ಜಿತೇಂದ್ರ ಕುಂದೇಶ್ವರ ಮಂಗಳೂರು
ದಕ್ಷಿಣೆ ಪಡೆದ ಪುರೋಹಿತರು : ನಾಗೇಂದ್ರ ಭಾರಧ್ವಾಜ್ ಕಟ್ಲ ಸುರತ್ಕಲ್, ಗಣೇಶ್ ನಾವಡ ಕಾವೂರು,ವೀರವೆಂಕಟ ನರಸಿಂಹ ಹಂದೆ ಕುಂಬಳೆ,
ಪ್ರಸಾದ್ ಭಟ್ ನಂದಳಿಕೆ, ಶ್ರೀಹರಿ ಉಪಾಧ್ಯಾಯ ವಾಮಂಜೂರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಹಾ ಮೃತ್ಯುಂಜಯ ಯಾಗ ಮಾಡಿ ಹರಸಿದ ಐವರು ಋತ್ವಿಜರಿಗೆ ದಕ್ಷಿಣೆ ಕಳುಹಿಸುವ ಮೂಲಕ ಶಾಸ್ತ್ರದ ಸಂಪ್ರದಾಯ ಪಾಲಿಸಿದ್ದಾರೆ. ತಮ್ಮ ಬಳಿಗೆ ಬಂದಿದ್ದ ಋತ್ವಿಜರ ಬಳಿ ಬ್ಯಾಂಕ್ ಖಾತೆ ವಿವರ ನೀಡುವಂತೆ ಸೂಚಿಸಿದ್ದರು. ಎರಡು ದಿನಗಳ ಹಿಂದೆ ಎಲ್ಲರ ಫೋನ್ ನಂಬರ್ಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪಡೆಯಲಾಗಿತ್ತು. ಗುರುವಾರ ಸಂಜೆ 5.30 ರ ವೇಳೆಗೆ ಎನ್.ಡಿ.ಮೋದಿ ಎಸ್ ಬಿಐ ಖಾತೆಯಿಂದ ಐದು ಮಂದಿ ಋತ್ವಿಜರ ಖಾತೆಗಳಿಗೆ ದಕ್ಷಿಣೆ ಸಂದಾಯವಾಗಿತ್ತು.
ದಕ್ಷಿಣೆಯನ್ನು ಖಾತೆಗೆ ಜಮೆ ಮಾಡುವ ಮೂಲಕ ಡಿಜಿಟಲ್ ಇಂಡಿಯಾ ಮಾದರಿ ಬಳಸಿದ್ದಾರೆ. ಪ್ರಧಾನಿ ಮೋದಿ ಅವರಿಂದ ಬ್ರಹ್ಮಾರ್ಪಣ ಮಾಡಿಸು ವುದೇ ಪುಣ್ಯದ ಕೆಲಸ. ಪ್ರಧಾನಿ ಭೇಟಿ ಸಂದರ್ಭ ಋತ್ವಿಜರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಾವು ನಿಂತೇ ವಿಧಿವಿಧಾನ ಮಾಡಲು ನಿರ್ಧರಿಸಿದೆವು. ಬಳಿಕ ಪ್ರಧಾನಿ ಶಾಸೀಯ ವಿಧಾನಗಳನ್ನು ಮಾಡಲು ಅನುಮತಿ ನೀಡಿದರು. ಬಳಿಕ ನಮ್ಮೆಲರ ಬ್ಯಾಂಕ್ ಖಾತೆಯ ವಿವರ ಕೇಳಿದರು. ನಾವು ಸಂಕೋಚ ತೋರಿದಾಗ ‘ದೇನಾ ಹಿ ಹೈ’ ಎಂದು ಹೇಳಿದಾಗ ನಾವು ಸಂಗ್ರಹಿಸಿ ನೀಡಿದೆವು. ಇಂದು ನಮ್ಮ ಖಾತೆಗೆ ದಕ್ಷಿಣೆ ಹಾಕಿದ್ದಾರೆ. ಮೋದಿ ವ್ಯಕ್ತಿಯಲ್ಲ ಶಕ್ತಿ. ವಿಭೂತಿ ಪುರುಷರು ಎಂದು ಪ್ರಧಾನ ಋತ್ವಿಜ ನಾಗೇಂದ್ರ ಭಾರಧ್ವಾಜ್ ಪ್ರತಿಕ್ರಿಯಿಸಿದ್ದಾರೆ.
ಎಂತಹ ಸೂಕ್ಷ್ಮ ದೃಷ್ಟಿ: ಕ್ಷಣಾರ್ಧದಲ್ಲಿ ನಮ್ಮ ಮನಸ್ಸು ಅರಿಯುವ ಸಾಮರ್ಥ್ಯ ಇದೆ. ಪ್ರಧಾನಿ ಅವರು, ನಮ್ಮನ್ನು ವೈದಿಕ ದಿರಿಸಿನಲ್ಲಿ ಕಂಡ ತಕ್ಷಣ ತಮ್ಮ ಪಾದುಕೆಗಳನ್ನು ತೆಗದಿರಿಸಿದರು. ಪೂಜೆ ಮಾಡುವಾಗ ಭಕ್ತಿ, ಭಾವದಲ್ಲಿ ತಲ್ಲೀನರಾಗುವ ಅವರನ್ನು ಭೇಟಿ ಮಾಡುವುದೇ ಪುಣ್ಯ. ಅವರಿಗೆ ಮಂತ್ರಾ ಕ್ಷತೆ ಹಾಕುವುದೇ ಪುಣ್ಯ. ಅವರ ವೈಯಕ್ತಿಕ ಖಾತೆಯಿಂದ ನಮಗೆ ದಕ್ಷಿಣೆ ಸಿಕ್ಕಿರುವುದು ನಮ್ಮ ಬದುಕಿನಲ್ಲಿ ಮರೆಯಲಾರದ ಕ್ಷಣ. ದಕ್ಷಿಣೆ ಎಷ್ಟು ಕೊಟ್ಟರು ಎನ್ನುವುದು ಮುಖ್ಯವಲ್ಲ. ಆ ವಿವರ ಹೇಳಬಾರದು ಎಂಬ ಸೂಚನೆಯೂ ಇದೆ. ಒಂದು ರುಪಾಯಿಯೇ ಹಾಕಲಿ, ಎಷ್ಟೇ ಆಗಲಿ ನಮಗದು ಬೆಲೆ ಕಟ್ಟಲಾಗದ್ದು ಎಂದು ಋತ್ವಿಜ ಗಣೇಶ ನಾವಡ ಪ್ರತಿಕ್ರಿಯಿಸಿದ್ದಾರೆ.