Saturday, 14th December 2024

ದೇವದತ್ತ ಸ್ಪೋಟ: ಜಾರ್ಖಂಡಗೆ ಕಠಿಣ ಗುರಿ

ಸೂರತ್:
ದೇವದತ್ತ ಪಡಿಕ್ಕಲ್ (63 ರನ್) ಅವರ ಆಕರ್ಷಲ ಅರ್ಧಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಸೂಪರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಜಾರ್ಖಂಡ್ ತಂಡಕ್ಕೆೆ ಕಠಿಣ ಗುರಿ ನೀಡಿದೆ.
ಇಲ್ಲಿನ ಲಾಲಾಬಾಯಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆೆ 189 ರನ್ ಗಳಿಸಿತು. ಆ ಮೂಲಕ ಜಾರ್ಖಂಡ್‌ಗೆ 190 ರನ್ ಕಠಿಣ ಗುರಿ ನೀಡಿತು.
ಆರಂಭಿಕರಾಗಿ ಕಣಕ್ಕೆೆ ಇಳಿದ ಕೆ.ಎಲ್ ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿ ಮೊದಲನೇ ವಿಕೆಟ್‌ಗೆ 114 ರನ್ ಗಳಿಸಿ ತಂಡಕ್ಕೆೆ ಭರ್ಜರಿ ಅಡಿಪಾಯ ಹಾಕಿತು. ಅಮೋಘ ಬ್ಯಾಾಟಿಂಗ್ ಪ್ರದರ್ಶನ ತೋರಿದ ದೇವದತ್ತ ಪಡಿಕ್ಕಲ್ ಕೇವಲ 30 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ 63 ರನ್ ಗಳಿಸಿದರು. ಉಕ್ರಾಾಂತ್ ಸಿಂಗ್‌ಗೆ ವಿಕೆಟ್ ಒಪ್ಪಿಿಸಿದರು. ಮತ್ತೊೊಂದು ತುದಿಯಲ್ಲಿ ಕೆ.ಎಲ್ ರಾಹುಲ್ 36 ರನ್ ಗಳಿಸಿದರು. ಇನ್ನುಳಿದಂತೆ ಎಲ್ಲ ಬ್ಯಾಾಟ್‌ಸ್‌‌ಮನ್‌ಗಳು ತಮ್ಮ ಜವಾಬ್ದಾಾರಿಯನ್ನು ಒಂದು ಹಂತದಲಿ ಪೂರ್ಣಗೊಳಿಸಿದರು. ಸೋನು ಸಿಂಗ್ ಮೂರು ವಿಕೆಟ್ ಪಡೆದರೆ, ಮೋನು ಕುಮಾರ್ ಎರಡು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್ ಗಳಿಗೆ 189/6 (ದೇವದತ್ತ ಪಡಿಕ್ಕಲ್ 63, ಕೆ.ಎಲ್ ರಾಹುಲ್ 36, ಕರುಣ್ ನಾಯರ್ 19; ಸೋನು ಸಿಂಗ್ 28 ಕ್ಕೆೆ 3, ಮೋನು ಕುಮಾರ್ 29 ಕ್ಕೆೆ 2)