Saturday, 23rd November 2024

ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಪ್ರಚಾರ

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಸೋಮವಾರ ಮೊದಲ ಹಂತದ ಪ್ರಚಾರ ನಡೆಸಲಿದ್ದಾರೆ. ಇದು ಫೆಬ್ರುವರಿ 10ರಂದು ಚುನಾವಣೆ ನಡೆಯಲಿರುವ 21 ವಿಧಾನಸಭೆ ಕ್ಷೇತ್ರಗಳ 98 ಕಡೆಗಳಲ್ಲಿ ಪ್ರಸಾರವಾಗಲಿದೆ.

‘ಜನ್ ಚೌಪಲ್’ ಹೆಸರಿನ ರ್‍ಯಾಲಿಯಲ್ಲಿ ಪ್ರಧಾನಿಯವರು ಮಾಡಲಿರುವ ಪ್ರಚಾರವು ಎಲ್‌ಇಡಿ ಸ್ಕ್ರೀನ್‌ಗಳ ಮೂಲಕ ಸುಮಾರು 49,000 ಜನರನ್ನು ತಲುಪಲಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗ್ರಾದಿಂದ ಹಾಗೂ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಲಖನೌನಿಂದಲೇ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ, ಪ್ರತಿಯೊಂದು ಕಡೆಯಲ್ಲಿಯೂ 500ಕ್ಕಿಂತ ಹೆಚ್ಚು ಜನ ಒಂದೇ ಕಡೆ ಸೇರದಂತೆ ಬಿಜೆಪಿ ಪದಾಧಿಕಾರಿಗಳು ಸೂಚಿಸಿದ್ದಾರೆ.