ಹರಪನಹಳ್ಳಿ: ಮೋಟಾರು ಸೈಕಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂದಿಸಿ ಆತನಿಂದ ೯ ಮೋಟಾರು ಸೈಕಲ್ ಗಳನ್ನು ವಶ ಪಡಿಸಿಕೊಂಡ ಘಟನೆ ಪಟ್ಟಣದಲ್ಲಿ ಶುಕ್ರವಾರ ಜರುಗಿದೆ.
ಕನಕನ ಬಸ್ಸಾಪುರ ಗ್ರಾಮದ ಪೂಜಾರಿ ಕೊಟ್ರೇಶ(41) ಬಂದಿತ ಆರೋಪಿ. ಪಟ್ಟಣ ಪೋಲೀಸ್ ಠಾಣೆಯ ಪಿಎಸ್ ಐ ಸಿ.ಪ್ರಕಾಶ ಅವರು ಶುಕ್ರವಾರ ಬೆಳಿಗ್ಗೆ ಗಸ್ತು ಮಾಡುತ್ತಿರುವಾಗ ಪಟ್ಟಣದ ಪ್ರವಾಸಿ ಮಂಧಿರದ ಹಿಂಬದಿ ಇರುವ ಲೋಕೋಪಯೋಗಿ ಇಲಾಖೆಯ ಹತ್ತಿರ ಮೋಟಾರು ಸೈಕಲ್ ನಲ್ಲಿ ಬರುತ್ತಿದ್ದ ಆರೋಪಿ ಪೋಲೀಸ್ ವಾಹನವನ್ನು ನೋಡಿ ಅನುಮಾನಾಸ್ಪದವಾಗಿ ಬೈಕ್ ನ್ನು ತಿರುಗಿಸಿದನು.
ಆಗ ಆತನನ್ನು ಹಿಂಬಾಲಿಸಿದ ಪಿಎಸ್ ಐ ಪ್ರಕಾಶ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನನ್ನದು ತಾಲೂಕಿನ ಕನಕನ ಬಸ್ಸಾಪುರ ಗ್ರಾಮವಾಗಿದ್ದು, ಈಗ ಸವಾರಿ ಮಾಡಿಕೊಂಡು ಬಂದಿರುವ ಬೈಕನ್ನು ಎಪ್ರಿಲ್ -೨೦೨೧ ರಂದು ಹಿರೆಕೆರೆ ಹತ್ತಿರ ವಿರುವ ಲಕ್ಕಿಡಾಬಾದ ಮುಂದೆ ಕಳ್ಳತನ ಮಾಡಿದ್ದೇನು ಎಂದು ಒಪ್ಪಿಕೊಂಡನು.
ನ0ತರ ಡಿವೈಎಸ್ಪಿ ವಿ.ಎಸ್ .ಹಾಲಮೂರ್ತಿರಾವ್ ಹಾಗೂ ಸಿಪಿಐ ನಾಗರಾಜ ಎಂ.ಕಮ್ಮಾರ ರವರ ಮಾರ್ಗದರ್ಶನದಲ್ಲಿ ಹೆಚ್ಚಿನ ವಿಚಾರಣೆ ಕೈ ಗೊಂಡಾಗ ಆರೋಪಿಯು ಹರಪನಹಳ್ಳಿ, ದಾವಣಗೆರೆ, ಕೊಟ್ಟೂರು, ಮುಂಡರಗಿ ಕಡೆಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿ ತನ್ನ ಊರಲ್ಲಿ ಇಟ್ಟಿರುವು ದಾಗಿ ಒಪ್ಪಿಕೊಂಡನು.
ಆಗ ಆತನಿಂದ ೨.೫೦ ಲಕ್ಷ ರು. ಬೆಲೆ ಬಾಳುವ ೯ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಜೊತೆಯಲ್ಲಿ ಇನ್ನೂ ಅನೇಕರು ಕೃತ್ಯದಲ್ಲಿ ಭಾಗಿ ಯಾಗಿರುವ ಸಂಶಯ ಇದ್ದು, ತನಿಖೆ ಮುಂದುವರೆದಿದೆ. ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ ಐ ಪ್ರಕಾಶ ರವರ ಜೊತೆಯಲ್ಲಿ ಹರಪನಹಳ್ಳಿ ಪೋಲೀಸ್ ಠಾಣೆಯ ಸಿಬ್ಬಂದಿಯವರಾದ ಪೂರ್ವಚಾರಿ, ಮಹೇಶ, ನಾಗರಾಜ ಚಿಂಚಲಿ, ಮನೋಹರ ಪಟೇಲ್ , ಸಿದ್ದಲಿಂಗಮ್ಮ, ಕೆ.ಮಹಾಂತೇಶ, ರವಿದಾದಾಪುರ, ವಾಸುದೇವನಾಯ್ಕ ಚಿಗಟೆರಿ ಕೊಟ್ರೇಶ್, ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಇಲ್ಲಿಯ ಪೋಲೀಸರ ಕಾರ್ಯವನ್ನು ವಿಜಯನಗರ ಜಿಲ್ಲಾ ಎಸ್ಪಿ ಕೆ.ಅರುಣ್ ಶ್ಲಾöಸಿರುತ್ತಾರೆ.