ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್, ಮಗಳು ಶೀತಲ್ ಜತೆ ಓದಿ ನೀಟ್ ಪರೀಕ್ಷೆಗೆ ಹಾಜ ರಾಗಿದ್ದರು. ಮುರುಗಯ್ಯನ್ ಅವರಿಗೆ ಚೆನ್ನೈನ ಶ್ರೀಲಲಿತಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಲಭಿಸಿದ್ದು, ಪುತ್ರಿ ಶೀತಲ್ ಅವರಿಗೆ ಪಾಂಡಿಚೆರಿಯ ವಿನಾಯಕ ಮಿಷನ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ.
ಚಿಕ್ಕವಯಸ್ಸಿನಲ್ಲೇ ವೈದ್ಯನಾಗಬೇಕು ಎಂದು ಬಯಸಿದ್ದೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಇಂಜಿನಿ ಯರ್ ಆದೆ. ಗರಿಷ್ಠ ವಯೋಮಿತಿ ಇಲ್ಲದೆ ಯಾರು ಬೇಕಾದರೂ ನೀಟ್ ಪರೀಕ್ಷೆಗೆ ಹಾಜರಾಗಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ಮುರುಗಯ್ಯನ್ಗೆ ಡಾಕ್ಟರ್ ಆಗುವ ಆಸೆ ಮತ್ತೆ ಚಿಗುರಿತ್ತು. ರಿಫೈನರಿಯಲ್ಲಿ ಕೆಲಸ ಮುಗಿಸಿ ಬಂದು ಮುರುಗಯ್ಯನವರು ಮಗಳ ಜೊತೆ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಪತ್ನಿ ಮಾಲತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಇಬ್ಬರೂ ಕಷ್ಟ ಪಟ್ಟು ಓದಿ ಈಗ ಮೆಡಿಕಲ್ ಸೀಟು ಸಂಪಾದಿಸಿದ್ದಾರೆ.