Thursday, 19th September 2024

ಕೇಂದ್ರ ಬಜೆಟ್‌ಗೆ ಕ್ಷಣಗಣನೆ…

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಪ್ರಸಕ್ತ ವರ್ಷದ ಬಜೆಟ್​ ಮಂಡಿಸಲಿದ್ದಾರೆ.

ವಿತ್ತ ಸಚಿವರ ನಾಲ್ಕನೇ ಬಜೆಟ್ ಭಾಷಣ ಇದಾಗಿದೆ. ಕೋವಿಡ್​ ಮೂರನೇ ಅಲೆ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್​ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಬೆಳಗ್ಗೆ ಅವರು 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಸಂಪುಟ ಸಭೆಯಲ್ಲಿ ಬಜೆಟ್​​ಗೆ ಅನುಮೋದನೆ ಪಡೆಯಲಿದ್ದಾರೆ. ಬಜೆಟ್​ ಮೊದಲ ದಿನ ಜಂಟಿ ಅಧಿವೇಶನದ ​ ಬಳಿಕ ಅವರು ಆರ್ಥಿಕ ಸಮೀಕ್ಷೆ (Economic Survey) ಮಂಡಿಸಿದ್ದಾರೆ. ಆರ್ಥಿಕತೆ 8 ರಿಂದ 8.5ರಷ್ಟು ಬೆಳವಣಿಗೆ ದರ ಕಂಡಿದೆ. ರಾಷ್ಟ್ರೀಯ ಅಂಕಿ ಅಂಶ ಕಚೇರಿ ಯೋಜಿಸಿರುವ ಪ್ರಸಕ್ತ ವರ್ಷದಲ್ಲಿನ 9.2ರಷ್ಟು ಜಿಡಿಪಿ ಕುಸಿತಗೊಂಡಿದೆ

2022ನೇ ಸಾಲಿನ ಬಜೆಟ್‌ನ ಅಧಿವೇಶನವು ಆರಂಭವಾಗಿದ್ದು, ಕೇಂದ್ರ ಬಜೆಟ್‌ ದಿನಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ರ ನಾಲ್ಕನೇ ಬಜೆಟ್‌ನಲ್ಲಿ ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲಿನ ರಿಯಾಯಿತಿಗಳು, ತೆರಿಗೆ ವಿನಾಯಿತಿಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರವನ್ನು ನಿಭಾಯಿಸುವ ಕ್ರಮ ಗಳ ಭರವಸೆಯನ್ನು ಹೊಂದಿದ್ದಾರೆ.

ಬಜೆಟ್ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.

ಆರ್ಥಿಕ ಸಮೀಕ್ಷೆಯ ಪರಿಶೀಲನೆಯಲ್ಲಿ ಸರ್ಕಾರವು ಜಾರಿಗೆ ತಂದ ಯೋಜನೆಗಳು ಮತ್ತು ನೀತಿಗಳ ವಿವರಗಳು ಮತ್ತು ಫಲಿತಾಂಶಗಳನ್ನು ಸಮೀಕ್ಷೆಯು ಒಳಗೊಂಡಿರುತ್ತದೆ. ಇದಲ್ಲದೆ, ಸಮೀಕ್ಷೆಯು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಕುರಿತು ಸುಳಿವು ನೀಡುತ್ತದೆ.

ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ತೀಕ್ಷ್ಣವಾಗಿ ಕೇಂದ್ರೀಕೃತವಾಗಿದೆ. ಕರೋನಾ ವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಆಗಿರುವ ಹಾನಿ ಕುರಿತಾಗಿ ಅಧಿಕೃತವಾಗಿ ಅಂಕಿ-ಅಂಶಗಳನ್ನು ಹೊರ ಗಿಡಬಹುದಾಗಿದ್ದು, ಇದಕ್ಕೆ ಪರಿಹಾರ ಪ್ಯಾಕೇಜ್ ಘೋಷಣೆ ಬಗ್ಗೆ ಕೂಡಾ ಸೂಚನೆ ಸಿಗಲಿದೆ.