ಮತ್ತೊಬ್ಬ ಸಂಸದರಿಗೆ ಮಾತನಾಡಲು ರಾಹುಲ್ ಗಾಂಧಿ “ಅನುಮತಿ” ನೀಡಿರುವುದನ್ನು ಸ್ಪೀಕರ್ ಪ್ರಶ್ನಿಸಿದ್ದಾ, ಅನುಮತಿ ನೀಡಲು ನೀವು ಯಾರು? ಅದು ನನ್ನ ಹಕ್ಕು, ಯಾರಿಗೂ ಅವಕಾಶ ನೀಡುವ ಹಕ್ಕು ಇಲ್ಲ, ಸ್ಪೀಕರ್‌ಗೆ ಮಾತ್ರ ಅವಕಾಶ ನೀಡುವ ಹಕ್ಕಿದೆ” ಎಂದು ಬಿರ್ಲಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ದರು.
ನಾನು ಇನ್ನೊಬ್ಬ ವ್ಯಕ್ತಿಗೆ ಮಾತನಾಡಲು ಅವಕಾಶ ನೀಡುತ್ತೇನೆ ಎಂದು ರಾಹುಲ್ ಹೇಳಿದ್ದಕ್ಕೆ, ಅದು ನನ್ನ ಹಕ್ಕು, ಸ್ಪೀಕರ್‌ಗೆ ಮಾತ್ರ ಮಾತನಾಡಲು ಅವಕಾಶ ನೀಡುವ ಹಕ್ಕಿದೆ ಎಂದು ಸ್ಪೀಕರ್ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್ ಅವರ ಹೆಸರನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ದಲಿತರಾಗಿರುವ ಪಾಸ್ವಾನ್ ತಪ್ಪು ಪಕ್ಷದಲ್ಲಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮಾತುಗಳಿಗೆ ಸಂಸತ್ತಿನಲ್ಲಿ ಗದ್ದಲ ಉಂಟಾಗಿದೆ. ಈ ನಡುವೆ ಮಾತನಾಡಲು ಎದ್ದು ನಿಂತ ಪಾಸ್ವಾನ್ ಅವರಿಗೆ ಸ್ಪೀಕರ್ ಮತ್ತೆ ಮಾತ ನಾಡುವಂತೆ ಸೂಚಿಸಿದ್ದಾರೆ. ತಕ್ಷಣವೇ ಪಾಸ್ವಾನ್ ಅವರಿಗೆ ಸನ್ನೆ ಮಾಡಿದ ರಾಹುಲ್ ಗಾಂಧಿ ಮಾತನಾಡುವಂತೆ ಸೂಚಿಸಿದ್ದಾರೆ ಎಂದು ವರದಿ ಹೇಳಿದೆ. ಆಕ್ರೋಶಗೊಂಡ ಸ್ಪೀಕರ್ ‘ನೀವು ಯಾರಿಗೂ ಅನುಮತಿ ನೀಡುವಂತಿಲ್ಲ, ಇದು ನನ್ನ ಹಕ್ಕು” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.