Friday, 22nd November 2024

12 ಶಾಸಕರ ಅಮಾನತು ರದ್ದು

ಮಹಾರಾಷ್ಟ್ರ : ಶುಕ್ರವಾರ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದ ಬಳಿಕ 12 ಶಾಸಕರ ಅಮಾನತನ್ನು ರದ್ದುಗೊಳಿಸಿದೆ.

ವಿಧಾನಸಭೆಯಲ್ಲಿ ಅನುಚಿತ ವರ್ತನೆ ತೋರಿದ್ದ ಬಿಜೆಪಿ ಪಕ್ಷದ 12 ಶಾಸಕರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿತ್ತು.

2021 ರ ಜುಲೈ ತಿಂಗಳಿನಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕೆ ಬಿಜೆಪಿ ಪಕ್ಷದ ನಡೆ ಶಾಸಕರನ್ನು ಸ್ಪೀಕರ್ ಬಾಸ್ಕರ್ ಜಾದವ್ ಒಂದು ವರ್ಷದವರೆಗೆ ಕಲಾಪಕ್ಕೆ ಹಾಜರಾಗದಂತೆ ಅಮಾನತುಗೊಳಿಸಿದರು. ಈ ವಿಚಾರವಾಗಿ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರ ತ್ರಿಸದಸ್ಯ ಪೀಠವು ಸ್ಪೀಕರ್ ತೆಗೆದುಕೊಂಡ ಕ್ರಮವು “ಅಸಂವಿಧಾನಿಕ ಮತ್ತು ಅನಿಯಂತ್ರಿತ” ಎಂಬ ಮಹತ್ವದ ತೀರ್ಪು ನೀಡಿದೆ.

ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅಥುಲ್ ಭಟ್ಕಳಕರ್, ಪರಾಗ್ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುತೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ಸಂಜಯ್ ಕುಟೆ, ಆಶಿಶ್ ಶೆಲಾರ್, ನಾರಾಯಣ್ ಕುಚೆ ಮತ್ತು ಕೀರ್ತಿಕುಮಾರ್ ಬಾಂಗ್ಡಿಯಾ ಅಮಾನತುಗೊಂಡಿದ್ದ 12 ಬಿಜೆಪಿ ಶಾಸಕರಾಗಿದ್ದಾರೆ.