್ಯಪಾಲ ಅನಿಲ್ ಬೈಜಲ್, ನೇತೃತ್ವದಲ್ಲಿ ನಡೆದ ಕೋವಿಡ್-19 ಸ್ಥಿತಿಗತಿ ಹಾಗೂ ನಿರ್ಬಂಧ ಸಡಿಲತೆ ಕುರಿತ ವರ್ಚುಯಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವಾರ ಕಂಟೈನ್ ಮೆಂಟ್ ವಲಯಗಳ ಹೊರಗಡೆ ಇರುವ ಎಲ್ಲಾ ಖಾಸಗಿ ಕಚೇರಿಗಳು ಶೇ.50 ರಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು.

ಖಾಸಗಿ ಕಚೇರಿಗಳಿಗೆ ಕಚೇರಿಯ ಸಮಯ, ಹಾಜರಾತಿ ಮತ್ತು ಸಿಬ್ಬಂದಿಯ ಪ್ರಮಾಣವನ್ನು ತಗ್ಗಿಸುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.