ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್ ಪಂದ್ಯ: ಇಶಾಂತ್‌ಗೆ 5 ವಿಕೆಟ್ ಬಾಂಗ್ಲಾಾ 106ಕ್ಕೆೆ ಆಲೌಟ್ ಪೂಜಾರ, ಕೊಹ್ಲಿಿ ಅರ್ಧಶತಕ
ಕೋಲ್ಕತಾ:
ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್ ಪಂದ್ಯದ ಮೊದಲನೇ ದಿನ ಬಾಂಗ್ಲಾಾದೇಶ ವಿರುದ್ಧ ಮೇಲುಗೈ ಸಾಧಿಸಿದೆ.
ಇಲ್ಲಿನ ಈಡನ್ ಗಾರ್ಡನ್‌ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ಪ್ರವಾಸಿ ಬಾಂಗ್ಲಾಾದೇಶ ತಂಡ, ಇಶಾಂತ್ ಶರ್ಮಾ (22 ಕ್ಕೆೆ 5) ಅವರ ಮಾರಕ ದಾಳಿಗೆ ನಲುಗಿ 30.3 ಓವರ್ ಗಳಿಗೆ 106 ರನ್ ಗಳಿಗೆ ಆಲೌಟ್ ಆಯಿತು. ನಂತರ, ಪ್ರಥಮ ಇನಿಂಗ್‌ಸ್ ಆರಂಭಿಸಿದ ಭಾರತ ತಂಡ, ಚೇತೇಶ್ವರ ಪೂಜಾರ (55 ರನ್) ಹಾಗೂ ನಾಯಕ ವಿರಾಟ್ ಕೊಹ್ಲಿಿ(ಔಟಾಗದೆ 59 ರನ್) ಅವರ ಅರ್ಧ ಶತಕಗಳ ಬಲದಿಂದ 46 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 174 ರನ್ ದಾಖಲಿಸಿದೆ. ಇದರೊಂದಿಗೆ 68 ರನ್ ಮುನ್ನಡೆ ಗಳಿಸಿದೆ.
ರೋಚಕತೆ ಗಳಿಸಿದ್ದ ಪಿಂಕ್ ಚೆಂಡಿನ ಆಟದಲ್ಲಿ ಮೊದಲು ಬ್ಯಾಾಟಿಂಗ್ ಮಾಡಿದ್ದ ಬಾಂಗ್ಲಾಾದೇಶದ ಮೇಲೆ ಭಾರತದ ತ್ರಿಿ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ಸವಾರಿ ಮಾಡಿದರು. ನಾಯಕ ಮೊಮಿನುಲ್ ಹಕ್ ಟಾಸ ಗೆದ್ದು ಮೊದಲು ಬ್ಯಾಾಟಿಂಗ್ ಮಾಡುವ ನಿರ್ಧಾರವನ್ನು ಭಾರತದ ವೇಗಿಗಳು ತಲೆ ಕೆಳಗಾಗುವಂತೆ ಮಾಡಿದರು. ಇಂದೋರ್ ಟೆಸ್‌ಟ್ ನಲ್ಲಿ ಇದೇ ತಪ್ಪುು ಮಾಡಿದ್ದ ಮೊಮಿನುಲ್ ಹಕ್ ಎರಡನೇ ಪಂದ್ಯದಲ್ಲೂ ಅದೇ ತಪ್ಪುು ಮಾಡಿದರು.
ಮಾರಕ ದಾಳಿ ನಡೆಸಿದ ಇಶಾತ್ ಶರ್ಮಾ ಅವರು ಪ್ರವಾಸಿ ತಂಡವನ್ನು 106 ರನ್ ಗಳಿಗೆ ಆಲೌಟ್ ಮಾಡಲು ನೆರವಾದರು. ಇವರು 12 ಓವರ್ ಬೌಲಿಂಗ್ ಮಾಡಿ ನಾಲ್ಕು ಮೇಡಿನ್ 22 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಪಿಂಕ್ ಟೆಸ್‌ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ವೇಗಿ ಎಂಬ ಸಾಧನೆಗೆ ಬಲಗೈ ವೇಗಿ ಭಾಜನರಾದರು.
ಶದ್ಮನ್ ಇಸ್ಲಾಾಮ್ 29 ರನ್ ಹಾಗೂ ಲಿಟನ್ ದಾಸ್ 24 ರನ್ ಗಳಿಸ್ದಿಿದು ಪ್ರವಾಸಿ ತಂಡದ ಪರ ವೈಯಕ್ತಿಿಕ ಗರಿಷ್ಠ ರನ್ ಆಯಿತು. ಆದರೆ, ನಾಯಕ ಮೊಮಿನುಲ್ ಹಕ್, ಮೊಹಮ್ಮದ್ ಮಿಥುನ್, ಮುಷ್ಫಿಿಕರ್ ರಹೀಮ್ ಪ್ರಮುಖ ಬ್ಯಾಾಟ್‌ಸ್‌ಮನ್‌ಗಳು ಸೇರಿ ಬಾಂಗ್ಲಾಾ ತಂಡದಲ್ಲಿ ಒಟ್ಟು ನಾಲ್ವರು ಶೂನ್ಯಕ್ಕೆೆ ವಿಕೆಟ್ ಒಪ್ಪಿಿಸಿದರು. ಉಮೇಶ್ ಯಾದವ್ ಮೂರು ಹಾಗೂ ಮೊಹಮ್ಮದ್ ಶಮಿ ಎರಡು ವಿಕೆಟ್ ಕಿತ್ತರು.
ಭಾರತಕ್ಕೆ ಕೊಹ್ಲಿ ಆಸರೆ:
ಪ್ರಥಮ ಇನಿಂಗ್‌ಸ್ ಆರಂಭಿಸಿದ ಭಾರತಕ್ಕೆೆ ಆರಂಭಿಕರಾದ ಮಯಾಂಕ್ ಅಗರ್ವಾಲ್ (14) ಹಾಗೂ ರೋಹಿತ್ ಶರ್ಮಾ(21) ಬೇಗ ಔಟ್ ಆಗುವ ಮೂಲಕ ತಂಡಕ್ಕೆೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಆದರೆ, ಮೂರನೇ ವಿಕೆಟ್‌ಗೆ ಜತೆಯಾದ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿಿ ಜೋಡಿ ಅದ್ಭುತ ಬ್ಯಾಾಟಿಂಗ್ ಮಾಡಿತು. ಈ ಜೋಡಿ 94 ರನ್ ಗಳಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. 105 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 55 ರನ್ ಗಳಿಸಿ ವಿಕೆಟ್ ಒಪ್ಪಿಿಸಿದರು. ಮತ್ತೊೊಂದು ತುದಿಯಲ್ಲಿ ಬ್ಯಾಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿಿ 93 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು. ಇವರ ಅರ್ಧಶತಕದಲ್ಲಿ ಎಂಟು ಬೌಂಡರಿಗಳಿದ್ದವು. ಅರ್ಧಶಕದ ಜತೆಗೆ, ಕೊಹ್ಲಿಿ ಟೆಸ್‌ಟ್ ವೃತ್ತಿಿ ಜೀವನದಲ್ಲಿ ಐದು ಸಾವಿರ ರನ್ ಪೂರೈಸಿದರು. ಅಜಿಂಕ್ಯ ರಹಾನೆ 23 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾಾರೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ
ಪ್ರಥಮ ಇನಿಂಗ್‌ಸ್: 30.3 ಓವರ್ ಗಳಿಗೆ 106/10 (ಶದ್ಮನ್ ಇಸ್ಲಾಾಮ್ 29, ಲಿಟನ್ ದಾಸ್ 24, ನಯೀಮ್ ಹಸನ್ 19; ಇಶಾಂತ್ ಶರ್ಮಾ 22 ಕ್ಕೆೆ 5, ಉಮೇಶ್ ಯಾದವ್ 29 ಕ್ಕೆೆ 3, , ಮೊಹಮ್ಮದ್ ಶಮಿ 36 ಕ್ಕೆೆ 2)
ಭಾರತ
ಪ್ರಥಮ ಇನಿಂಗ್‌ಸ್: 46 ಓವರ್ ಗಳಿಗೆ 174/3 (ವಿರಾಟ್ ಕೊಹ್ಲಿಿ ಔಟಾಗದೆ 59, ಚೇತೇಶ್ವರ ಪೂಜಾರ 55, ಅಜಿಂಕ್ಯ ರಹಾನೆ ಅಜೇಯ 23; ಇದಾಬತ್ ಹುಸೇನ್ 61 ಕ್ಕೆೆ 2)
ವೃದ್ದಿಮನ್‌ಗೆ 100 ವಿಕೆಟ್
ಭಾರತ ತಂಡದ ವಿಕೆಟ್ ಕೀಪರ್ ವೃದ್ದಿಮನ್ ಸಹಾ ಅವರು ಬಾಂಗ್ಲಾಾದೇಶ ಹಾಗೂ ಭಾರತ ನಡುವಿನ ಐತಿಹಾಸಿಕ ಟೆಸ್‌ಟ್ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಿದರು. ಟೆಸ್‌ಟ್ ಕ್ರಿಿಕೆಟ್ ನಲ್ಲಿ ವಿಕೆಟ್ ಹಿಂಬದಿ 100 ವಿಕೆಟ್ ಪಡೆದ ಭಾರತದ ಐದನೇ ವಿಕೆಟ್ ಕೀಪರ್ ಎಂಬ ಸಾಧನೆಗೆ ಸಹಾ ಭಾಜನರಾದರು. ಇದರೊಂದಿಗೆ ಧೋನಿ, ಸೈಯದ್ ಕಿರ್ಮಾನಿ, ಕಿರಣ್ ಮೋರೆ ಹಾಗೂ ನಯಾನ್ ಮೊಂಗಿಯ ಅವರ ಕ್ಲಬ್‌ಗೆ ಸಹಾ ಸೇರ್ಪಡೆಯಾದರು.
ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿಿ
ಬಾಂಗ್ಲಾಾದೇಶ ವಿರುದ್ಧ ಎರಡನೇ ಹಾಗೂ ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್ ಪಂದ್ಯದ ಪ್ರಥಮ ಇನಿಂಗ್‌ಸ್ ನಲ್ಲಿ ಅಜೇಯ 59 ರನ್ ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಿ ದೀರ್ಘ ಅವಧಿ ಕ್ರಿಿಕೆಟ್ ನಲ್ಲಿ ಅತಿ ವೇಗವಾಗಿ ಐದು ಸಾವಿರ ರನ್ ಪೂರೈಸಿದರು. ಆ ಮೂಲಕ 97 ಇನಿಂಗ್‌ಸ್ ಗಳಲ್ಲಿ ಈ ಸಾಧನೆ ಮಾಡಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಮುರಿದರು. ಕೊಹ್ಲಿಿ ಈ ಸಾಧನೆ ಮಾಡಲು 87 ಇನಿಂಗ್‌ಸ್ ತೆಗೆದುಕೊಂಡಿದ್ದಾಾರೆ.