ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಭೌತಿಕ ರಾಜಕೀಯ ರ್ಯಾಲಿಗಳನ್ನು ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಫೆಬ್ರವರಿ 11ರವರೆಗೆ ಭಾರತೀಯ ಚುನಾವಣಾ ಆಯೋಗ ವಿಸ್ತರಿಸಿದೆ.
ಆಯೋಗವು ಸಭೆ ನಡೆಸಿ ಚರ್ಚೆ ನಡೆಸಿದ್ದು, ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ಮಾತ್ರವೇ ಚುನಾವಣಾ ಆಯೋಗವು ಗರಿಷ್ಠ 1000 ಜನರ ಸಾಮರ್ಥ್ಯವಿರುವ ಭೌತಿಕ ರ್ಯಾಲಿಗಳಿಗೆ ಅನುಮತಿ ನೀಡಿದೆ.